ಬಿಡುಗಡೆಯಾಯ್ತು ಹ್ಯುಂಡೈ ಒರಾ ಕಾರಿನ ಟೀಸರ್

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಒರಾ ಸೆಡಾನ್‍‍ನ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಗ್ರ್ಯಾಂಡ್ ಐ10 ನಿಯೊಸ್‍ ಕಾರಿನ ಮಾದರಿಯಲ್ಲೇ ಈ ಕಾರಿನ ವಿನ್ಯಾಸವಿದೆ.

ಬಿಡುಗಡೆಯಾಯ್ತು ಹ್ಯುಂಡೈ ಒರಾ ಕಾರಿನ ಟೀಸರ್

ಟೀಸರ್ ಚಿತ್ರದಲ್ಲಿ ಹೊಸ ಒರಾ ಕಾರಿನ ಮುಂಭಾವು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ದೊಡ್ಡ ಕ್ಯಾಸ್ಕೇಡಿಂಗ್ ಫ್ರಂಟ್ ಗ್ರಿಲ್ ಬೂಮರಾಂಗ್ ಆಕಾರಾದ ಎಲ್‍ಇ‍ಡಿ ಡಿಆರ್‍ಎಲ್ಎಸ್ ಮತ್ತು ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ಹೊಂದಿದೆ. ಹೊಸ ಒರಾ ಕಾರಿನ ಮುಂಭಾಗವು ನಿಯೊಸ್ ಹ್ಯಾಚ್‍‍ಬ್ಯಾಕ್ ಮುಂಭಾಗದ ಮಾದರಿಯಲ್ಲಿದೆ. ಎರಡು ಕಾರುಗಳು ಸಿ-ಪಿಲ್ಲರ್ ವರೆಗೆ ನಿಯೊಸ್ ಹ್ಯಾಚ್‍‍ಬ್ಯಾಕ್‍‍ಗೆ ಹೋಲುವಂತಿದೆ.

ಬಿಡುಗಡೆಯಾಯ್ತು ಹ್ಯುಂಡೈ ಒರಾ ಕಾರಿನ ಟೀಸರ್

ಕಾರಿನ ಹಿಂಭಾಗದಲ್ಲಿ ಸ್ಪೋರ್ಟಿ ಬಂಪರ್ ಅನ್ನು ಅಳವಡಿಸಲಾಗಿದೆ. ಇನ್ನೂ ಕಾರಿನ ಹಿಂಭಾಗದಲ್ಲಿ ಟೇಲ್‍‍ಗೇ‍‍‍ಟ್‍ ಅನ್ನು ಅಳವಡಿಸಲಾಗಿದೆ. ಒರಾ ಕಾರಿನಲ್ಲಿ ಸಿ ಆಕಾರಾದ ಎಲ್‍ಇಡಿ ಟೇಲ್ ಲ್ಯಾಂಪ್ ಅನ್ನು ಹೊಂದಿರುವುದರಿಂದ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸುತ್ತದೆ. ಬೂಟ್ ಲಿಡ್ ಕೆಳಭಾಗದಲ್ಲಿ ಕ್ರೋಮ್ ಸ್ಟ್ರಿಪ್ ಅನ್ನು ಸಹ ಕಾಣಬಹುದು.

ಬಿಡುಗಡೆಯಾಯ್ತು ಹ್ಯುಂಡೈ ಒರಾ ಕಾರಿನ ಟೀಸರ್

ಎಕ್ಸೆಂಟ್ ಮಾದರಿಗೆ ಹೋಲಿಸಿದರೆ ಒರಾ ಇಂಟಿರಿಯರ್‍‍‍ನಲ್ಲಿ ದೊಡ್ದ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ ಸ್ಟೀಯರಿಂಗ್ ವ್ಹೀಲ್, ಡ್ಯಾಶ್‍ಬೋರ್ಡ್ ಮತ್ತು ನಿಯೊಸ್‍‍ನಲ್ಲಿರುವ ಕೆಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಟಾಪ್ ಸ್ಪೆಕ್ ರೂಪಾಂತರದಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಮತ್ತು ಬ್ಲೂಟೂತ್‍‍ನೊಂದಿಗೆ ದೊಡ್ಡ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ.

