2018-19ರ ಆರ್ಥಿಕ ವರ್ಷದ ಸೆಡಾನ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಿಯಾಜ್‍ಗೆ ಪ್ರಥಮ ಸ್ಥಾನ

ಮಾರುತಿ ಸುಜುಕಿ ಸಂಸ್ಥೆಯು ಕಳೆದ ವರ್ಷವಷ್ಟೆ ಹೊಸ ಮಾದರಿಯ ಸಿಯಾಜ್ ಕಾರುಗಳನ್ನು ಬಿಡುಗಡೆ ಮಾಡಲಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದೆ. ಹೀಗಾಗಿ 2018-19ರ ಆರ್ಥಿಕ ವರ್ಷದ ಸಿ-ಸೆಗ್ಮೆಂಟ್ ಸೆಡಾನ್ ಕಾರುಗಳ ಮಾರಾಟದಲ್ಲಿ ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರುಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

2018-19ರ ಆರ್ಥಿಕ ವರ್ಷದ ಸೆಡಾನ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಿಯಾಜ್‍ಗೆ ಪ್ರಥಮ ಸ್ಥಾನ

ಹೌದು, ಮಾರುಕಟ್ಟೆಯಲ್ಲಿ ಸಿ-ಸೆಗ್ಮೆಂಟ್ ಕಾರುಗಳಿಗೆ ಬೇಡಿಕೆಯು ಹೆಚ್ಚುತ್ತಿದ್ದು, ಇದಕ್ಕೆ ಅನುಗುಣವಾಗಿ ಹೊಸ ಮಾದರಿಯ ಮಾರುತಿ ಸುಜುಕಿ ಸಿಯಾಜ್ ಕಾರುಗಳು ಬಿಡುಗಡೆಯಾಗುವುದಕ್ಕು ಮುನ್ನ ಗ್ರಾಹಕರು ಹ್ಯುಂಡೈ ವೆರ್ನಾ ಕಾರುಗಳನ್ನು ಖರೀದಿಸುತ್ತಿದ್ದರು. ಆದರೆ ಕಳೆದ ವರ್ಷ ಬಿಡುಗಡೆಯಾದ ಹೊಸ ಮಾದರಿಯ ಸಿಯಾಜ್ ಕಾರುಗಳು 2018-19ರ ಆರ್ಥಿಕ ವರ್ಷದಲ್ಲಿ 46,000 ಯೂನಿಟ್‍ಗಿಂತಲೂ ಅಧಿಕವಾಗಿ ಮಾರಾಟಗೊಂಡಿದೆ.

2018-19ರ ಆರ್ಥಿಕ ವರ್ಷದ ಸೆಡಾನ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಿಯಾಜ್‍ಗೆ ಪ್ರಥಮ ಸ್ಥಾನ

ಬೇಡಿಕೆಯು ಅಧಿಕವಾಗುತ್ತಿರುವ ಕಾರಣ ಮಾರುತಿ ಸುಜುಕಿ ಸಂಸ್ಥೆಯು ಈ ಬಾರಿ ಸಂಸ್ಥೆಯು ಸಿಯಾಜ್ ಕಾರಿನಲ್ಲಿ ಹೊಸದಾಗಿ 1.5 ಲೀಟರ್‍‍ನ ಡೀಸೆಲ್ ಎಂಜಿನ್ ಅನ್ನು ನೀಡಲಾಗಿದೆ. ಹೊಸ ಎಂಜಿನ್‍ ಹೊತ್ತು ಬಿಡುಗಡೆಗೊಂಡ ಮಾರುತಿ ಸುಜುಕಿ ಸಿಯಾಜ್ ಕಾರುಗಳು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 9.97 ಲಕ್ಷದ ಪ್ರಾರಂಭಿಕ ಬೆಲೆಯನ್ನು ನಿಗದಿ ಮಾಡಲಾಗಿದೆ.

2018-19ರ ಆರ್ಥಿಕ ವರ್ಷದ ಸೆಡಾನ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಿಯಾಜ್‍ಗೆ ಪ್ರಥಮ ಸ್ಥಾನ

ಹೊಸ ಸಿಯಾಜ್ ವಿನ್ಯಾಸಗಳು

ಹಳೆಯ ಸಿಯಾಜ್ ಕಾರುಗಳಿಂತಲೂ ಮಹತ್ವದ ಬದಲಾಣೆಗಳನ್ನ ಹೊಂದಿರುವ ಹೊಸ ಸಿಯಾಜ್ ಕಾರುಗಳು, ಮರು ವಿನ್ಯಾಸಗೊಳಿಸಲಾದ ಗ್ರಿಲ್, ಹೊಸ ವಿನ್ಯಾಸದ ಎಲ್ಇಡಿ ಡಿಆರ್‍ಎಲ್ ಹೆಡ್‍‍ಲ್ಯಾಂಪ್ಸ್, ಸೆಂಟ್ರಲ್ ಏರ್ ಡ್ಯಾಮ್‍ ನೊಂದಿಗೆ ರಿವ್ಯಾಂಪ್ಡ್ ಫ್ರಂಟ್ ಬಂಪರ್ ಮತ್ತು ಸಿ-ಆಕಾರದ ಕ್ರೋಮ್ ಅನ್ನು ಫಾಗ್ ಲ್ಯಾಂಪ್‍‍ನಲ್ಲಿ ಅಳವಡಿಸಿರುವುದು ಕಾರಿಗೆ ಸ್ಪೋರ್ಟಿ ಲುಕ್ ನೀಡಿದೆ.

