Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೀಪಾವಳಿ ಹೊತ್ತಿಗೆ ಇನೋವಾ ಕ್ರಿಸ್ಟಾ ಪ್ರತಿಸ್ಪರ್ಧಿ ಟಾಟಾ 7 ಸೀಟರ್ ಕಾರು ಬಿಡುಗಡೆ..!
ಟಾಟಾ ಮೋಟಾರ್ಸ್ ಸಂಸ್ಥೆಯು ಕಳೆದ ಫೆಬ್ರುವರಿಯಲ್ಲಿ ನಡೆದ ಜಿನೆವಾ ಆಟೋ ಮೇಳದಲ್ಲಿ ಪ್ರದರ್ಶನ ಮಾಡಲಾಗಿದ್ದ 7 ಸೀಟರ್ ಕ್ಯಾಸಿನಿ ಕಾರನ್ನು ಭಾರತದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆ ಮಾಡುತ್ತಿದ್ದು, ವರದಿಗಳ ಪ್ರಕಾರ ಟಾಟಾ ಹೊಸ ಕಾರು ಮುಂಬರುವ ದೀಪಾವಳಿ ಹೊತ್ತಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿಯೆಂತೆ.

ಟಾಟಾ ಸಂಸ್ಥೆಯು 5 ಸೀಟರ್ ಹ್ಯಾರಿಯರ್ ಮಾದರಿಯಲ್ಲೇ 7 ಸೀಟರ್ ಕಾರು ಆವೃತ್ತಿಯನ್ನು ಅಭಿವೃದ್ಧಿಗೊಳಿಸಿದ್ದು, ಸ್ಪಾಟ್ ಟೆಸ್ಟಿಂಗ್ ವೇಳೆ ಹೊಸ ಕಾರು 7 ಸೀಟರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಸುಳಿವು ನೀಡಿದೆ. ವಿನೂತನ ವಿನ್ಯಾಸ ಮತ್ತು ಹೊಸ ಎಂಜಿನ್ ಆಯ್ಕೆಯಿಂದಾಗಿ ಗ್ರಾಹಕರನ್ನು ಸೆಳೆಯುವ ತವಕದಲ್ಲಿರುವ ಟಾಟಾ ಕ್ಯಾಸಿನಿ ಕಾರು ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಫೋರ್ಡ್ ಎಂಡೀವರ್ ಆವೃತ್ತಿಗೂ ಪ್ರತಿಸ್ಪರ್ಧಿಯಾಗುವ ಗುಣಲಕ್ಷಣಗಳನ್ನು ಹೊಂದಿದೆ.

ಹೊಸ ಕ್ಯಾಸಿನಿ ಕಾರು ಮಾದರಿಯು 6 ಪ್ಲಸ್ 1 ಆಸನ ಮಾದರಿಯ ಎಸ್‌ಯುವಿ ಕಾರು ಆವೃತ್ತಿಯಾಗಿದ್ದು, 5 ಸೀಟರ್ ಹ್ಯಾರಿಯರ್ ಮಾದರಿಯಲ್ಲೇ ಹೊಸ ಕಾರು ಕೂಡಾ ಒಳ ಮತ್ತು ಹೊರ ವಿನ್ಯಾಸಗಳನ್ನು ಪಡೆದುಕೊಂಡಿರುವುದು ಸ್ಪಾಟ್ ಟೆಸ್ಟಿಂಗ್‌ನಲ್ಲಿ ಬಹಿರಂಗವಾಗಿದೆ.

ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಹೆಕ್ಸಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯವನ್ನು ಹೊಂದಿರುವ ಕ್ಯಾಸಿನಿ ಕಾರು 2,741-ಎಂಎಂ ನಷ್ಟು ವೀಲ್ಹ್ ಬೆಸ್ ಸೌಲಭ್ಯದೊಂದಿಗೆ ಹ್ಯಾರಿಯರ್ ಕಾರಿಗಿಂತ 62-ಎಂಎಂ ಉದ್ದವಾಗಿದೆ ಎನ್ನಲಾಗಿದೆ.