ಬಿಡುಗಡೆಯಾಯ್ತು ಹ್ಯುಂಡೈ ಒರಾ ಕಾರಿನ ಟೀಸರ್

ಹ್ಯುಂಡೈ ಕಂಪನಿಯ ಪ್ರಕಾರ ಒರಾ ಮೂರು ಮಾದರಿಯ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಇದರಲ್ಲಿ ಎಲೈಟ್ ಐ20ನಲ್ಲಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ವೆನ್ಯೂ ಕಾರಿನಲ್ಲಿರುವ 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು ಕ್ರೇಟಾ ಕಾರಿನಲ್ಲಿರುವ 1.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಎಲ್ಲಾ ಮೂರು ಎಂಜಿನ್‍ಗಳು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿರಲಿವೆ.

ಬಿಡುಗಡೆಯಾಯ್ತು ಹ್ಯುಂಡೈ ಒರಾ ಕಾರಿನ ಟೀಸರ್

ಎಲ್ಲಾ ಮೂರು ಎಂಜಿನ್‍‍ಗಳು ಹ್ಯುಂಡೈ ವೆನ್ಯೂ ಮಾದರಿಯಲ್ಲೇ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ 83 ಬಿ‍‍ಹೆಚ್‍‍ಪಿ ಪವರ್ ಮತ್ತು 114 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.4 ಲೀಟರ್ ಡೀಸೆಲ್ ಎಂಜಿನ್ 90 ಬಿ‍‍ಹೆಚ್‍‍ಪಿ ಪವರ್ ಮತ್ತು 220 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 ಬಿ‍‍ಹೆಚ್‍‍ಪಿ ಪವರ್ ಮತ್ತು 172 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಹ್ಯುಂಡೈ ಒರಾ ಕಾರಿನ ಟೀಸರ್

ಈ ಎಲ್ಲಾ ಮೂರು ಎಂಜಿನ್‍ಗಳೊಂದಿಗೆ ಸ್ಟ್ಯಾಂಡರ್ಡ್ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. 1.2 ಲೀಟರ್ ಪೆಟ್ರೋಲ್ ಮತ್ತು 1.4 ಲೀಟರ್ ಡೀಸೆಲ್ ಎಂಜಿನ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಆಯ್ಕೆಯಾಗಿ ನೀಡಲಾಗಿದೆ. ಹ್ಯುಂಡೈ ವೆನ್ಯೂ ರೀತಿಯಲ್ಲಿ ಒರಾ ಕಾರಿನಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ನೀಡಲಾಗಿಲ್ಲ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಡುಗಡೆಯಾಯ್ತು ಹ್ಯುಂಡೈ ಒರಾ ಕಾರಿನ ಟೀಸರ್

ಹ್ಯುಂಡೈ ಒರಾ ಕಾರಿನಲ್ಲಿ ಹೊಸ ಎಂಜಿನ್ ಕಡಿಮೆ ವೈಬ್ರೇಷನ್ ಮತ್ತು ಹೆಚ್ಚಿನ ಇಂಧನ ದಕ್ಷತೆಯೊಂದಿಗೆ ಸುಧಾರಿತ ಪರ್ಫಾಮೆನ್ಸ್ ನೀಡುತ್ತದೆ ಎನ್ನಲಾಗಿದೆ. ಒರಾ ಹ್ಯುಂಡೈ 'ಅಡ್ವಾನ್ಸ್ಡ್ ಆಫ್ಟರ್ ಟ್ರೀಟ್ಮೆಂಟ್ ಸಿಸ್ಟಮ್' ಎಂದು ಕರೆಯಲಾಗಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಯಾಯ್ತು ಹ್ಯುಂಡೈ ಒರಾ ಕಾರಿನ ಟೀಸರ್

ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಒರಾ ಬಿಡುಗಡೆಯಾದ ಬಳಿಕ ಹೋಂಡಾ ಅಮೇಜ್, ಫೋರ್ಡ್ ಆಸ್ಪೈರ್ ಮತ್ತು ಟಾಟಾ ಟೀಗೊರ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಹ್ಯುಂಡೈ ಒರಾ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.6 ಲಕ್ಷದಿಂದ ರೂ.9ಲಕ್ಷಗಳಾಗಿರಲಿದೆ.

Most Read Articles

Kannada
English summary
Hyundai Drops First Teaser Image - Read in Kannada
Story first published: Tuesday, December 17, 2019, 10:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X