ಹೊಸ ಡೀಸೆಲ್ ಎಂಜಿನ್ ಹೊತ್ತು ಬರಲಿದೆ ಮಾರುತಿ ಸುಜುಕಿ ಎರ್ಟಿಗಾ ಕಾರು.?

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಹೊಸ 1.5 ಲೀಟರ್ ಡೀಸೆಲ್ ಎಂಜಿನ್ ಆನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಲಿರುವ ಸುಳಿವನ್ನು ನೀಡಿತು. ಈ ಹೊಸ ಡೀಸೆಲ್ ಎಂಜಿನ್ ಅನ್ನು ಸಿಯಾಜ್ ಸೆಡಾನ್ ಕಾರಿನಲ್ಲಿ ಮೊದಲು ಬಳಸುವುದಾಗಿ ಕೂಡಾ ಹೇಳಿಕೊಂಡಿತ್ತು.

ಹೊಸ ಡೀಸೆಲ್ ಎಂಜಿನ್ ಹೊತ್ತು ಬರಲಿದೆ ಮಾರುತಿ ಸುಜುಕಿ ಎರ್ಟಿಗಾ ಕಾರು.?

ಇದೀಗ ಟೀಂ-ಬಿಹೆಚ್‍ಪಿ ವರದಿಯ ಪ್ರಕಾರ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಡೀಸೆಲ್ ಎಂಜಿನ್ ಅನ್ನು ಶೀಘ್ರವೇ ಎರ್ಟಿಗಾ ಎಂಪಿವಿ ಕಾರಿನಲ್ಲಿ ಕೂಡಾ ಪರಿಚಯಿಸಲಿದೆ ಎನ್ನಲಾಗಿದೆ. ಹೌದು., ಸಂಸ್ಥೆಯು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಎರ್ಟಿಗಾ ಕಾರಿಗೆ ನೀಡಲು ಮುಂದಾಗಿದ್ದು, ಈ ಹೊಸ ಎಂಜಿನ್ ಹೆಚ್ಚು ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿರಲಿದೆ.

ವರದಿಯ ಪ್ರಕಾರ ಈ ಹೊಸ ಬದಲಾವಣೆಗಾಗಿ ಮತ್ತು ಅನುಮತಿಗಾಗಿ ಬೇಕಾದ ಎಲ್ಲಾ ಡಾಕ್ಯುಮೆಂಟ್‍‍‍ಗಳನ್ನು ಆರ್‍‍ಟಿಒ ಖಚೇರಿಗೆ ನೀಡಲಾಗಿದ್ದು, ಹೊಸ ಎಂಜಿನ್ ಪಡೆಯಲಿರುವ ಎರ್ಟಿಗಾ ಎಂಪಿವಿ ಕಾರುಗಳ ನಿರ್ಮಾಣವನ್ನು ಶೀಘ್ರವೇ ಪ್ರಾರಂಭಿಸಲಾಗುತ್ತದೆ.

ಮಾರುತಿ ಸುಜುಕಿ ಸಂಸ್ಥೆಯು ಕಳೆದ ವರ್ಷವಷ್ಟೆ ತಮ್ಮ ಮುಂದಿನ ತಲೆಮಾರಿನ ಎಂಪಿವಿ ಕಾರನ್ನು ಬಿಡುಗಡೆ ಮಾಡಿದ್ದು, ಉತ್ತಮ ಮಾರಾಟವನ್ನು ಕಾಣುತ್ತಿದೆ. ಪ್ರಸ್ತುತ ಇರುವ ಕಾರಿನಲ್ಲಿ ಕೇವಲ 1.3 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಇದು 89ಬಿಹೆಚ್‍ಪಿ ಮತ್ತು 200ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಆದ್ರೆ ಹೊಸ 1.5 ಲೀಟರ್ ಡೀಸೆಲ್ ಎಂಜಿನ್ 94ಬಿಹೆಚ್‍ಪಿ ಮತ್ತು 225ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಜೊತೆಗೆ ಹೊಸ ಎಂಜಿನ್ ಆಯ್ಕೆಯಾಗಿ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಸಹ ಪಡೆಯಲಿದೆ. ಹೊಸ ಎಂಜಿನ್ ಮತ್ತು ಗೇರ್‍‍ಬಾಕ್ಸ್ ನ ಜೋಡಣೆಯೊಂದಿಗೆ ಕಾರಿನ ಗಾತ್ರವೂ ಸಹ ಕಡಿಮೆಯಾಗಲಿದೆ.

Most Read Articles

Kannada
English summary
Maruti Ertiga To Be Introduced With New Diesel Engine And Manual Transmission Soon. Read In Kannada
Story first published: Tuesday, February 12, 2019, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X