2018-19ರ ಆರ್ಥಿಕ ವರ್ಷದ ಸೆಡಾನ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಿಯಾಜ್‍ಗೆ ಪ್ರಥಮ ಸ್ಥಾನ

ಇದಲ್ಲದೆ ಸಿಯಾಜ್ ಫೇಸ್‍‍ಲಿಫ್ಟ್ ಕಾರುಗಳಲ್ಲಿ ಮಲ್ಟಿ ಸ್ಪೋಕ್ 15 ಇಂಚಿನ ಅಲಾಯ್ ಚಕ್ರಗಳು, ಕ್ರೋಮ್ ಆಧಾರಿತ ಡೋರ್ ಹ್ಯಾಂಡಲ್ಸ್ ಮತ್ತು ಒಆರ್‍‍ವಿಎಮ್ ಅನ್ನು ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್ ಅನ್ನು ಪ್ರಸ್ತುತ ಮಾರಾಟಗೊಳ್ಳುತ್ತಿರುವ ಸಿಯಾಜ್ ಕಾರಿನಿಂದ ಆಧರಿಸಿದೆ. ಹಾಗೆಯೇ ಮರು ವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್ ಅನ್ನು ಕೂಡಾ ಅಳವಡಿಸಲಾಗಿದೆ.

2018-19ರ ಆರ್ಥಿಕ ವರ್ಷದ ಸೆಡಾನ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಿಯಾಜ್‍ಗೆ ಪ್ರಥಮ ಸ್ಥಾನ

ಕಾರಿನ ಒಳಭಾಗದ ವಿನ್ಯಾಸ

ಈ ಹಿಂದಿನ ಸಿಯಾಜ್ ಕಾರುಗಳಲ್ಲಿ ಲಭ್ಯವಿದ್ದ ಬಹುತೇಕ ತಾಂತ್ರಿಕ ಅಂಶಗಳು ಹೊಸ ಕಾರಿನಲ್ಲೂ ಮುಂದುವರಿಸಲಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಕೆಲವೊಂದು ಹೊಸ ಸೌಲಭ್ಯಗಳನ್ನು ಜೋಡಣೆ ಮಾಡಲಾಗಿದೆ. ಇವುಗಳಲ್ಲಿ ಮರದ ದಿಣ್ಣೆಗಳಿಂದ ತಯಾರಿಸಲಾದ ಡ್ಯಾಶ್‌ಬೋರ್ಡ್, ಬಾಗಿಲು ಅಂಚುಗಳು ಹೊಸ ಆಕರ್ಷಣೆಯಾಗಿವೆ.

2018-19ರ ಆರ್ಥಿಕ ವರ್ಷದ ಸೆಡಾನ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಿಯಾಜ್‍ಗೆ ಪ್ರಥಮ ಸ್ಥಾನ

ಜೊತೆಗೆ ಕಾರಿನ ಸ್ಟೀರಿಂಗ್ ವೀಲ್ಹ್, ಆಕರ್ಷಕವಾದ ಲೆದರ್ ಸೀಟುಗಳು, ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಸುಜುಕಿ ಕನೆಕ್ಟ್ ಟೆಲಿಮ್ಯಾಟಿಕ್ ಸಿಸ್ಟಂ, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆ ಟಿಟಿಪಿ ಕಲರ್ ಎಂಐಡಿ ಮತ್ತು ಕ್ರೂಸ್ ಕಂಟ್ರೊಲರ್ ಸೌಲಭ್ಯವಿದೆ.

2018-19ರ ಆರ್ಥಿಕ ವರ್ಷದ ಸೆಡಾನ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಿಯಾಜ್‍ಗೆ ಪ್ರಥಮ ಸ್ಥಾನ

ಹೊಸ ಎಂಜಿನ್ ಸಾಮರ್ಥ್ಯ ಮತ್ತು ಮೈಲೇಜ್

ಹೊಸ ಮಾರುತಿ ಸುಜುಕಿ ಸಿಯಾಜ್ ಕಾರು ಸಂಸ್ಥೆಯೆ ಸ್ವತಃ ತಯಾರು ಮಾಡಲಾದ 1.5 ಲೀಟರ್ 4 ಸಿಲೆಂಡರ್ ಡಿಡಿಐಎಸ್225 ಡೀಸೆಲ್ ಎಂಜಿನ್ ಸಹಾಯದಿಂದ 94 ಬಿಹೆಚ್‍ಪಿ ಮತ್ತು 225ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂಡಿಗೆ ಜೋಡಿಸಲಾಗಿದೆ. ಅಷ್ಟೆ ಅಲ್ಲದೇ ಪ್ರತೀ ಲೀಟರ್‍‍ಗೆ 26.82 ಕಿಲೋಮೀಟರ್‍‍ನ ಮೈಲೇಜ್ ಅನ್ನು ಸಹ ನೀಡುತ್ತೆ.

