ಜೂನ್ ತಿಂಗಳಿನಲ್ಲಿ ಮಾರಾಟವಾದ ಟೊಯೊಟಾ ಇನೋವಾ ಕ್ರಿಸ್ಟಾ ಎಷ್ಟು.?

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಇಂಡಿಯಾ ಸಂಸ್ಥೆಯು ಕೆಲ ದಿನಗಳ ದಿಂದಷ್ಟೆ ತಮ್ಮ ಜನಪ್ರಿಯ ಇನೋವಾ ಕ್ರಿಸ್ಟಾ ಎಂಪಿವಿ ಕಾರಿನ ಹೊಸ ವೇರಿಯಂಟ್ ಅನ್ನು ಬಿಡುಗಡೆಗೊಳಿಸಿದ್ದು, ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಮರಾಜೊ ಮತ್ತು ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.

ಜೂನ್ ತಿಂಗಳಿನಲ್ಲಿ ಮಾರಾಟವಾದ ಟೊಯೊಟಾ ಇನೋವಾ ಕ್ರಿಸ್ಟಾ ಎಷ್ಟು.?

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ಗ್ರಾಹಕರ ಬೇಡಿಕೆಯ ಅನುಸಾರವಾಗಿ ಇನೋವಾ ಕಾರನ್ನು ಬಿಡುಗಡೆಗೊಳಿಸಿದ್ದು, ನಂತರ ಇನೋವಾ ಕ್ರಿಸ್ಟಾ ಎಂಪಿವಿ ಕಾರು ಮಾದರಿಯಾಗಿ ಮರುಬಿಡುಗಡೆಯಾಗಿತ್ತು. ಆದ್ರೆ ಇದೀಗ ಈ ಕಾರು ಮಾರುಕಟ್ಟೆಯಲ್ಲಿ ತಮ್ಮ ಎದುರಾಳಿಗಳನ್ನು ಹಿಂದಿಕ್ಕಿ ಮತ್ತಷ್ಟು ಬೇಡಿಕೆಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಿದೆ.

ಜೂನ್ ತಿಂಗಳಿನಲ್ಲಿ ಮಾರಾಟವಾದ ಟೊಯೊಟಾ ಇನೋವಾ ಕ್ರಿಸ್ಟಾ ಎಷ್ಟು.?

ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಸಂಸ್ಥೆಯ ಮರಾಜೊ ಕಾರು ಮತ್ತು ಮಾರುತಿ ಸುಜುಕಿ ಸಂಸ್ಥೆಯ ಹೊಸ ತಲೆಮಾರಿನ ಎರ್ಟಿಗಾ ಎಂಪಿವಿ ಕಾರುಗಳು ಬಿಡುಗಡೆಗೊಂಡರೂ ಸಹ ಗ್ರಾಹಕರು ಇನ್ನು ಇನೋವಾ ಕ್ರಿಸ್ಟಾ ಕಾರುಗಳಿಗೆ ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಜೂನ್ ತಿಂಗಳಿನಲ್ಲಿ ಮಾರಾಟವಾದ ಟೊಯೊಟಾ ಇನೋವಾ ಕ್ರಿಸ್ಟಾ ಎಷ್ಟು.?

ಇನ್ನು ಜೂನ್ 2019ರ ಎಂಪಿವಿ ಕಾರುಗಳ ಮಾರಾಟದಲ್ಲಿ 4814 ಯೂನಿಟ್ ಟೊಯೊಟಾ ಇನೊವಾ ಕ್ರಿಸ್ಟಾ, 1206 ಯೂನಿಟ್ ಮಹೀಂದ್ರಾ ಮರಾಜೊ ಮತ್ತು ಮೊದಲನೆಯ ಸ್ಥಾನದಲ್ಲಿ ಎಂದಿನಂತಯೆ ಮಾರುತಿ ಸುಜುಕಿ ಎರ್ಟಿಗಾ ಕಾರು 7567 ಯೂನಿಟ್ ಮಾರಾಟಗೊಂಡಿದೆ. ಆದರೂ ಸಹ ಒಂದು ಪರ್ಫೆಕ್ಟ್ ಐಷಾರಾಮಿ ಎಂಪ್ಪಿವಿ ಕಾರನ್ನು ಖರೀದಿ ಮಾಡಬೇಕಂದ್ರೆ ಇನೋವಾ ಕಾರನ್ನು ಆಯ್ಕೆ ಮಾಡಿಕೊಳ್ಳುವ ಆಲೋಚನೆಯಲ್ಲಿ ಗ್ರಾಹಕರಿದ್ದಾರೆ.

ಜೂನ್ ತಿಂಗಳಿನಲ್ಲಿ ಮಾರಾಟವಾದ ಟೊಯೊಟಾ ಇನೋವಾ ಕ್ರಿಸ್ಟಾ ಎಷ್ಟು.?

