ಬಿಡುಗಡೆಯಾದ ಹೊಸ ರೆನಾಲ್ಟ್ ಕ್ವಿಡ್ - ಹೆಚ್ಚು ಸೇಫ್ಟಿ, ಅಧಿಕ ಫೀಚರ್ಸ್

ಫ್ರೆಂಚ್ ಮೂಲದ ವಾಹನ ತಯಾರಕ ಸಂಸ್ಥೆಯಾದ ರೆನಾಲ್ಟ್ ಸಂಸ್ಥೆಯು ತಮ್ಮ ಹೊಸ 2019ರ ಎಂಟ್ರಿ ಲೆವೆಲ್ ಕ್ವಿಡ್ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.66 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಇನ್ನು ಕಾರಿನ ಟಾಪ್ ಎಂಡ್ ವೇರಿಯಂಟ್ ರೂ. 4.60 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ಬಿಡುಗಡೆಯಾದ ಹೊಸ ರೆನಾಲ್ಟ್ ಕ್ವಿಡ್ - ಹೆಚ್ಚು ಸೇಫ್ಟಿ, ಅಧಿಕ ಫೀಚರ್ಸ್
Variant Price
Standard 0.8L MT Rs 2.66 Lakh
RXE 0.8L MT Rs 3.10 Lakh
RXL 0.8L MT Rs 3.36 Lakh
RXT (O) 0.8L MT Rs 3.83 Lakh
RXT (O) 1.0L MT Rs 4.05 Lakh
RXT (O) 1.0L AMT Rs 4.35 Lakh
Climber 1.0L MT Rs 4.30 Lakh
Climber 1.0L AMT Rs 4.60 Lakh
ಬಿಡುಗಡೆಯಾದ ಹೊಸ ರೆನಾಲ್ಟ್ ಕ್ವಿಡ್ - ಹೆಚ್ಚು ಸೇಫ್ಟಿ, ಅಧಿಕ ಫೀಚರ್ಸ್

ಹೊಸದಾಗಿ ಬಿಡುಗಡೆಗೊಂಡ ಕ್ವಿಡ್ ಕಾರುಗಳಲ್ಲಿ ಮುಂಭಾಗದ ಹೆಡ್‍‍ಲ್ಯಾಂಪ್‍‍ನಲ್ಲಿ ಸಿ ಆಕಾರದ ಲೈಟ್, ರೆನಾಲ್ಟ್ ಸಂಸ್ಥೆಯ ಚಿಹ್ನೆಯನ್ನು ಹೈಲೈಟ್ ಮಾಡುವ ಹಾಗೆ ರೇಜರ್ ಶಾರ್ಪ್ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್ಸ್, ಫುಲ್ ವ್ಹೀಲ್ ಕವರ್‍‍ಗಳು ಮತ್ತು ಬಾಡಿ ಕಲರ್‍ಡ್ ಬಂಪರ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾದ ಹೊಸ ರೆನಾಲ್ಟ್ ಕ್ವಿಡ್ - ಹೆಚ್ಚು ಸೇಫ್ಟಿ, ಅಧಿಕ ಫೀಚರ್ಸ್

ಹೊಸ ರೆನಾಲ್ಟ್ ಕ್ವಿಡ್ ಕಾರುಗಳು ಒಟ್ಟು 8 ಟ್ರಿಮ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹಲವಾರು ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ. ರೆನಾಲ್ಟ್ ಸಂಸ್ಥೆಯು ಹೊಸ ವೈಶಿಷ್ಟ್ಯತೆಗಳನ್ನು ಬಳಸಿದರೂ ಬೆಲೆಯನ್ನು ಮಾತ್ರ ಔಟ್‍‍ಗೋಯಿಂಗ್ ಮಾಡಲ್‍‍ನದ್ದೆ ನೀಡಿದೆ.

ಬಿಡುಗಡೆಯಾದ ಹೊಸ ರೆನಾಲ್ಟ್ ಕ್ವಿಡ್ - ಹೆಚ್ಚು ಸೇಫ್ಟಿ, ಅಧಿಕ ಫೀಚರ್ಸ್

ಈ ಬಾರಿ ರೆನಾಲ್ಟ್ ಕ್ವಿಡ್ ಕಾರುಗಳಲ್ಲಿ ಹೊಸದಾಗಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಆರ್ಮ್‍‍ರೆಸ್ಟ್ ಮತ್ತು ಹಿಂಭಾಗದ ಪ್ಯಾಸೆಂಜರ್‍‍ಗಳಿಗೆ 12ವಿ ಸಾಕೆಟ್ ಅನ್ನು ನೀಡಲಾಗಿದೆ.

ಬಿಡುಗಡೆಯಾದ ಹೊಸ ರೆನಾಲ್ಟ್ ಕ್ವಿಡ್ - ಹೆಚ್ಚು ಸೇಫ್ಟಿ, ಅಧಿಕ ಫೀಚರ್ಸ್

ಈ ಬಾರಿ ಬಿಡುಗಡೆಯಾದ ಹೊಸ ರೆನಾಲ್ಟ್ ಕ್ವಿಡ್ ಕಾರಿನಲ್ಲಿ ಅನೇಕ ಸೇಫ್ಟಿ ಫೀಚರ್‍‍‍ಗಳನ್ನು ನೀಡಲಾಗಿದ್ದು ಅವುಗಳಲ್ಲಿ ಆಂಟಿ ಲಾಕ್ ಬ್ರೇಕ್ಸ್, ಡ್ರೈವರ್ ಏರ್‍‍ಬ್ಯಾಗ್, ಸ್ಪೀಡ್ ಸೆನ್ಸಿಸಂಗ್ ಡೋರ್ ಲಾಕ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಓವರ್ ಸ್ಪೀಡಿಂಗ್ ಅಲರ್ಟ್ ಅನ್ನು ಸ್ಟಾಂಡರ್ಡ್ ಆಗಿ ಒದಗಿಸಲಾಗಿದೆ.

