Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೆಕ್ಟರ್ ಖರೀದಿಗಾಗಿ ಮತ್ತೆ ಬುಕ್ಕಿಂಗ್ ಶುರು ಮಾಡಿದ ಎಂಜಿ ಮೋಟಾರ್
ಉತ್ಪಾದನೆಗಿಂತ ಬೇಡಿಕೆ ಹೆಚ್ಚಿದ್ದರಿಂದ ತಾತ್ಕಾಲಿಕವಾಗಿ ಹೆಕ್ಟರ್ ಕಾರು ಖರೀದಿಗಾಗಿ ಬುಕ್ಕಿಂಗ್ ಬಂದ್ ಮಾಡಿದ್ದ ಎಂಜಿ ಮೋಟಾರ್ ಸಂಸ್ಥೆಯು ಇದೀಗ ಮತ್ತೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಪುನಾರಂಭಗೊಳಿಸಿದ್ದು, ಅಕ್ಟೋಬರ್ 1ರಿಂದ ಮುಂಗಡ ಸ್ವಿಕರಿಸುವುದಾಗಿ ಮಾಹಿತಿ ಹಂಚಿಕೊಂಡಿದೆ.

ಜುಲೈ ಮಧ್ಯಂತರದಲ್ಲಿ ಬಿಡುಗಡೆಗೊಂಡಿದ್ದ ಎಂಜಿ ಹೆಕ್ಟರ್ ಎಸ್‌ಯುವಿ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಅಚ್ಚರಿ ಬೆಳವಣಿಯೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಅಗಸ್ಟ್ ಅವಧಿಯ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆಯೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಿತ್ತು. ಅತಿ ಕಡಿಮೆ ಬೆಲೆಗಳಲ್ಲಿ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಎಂಜಿ ಹೆಕ್ಟರ್ ಖರೀದಿಗಾಗಿ ಗ್ರಾಹಕರು ಮುಗಿಬಿದ್ದಿದ್ದು, ಈಗಾಗಲೇ ಹೆಕ್ಟರ್ ಖರೀದಿಗಾಗಿ ಸುಮಾರು 28 ಸಾವಿರಕ್ಕೂ ಹೆಚ್ಚು ಗ್ರಾಹಕರು ರೂ.50 ಸಾವಿರ ಮುಂಗಡ ಪಾವತಿಸಿ ಹೆಕ್ಟರ್ ಖರೀದಿಯ ನೀರಿಕ್ಷೆಯಲ್ಲಿದ್ದಾರೆ.

ಗುಜುರಾತ್‌ನಲ್ಲಿರುವ ಎಂಜಿ ಕಾರು ಉತ್ಪಾದನಾ ಘಟಕದಲ್ಲಿ ತಿಂಗಳಿಗೆ ಕೇವಲ 2 ಸಾವಿರ ಕಾರುಗಳ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈ ಹಿನ್ನಲೆ ಕಾರು ಉತ್ಪಾದನೆಯನ್ನು ಹೆಚ್ಚಿಸಲು ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಕಾರು ಉತ್ಪಾದನಾ ಘಟಕ ವಿಸ್ತರಣಾ ಪ್ರಕ್ರಿಯೆಗಳಿಂದಾಗಿ ಪ್ರಸ್ತುತ ಕಾರು ಉತ್ಪಾದನೆಯಲ್ಲೂ ತುಸು ಅಡಚಣೆ ಉಂಟಾಗಿತ್ತು.

