ಎ 4 ಫೇಸ್‌ಲಿಫ್ಟ್ ಕಾರಿನ ಉತ್ಪಾದನೆಯನ್ನಾರಂಭಿಸಿದ ಆಡಿ

ಆಡಿ ಕಂಪನಿಯು ಔರಂಗಾಬಾದ್'ನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಎ 4 ಫೇಸ್‌ಲಿಫ್ಟ್ ಕಾರಿನ ಉತ್ಪಾದನೆಯನ್ನು ಆರಂಭಿಸಿದೆ. ಆಡಿ ಎ 4 ಫೇಸ್‌ಲಿಫ್ಟ್ ಕಾರನ್ನು ಈ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ಬಿಡುಗಡೆಗೊಳಿಸಬೇಕಾಗಿತ್ತು.

ಎ 4 ಫೇಸ್‌ಲಿಫ್ಟ್ ಕಾರಿನ ಉತ್ಪಾದನೆಯನ್ನಾರಂಭಿಸಿದ ಆಡಿ

ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ಈ ಕಾರಿನ ಬಿಡುಗಡೆಯನ್ನು ಮುಂದೂಡಲಾಗಿದೆ. ಹೊಸ ಯೋಜನೆಯಂತೆ 2021ರ ಆರಂಭದಲ್ಲಿ ಈ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಆಡಿ ಕಂಪನಿ ತಿಳಿಸಿದೆ. ಆಡಿ ಎ 4 ಫೇಸ್‌ಲಿಫ್ಟ್ ಕಾರನ್ನು ಭಾರತದಲ್ಲಿ ಕಂಪ್ಲೀಟ್ ನಾಕ್ ಡೌನ್ ಯೂನಿಟ್ ಮೂಲಕ ಮಾರಾಟ ಮಾಡಲಾಗುತ್ತದೆ

ಎ 4 ಫೇಸ್‌ಲಿಫ್ಟ್ ಕಾರಿನ ಉತ್ಪಾದನೆಯನ್ನಾರಂಭಿಸಿದ ಆಡಿ

ಈ ಫೇಸ್‌ಲಿಫ್ಟ್‌ ಕಾರಿನ ವಿನ್ಯಾಸ ಹಾಗೂ ಫೀಚರ್ ಗಳನ್ನು ಅಪ್ ಡೇಟ್ ಮಾಡಲಾಗಿದೆ. ಫೇಸ್‌ಲಿಫ್ಟ್‌ ಕಾರಿನಲ್ಲಿ ಹೊಸ ಮೈಲ್ಡ್ ಹೈಬ್ರಿಡ್ ಎಂಜಿನ್ ಅನ್ನು ನೀಡಲಾಗುವುದು. ಎ 4 ಫೇಸ್‌ಲಿಫ್ಟ್‌ ಕಾರಿನ ವಿನ್ಯಾಸವನ್ನು ಆಡಿ ಎ 1 ಹ್ಯಾಚ್‌ಬ್ಯಾಕ್‌ ಕಾರಿನಿಂದ ಪಡೆಯಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಎ 4 ಫೇಸ್‌ಲಿಫ್ಟ್ ಕಾರಿನ ಉತ್ಪಾದನೆಯನ್ನಾರಂಭಿಸಿದ ಆಡಿ

ಈ ಫೇಸ್‌ಲಿಫ್ಟ್‌ ಕಾರು ಹೊಸ ಎಲ್ಇಡಿ ಹೆಡ್ ಲೈಟ್, ಎಲ್ಇಡಿ ಟೇಲ್ ಲ್ಯಾಂಪ್ ಹಾಗೂ ಟಾಪ್ ಎಂಡ್ ಮಾದರಿಯು ಮ್ಯಾಟ್ರಿಕ್ಸ್ ಎಲ್ಇಡಿ ಟೆಕ್ನಾಲಜಿಯನ್ನು ಹೊಂದಿದೆ. ಈ ಕಾರಿನಲ್ಲಿ ಆಟೋಮ್ಯಾಟಿಕ್ ಹೈಬೀಮ್ ಫೀಚರ್ ಅನ್ನು ಸಹ ನೀಡಲಾಗಿದೆ.

ಎ 4 ಫೇಸ್‌ಲಿಫ್ಟ್ ಕಾರಿನ ಉತ್ಪಾದನೆಯನ್ನಾರಂಭಿಸಿದ ಆಡಿ

ಹೊಸ ವಿನ್ಯಾಸದಲ್ಲಿ ಆಡಿ ಎ 4 ಫೇಸ್‌ಲಿಫ್ಟ್‌ ಕಾರು ಮೊದಲಿಗಿಂತ ಹೆಚ್ಚು ಸ್ಪೋರ್ಟಿ ಹಾಗೂ ಅಗ್ರೆಸಿವ್ ಆಗಿ ಕಾಣುತ್ತದೆ. ಈ ಕಾರು ಮೊದಲಿಗಿಂತ ದೊಡ್ಡ ಗಾತ್ರದ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ. ಕಾರಿನ ಮುಂಭಾಗ ಹಾಗೂ ಹಿಂಭಾಗದ ಬಂಪರ್‌ಗಳು ಸ್ಪಷ್ಟವಾದ ಲುಕ್ ಹಾಗೂ ಡಿಸೈನ್ ಅನ್ನು ಹೊಂದಿವೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಎ 4 ಫೇಸ್‌ಲಿಫ್ಟ್ ಕಾರಿನ ಉತ್ಪಾದನೆಯನ್ನಾರಂಭಿಸಿದ ಆಡಿ

ಎ 4 ಫೇಸ್‌ಲಿಫ್ಟ್‌ ಕಾರಿನ ಎಸ್ ಮಾದರಿಯು 19 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದರೆ, ಉಳಿದ ಮಾದರಿಗಳು 17 ಹಾಗೂ 18 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಹೊಸ ಆಡಿ ಎ 4 ಫೇಸ್‌ಲಿಫ್ಟ್‌ ಕಾರು 12.3 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ ಹಾಗೂ 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್ ಮೆಂಟ್ ಸಿಸ್ಟಂಗಳನ್ನು ಹೊಂದಿದೆ.