2018-19ರ ಆರ್ಥಿಕ ವರ್ಷದ ಸೆಡಾನ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಿಯಾಜ್‍ಗೆ ಪ್ರಥಮ ಸ್ಥಾನ

ಹೊಸ ಸಿಯಾಜ್ ಕಾರುಗಳು ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್‌ಗಳಲ್ಲಿ ಆಯ್ಕೆಗೆ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಸಿಗ್ಮಾ, ಡೆಲ್ಟಾ, ಡೆಲ್ಟ್ ಎಟಿ, ಜೆಟಾ, ಜೆಟಾ ಎಟಿ, ಆಲ್ಫಾ ಮತ್ತು ಆಲ್ಫಾ ಎಟಿ ಕಾರುಗಳನ್ನ ಪರಿಚಯಿಸಿದೆ. ಹೀಗಾಗಿ ವಿವಿಧ ಕಾರು ಆವೃತ್ತಿಗಳಲ್ಲಿ ವಿವಿಧ ಹಂತದ ಬೆಲೆ ಪಟ್ಟಿ ನಿಗದಿ ಮಾಡಲಾಗಿದೆ.

2018-19ರ ಆರ್ಥಿಕ ವರ್ಷದ ಸೆಡಾನ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಿಯಾಜ್‍ಗೆ ಪ್ರಥಮ ಸ್ಥಾನ

ಸುರಕ್ಷಾ ಸೌಲಭ್ಯಗಳು

ಸಾಮಾನ್ಯ ಕಾರುಗಳಲ್ಲಿ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಹೊಂದಿರುವ ಸಿಯಾಜ್ ಫೇಸ್‌ಲಿಫ್ಟ್ ಕಾರುಗಳು ಟಾಪ್ ಎಂಡ್ ಆವೃತ್ತಿಯಲ್ಲಿ 6 ಏರ್‌ಬ್ಯಾಗ್‌ಗಳನ್ನು ಪಡೆದುಕೊಂಡಿದೆ. ಜೊತೆಗೆ ಎಬಿಎಸ್, ಚಾಲಕನ್ನು ಎಚ್ಚರಿಸುವ ಸೀಟ್ ಬೆಲ್ಟ್ ವಾರ್ನಿಂಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮತ್ತು ಸ್ಪೀಡ್ ವಾರ್ನಿಂಗ್ ಮಾನಿಟರ್ ಇದರಲ್ಲಿದೆ. ಇದು ಗಂಟೆಗೆ 120 ಕಿ.ಮಿಗಿಂತ ಹೆಚ್ಚು ಚಾಲನೆ ಮಾಡುವಾಗ ಬಿಫ್ ಸೌಂಡ್ ಮೂಲಕ ಚಾಲಕನಿಗೆ ಎಚ್ಚರಿಕೆ ನೀಡುತ್ತದೆ.

2018-19ರ ಆರ್ಥಿಕ ವರ್ಷದ ಸೆಡಾನ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಿಯಾಜ್‍ಗೆ ಪ್ರಥಮ ಸ್ಥಾನ

ಲಭ್ಯವಿರುವ ಬಣ್ಣಗಳು

ಒಟ್ಟು 7 ವಿವಿಧ ಬಣ್ಣದ ಆಯ್ಕೆಯನ್ನು ಹೊಂದಿರುವ ಸಿಯಾಜ್ ಫೇಸ್‌ಲಿಫ್ಟ್ ಕಾರುಗಳು ಬ್ಯೂ ನೆಕ್ಸಾ, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮಿಡ್‌ನೈಟ್ ಬ್ಲ್ಯಾಕ್, ಪರ್ಲ್ ಸಾಂಗ್ರಿಯಾ ರೆಡ್, ಪರ್ಲ್ ಮೆಟಾಲಿಕ್ ಡಿಗ್ನಿಟಿ ಬ್ರೌನ್, ಮೆಟಾಲಿಕ್ ಪ್ರಿಮಿಯಂ ಸಿಲ್ವರ್ ಮತ್ತು ಪರ್ಲ್ ಸ್ನೋ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.

Most Read Articles

Kannada
English summary
Maruti Suzuki Ciaz Best Selling Sedan For Financial Year 2018-19 — Enjoying Challenges Worlds Ahead. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X