ಭಾರತದಲ್ಲಿ ಮುಂದಿನ ವರ್ಷದಿಂದ ಸುಜುಕಿ ಜಿಮ್ನಿ ಉತ್ಪಾದನೆ ಪ್ರಾರಂಭ..

ಜಪಾನ್ ಮೂಲದ ಜನಪ್ರಿಯ ವಾಹನ ತಯಾರಿಕ ಸಂಸ್ಥೆಯಾದ ಸುಜುಕಿ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಕಾರು ಮಾದರಿಗಳನ್ನು ಪರಿಚಯಿಸಿ ಯಶಸ್ವಿಯಾಗಿದ್ದು, ಇದೀಗ ಮತ್ತೊಂದು ವಿಶೇಷ ವಿನ್ಯಾಸದ ಜಿಮ್ನಿ ಕಾರನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ಭಾರತದಲ್ಲಿ ಮುಂದಿನ ವರ್ಷದಿಂದ ಸುಜುಕಿ ಜಿಮ್ನಿ ಉತ್ಪಾದನೆ ಪ್ರಾರಂಭ..

ಜಾಗತಿಕ ಮಟ್ಟದಲ್ಲಿ ಸುಜುಕಿ ಬ್ರಾಂಡ್ ಬಗ್ಗೆ ತಿಳಿದವರಿಗೆ ಜಿಮ್ನಿ ಎಂಬ ಕ್ರೀಡಾ ಬಳಕೆಯ ಕಾರಿನ ಬಗ್ಗೆ ಚೆನ್ನಾಗಿ ಗೊತ್ತಿರಬಹುದು. ನೂತನ ಬಲೆನೊ ಹಾಗೂ ಇಗ್ನಿಸ್ ತಳಹದಿಯಲ್ಲೇ ನಿರ್ಮಾಣವಾಗಲಿರುವ ಜಿಮ್ನಿ ಕಾರುಗಳು ಭಾರತದಿಂದಲೇ ರಫ್ತಾಗುತ್ತಿವೆ ಎಂಬುದು ಮಗದೊಂದು ಗಮನಾರ್ಹ ಸಂಗತಿ. ಹೀಗಿರುವಾಗ ಈ ಹೊಸ ಕಾರು ದೇಶಿಯ ಗ್ರಾಹಕರನ್ನು ಸೆಳೆಯಲು ತಯಾರಿ ನಡೆಸಿದ್ದು, ಇದೀಗ ಎಲ್ಲರ ಕಣ್ಣು ಜಿಮ್ನಿ ಮೇಲೆಯೇ ನೆಟ್ಟಿದೆ.

ಭಾರತದಲ್ಲಿ ಮುಂದಿನ ವರ್ಷದಿಂದ ಸುಜುಕಿ ಜಿಮ್ನಿ ಉತ್ಪಾದನೆ ಪ್ರಾರಂಭ..

ಹೊಸ ತಲೆಮಾರಿನ ಸುಜುಕಿ ಜಿಮ್ನಿ ಕಾರು ಉತ್ಪಾದನೆಯು ನಮ್ಮ ಭಾರತದಲ್ಲಿಯೇ ಮುಂದಿನ ವರ್ಷದಿಂದ ಪ್ರಾರಂಭವಾಗಿದ್ದು, ಮಾಹಿತಿಗಳ ಪ್ರಕಾರ ಆಫ್ರಿಕಾ ಸೇರಿದಂತೆ ಇನ್ನಿತರೇ ಸೇಧಗಳಿಗೆ ಇಲ್ಲಿಂದಲೆ ಜಿಮ್ನಿ ವಾಹನಗಳನ್ನು ರವಾನಿಸಲಾಗುತ್ತದೆ ಎಂದು ಹೇಳಲಾಗಿದೆ.

ಪ್ರಸ್ತುತ ಸಣ್ಣ ಆಕಾರದ ಆಫ್ ರೋಡಿಂಗ್ ಸುಜುಕಿ ಜಿಮ್ನಿ ಕಾರುಗಳು ಜಪಾನ್‍‍ನಲ್ಲಿನ ಕೊಸಾಯ್ ಎಂಬ ನಗರದಲ್ಲಿನ ಸುಜುಕಿ ಉತ್ಪಾದನಾ ಘಟಕದಿಂದ ಹೊರಬರುತ್ತಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಈ ಕಾರು ಬಿಡುಗಡೆಯಾಗಲಿಯೆ ಎಂಬ ಪ್ರಶ್ನೆಯು ಹಲವಾರು ವರ್ಷಗಳಿಂದ ಉತ್ತರ ಸಿಗದೇ ಹಾಗೆಯೆ ಉಳಿದಿದೆ.

