ಅಕ್ಟೋಬರ್ 3ಕ್ಕೆ ಬಿಡುಗಡೆಯಾಗಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ದಕ್ಷಿಣ ಕೊರಿಯ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತನ್ನ ಪ್ಯಾಸೆಂಜರ್ ಸೆಗ್ಮೆಂಟ್ ಕಾರುಗಳಿಂದಲೇ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿದ್ದು, ಇದೀಗ ತನ್ನ ಎಲಾಂಟ್ರಾ ಸೆಡಾನ್ ಕಾರಿನ ಫೇಸ್‍‍ಲಿಫ್ಟ್ ಆವೃತ್ತಿಯನ್ನು ಮುಂದಿನ ತಿಂಗಳು 3ಕ್ಕೆ ಬಿಡುಗಡೆಗೊಳಿಸುವುದಾಗಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಹೀಗಾಗಿ ಹೊಸ ಕಾರು ಖರೀದಿಗಾಗಿ ಇಂದಿನಿಂದಲೇ ಬುಕ್ಕಿಂಗ್ ಪ್ರಕ್ರಿಯೆಗೂ ಕೂಡಾ ಚಾಲನೆ ನೀಡಲಾಗಿದೆ.

ಅಕ್ಟೋಬರ್ 3ಕ್ಕೆ ಬಿಡುಗಡೆಯಾಗಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಹ್ಯುಂಡೈ ಸಂಸ್ಥೆಯು ಎಲಾಂಟ್ರಾ ಫೇಸ್‌ಲಿಫ್ಟ್ ಮಾದರಿಯನ್ನು ಭಾರತ ಸೇರಿದಂತೆ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಸಾಂತಾ ಫೇ ಎಸ್‌ಯುವಿ ಕಾರಿನ ಕುರಿತಾದ ಮಾಧ್ಯಮ ಪ್ರತಿನಿಧಿಗಳ ಸಭೆ ವೇಳೆಯೇ ತನ್ನ ಬಹುನೀರಿಕ್ಷಿತ ಎಲಾಂಟ್ರಾ ಫೇಸ್‌ಲಿಫ್ಟ್ ಬಗ್ಗೆಯು ಮಹತ್ವದ ಮಾಹಿತಿಯನ್ನ ಹೊರಹಾಕಿತ್ತು. ಹಾಗೆಯೇ ಹೊಸ ಕಾರನ್ನು ಭಾರತದಲ್ಲೂ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿತ್ತು.

ಅಕ್ಟೋಬರ್ 3ಕ್ಕೆ ಬಿಡುಗಡೆಯಾಗಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಇದೀಗ ಎಲಂಟ್ರಾ ಹೊಸ ಆವೃತ್ತಿಯನ್ನು ಭಾರತದಲ್ಲಿ ರೋಡ್ ಟೆಸ್ಟಿಂಗ್ ಪೂರ್ಣಗೊಳಿಸಿ ಬಿಡುಗಡೆಗೆ ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಹಳೆಯ ಮಾದರಿಯ ಕಾರುಗಳಿಂತಲೂ ಹೊಸ ಎಲಾಂಟ್ರಾ ಕಾರು ವಿನ್ಯಾಸದಲ್ಲಿ ಗುರುತರ ಬದಲಾವಣೆಗಳನ್ನು ಪಡೆದಿದೆ.

ಅಕ್ಟೋಬರ್ 3ಕ್ಕೆ ಬಿಡುಗಡೆಯಾಗಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಹೊಸ ಎಲಾಂಟ್ರಾ ಫೇಸ್‍‍ಲಿಫ್ಟ್ ಕಾರು ತನ್ನ ಹಳೆಯ ಮಾದರಿಯಂತೆ ಗಾತ್ರ ಮತ್ತು ಹೋಲಿಕೆ ಪಡೆದಿದ್ದರೂ ಕಾರಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಗುರುತರ ಬದಲಾವಣೆಗಳನ್ನು ಪಡೆದಿದ್ದು, ಅಗಲವಾದ ಹೆಡ್‍‍ಲ್ಯಾಂಪ್ಸ್, ಹೊಸ ಬಂಪರ್, ಹೊಸ ಕೇಸ್‍ ಕೇಡಿಂಗ್ ಗ್ರಿಲ್ ವಿನ್ಯಾಸ ಮತ್ತು ಎಲ್ಇಡಿ ಅಂಶಗಳನ್ನು ಪಡೆದಿದೆ.