ಇದೀಗ ಕಾರು ಉತ್ಪಾದನಾ ಸಾಮಾರ್ಥ್ಯವನ್ನು ಹೆಚ್ಚಿಸಲಾಗಿದ್ದು, ಪ್ರತಿ ತಿಂಗಳು 3 ಸಾವಿರದಿಂದ 4 ಸಾವಿರ ಕಾರುಗಳನ್ನು ಪೂರೈಕೆ ಮಾಡುವ ಗುರಿಹೊಂದಿದೆ. ಅತಿ ಕಡಿಮೆ ಅವಧಿಯಲ್ಲಿ ಕಾರು ವಿತರಣೆಗಾಗಿ ಭರ್ಜರಿ ಸಿದ್ದತೆ ನಡೆಸಿರುವ ಎಂಜಿ ಸಂಸ್ಥೆಯು ಕಾಯುವಿಕೆ ಅವಧಿ ಹೆಚ್ಚಿರುವುದರಿಂದ ಪ್ರತಿಸ್ಪರ್ಧಿ ಕಾರುಗಳ ಮುಖಮಾಡುತ್ತಿರುವ ಗ್ರಾಹಕರನ್ನು ಮತ್ತೆ ಸೆಳೆಯುವ ನೀರಿಕ್ಷೆದೆ.

ಇನ್ನು ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಎಂಜಿ ಹೆಕ್ಟರ್ ಕಾರು ಎಕ್ಸ್‌ಶೋರೂಂ ಪ್ರಕಾರ ರೂ.12.18 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು ಈ ಕಾರಿನ ಟಾಪ್ ಎಂಡ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 16.68 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಈ ಕಾರಿನ ಪೆಟ್ರೋಲ್ ಡಿಸಿಟಿ ಮಾಡೆಲ್‍ಗಳಿಗೆ ಹೆಚ್ಚು ಬೇಡಿಕೆಯಿದ್ದು, ಹ್ಯುಂಡೈ ಕ್ರೆಟಾ, ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಆಕರ್ಷಕ ಬೆಲೆಗಳಲ್ಲಿ ಫರ್ಸ್ಟ್ ಕ್ಲಾಸ್ ಫೀಚರ್ಸ್, ಪವರ್‍ಫುಲ್ ಎಂಜಿನ್, ಬೈಯ್‌ಬ್ಯಾಕ್ ಗ್ಯಾರೆಂಟಿ, 5 ವರ್ಷದ ವಾರೆಂಟಿ/ಅನಿಯಮಿತ 1 ಲಕ್ಷ ಕಿಲೋಮೀಟರ್, 5 ವರ್ಷದ ವರೆಗು ಲೇಬರ್ ಫ್ರೀ ಸರ್ವೀಸ್‌ಗಳನ್ನು ನೀಡಲಾಗುತ್ತಿದ್ದು, ಎಂಜಿ ಹೆಕ್ಟರ್ ಬೇಡಿಕೆಗೆ ಇದೇ ಪ್ರಮಖ ಕಾರಣವಾಗಿದೆ.

ಎಂಜಿನ್ ಸಾಮರ್ಥ್ಯ
ಹೆಕ್ಟರ್ ಹೊಸ ಕಾರು ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 143-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮೂಲಕ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಇದರಲ್ಲಿ ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈ ಎಂಡ್ ಆವೃತ್ತಿಯಲ್ಲಿ 48ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಜೋಡಿಸಲಾಗಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಹೆಚ್ಚಿನ ಮಟ್ಟದ ಇಂಧನ ಕಾರ್ಯಕ್ಷಮತೆಯನ್ನು ಕಾಯ್ದಕೊಳ್ಳಲು ನೆರವಾಗಲಿದೆ.