ಎ 4 ಫೇಸ್‌ಲಿಫ್ಟ್ ಕಾರಿನ ಉತ್ಪಾದನೆಯನ್ನಾರಂಭಿಸಿದ ಆಡಿ

ಈ ಕಾರಿನಲ್ಲಿರುವ ಫೀಚರ್'ಗಳ ಬಗ್ಗೆ ಹೇಳುವುದಾದರೆ ಆಡಿ ಫೇಸ್‌ಲಿಫ್ಟ್‌ ಕಾರು ಎಲೆಕ್ಟ್ರಿಕ್ ಫೋಲ್ಡಿಂಗ್ ಒಆರ್'ವಿಎಂ, ಮಲ್ಟಿ-ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಮಲ್ಟಿಪಲ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್'ಗಳನ್ನು ಹೊಂದಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಎ 4 ಫೇಸ್‌ಲಿಫ್ಟ್ ಕಾರಿನ ಉತ್ಪಾದನೆಯನ್ನಾರಂಭಿಸಿದ ಆಡಿ

ಯುರೋಪಿನಲ್ಲಿ ಈ ಮಾದರಿಯೊಂದಿಗೆ ಆಡಿ ಕನೆಕ್ಟ್ ಹಾಗೂ ಕನೆಕ್ಟ್ ಪ್ಲಸ್ ಪ್ಯಾಕೇಜ್‌ಗಳನ್ನು ಸಹ ನೀಡಲಾಗುತ್ತದೆ. ಆದರೆ ಈ ಫೀಚರ್ ಅನ್ನು ಭಾರತದಲ್ಲಿ ಮಾರಾಟವಾಗುವ ಮಾದರಿಯಲ್ಲಿ ನೀಡುವುದಿಲ್ಲ. ಆಡಿ ಎ 4 ಫೇಸ್‌ಲಿಫ್ಟ್ ಕಾರಿನಲ್ಲಿ 2.0 ಲೀಟರಿನ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗುವುದು.

ಎ 4 ಫೇಸ್‌ಲಿಫ್ಟ್ ಕಾರಿನ ಉತ್ಪಾದನೆಯನ್ನಾರಂಭಿಸಿದ ಆಡಿ

ಈ ಎಂಜಿನ್ ಅನ್ನು ಇತ್ತೀಚೆಗೆ ಬಿಡುಗಡೆಯಾದ ಆಡಿ ಕ್ಯೂ 2 ಎಸ್‌ಯುವಿಯಿಂದ ಪಡೆಯಲಾಗಿದೆ. ಈ ಎಂಜಿನ್ 188 ಬಿಹೆಚ್‌ಪಿ ಪವರ್ ಹಾಗೂ 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬಿಡುಗಡೆಯ ಸಮಯದಲ್ಲಿ ಈ ಕಾರಿನ ಫೀಚರ್, ಮಾದರಿ ಸೇರಿದಂತೆ ಮತ್ತಷ್ಟು ವಿವರಗಳನ್ನು ಬಹಿರಂಗಪಡಿಸಲಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎ 4 ಫೇಸ್‌ಲಿಫ್ಟ್ ಕಾರಿನ ಉತ್ಪಾದನೆಯನ್ನಾರಂಭಿಸಿದ ಆಡಿ

ಭಾರತದಲ್ಲಿ ಈ ಕಾರು ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್, ಬಿಎಂಡಬ್ಲ್ಯು 3 ಸೀರಿಸ್ ಹಾಗೂ ಜಾಗ್ವಾರ್ ಎಕ್ಸ್‌ಇ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಆಡಿ ತನ್ನ ಎಲ್ಲ ಕಾರುಗಳ ಬೆಲೆಯನ್ನು ಜನವರಿ 1ರಿಂದ ಜಾರಿಗೆ ಬರುವಂತೆ 2%ನಷ್ಟು ಏರಿಕೆ ಮಾಡಿದೆ.

ಎ 4 ಫೇಸ್‌ಲಿಫ್ಟ್ ಕಾರಿನ ಉತ್ಪಾದನೆಯನ್ನಾರಂಭಿಸಿದ ಆಡಿ

ಹಬ್ಬದ ಹಿನ್ನೆಲೆಯಲ್ಲಿ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಆಡಿ ಇಂಡಿಯಾ ಕಂಪನಿಯು ತನ್ನ ಆಡಿ ಕ್ಯೂ 8 ಕಾರಿನ ಸೆಲೆಬ್ರೇಷನ್ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಈ ಕಾರಿನ ಬೆಲೆ ಭಾರತದ ಎಕ್ಸ್‌ಶೋರೂಂ ದರದಂತೆ ರೂ.98.98 ಲಕ್ಷಗಳಾಗಿದೆ.

Most Read Articles

Kannada
Read more on ಆಡಿ audi
English summary
Audi company starts production of A4 facelift car. Read in Kannada.
Story first published: Monday, December 14, 2020, 19:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X