ಅಕ್ಟೋಬರ್ 3ಕ್ಕೆ ಬಿಡುಗಡೆಯಾಗಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಹಾಗೆಯೇ ಕಾರಿನ ಬಂಪರ್‍‍ಗಳನ್ನು ಹೆಚ್ಚು ಆಕ್ರಮಣಕಾರಿ, ಹೆಡ್‍‍ಲ್ಯಾಂಪ್ ಮತ್ತು ಫಾಗ್ ಲ್ಯಾಂಪ್‌ಗಳ ನಡುವೆ ಹೊಸ ಕ್ರಿಸ್ ಲೈನ್ ಅನ್ನು ಅಳವಡಿಸಲಾಗಿದ್ದು, ಇದು ಫಾಗ್ ಲ್ಯಾಂಪ್ ತ್ರಿಭುಜದ ಆಕಾರದಲ್ಲಿದೆ. ಹೀಗಾಗಿ ಹೊಸ ಕಾರಿನ ಏರ್ ವೆಂಟ್ ಸಹ ಪರದೆಯ ದ್ವಾರಗಳಿಂದ ಸುತ್ತುವರಿದಿದ್ದು, ಕಾರಿನ ನಂಬರ್ ಪ್ಲೇಟ್‍ ಅನ್ನು ಹಿಂಭಾಗದ ಬಂಪರ್‍‍ಗೆ ಸ್ಥಳಾಂತರಗೊಳಿಸಿರುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

ಅಕ್ಟೋಬರ್ 3ಕ್ಕೆ ಬಿಡುಗಡೆಯಾಗಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಇನ್ನು ಎಲಾಂಟ್ರಾ ಫೇಸ್‍ಲಿಫ್ಟ್ ಕಾರುಗಳಲ್ಲಿ ಟೈಲ್ ದೀಪಗಳು ತೀಕ್ಷ್ಣವಾದ ನೋಟ, ಕಡಿಮೆ ಹಿಂಭಾಗದ ಬಂಪರ್‍‍ನ ಉದ್ದಕ್ಕೂ ಚಲಿಸುವ ದಪ್ಪದಾದ ಕ್ರೋಮ್ ಬ್ಯಾಂಡ್ ಅನ್ನು ನೀಡುತ್ತದೆ. ಇದರಿಂದ ಹಿಂಭಾಗದಲ್ಲಿ ಪ್ರಮುಖ ಪ್ರತಿಫಲಕಗಳು, ರಿವರ್ಸ್ ದೀಪಗಳು ಮತ್ತು ಹಿಂಭಾಗದ ಫಾಗ್ ಲ್ಯಾಂಪ್ ಅನ್ನು ಸಹ ಕಾಣಬಹುದಾಗಿದೆ.

ಅಕ್ಟೋಬರ್ 3ಕ್ಕೆ ಬಿಡುಗಡೆಯಾಗಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಅಂತೆಯೇ ಕಾರಿನ ಒಳಭಾಗದಲ್ಲಿಯೂ ಸಹ ಬದಲಾವಣೆಗಳನ್ನು ಮಾಡಲಾಗಿದ್ದು, ವಿನೂತನವಾದ ವೈಶಿಷ್ಟ್ಯತೆಗಳನ್ನು ಅಳವಡಿಸಿರುವುದು ಕಂಡುಬಂದಿದೆ. ಈ ಬಾರಿ ಎಲಾಂಟ್ರಾ ಫೇಸ್‍‍ಲಿಫ್ಟ್ ಕಾರಿನಲ್ಲಿ ವೈರ್‍‍ಲೆಸ್ ಚಾರ್ಜಿಂಗ್ ವೈಶಿಷ್ಟ್ಯತೆಯನ್ನು ಸಹ ಕಾಣಬಹುದಾಗಿದ್ದು, ಇನ್ನಿತರೆ ವೈಶಿಷ್ಟ್ಯತೆಗಳ ಬಗ್ಗೆ ಸಂಸ್ಥೆಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ.

