ಸೋರಿಕೆಯಾದ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 (ಕ್ರಾಸ್) ಕಾರಿನ ಇಂಟೀರಿಯರ್ ಚಿತ್ರಗಳು

ಮಾರುತಿ ಸುಜುಕಿ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಹೊಸ ವಾಹನವನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಸಂಸ್ಥೆಯು ಮುಂದಿನ ತಿಂಗಳು ತಮ್ಮ ಆರು ಆಸಗಳುಳ್ಳ ಎರ್ಟಿಗಾ ಎಂಪಿವಿ ಕಾರನ್ನು ಬಿಡುಗಡೆ ಮಾಡಲಿದೆ. ಮಾರುತಿ ಸುಜುಕಿ ಆಗಸ್ಟ್ 21ರಂದು ತಮ್ಮ ಪ್ರೀಮಿಯಂ ಮಾದರಿಯ 6 ಸೀಟರ್ ಎರ್ಟಿಗಾ ಎಕ್ಸ್ಎಲ್6 ಕಾರನ್ನು ಬಿಡುಗಡೆ ಮಾಡಲಿದೆ.

ಸೋರಿಕೆಯಾದ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 (ಕ್ರಾಸ್) ಕಾರಿನ ಇಂಟೀರಿಯರ್ ಚಿತ್ರಗಳು

ಬಿಡುಗಡೆಯಾಗಲಿರುವ 6 ಸೀಟರ್ ಮಾರುತಿ ಸುಜುಕಿ ಎರ್ಟಿಗಾ ಕಾರು ಹಲವಾರು ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿರುವ ಕಾರಣ ಈ ಕಾರಿಗೆ ಎಕ್ಸ್ಎಲ್6 ಎಂದು ಹೆಸರಿಡಲಾಗಿದ್ದು, ದಿನಕ್ಕೊಂದು ಹೊಸ ವಿಷಯಗಳು ಈ ಕಾರಿನ ಬಗ್ಗೆ ಹೊರ ಬರುತ್ತಿದೆ. ಮೊನ್ನೆಯಷ್ಟೆ ಈ ಕಾರಿನ ಹೊರ ವಿನ್ಯಾಸದ ಬಗ್ಗೆ ಮಾಹಿತಿ ಬಹಿರಂಗಗೊಂಡಿದ್ದು, ಇದೀಗ ಮಾರುತಿ ಸುಜುಕಿ ಎಕ್ಸ್ಎಲ್6 ಕಾರಿನ ಇಂಟೀರಿಯರ್ ಚಿತ್ರಗಳು ಸೋರಿಕೆಯಾಗಿದೆ.

ಸೋರಿಕೆಯಾದ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 (ಕ್ರಾಸ್) ಕಾರಿನ ಇಂಟೀರಿಯರ್ ಚಿತ್ರಗಳು

ಸಾಧಾರಣ ಎರ್ಟಿಗಾ ಕಾರಿನಂತೆಯೆ ಪ್ರೀಮಿಯಂ ಎಕ್ಸ್ಎಲ್6 ಕಾರಿನ ಒಳವಿನ್ಯಾಸ ಕೂಡಾ ಇರಲಾಗಿದ್ದು, 2+2+2 ವ್ಯವಸ್ಥೆಯಲ್ಲಿರಲಿದೆ. ಹಾಗೆಯೆ ಈ 6 ಸೀಟರ್ ಎರ್ಟಿಗಾ ಕಾರಿನ ಮಧ್ಯಭಾಗದಲ್ಲಿರುವ ಸೀಟ್‍‍ಗಳು ಈ ಬಾರಿ ಕ್ಯಾಪ್ಪ್ಟೇನ್ ಸೀಟ್‍‍ಗಳ ಅರೇಂಜ್‍ಮೆಂಟ್ ಅನ್ನು ಹೊಂದಿರಲಿದೆ ಎಂಬುದು ಗಮನಾರ್ಹ.