ಇದು ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಸಹಕಾರಿಯಾಗಲಿದ್ದು, ಎಸ್‌ಯುವಿ ಕಾರುಗಳ ಪ್ರಮುಖ ಆಕರ್ಷಣೆಯಾದ ಫುಟ್ ಬೋರ್ಡ್, ರೂಫ್ ರೈಲ್ಸ್ ಮತ್ತು 18-ಇಂಚಿನ ಅಲಾಯ್ ಚಕ್ರಗಳು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತೊಂದು ವಿಚಾರ ಅಂದ್ರೆ, ಹೊಸ ಕಾರು ಇಂಪ್ಯಾಕ್ಟ್ 2.0 ಡಿಸೈನ್ ಅಡಿ ನಿರ್ಮಾಣವಾಗಿದ್ದು, ಫ್ಲೇರ್ಡ್ ಆರ್ಚೆಸ್, ಮುಂಭಾಗದ ಬಂಪರ್‍ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್‍ಗಳಿಂದ ಸಜ್ಜುಗೊಂಡಿದೆ.

ಕಾರಿನ ವಿನ್ಯಾಸ
ಕ್ಯಾಸಿನಿ ಎಸ್‍ಯುವಿ ಕಾರು ಐಷಾರಾಮಿ ಒಳವಿನ್ಯಾಸದೊಂದಿಗೆ ವಿಶಾಲವಾದ ಕ್ಯಾಬಿನ್ ಸ್ಪೆಸ್ ಹೊಂದಿದ್ದು, ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಪ್ರೀಮಿಯಂ ಆಡಿಯೊ ಸಿಸ್ಟಂ ಹಾಗೂ ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ. ಜೊತೆಗೆ ಹೊಸ ಕಾರು ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ್ದು, ಇದೇ ತಂತ್ರವನ್ನು ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡಾ ಇದನ್ನು ನಾವು ಕಾಣಬಹುದಾಗಿದೆ.

ಎಂಜಿನ್ ಸಾಮರ್ಥ್ಯ
ಕ್ಯಾಸಿನಿ ಕಾರುಗಳಲ್ಲಿ 2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 170-ಬಿಹೆಚ್‍ಪಿ ಹಾಗೂ 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಹ್ಯುಂಡೈನಿಂದ ಎರವಲು ಪಡೆಯಲಾಗಿರುವ ಸಿಕ್ಸ್ ಸ್ಪೀಡ್ ಮ್ಯಾನುವಲ್ ಮತ್ತು ಸಿಕ್ಸ್ ಸ್ಪಿಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸೌಲಭ್ಯವನ್ನ ಪಡೆದುಕೊಳ್ಳಲಿದೆ.

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ(ಅಂದಾಜು)
ಟಾಟಾ ಸಂಸ್ಥೆಯು ಸದ್ಯ ನಾಲ್ಕು ವಿವಿಧ ಮಾದರಿಯ ಕಾರುಗಳ ಬಿಡುಗಡೆಗಾಗಿ ಯೋಜನೆ ರೂಪಿಸಿದ್ದು, ಇದರಲ್ಲಿ ಮೊದಲಿಗೆ ಆಲ್‌ಟ್ರೊಜ್ ಕಾರು ಬಿಡುಗಡೆಯಾದ ನಂತರವಷ್ಟೇ ಕ್ಯಾಸಿನಿ ಕಾರು ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ.
MOST READ: ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಇನ್ನು ಕೆಲವು ವರದಿಗಳ ಪ್ರಕಾರ, ಕ್ಯಾನಿಸಿ ಕಾರು 2020ರ ಫೆಬ್ರುವರಿನಲ್ಲಿ ನಡೆಯುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದ್ದು, ಹೊಸ ಕಾರಿನ ಬೆಲೆಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.16 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ. 20 ಲಕ್ಷ ಬೆಲೆ ಹೊಂದಿರಬಹುದು ಎಂದು ನೀರಿಕ್ಷಿಸಲಾಗಿದೆ.