ಅಕ್ಟೋಬರ್ 3ಕ್ಕೆ ಬಿಡುಗಡೆಯಾಗಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

ಎಲಾಂಟ್ರಾ ಫೇಸ್‍‍ಲಿಫ್ಟ್ ಕಾರುಗಳು ಕೊರಿಯಾ ಸೇರಿದಂತೆ ವಿದೇಶಿ ಮಾರುಕಟ್ಟೆಗಳಿಗಾಗಿ 1.4-ಲೀಟರ್ ಮತ್ತು 1.6-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದ್ದು, 1.4-ಲೀಟರ್ ಪೆಟ್ರೋಲ್ ಕಾರುಗಳು 123-ಬಿಹೆಚ್‍‍ಪಿ ಮತ್ತು 1.6-ಲೀಟರ್ ಪೆಟ್ರೋಲ್ ಕಾರುಗಳು 201-ಬಿಎಚ್‌ಪಿ ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದೆ.

MOST READ: ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ಶೇ.80 ರಷ್ಟು ಅಗ್ಗ ಹ್ಯುಂಡೈ ಕೊನಾ ರನ್ನಿಂಗ್ ಕಾಸ್ಟ್..!

ಅಕ್ಟೋಬರ್ 3ಕ್ಕೆ ಬಿಡುಗಡೆಯಾಗಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಆದರೆ ಭಾರತದಲ್ಲಿ ಮಾರಾಟವಾಗುವ ಎಲಾಂಟ್ರಾ ಕಾರುಗಳು 1.6-ಲೀಟರ್ ಟರ್ಬೋ ಚಾರ್ಜ್ಡ್ ಡೀಸೆಲ್ ಮತ್ತು 2.0-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಈ ಬಾರಿ ಫೇಸ್‌ಲಿಫ್ಟ್ ಕಾರು 2.0-ಲೀಟರ್ ಪೆಟ್ರೋಲ್ ಆಯ್ಕೆಯಲ್ಲಿ ಮಾತ್ರವೇ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

MOST READ: ಸೆಲ್ಟೊಸ್ ಕಾರಿಗೆ ಭರ್ಜರಿ ಬೇಡಿಕೆ- ಮತ್ತೈದು ಹೊಸ ಕಾರುಗಳ ಬಿಡುಗಡೆಗೆ ಸಜ್ಜಾದ ಕಿಯಾ

ಅಕ್ಟೋಬರ್ 3ಕ್ಕೆ ಬಿಡುಗಡೆಯಾಗಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಇದಕ್ಕೆ ಕಾರಣ, ಎಲಾಂಟ್ರಾ ಡೀಸೆಲ್ ಕಾರುಗಳಿಂತ ಪೆಟ್ರೋಲ್ ಕಾರುಗಳಿಗೆ ಶೇ.80ರಷ್ಟು ಗ್ರಾಹಕರು ಆದ್ಯತೆ ನೀಡುತ್ತಿದ್ದು, ಈ ಬಾರಿ ಡೀಸೆಲ್ ಆಯ್ಕೆ ನೀಡುತ್ತಿಲ್ಲ ಎನ್ನುವ ಮಾಹಿತಿ ಇದೆ. ಈ ಮೂಲಕ ಎಲಾಂಟ್ರಾ ಫೇಸ್‍‍ಲಿಫ್ಟ್ ಕಾರು ಸ್ಕೋಡಾ ಒಕ್ಟಿವಿಯಾ ಮತ್ತು ಟೊಯೊಟಾ ಕೊರೊಲ್ಲಾ ಅಲ್ಟೀಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದ್ದು, ಹೊಸ ಕಾರಿನಲ್ಲಿ ಬಿಎಸ್-6 ಎಂಜಿನ್ ಹೊಂದಿದೆಯಾ ಎನ್ನುವುದು ಬಿಡುಗಡೆಯ ದಿನದಂದೆ ತಿಳಿಯಬೇಕು.

Most Read Articles

Kannada
English summary
New Hyundai Elantra Facelift Bookings Open: India-Launch Confirmed For Next Month.
Story first published: Wednesday, September 25, 2019, 19:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X