ಭಾರತದಲ್ಲಿ ಮುಂದಿನ ವರ್ಷದಿಂದ ಸುಜುಕಿ ಜಿಮ್ನಿ ಉತ್ಪಾದನೆ ಪ್ರಾರಂಭ..

ಸಧ್ಯಕ್ಕೆ ದೇಶಿಯ ಮಾರುಕಟ್ಟೆಯಿಂದ ಮರೆಯಾದ ಮಾರುತಿ ಸುಜುಕಿ ಜಿಪ್ಸಿ ಕಾರುಗಳು ಸರಿಯಾದ ಸುರಕ್ಷಾ ಸಾಧನಗಳು ಇಲ್ಲವಾದ ಕಾರಣ ಜಿಮ್ನಿ ಕಾರುಗಳನ್ನು ಬಿಡುಗಡೆ ಮಾಡಿದ್ದೇ ಆದಲ್ಲಿ ದೇಶಿಯ ಮಾರುಕಟ್ಟೆಯಲ್ಲಿರುವ ಇನ್ನಿತರೆ ಆಫ್ ರೋಡಿಂಗ್ ವಾಹನಗಳ ಮಾರಾಟವನ್ನು ಮಾರುತಿ ಸುಜುಕಿ ಸಂಸ್ಥೆಯು ಹಿಂದಿಕ್ಕಬಹುದಾಗಿದೆ.

ಭಾರತದಲ್ಲಿ ಮುಂದಿನ ವರ್ಷದಿಂದ ಸುಜುಕಿ ಜಿಮ್ನಿ ಉತ್ಪಾದನೆ ಪ್ರಾರಂಭ..

ಹೀಗಿರುವಾಗ ಕೆಲವು ದಿನಗಳ ಹಿಂದಷ್ಟೆ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಜಿಪ್ಸಿ ಕಾರುಗಳ ಉತ್ಪಾದನೆಯನ್ನು ಪುನಃ ಪ್ರಾರಂಭಿಸಲಾಗಿದ್ದು, ಉತ್ಪಾದನೆಯಾಗುವ ಸುಮಾರು 3000ಕ್ಕು ಹೆಚ್ಚಿನ ಜಿಪ್ಸಿ ವಾಹನಗಳು ಕೆವಲ ನಮ್ಮ ಸೇನೆಗಾಗಿಯೆ ಉತ್ಪಾದನೆಯಾಗಲಿವೆ. ಏಕೆಂದರೆ ಸೇನೆಗೆ ಅಗತ್ಯವಿರುವ ಹಾಗೆ ಮತ್ತು ಅವರುಗಳ ಅವಶ್ಯಕತೆಗಳನ್ನು ಪೂರೈಸಲು ಕೇವಲ ಜಿಪ್ಸಿ ಕಾರುಗಳಿಗೆ ಮಾತ್ರ ಸಾಮರ್ಥ್ಯವಿದ್ದು, ಸೇನೆಯಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಜಿಪ್ಸಿ ಕಾರುಗಳನ್ನು ಉತ್ಪಾದನೆ ಮಾಡಲು ಮಾರುತಿ ಸಂಸ್ಥೆಗೆ ಆದೇಶ ಬಂದಿದೆ.

ಜಿಮ್ನಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದರೆ ಜಿಪ್ಸಿ ಎಸ್‍‍ಯುವಿ ಕಾರಿನ ಉತ್ತರಾಧಿಕಾರಿಯಾಗುತ್ತಿತ್ತು. ಆದರೇ ದೇಶಿಯ ಮಾರುಕಟ್ಟೆಯಲ್ಲಿ 3 ಡೋರ್ ಎಸ್‍‍ಯುವಿ ಕಾರುಗಳ ಸರಣಿಯಲ್ಲಿ ಬೇಡಿಕೆಯು ಮತ್ತು ಮಾರಾಟವು ಕಡಿಮೆ ಆಗುತ್ತಿರುವ ಕಾರಣ ಸುಜುಕಿ ಸಂಸ್ಥೆಯು ಜಿಮ್ನಿ ಕಾರನ್ನು ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಭಾರತದಲ್ಲಿ ಮುಂದಿನ ವರ್ಷದಿಂದ ಸುಜುಕಿ ಜಿಮ್ನಿ ಉತ್ಪಾದನೆ ಪ್ರಾರಂಭ..

