ವಾಹನಗಳನ್ನು ರಿಕಾಲ್ ಮಾಡುತ್ತಿರುವ ವೊಲ್ವೊ

ಸ್ವೀಡನ್‍‍ನ ಕಾರು ತಯಾರಕ ಕಂಪನಿ ವೊಲ್ವೊ, ಹೊಸ ಸುರಕ್ಷತಾ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿದೆ. ಈಗ ಪ್ರಪಂಚದ್ಯಾಂತ 5,07,000 ವಾಹನಗಳನ್ನು ಹಿಂಪಡೆಯುತ್ತಿದೆ. ಪ್ಲಾಸ್ಟಿಕ್ ಎಂಜಿನ್ ಇನ್‍‍ಟೇಕ್ ದೋಷದಿಂದಾಗಿ ಎಂಜಿನ್ ಬೇಯಲ್ಲಿ ಬೆಂಕಿಯಿಂದ ಅಪಾಯಗಳಾಗುವ ಸಾಧ್ಯತೆಗಳಿವೆ. ಪ್ಲಾಸ್ಟಿಕ್‍‍ಗಳು ಕರಗಿ ವಿರೂಪಗೊಳ್ಳಬಹುದು.

ವಾಹನಗಳನ್ನು ರಿಕಾಲ್ ಮಾಡುತ್ತಿರುವ ವೊಲ್ವೊ

ಆದ ಕಾರಣ 2014-2019ರ ನಡುವೆ ತಯಾರಾದ 2.0 ಲೀಟರ್‍‍ನ 4 ಸಿಲಿಂಡರ್ ಡೀಸೆಲ್ ಎಂಜಿನ್ ಅಳವಡಿಸಲಾಗಿರುವ ಎಲ್ಲಾ ವಾಹನಗಳನ್ನು ಹಿಂಪಡೆಯಲಾಗುತ್ತಿದೆ. ಜಾಗತಿಕವಾಗಿ ತೊಂದರೆಗೊಳಗಾಗಿರುವ ಮಾದರಿಗಳಲ್ಲಿ ಎಸ್60, ಎಸ್80, ಎಸ್90, ವಿ40, ವಿ60, ವಿ70, ವಿ90, ಎಕ್ಸ್‌ಸಿ60 ಹಾಗೂ ಎಕ್ಸ್‌ಸಿ90 ವಾಹನಗಳು ಸೇರಿವೆ.

ವಾಹನಗಳನ್ನು ರಿಕಾಲ್ ಮಾಡುತ್ತಿರುವ ವೊಲ್ವೊ

ವೊಲ್ವೊ ಕಂಪನಿಯು, ಬಹಳ ಅಪರೂಪದ ಸಂದರ್ಭಗಳಲ್ಲಿ, ಪ್ಲಾಸ್ಟಿಕ್ ಎಂಜಿನ್ ಇನ್‍‍‍ಟೇಕ್ ಮ್ಯಾನಿಫೋಲ್ಡ್ ಕರಗಿ ವಿರೂಪಗೊಳ್ಳಬಹುದು ಎಂಬುದು ತನಿಖೆಗಳಿಂದ ಸಾಬೀತಾಗಿದೆ ಎಂದು ಹೇಳಿದೆ. ಅತ್ಯಂತ ಕೆಟ್ಟ ಸಂದರ್ಭಗಳಲ್ಲಿ, ಸ್ಥಳೀಯ ಎಂಜಿನ್ ಬೇನಲ್ಲಿ ಬೆಂಕಿ ಸಂಭವಿಸುವ ಸಾಧ್ಯತೆಯಿದೆ ಎಂದೂ ಸಹ ಕಂಪನಿ ಹೇಳಿದೆ.

ವಾಹನಗಳನ್ನು ರಿಕಾಲ್ ಮಾಡುತ್ತಿರುವ ವೊಲ್ವೊ

ಭಾರತದಲ್ಲಿ ತೊಂದರೆಗೊಳಗಾದ ವೋಲ್ವೋ ಕಾರುಗಳಲ್ಲಿ ಎಸ್ 60, ಎಸ್ 80, ಎಸ್ 90, ವಿ 40, ವಿ 90, ಎಕ್ಸ್‌ಸಿ 60 ಹಾಗೂ ಅದರ ಪ್ರಮುಖ ಎಸ್‍‍ಯು‍‍ವಿ ಎಕ್ಸ್‌ಸಿ 90 ಸೇರಿವೆ. 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ, 2014-2019ರ ನಡುವೆ ತಯಾರಿಸಲಾದ ಎಲ್ಲಾ ಮಾದರಿಗಳನ್ನು ಪರಿಶೀಲಿಸಬೇಕಾಗಿದೆ.