2016ರಲ್ಲಿ ಬಿಡುಗಡೆಗೊಂಡ ಟೊಯೊಟಾ ಇನೋವಾ ಕ್ರಿಸ್ಟಾ ಎಮ್‍ಪಿವಿ ಕಾರುಗಳು ದೇಶದಲ್ಲಿನ ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಎಂಪಿವಿ ಕಾರು ಮಾದರಿಯಾಗಿ ಹೊರಹೊಮ್ಮಿದೆ. ಯಾಕೆಂದ್ರೆ ಬೆಲೆಯಲ್ಲಿ ಅಧಿಕವಾದರೂ ಗ್ರಾಹಕರು ಕಡಿಮೆ ಬೆಲೆಯ ಮಾರುತಿ ಸುಜುಕಿ ಎರ್ಟಿಗಾ ಕಾರನ್ನು ಲೆಕ್ಕಿಸದೇ ಐಷಾರಾಮಿ ಸೌವಲತ್ತುಗಳನ್ನು ಒದಗಿಸುತ್ತಿರುವ ಇನೋವಾ ಕ್ರಿಸ್ಟಾ ಕಾರುಗಳನ್ನು ಖರೀದಿಸುತ್ತಿದ್ದಾರೆ.

ಜೂನ್ ತಿಂಗಳಿನಲ್ಲಿ ಮಾರಾಟವಾದ ಟೊಯೊಟಾ ಇನೋವಾ ಕ್ರಿಸ್ಟಾ ಎಷ್ಟು.?

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿ ಕಾರುಗಳು ಕ್ಯಾಬ್ ಆಪರೇಟರ್‍‍ಗಳಿಗೆ ಮತ್ತು ಸ್ವಂತ ಬಳಕೆಗೆ ತಯಾರಿಸ್ಪಟ್ಟ ಕಾರಾಗಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ಈ ಕಾರು ರೂ.14.93 ಲಕ್ಷದಿಂದ ರೂ.23.46 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಜೂನ್ ತಿಂಗಳಿನಲ್ಲಿ ಮಾರಾಟವಾದ ಟೊಯೊಟಾ ಇನೋವಾ ಕ್ರಿಸ್ಟಾ ಎಷ್ಟು.?

ಹಳೆಯ ಇನೋವಾಗಿಂತಲೂ 150 ಎಂಎಂ ಉದ್ದ, 70 ಎಂಎಂ ಅಗಲ ಮತ್ತು 35 ಎಂಎಂ ಹೆಚ್ಚು ಎತ್ತರವನ್ನು ಎರಡನೇ ತಲೆಮಾರಿನ ಇನೋವಾ ಪಡೆದಿದೆ. ಇದು ಒಟ್ಟಾರೆ 4735 ಎಂಎಂ ಉದ್ದ, 1830 ಎಂಎಂ ಅಗಲ, 1795 ಎಂಎಂ ಎತ್ತರ ಮತ್ತು 2750 ಎಂಎಂ ವೀಲ್ ಬೇಸ್ ಪಡೆದಿದೆ.

ಜೂನ್ ತಿಂಗಳಿನಲ್ಲಿ ಮಾರಾಟವಾದ ಟೊಯೊಟಾ ಇನೋವಾ ಕ್ರಿಸ್ಟಾ ಎಷ್ಟು.?

ಟಾಪ್ ಎಂಡ್ ಇನೋವಾ ಕಾರಿನಲ್ಲಿ ಸ್ಟ್ಯಾರ್ಟ್ ಸ್ಟಾಪ್ ಬಟನ್, ಸ್ಮಾರ್ಟ್ ಎಂಟ್ರಿ ಸಿಸ್ಟಂ, ಏಳು ಏರ್ ಬ್ಯಾಗ್, ಎಬಿಎಸ್, ಇಬಿಡಿ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಏಳು ಇಂಚುಗಳ ಆಡಿಯೋ ಸಿಸ್ಟಂ ಜೊತೆ ನೇವಿಗೇಷನ್, ಎಲ್ ಇಡಿ ಹೆಡ್ ಲ್ಯಾಂಪ್ ಮತ್ತು 17 ಇಂಚುಗಳ ಅಲಾಯ್ ವೀಲ್ ಗಳಿರಲಿದೆ.

ಜೂನ್ ತಿಂಗಳಿನಲ್ಲಿ ಮಾರಾಟವಾದ ಟೊಯೊಟಾ ಇನೋವಾ ಕ್ರಿಸ್ಟಾ ಎಷ್ಟು.?

ಪ್ರಸ್ತುತ ಟೊಯೊಟಾ ಇನೊವಾ ಕ್ರಿಸ್ಟಾ ಕಾರುಗಳು 2.4 ಲೀಟರ್ ಮತ್ತು 2.8 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅಯ್ಕೆಯಲ್ಲಿ ಹಾಗು 2.7 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜೂನ್ ತಿಂಗಳಿನಲ್ಲಿ ಮಾರಾಟವಾದ ಟೊಯೊಟಾ ಇನೋವಾ ಕ್ರಿಸ್ಟಾ ಎಷ್ಟು.?

ಇನ್ನು 2.4 ಲೀಟರ್ ಡೀಸೆಲ್ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಿದಲ್ಲಿ 2.7 ಲೀಟರ್ ಡೀಸೆಲ್ ಎಂಜಿನ್ ಅನ್ನು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಟೊಯೊಟಾ ಇನೋವಾ ಎಲ್ಲಾ ವೇರಿಯಂಟ್ ಕಾರುಗಳಲ್ಲಿ ರಿಯರ್ ವ್ಹೀಲ್ ಡ್ರೈವ್ ಮೋಡ್ ಅನ್ನು ಅಳವಡಿಸಲಾಗಿದೆ.

Most Read Articles

Kannada
English summary
Toyota Innova Crysta June 2019 Sales Report. Read In Kannada
Story first published: Thursday, July 11, 2019, 13:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X