ಜಿಮ್ನಿ ಕಾರುಗಳ ಇತಿಹಾಸದತ್ತ ಕಣ್ಣಾಯಿಸಿದಾಗ 1970ರ ಸಾಲಿನಲ್ಲಿ ಮೊದಲ ಹಗುರ ಜೀಪ್ ಮಾದರಿ ಎಲ್‌ಜೆ10 ಮಾರುಕಟ್ಟೆಗೆ ಪರಿಚಯವಾಗಿತ್ತು. ತದನಂತರ ಜಿಮ್ನಿ ಎರಡನೇ ತಲೆಮಾರಿನ ಆವೃತ್ತಿಯಾಗಿರುವ ಜಿಪ್ಸಿ 1981 ರಿಂದ 1998ರ ಅವಧಿಯಲ್ಲಿ ಮಾರಾಟವಾಗಿತ್ತು. ತದನಂತರ ಮೂರನೇ ತಲೆಮಾರಿನ ಆವೃತ್ತಿಯು ಜನಪ್ರಿಯಗೊಂಡು ಇದೀಗ ನಾಲ್ಕನೇ ತಲೆಮಾರಿನ ಜಿಮ್ನಿ ಕಾರುಗಳು ಮಾರಾಟ ಅಣಿಯಾಗುತ್ತಿವೆ.

ಭಾರತದಲ್ಲಿ ಮುಂದಿನ ವರ್ಷದಿಂದ ಸುಜುಕಿ ಜಿಮ್ನಿ ಉತ್ಪಾದನೆ ಪ್ರಾರಂಭ..

ವಿವಿಧ ದೇಶಗಳ ಮಾರುಕಟ್ಟೆ ಬೇರೆ ಬೇರೆ ಹೆಸರಿನೊಂದಿಗೆ ಮಾರಾಟವಾಗುತ್ತಿರುವ ಜಿಮ್ನಿ ಕಾರುಗಳು ಕಾಲ ಕ್ರಮೇಣ ಹಲವಾರು ಬದಲಾಣೆಗಳೊಂದಿಗೆ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡು ಬಂದಿದ್ದು, ಆಫ್ ರೋಡ್ ಪ್ರದರ್ಶನದಲ್ಲಿ ಈ ಕಾರುಗಳ ಗತ್ತು ನೋಡಿದವರಿಗಷ್ಟೇ ಗೊತ್ತು. 4x4 ಡ್ರೈವ್ ಟೆಕ್ನಾಲಜಿ ಅಳವಡಿಕೆ ಹೊಂದಿರುವ ಜಿಮ್ನಿ ಕಾರುಗಳು ವಿದೇಶದ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ಎರಡು ವೆರಿಯೆಂಟ್‌ಗಳಲ್ಲಿ ಲಭ್ಯವಾಗಲಿದ್ದು, ಒಂದು ಸ್ಟ್ಯಾಂಡರ್ಡ್ ವರ್ಷನ್ ಮತ್ತು ಟಾಪ್ ಎಂಡ್ ಮಾದರಿಯಾಗಿ ಸಿಯೈರಾ ಎನ್ನುವ ಕಾರು ಮಾದರಿಯು ಸಿದ್ದಗೊಂಡಿದೆ.

ಭಾರತದಲ್ಲಿ ಮುಂದಿನ ವರ್ಷದಿಂದ ಸುಜುಕಿ ಜಿಮ್ನಿ ಉತ್ಪಾದನೆ ಪ್ರಾರಂಭ..

ಇವುಗಳಲ್ಲಿ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎಕ್ಸ್‌ಜಿ, ಎಕ್ಸ್ಎಲ್ ಮತ್ತು ಎಕ್ಸ್‌ಸಿ ಎನ್ನುವ ಮಾದರಿಗಳು ಖರೀದಿಗೆ ಲಭ್ಯವಾಗಿದ್ದು, ಕೇಲವೇ ಕೆಲವು ತಾಂತ್ರಿಕ ಅಂಶಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಸೌಲಭ್ಯಗಳು ಪ್ರತಿ ಮಾದರಿಯಲ್ಲೂ ಕಾಣಬಹುದಾಗಿದೆ.

