ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೆ ಸಿದ್ದವಾದ 2020ರ ಹ್ಯುಂಡೈ ಕ್ರೆಟಾ

ನೆಕ್ಸ್ಟ್ ಜನರೇಷನ್ ಕ್ರೆಟಾ ಎಸ್‍ಯುವಿ ಕಾರನ್ನು ಚೀನಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಹ್ಯುಂಡೈ ಸಂಸ್ಥೆಯು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲು ಸಿದ್ದವಾಗುತ್ತಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾದ ನಂತರವೇ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೆ ಸಿದ್ದವಾದ 2020ರ ಹ್ಯುಂಡೈ ಕ್ರೆಟಾ

ಕಿಯಾ ಸೆಲ್ಟೊಸ್ ಬಿಡುಗಡೆಯ ನಂತರ ಕ್ರೆಟಾ ಕಾರು ಮಾರಾಟದಲ್ಲಿ ಭಾರೀ ಪೈಪೋಟಿ ಎದುರಿಸುತ್ತಿರುವ ಹ್ಯುಂಡೈ ಸಂಸ್ಥೆಯು ನೆಕ್ಸ್ಟ್ ಜನರೇಷನ್ ಕಾರು ಮಾದರಿಯನ್ನು ಹಲವು ಹೊಸ ಬದಲಾವಣೆಗಳೊಂದಿಗೆ ಅಭಿವೃದ್ದಿಗೊಳಿಸಿ ಬಿಡುಗಡೆಗೆ ಸಿದ್ದವಾಗಿದ್ದು, ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಹೊಸ ಕಾರಿನ ಎಂಜಿನ್ ಅನ್ನು ಉನ್ನತೀಕರಿಸಲಾಗಿದೆ. ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕ್ರೆಟಾಗಿಂತಲೂ ಹೊಸ ಕಾರು ಸಾಕಷ್ಟು ಸುಧಾರಿತ ತಂತ್ರಜ್ಞಾನಗಳ ಪ್ರೇರಣೆ ಹೊಂದಿರಲಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೆ ಸಿದ್ದವಾದ 2020ರ ಹ್ಯುಂಡೈ ಕ್ರೆಟಾ

ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಆವೃತ್ತಿಗಿಂತಲೂ ಸುಧಾರಿತ ಎಂಜಿನ್ ಮತ್ತು ವಿಸ್ತರಿತ ವೀಲ್ಹ್‌ಬೆಸ್ ಸೌಲಭ್ಯವನ್ನು ಪಡೆದುಕೊಂಡಿದ್ದು, 5 ಸೀಟರ್ ಜೊತೆಗೆ 7 ಸೀಟರ್ ಮಾದರಿ ಕೂಡಾ ಆಯ್ಕೆ ಮಾಡಬಹುದಾಗಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೆ ಸಿದ್ದವಾದ 2020ರ ಹ್ಯುಂಡೈ ಕ್ರೆಟಾ

ಬಿಡುಗಡೆಯಾಗಲಿರುವ ಹೊಸ ಕ್ರೆಟಾ ಕಂಪ್ಯಾಕ್ಟ್ ಎಸ್‍ಯುವಿ ಕಾರು ಈ ಬಾರಿ 4,300-ಎಂಎಂ ಉದ್ದ, 1,790-ಎಂಎಂ ಅಗಲ, 1,622-ಎಂಎಂ ಎತ್ತರ ಮತ್ತು 2,610ಎಂಎಂ ವ್ಹೀಲ್‍‌ಬೇಸ್ ಹೊಂದಿರಲ್ಲಿದ್ದು, ಪ್ರಸ್ತುತ ಕ್ರೆಟಾ ಕಾರಿಗಿಂತ ಇದು 30-ಎಂಎಂ ಉದ್ದ, 10-ಎಂಎಂ ಅಗಲ, 8-ಎಂಎಂ ಎತ್ತರ ಮತ್ತು 20-ಎಂಎಂ ವ್ಹೀಲ್‍‍ಬೇಸ್ ಅನ್ನು ಹೆಚ್ಚುವರಿಯಾಗಿ ಪಡೆದುಕೊಂಡಿರಲಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೆ ಸಿದ್ದವಾದ 2020ರ ಹ್ಯುಂಡೈ ಕ್ರೆಟಾ

2020ರ ಎಪ್ರಿಲ್‌ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಹೊಸ ತಲೆಮಾರಿನ ಕ್ರೆಟಾ ಕಾರಿನ ಎಂಜಿನ್ ಅಭಿವೃದ್ದಿಗೊಳಿಸಲಾಗಿದ್ದು, ಈ ಹಿಂದಿನ 1.4-ಲೀಟರ್ ಮತ್ತು 1.6-ಲೀಟರ ಡೀಸೆಲ್ ಎಂಜಿನ್ ಹಾಗೂ 1.5-ಲೀಟರ್ ಪೆಟ್ರೋಲ್ ಎಂಜಿನ್ ಬದಲಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ 1.-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿರಲಿದೆ. ಇದೇ ಎಂಜಿನ್ ಈಗಾಗಲೇ ಹ್ಯುಂಡೈ ಸಹೋದರ ಸಂಸ್ಥೆಯ ಕಿಯಾ ಸೆಲ್ಟೊಸ್ ಕಾರಿನಲ್ಲೂ ಕೂಡಾ ಬಳಕೆ ಮಾಡಲಾಗಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೆ ಸಿದ್ದವಾದ 2020ರ ಹ್ಯುಂಡೈ ಕ್ರೆಟಾ