ಸೋರಿಕೆಯಾದ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 (ಕ್ರಾಸ್) ಕಾರಿನ ಇಂಟೀರಿಯರ್ ಚಿತ್ರಗಳು

ಸೋರಿಕೆಯಾದ ಚಿತ್ರಗಳಲ್ಲಿ ಗಮನಿಸಿದರೆ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 ಕಾರಿನ ಒಳಭಾಗದಲ್ಲಿ 4 ಸ್ಪೀಡ್ ಆಟೋ‍ಮ್ಯಾಟಿಕ್ ಗೇರ್‍‍ಬಾಕ್ಸ್, ಮಲ್ಟಿ ಫಂಕ್ಷನಿಂಗ್ ಸ್ಟೀರಿಂಗ್ ವ್ಹೀಲ್ ಮತ್ತು ಕಾರಿನ ಒಳಭಾಗದಲ್ಲಿರುವ ಬಹುತೇಕ ಭಾಗಗಳನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ಸೋರಿಕೆಯಾದ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 (ಕ್ರಾಸ್) ಕಾರಿನ ಇಂಟೀರಿಯರ್ ಚಿತ್ರಗಳು

ಇವುಗಳಲ್ಲದೆಯೆ ಆಪಲ್ ಕಾರ್‍‍ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ನ್ಯಾವಿಗೇಷನ್ ಸಪೋರ್ಟ್ ಮಾಡುವ ಸ್ಮಾರ್ಟ್‍ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಎಂಬ ಸುರಕ್ಷಾ ಸಾಧನಗಳನ್ನು ಕೂಡಾ ಹೊಂದಿರಲಿದೆ.

ಸೋರಿಕೆಯಾದ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 (ಕ್ರಾಸ್) ಕಾರಿನ ಇಂಟೀರಿಯರ್ ಚಿತ್ರಗಳು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇನ್ನು ಈ ಕಾರು ಬಿಡುಗಡೆ ಮಾಡುವ ಮುನ್ನ ಕೊನೆಯೆ ಬಾರಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಈ ಕಾರಿನ ಚಿತ್ರಗಳು ಇದೀಗ ಸೋರಿಕೆಯಾಗಿ. ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಈ ಚಿತ್ರಗಳನ್ನು ಗಮನಿಸಿದ್ದಲ್ಲಿ ಸಾಧಾರಣ ಎರ್ಟಿಗಾ ಕಾರಿಗಿಂತಲೂ, ಎರ್ಟಿಗಾ ಎಕ್ಸ್ಎಲ್6 (6 ಸೀಟರ್) ಮಾದರಿಯು ಪ್ರೀಮಿಯಂ ಲುಕ್ ಅನ್ನು ಹೊಂದಿದ್ದು, ಕಾರಿನ ಮೇಲ್ಭಾಗದಲ್ಲಿ ಲಗೇಜ್ ಇರಿಸಿಕೊಳ್ಳಲು ಕ್ಯಾರಿಯರ್ ಅನ್ನು ಸಹ ನೀಡಲಾಗುತ್ತಿದೆ.

ಸೋರಿಕೆಯಾದ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 (ಕ್ರಾಸ್) ಕಾರಿನ ಇಂಟೀರಿಯರ್ ಚಿತ್ರಗಳು

ಇಷ್ಟೆ ಅಲ್ಲದೆಯೆ ಹಿಂಭಾಗದಿಂಗ ಗಮನಿಸಿದ್ದಲ್ಲಿ ಮಾರುತಿ ಸುಜುಕಿ ಎಸ್‍-ಎಕ್ಸ್ಎಲ್6 ಮಾದರಿಯ ವಿನ್ಯಾಸವನ್ನು ಕೊಂಚ ಇದು ಹೋಲುತ್ತದೆ. ಕಾರಿನ ಹಿಂಭಾಗದಲ್ಲಿ ನೆಕ್ಸಾ ಸ್ಟಿಕ್ಕರಿಂಗ್ ಅನ್ನು ಸಹ ನೀಡಲಾಗಿದ್ದು, ಈ ಕಾರು ಕೇವಲ ನೆಕ್ಸಾ ಶೋರುಂನಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದೆ. ಈ ಕಾರಿನ ಹಿಂಭಾಗದಲ್ಲಿ ಎಕ್ಸ್ಎಲ್6 ಬ್ಯಾಡ್ಜಿಂಗ್ ಅನ್ನು ಸಹ ನೀಡಲಾಗಿದೆ.

ಸೋರಿಕೆಯಾದ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 (ಕ್ರಾಸ್) ಕಾರಿನ ಇಂಟೀರಿಯರ್ ಚಿತ್ರಗಳು

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 ಕಾರು ನೆಕ್ಸಾ ಬ್ಲೂ ಬಣ್ಣವನ್ನು ಹೊಂದಿದ್ದು, ಕಪ್ಪು ಬಣ್ಣದ ರೂಫ್ ಅನ್ನು ಪಡೆದುಕೊಂಡಿದೆ. ಹಾಗೆಯೆ ಸೈಡ್ ಪ್ರೊಫೈಲ್‍ ಕೂಡಾ ಕರ್ಷಕವಾಗಿ ಕಾಣಲು 15 ಇಂಚನ ಅಲಾಯ್ ವ್ಹೀಲ್ಸ್, ರೂಫ್ ರೈಲ್ಸ್, ವಿಂಗ್ ಮಿರರ್ಸ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್ ಅನ್ನು ಹೊತ್ತು ವಿಭಿನ್ನವಾದ ಎಂಪಿವಿಯಾಗಿ ಕಾಣಿಸಿಕೊಂಡಿದೆ.