ವಾಹನಗಳನ್ನು ರಿಕಾಲ್ ಮಾಡುತ್ತಿರುವ ವೊಲ್ವೊ

ಜಿಗ್‍‍ವ್ಹೀಲ್ಸ್ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ವೊಲ್ವೊ ಕಾರ್ ಇಂಡಿಯಾ ಇದನ್ನು ದೃಢಪಡಿಸಿದೆ. ಭಾರತದಲ್ಲಿ ಸುಮಾರು 3000 ಕಾರುಗಳನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಲಾಗಿದೆ. ದೋಷಯುಕ್ತ ಬಿಡಿಭಾಗಗಳನ್ನು ಉಚಿತವಾಗಿ ಬದಲಾಯಿಸಲಾಗುವುದು ಎಂದು ಸ್ವೀಡನ್ ಮೂಲದ ಕಾರು ತಯಾರಕ ತಿಳಿಸಿದೆ.

ವಾಹನಗಳನ್ನು ರಿಕಾಲ್ ಮಾಡುತ್ತಿರುವ ವೊಲ್ವೊ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಗ್ರಾಹಕರನ್ನು ಇಮೇಲ್ ಅಥವಾ ಫೋನ್ ಮೂಲಕ ಸಂಪರ್ಕಿಸಿ, ದೋಷಯುಕ್ತ ಬಿಡಿಭಾಗವನ್ನು ಅಧಿಕೃತ ಸೇವಾ ಕೇಂದ್ರದಲ್ಲಿ ಬದಲಿಸಿಕೊಳ್ಳುವಂತೆ ಹೇಳಲಾಗುವುದು. ದೋಷಯುಕ್ತ ವಾಹನಗಳನ್ನು ಆದಷ್ಟು ಬೇಗ ಸರಿಪಡಿಸಲು ಕಂಪನಿಯು ಉತ್ಸುಕವಾಗಿದೆ ಎಂದು ವೊಲ್ವೊ ಕಂಪನಿಯು ತಿಳಿಸಿದೆ.

ವಾಹನಗಳನ್ನು ರಿಕಾಲ್ ಮಾಡುತ್ತಿರುವ ವೊಲ್ವೊ

ವಿಶ್ವಾದ್ಯಂತವಿರುವ ವೊಲ್ವೊ ಕಾರುಗಳು ಹೆಚ್ಚಿನ ಪ್ರಮಾಣದ ಸುರಕ್ಷತಾ ಮಾನದಂಡಗಳಿಗೆ ಹೆಸರುವಾಸಿಯಾಗಿವೆ. ಇತ್ತೀಚಿನ ಮಾದರಿಗಳಾದ ಎಕ್ಸ್‌ಸಿ 90 ಫ್ಲ್ಯಾಗ್‌ಶಿಪ್ ಎಸ್‌ಯುವಿ ಹಾಗೂ ಎಸ್ 90 ಫ್ಲ್ಯಾಗ್‌ಶಿಪ್ ಸೆಡಾನ್ ಜಾಗತಿಕ ಮಟ್ಟದ ಎನ್‌ಸಿಎಪಿ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಗಳಿಸಿವೆ.

ವಾಹನಗಳನ್ನು ರಿಕಾಲ್ ಮಾಡುತ್ತಿರುವ ವೊಲ್ವೊ

ಕಾರು ತಯಾರಕ ಕಂಪನಿಗಳೂ ಸಹ ತಮ್ಮ ಗ್ರಾಹಕರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿವೆ. 2020ರ ವೇಳೆಗೆ ಹೊಸ ವೊಲ್ವೊ ಕಾರುಗಳಲ್ಲಿ ಯಾರೂ ಗಂಭೀರವಾಗಿ ಗಾಯಗೊಳ್ಳಬಾರದು ಅಥವಾ ಸಾಯಬಾರದು ಎಂಬುದು ವೊಲ್ವೊ ಕಂಪನಿಯ ಉದ್ದೇಶವಾಗಿದೆ.

Most Read Articles

Kannada
Read more on ವೊಲ್ವೊ volvo
English summary
Volvo Recalls 5,07,000 Vehicles Globally Due To Fire Risk, Indian Cars Affected As Well - Read in kannada
Story first published: Wednesday, July 24, 2019, 14:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X