ಡೀಸೆಲ್ ಮಾದರಿಯ ಕಾರು 1.5 ಲೀಟರ್ 4 ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 115-ಬಿಹೆಚ್‍ಪಿ ಮತ್ತು 250-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿರಲಿದ್ದು, ಪೆಟ್ರೋಲ್ ಮಾದರಿಯ 1.5-ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಸಿವಿಟಿ ಅಥವಾ ಡಿಸಿಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಜೋಡಣೆ ಹೊಂದಿರಲಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೆ ಸಿದ್ದವಾದ 2020ರ ಹ್ಯುಂಡೈ ಕ್ರೆಟಾ

ಇದರಲ್ಲದೇ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಕಾರುಗಳು ಈ ಬಾರಿ ವೃತ್ತಾಕಾರದ ಡಿಸೈನ್ ಅನ್ನು ಪಡೆಯಲಿದ್ದು, ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಲ್ಯಾಂಪ್ಸ್ ಅನ್ನು ಸೆಪರೇಟ್ ಯೂನಿಟ್ ಆಗಿ ನೀಡಲಾಗಿದೆ. ಹೆಡ್‍ಲ್ಯಾಂಪ್ಸ್ ಮಾದರಿಯಲ್ಲಿಯೇ ಸ್ಪ್ಲಿಟ್ ಟೈಲ್‍‍ಲ್ಯಾಂಪ್ಸ್ ಅನ್ನು ಸಹ ಪಡೆದುಕೊಳ್ಳಲಿದ್ದು, ಕಾರಿನ ಉದ್ದಳತೆಗೆ ತಕ್ಕ ಹಾಗೆ ಎಲ್ಇಡಿ ಲೈಟ್ಸ್ ಅನ್ನು ಮತ್ತು ಬ್ರೇಕ್ ಹಾಗು ಟರ್ನ್ ಇಂಡಿಕೇಟರ್‍‍ಗಳನ್ನು ಒದಗಿಸಲಾಗಿದೆ.

MOST READ: ಮಾರುತಿ ಎರ್ಟಿಗಾ ಪ್ರತಿಸ್ಪರ್ಧಿ ಹ್ಯುಂಡೈ ಎಂಪಿವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೆ ಸಿದ್ದವಾದ 2020ರ ಹ್ಯುಂಡೈ ಕ್ರೆಟಾ

ಇನ್ನು ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಎಸ್‍ಯುವಿ ಕಾರಿನ ಒಳಭಾಗದಲ್ಲಿ ಪ್ರೀಮಿಯಂ ಕ್ಯಾಬಿನ್ ಅನ್ನು ನೀಡಲಾಗಿದ್ದು, ಎಂಜಿನ್ ಹೆಕ್ಟರ್ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ಟಕ್ಕರ್ ನೀಡುವ ಹಾಗೆ ವಿನ್ಯಾಸಗೊಳಿಸಲಾಗಿದೆ. ಎಂಜಿನ್ ಹೆಕ್ಟರ್ ಕಾರಿನಲ್ಲಿ ನೀಡಿದ ಹಾಗೆಯೇ ಕ್ರೆಟಾ ಕಾರು ಕೂಡಾ ಅಗಲವಾದ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆಯಲಿದೆ.

MOST READ: ದೀಪಾವಳಿ ಹಿನ್ನಲೆ ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೆ ಸಿದ್ದವಾದ 2020ರ ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ಎಸ್‍ಯುವಿ ಕಾರು ಈ ಬಾರಿ ಎರಡೂ ಆಸನ ವಿಧಾನದಲ್ಲಿ ದೊರೆಯಲಿದ್ದು, 5 ಮತ್ತು 7 ಆಸನಗಳ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಕಾರುಗಳ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲವಾದರೂ ಈ ಕಾರು ಎಕ್ಸ್ ಶೋರುಂ ಪ್ರಕಾರ ಪ್ರಸ್ತುತ ಇರುವ ಕ್ರೆಟಾ ಕಾರಿಗಿಂತಲೂ ಸುಮಾರು ರೂ. 1.50 ಲಕ್ಷದ ಅಧಿಕ ಬೆಲೆಯನ್ನು ಹೊಂದಿರಲಿದೆ.

MOST READ: ಇನ್ನಷ್ಟು ವಿಳಂಬವಾಗಲಿದೆ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೆ ಸಿದ್ದವಾದ 2020ರ ಹ್ಯುಂಡೈ ಕ್ರೆಟಾ

ಒಟ್ಟಿನಲ್ಲಿ ಹೊಸ ಕ್ರೆಟಾ ಕಾರು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಬಿಡುಗಡೆಯಾಗಲಿದ್ದು, ಬಿಡುಗಡೆಯ ಹೊತ್ತಿಗೆ ಹೊಸ ಕಾರಿನಲ್ಲಿರುವ ಇನ್ನು ತಾಂತ್ರಿಕ ಸೌಲಭ್ಯಗಳನ್ನು ಬದಲಾವಣೆಯಾಗುವ ನೀರಿಕ್ಷೆಗಳಿವೆ.

Source: Autocarindia

Most Read Articles

Kannada
English summary
Ahead of its launch, the new (2020) Hyundai Creta has been spied testing in the India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X