ಬಿಡುಗಡೆಯಾದ ಹೊಸ ರೆನಾಲ್ಟ್ ಕ್ವಿಡ್ - ಹೆಚ್ಚು ಸೇಫ್ಟಿ, ಅಧಿಕ ಫೀಚರ್ಸ್

ರೆನಾಲ್ಟ್ ಕ್ವಿಡ್ ಕಾರಿನ ಟಾಪ್ ಸ್ಪೆಕ್ ವೇರಿಯಂಟ್‍ನಲ್ಲಿ ಆಂಡ್ರಾಯ್ಡ್ ಆಂಟೊ ಮತ್ತು ಆಪಲ್ ಕಾರ್ ಪ್ಲೇ ಸಪೋರ್ಟ್ ಮಾಡುವ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡಲಾಗಿದ್ದು, ಇಷ್ಟೆಲ್ಲಾ ಫೀಚರ್‍‍ಗಳನ್ನು ಕಾರನ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆಯೆ ಪರಿಚಯಿಸುತ್ತಿರುವುದು ಉತ್ತಮವಾದ ವಿಚಾರ ಎನ್ನಬಹುದು.

ಬಿಡುಗಡೆಯಾದ ಹೊಸ ರೆನಾಲ್ಟ್ ಕ್ವಿಡ್ - ಹೆಚ್ಚು ಸೇಫ್ಟಿ, ಅಧಿಕ ಫೀಚರ್ಸ್

ಎಂಜಿನ್ ಸಾಮರ್ಥ್ಯ

2019ರ ಹೊಸ ರೆನಾಲ್ಟ್ ಕ್ವಿಡ್ ಕಾರು 0.8 ಮತ್ತು 1.0 ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಎರಡೂ ಎಂಜಿನ್‍ಗಳನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. 1.0 ಲೀಟರ್ ಎಂಜಿನ್ ಆಧಾರಿತ ಕ್ವಿಡ್ ಕಾರನ್ನು ಎಎಂಟಿ ಆಯ್ಕೆಯಲ್ಲಿ ಕೂಡಾ ಖರೀದಿಸಬಹುದಾಗಿದೆ.

ಬಿಡುಗಡೆಯಾದ ಹೊಸ ರೆನಾಲ್ಟ್ ಕ್ವಿಡ್ - ಹೆಚ್ಚು ಸೇಫ್ಟಿ, ಅಧಿಕ ಫೀಚರ್ಸ್

0.8 ಲೀಟರ್ ಮಾದರಿಯ ರೆನಾಲ್ಟ್ ಕ್ವಿಡ್ ಕಾರು 53 ಬಿಹೆಚ್‍ಪಿ ಮತ್ತು 72ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಪ್ರತೀ ಲೀಟರ್‍‍ಗೆ ಸಮರು 25.17 ಕಿಲೋಮೀಟರ್‍‍ನ ಮೈಲೇಜ್ ನೀಡುತ್ತದೆ. ಇನ್ನು 1.0 ಲೀಟರ್ ಮಾದರಿಯ ಕಾರುಗಳು 67ಬಿಹೆಚ್‍ಪಿ ಮತ್ತು 91ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಪ್ರತೀ ಲೀಟರ್‍‍ಗೆ ಸುಮಾರು 24.04 ಕಿಲೋಮೀಟರ್‍‍ನ ಮೈಲೇಜ್ ನೀಡುತ್ತದೆ.

ಬಿಡುಗಡೆಯಾದ ಹೊಸ ರೆನಾಲ್ಟ್ ಕ್ವಿಡ್ - ಹೆಚ್ಚು ಸೇಫ್ಟಿ, ಅಧಿಕ ಫೀಚರ್ಸ್

ಭಾರತ ಸರ್ಕಾರವು ಜಾರಿ ಮಾಡಲಾದ ಈ ಹೊಸ ಕಾಯ್ದೆಯು ದೇಶದಲ್ಲಿ ಲಭ್ಯವಾಗಲಿರುವ ಹೊಸ ಕಾರುಗಳಲ್ಲಿ ಹೆಚ್ಚು ಸುರಕ್ಷಾ ಸಾಧನಗಳನ್ನು ನೀಡಬೇಕಾಗಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಸುರಕ್ಷತೆಯನ್ನು ನೀಡುವ ಸಲುವಾಗಿ ಈ ಕಾರ್ಯ್ವನ್ನು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ರೆನಾಲ್ಟ್ ಸಂಸ್ಥೆಯು ತಮ್ಮ ಜನಪ್ರಿಯ ಕ್ವಿಡ್ ಕಾರಿಗೆ ಮತ್ತಷ್ತು ಸುರಕ್ಷಾ ಸಾಧನೆಗಳನ್ನು ಅಳವಡಿಸಿ ಮತ್ತೆ ಬಿಡುಗಡೆ ಮಾಡಿದೆ.

Most Read Articles

Kannada
English summary
2019 Renault Kwid Launched in India At Rs 2.66 Lakhs - Safer & More Techy Than Ever. Read In Kannada
Story first published: Tuesday, February 5, 2019, 10:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X