ಇದರಲ್ಲಿ ಐ ಸ್ಮಾರ್ಟ್ ಕನೆಕ್ವಿವಿಟಿ ಸೌಲಭ್ಯವು ಹೆಕ್ಟರ್ ಕಾರಿಗೆ ಮತ್ತಷ್ಟು ಮೆರಗು ತಂದಿರುವುದಲ್ಲದೇ ಕಾರಿಗೂ ಗರಿಷ್ಠ ಭದ್ರತೆ ಒದಗಿಸಲಿದ್ದು, ಪ್ಯಾಕೇಜ್ ಸೌಲಭ್ಯ ಹೊಂದಿರುವ ಐ ಸ್ಮಾರ್ಟ್ ಕನೆಕ್ಟಿವಿಟಿನಲ್ಲಿ ಧ್ವನಿ ಹಿಂಬಾಲಿಸುವಿಕೆ, ಲೈವ್ ವೆಹಿಕಲ್ ಟ್ರಾಕಿಂಗ್, ವೆಹಿಕಲ್ ಸ್ಟೆಟಸ್, ಜಿಯೋ ಫೆನ್ಸ್ ಸೇರಿದಂತೆ 50ಕ್ಕೂ ಹೆಚ್ಚು ಫೀಚರ್ಸ್ ಇದರಲ್ಲಿವೆ.

ಹಾಗೆಯೇ ಹೊಸ ಕಾರಿನಲ್ಲಿ ಆ್ಯಂಬಿಯೆಂಟ್ ಲೈಟ್ಸ್ (8 ಬಣ್ಣಗಳಲ್ಲಿ), ಲೆದರ್ ಅಪ್‌ಹೊಲಿಸ್ಟ್ರೈ( ಟಾಪ್ ಎಂಡ್ ಮಾಡೆಲ್‌ಗಳಲ್ಲಿ), 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕ ಸೀಟು, ಪನೊರೊಮಿಕ್ ಸನ್‌ರೂಫ್, ಟಿಲ್ಟ್ ಆ್ಯಂಡ್ ಟೆಲಿಸ್ಕೊಪಿಕ್ ಸ್ಟಿರಿಂಗ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಆಟೋ ಎಸಿ ಜೊತೆ ರಿಯರ್ ವೆಂಟ್ಸ್ , ಪ್ರೀಮಿಯಂ ಇನ್ಫಿನಿಟಿ ಸೌಂಡ್ ಸಿಸ್ಟಂ, ಫ್ರಂಟ್ ಆ್ಯಂಡ್ ರಿಯರ್ ಪವರ್ ವಿಂಡೋ, ಫಾಸ್ಟ್ ಚಾರ್ಜಿಂಗ್, ಅಂಡ್ರಾಯಿಡ್ ಆಡಿಯೋ, ಫುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಪವರ್ ಅಡ್ಜೆಸ್ಟ್ ರಿಯರ್ ವ್ಯೂ ಮಿರರ್ ಸೌಲಭ್ಯಗಳಿವೆ.

ರಿಮೋಟ್ ಕೀ ಲೆಸ್ ಎಂಟ್ರಿ, ವೆಲ್‌ಕಮ್ ಲೈಟ್, ಹೈಟ್ ಅಡ್ಜೆಸ್ಟ್ ಹೆಡ್ ರೆಸ್ಟ್, ಫ್ರಂಟ್ ಮತ್ತು ರಿಯರ್ ಫಾಸ್ಟ್-ಚಾರ್ಜಿಂಗ್ ಪೋರ್ಟ್ಸ್, ಗ್ಲೋ ಬಾಕ್ಸ್, ಡ್ರೈವರ್ ಆರ್ಮ್ ರೆಸ್ಟ್, 60:40 ಅನುಪಾತದಲ್ಲಿ ಮಡಚಬಹುದಾದ ಹಿಂಬದಿ ಆಸನ, ಆಟೋ ಎಸಿ, ಪವರ್ ಅಡ್ಜೆಸ್ಟ್ ರಿಯರ್ ವ್ಯೂ ಮಿರರ್ ಸೌಲಭ್ಯವು ಪ್ರತಿ ವೇರಿಯೆಂಟ್‌ನಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಹೆಕ್ಟರ್ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಆರ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್ ಜೊತೆಗೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಡಿಫಾಗರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ISOFIX ಚೈಲ್ಡ್-ಸೀಟ್ ಮೌಂಟ್ಸ್ ಸೌಲಭ್ಯ ನೀಡಲಾಗಿದೆ.