ಭಾರತದಲ್ಲಿ ಮುಂದಿನ ವರ್ಷದಿಂದ ಸುಜುಕಿ ಜಿಮ್ನಿ ಉತ್ಪಾದನೆ ಪ್ರಾರಂಭ..

ಜಪಾನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಮ್ನಿ ಕಾರುಗಳು 660ಸಿಸಿ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಟಾಪ್ ಎಂಡ್ ಮಾದರಿಯಲ್ಲಿ 1.5-ಲೀಟರ್(1500 ಸಿಸಿ) ಪೆಟ್ರೋಲ್ ಎಂಜಿನ್ ಜೊತೆಗೆ 63-ಬಿಎಚ್‌ಪಿ ಉತ್ಪಾದನೆ ಮಾಡಿದಲ್ಲಿ ಟಾಪ್ ಮಾದರಿಯು 100-ಬಿಎಚ್‌ಪಿ ಉತ್ಪಾದನಾ ಗುಣಹೊಂದಿವೆ. ಇದರೊಂದಿಗೆ ಪ್ರತಿ ಕಾರು ಮಾದರಿಯಲ್ಲೂ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಒದಗಿಸಲಾಗಿದೆ.

ಭಾರತದಲ್ಲಿ ಮುಂದಿನ ವರ್ಷದಿಂದ ಸುಜುಕಿ ಜಿಮ್ನಿ ಉತ್ಪಾದನೆ ಪ್ರಾರಂಭ..

ಜಿಮ್ನಿ ಕಾರುಗಳಲ್ಲಿ ಮಾರ್ಡನ್ ಲುಕ್‌ನೊಂದಿಗೆ ಸ್ಮಾರ್ಟ್ ಕನೆಕ್ಟಿವಿಗಳ ಸೌಲಭ್ಯವಿದ್ದು, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲರ್, ಪುಶ್ ಬಟನ್ ಸ್ಮಾರ್ಟ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಕ್ರೂಸ್ ಕಂಟ್ರೋಲರ್ ಮತ್ತು ಸ್ಟಿರಿಂಗ್ ಮೌಟೆಂಡ್ ಕಂಟ್ರೋಲ್ ಅಳವಡಿಸಲಾಗಿದೆ.

ಭಾರತದಲ್ಲಿ ಮುಂದಿನ ವರ್ಷದಿಂದ ಸುಜುಕಿ ಜಿಮ್ನಿ ಉತ್ಪಾದನೆ ಪ್ರಾರಂಭ..

ಜೊತೆಗೆ ಆಪ್ ರೋಡ್, ಸರ್ವಿಯಲ್ ಮತ್ತು ರೆವಿವಲ್ ಎನ್ನುವ ವಿವಿಧ ಚಾಲನಾ ಕಿಟ್ ಒದಗಿಸಲಾಗಿದ್ದು, ಬಾಡಿ ಡಿಕಾಲ್ಸ್, ಲೆದರ್ ಕವರ್ ಪ್ರೇರಿತ ಡೋರ್ ಹ್ಯಾಂಡಲ್, ಕಾರಿನ ಸ್ಟೈಲಿಶ್ ಹೆಚ್ಚಿಸಲು ರೂಫ್ ಟಾಪ್ ಕ್ಯಾರಿಯರ್, ಅಲಾಯ್ ವೀಲ್ಹ್‌ಗಳು ಮತ್ತು ಕಾರಿನ ಕೆಳ ಭಾಗದಲ್ಲಿ ಹೆಚ್ಚುವರಿ ಟೈರ್ ಕ್ಯಾರಿ ಮಾಡುವ ಸೌಲಭ್ಯವಿದೆ.

ಕಾರಿನ ಬೆಲೆಗಳು (ಅಂದಾಜು)

ಉದ್ದಳತೆಯಲ್ಲಿ ಜಿಪ್ಸಿಗಿಂತಲೂ ಸಣ್ಣದಾಗಿರುವ ಜಿಮ್ನಿ ಕಾರುಗಳು 6 ಲಕ್ಷದಿಂದ 8.50 ಲಕ್ಷದ ತನಕ ಬೆಲೆ ನಿಗದಿಯಾಗುವ ಸಾಧ್ಯತೆಗಳಿದ್ದು, ಇವು ತ್ರಿ ಡೋರ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ.

Most Read Articles

Kannada
English summary
Suzuki Jimny Production To Begin In India From Next Year - Will It Enter To Indian Market.?. Read In Kannada
Story first published: Tuesday, June 11, 2019, 16:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X