ಸೋರಿಕೆಯಾದ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 (ಕ್ರಾಸ್) ಕಾರಿನ ಇಂಟೀರಿಯರ್ ಚಿತ್ರಗಳು

ಎರ್ಟಿಗಾ ಎಕ್ಸ್ಎಲ್6 ಕಾರು ಸಾಮಾನ್ಯ ಮಾದರಿಯ ಎರ್ಟಿಗಾ ಕಾರಿಗಿಂತಲೂ ವಿಭಿನ್ನವಾಗಿದ್ದು, ವಿನೂತನವಾದ ಫ್ಲೇರ್ಡ್ ವ್ಹೀಲ್ ಆರ್ಚೆಸ್, ಹೊಸ ಕ್ರೋಮ್ ಗ್ರಿಲ್ ಅನ್ನು ನೀಡಲಾಗಿದೆ. ಹಾಗೆಯೇ ಆಕರ್ಷಕವಾದ ಹೆಡ್‍ಲೈಟ್‍ಗಳು ಮತ್ತು ಎಲ್ಇಡಿ ಡಿಆರ್‍ಎಲ್ ಅನ್ನು ಅಳವಡಿಸಲಾಗಿದ್ದು, ಉತ್ತಮ ಡ್ರೈವ್ ಅನುಭವಕ್ಕಾಗಿ ಹೈ ಗ್ರೌಂಡ್ ಕ್ಲಿಯರೆನ್ಸ್, ರೂಫ್ ರೈಲ್ಸ್ ಮತ್ತು ಇನ್ನಿತರೆ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ.

ಸೋರಿಕೆಯಾದ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 (ಕ್ರಾಸ್) ಕಾರಿನ ಇಂಟೀರಿಯರ್ ಚಿತ್ರಗಳು

ಎಂಜಿನ್ ಸಾಮರ್ಥ್ಯ

ಹೊಸ ಎರ್ಟಿಗಾ ಎಕ್ಸ್ಎಲ್6 ಕಾರು ಮಾದರಿಯು ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಪ್ರೇರಿತ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದ್ದು, ಇದು 104-ಬಿಹೆಚ್‍ಪಿ ಮತ್ತು 138-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಳ್ಳಲಿದೆ. ಹಾಗೆಯೇ ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಬರಲಿದೆ ಎನ್ನಲಾಗಿದೆ.

ಸೋರಿಕೆಯಾದ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 (ಕ್ರಾಸ್) ಕಾರಿನ ಇಂಟೀರಿಯರ್ ಚಿತ್ರಗಳು

ಎರಡನೇ ತಲೆಮಾರಿನ ಎರ್ಟಿಗಾ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.45 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 11.21 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 13 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಸೋರಿಕೆಯಾದ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 (ಕ್ರಾಸ್) ಕಾರಿನ ಇಂಟೀರಿಯರ್ ಚಿತ್ರಗಳು

ಇದೀಗ ಬಿಡುಗಡೆಯಾಗುತ್ತಿರುವ ಹೊಸ ಎರ್ಟಿಗಾ ಎಕ್ಸ್ಎಲ್6 ವೇರಿಯೆಂಟ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ 13 ವೆರಿಯೆಂಟ್‌ಗಳಿಂತ ತುಸು ಭಿನ್ನವಾಗಿರಲಿದೆ. ವಿಶೇಷವಾಗಿ ಇದು ವ್ಯಯಕ್ತಿಕ ಕಾರು ಬಳಕೆದಾರರ ಬೇಡಿಕೆಯೆಂತೆ ಎರ್ಟಿಗಾ ಎಕ್ಸ್ಎಲ್6 ಮಾದರಿಯನ್ನು ಅಭಿವೃದ್ಧಿಗೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರಿನ ಬೆಲೆಯು ಆರಂಭಿಕವಾಗಿ ರೂ.9 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 12 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Source: Gaadiwaadi

Most Read Articles

Kannada
English summary
Maruti Suzuki XL6 Interior Spy Pics 6 Seater Premium Ertiga Based MVP Launch Soon. Read In Kannada
Story first published: Thursday, July 25, 2019, 17:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X