ಬಿಡುಗಡೆಯಾಗಲಿದೆ ಹೊಸ ಐಷಾರಾಮಿ ಆಡಿ ಕಾರುಗಳು

ಜರ್ಮನಿಯ ಐಷಾರಾಮಿ ಕಾರು ತಯಾರಕರಾದ ಆಡಿ ಕಂಪನಿಯು ಈ ವರ್ಷದ ಆರಂಭದಲ್ಲಿ ತನ್ನ ಕ್ಯೂ ಮತ್ತು ಎ8 ಎಲ್ ಮಾದರಿಗಳನ್ನು ಬಿಡುಗಡೆಗೊಳಿಸಿತ್ತು. ಅಲ್ಲದೇ ಇತ್ತೀಚೆಗಷ್ಟೆ ತನ್ನ ಎರಡನೇ ತಲೆಮಾರಿನ ಆರ್ಎಸ್7 ಸ್ಪೋರ್ಟ್‌ಬ್ಯಾಕ್ ಅನ್ನು ಕೂಡ ಬಿಡುಗಡೆಗೊಳಿಸಿತು.

ಬಿಡುಗಡೆಯಾಗಲಿದೆ ಹೊಸ ಐಷಾರಾಮಿ ಆಡಿ ಕಾರುಗಳು

ಇದೀಗ ಆಡಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕ್ಯೂ2 ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಆಡಿ ಕ್ಯೂ2 ಕಾರು ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಇನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಹಲವಾರು ಮಾದರಿಗಳನ್ನು ಆಡಿ ಕಂಪನಿಯು ಬಿಡುಗಡೆಗೊಳಿಸಲಿದೆ. ಪ್ರಮುಖವಾಗಿ ಆಡಿ ಆರ್‍ಎಸ್ ಕ್ಯೂ8 ಮಾದರಿಯನ್ನು ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿದೆ ಹೊಸ ಐಷಾರಾಮಿ ಆಡಿ ಕಾರುಗಳು

ಇನ್ನು ಆರ್‍ಎಸ್ ಕ್ಯೂ8 ಎಸ್‍ಯುವಿಯಲ್ಲಿ ಟ್ವಿನ್-ಟರ್ಬೊ ವಿ8 ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ ಅನ್ನು 48ವಿ ಮೈಲ್ಡ್-ಹೈಬ್ರಿಡ್ ಮೋಟರ್ ನೊಂದಿಗೆ ಜೋಡಿಸಲಾಗಿದೆ. ಇದು ಒಟ್ಟು ಬಿಹೆಚ್‍ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಗಲಿದೆ ಹೊಸ ಐಷಾರಾಮಿ ಆಡಿ ಕಾರುಗಳು

ಈ ಎಂಜಿನ್ ನೊಂದಿಗೆ 8-ಸ್ಫೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಎಸ್‍ಯುವಿಯು ಕೇವಲ 3.8 ಸೆಕೆಂಡುಗಳಲ್ಲಿ 0 ರಿಂದ 100 ಕಿಲೋಮೀಟರ್ ವೇಗವನ್ನು ಕ್ರಮಿಸುತ್ತದೆ.

ಬಿಡುಗಡೆಯಾಗಲಿದೆ ಹೊಸ ಐಷಾರಾಮಿ ಆಡಿ ಕಾರುಗಳು

ಆರ್‍ಎಸ್ ಕ್ಯೂ8 ಎಲೆಕ್ಟ್ರಿಕ್ ಮೋಡ್ ನಲ್ಲಿ 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಡೈನಾಮಿಕ್ ಪ್ಯಾಕೇಜ್ ನಲ್ಲಿ 304 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಬಿಡುಗಡೆಯಾಗಲಿದೆ ಹೊಸ ಐಷಾರಾಮಿ ಆಡಿ ಕಾರುಗಳು

ಆರ್‍ಎಸ್ ಕ್ಯೂ8 ಎಸ್‍ಯುವಿಯು ಸಿಂಗಲ್-ಫ್ರೇಮ್ ಗ್ರಿಲ್, ಕಸ್ಟಂ ನಿರ್ಮಿತ ಡಿಫ್ಯೂಸರ್ ಮತ್ತು ದೊಡ್ಡ ಕ್ವಾಡ್ ಎಕ್ಸಾಸ್ಟ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಆರ್‍ಎಸ್ ಕ್ಯೂ8 ಸ್ಪೋರ್ಟ್ ಟ್ರಿಮ್ ಬ್ಯಾಡ್ಜಿಂಗ್ ಮತ್ತು ಡಿಜಿಟಲ್ ಡಿಸ್ ಪ್ಲೇ ಸೆಟ್ಟಿಂಗ್‌ಗಳನ್ನು ಒಳಗೊಂಡಿದೆ.

ಬಿಡುಗಡೆಯಾಗಲಿದೆ ಹೊಸ ಐಷಾರಾಮಿ ಆಡಿ ಕಾರುಗಳು

ಕ್ಯೂ8 ಎಸ್‍‍ಯು‍ವಿಯು ಮೂರು ಝೋನ್ ಕ್ಲೈಮೆಂಟ್ ಕಂಟ್ರೋಲ್, ಆಟೋ ಡಿಮ್ಮಂಗ್ ಇಂಟಿರಿಯರ್ ರೇರ್ ವ್ಯೂ ಮಿರರ್, ಡಿಜಿಟಲ್ ಕಂಪಾಸ್, ಹೊಂದಾಣಿಕೆ ಮಾಡಬಹುದಾದ ಪವರ್ ಫ್ರಂಟ್ ಸೀಟ್, ಹೈ ಬೀಮ್ ಅಸಿಸ್ಟ್ ಹೊಂದಿರುವ ಪೂರ್ಣ ಪ್ರಮಾಣದ ಎಲ್‍ಇ‍ಡಿ ಹೆಡ್‍‍ಲೈಟ್‍‍ಗಳು ಮತ್ತು ಇನ್ಫೋಟೇನ್‍‍ಮೆಂಟ್ ಮೋಡ್‍‍ಗಳಲ್ಲಿ ಕಾರ್ಯನಿರ್ವಹಿಸುವ ಎಲ್‍‍ಸಿಡಿ ಡಿಜಿ‍‍ಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಬಿಡುಗಡೆಯಾಗಲಿದೆ ಹೊಸ ಐಷಾರಾಮಿ ಆಡಿ ಕಾರುಗಳು

ಕ್ಯೂ8ನಲ್ಲಿ ಸುರಕ್ಷತೆಗಾಗಿ ಏರ್‍‍ಬ್ಯಾಗ್‍‍ಗಳು, ಎಲೆಕ್ಟ್ರಾನಿಕ್ ಸ್ಟಬಿಲಿಟಿ ಕಂಟ್ರೋಲ್, ಎಬಿಎಸ್ ನೊಂದಿಗೆ ಇಬಿಡಿ, ಟಯರ್ ಫ್ರಶರ್ ಮ್ಯಾನೇಜ್‍‍ಮೆಂಟ್ ಸಿಸ್ಟಂ, ಎಲ್ಕೆಟ್ರೋಮ್ಯಾಗ್‍‍ನೇಟಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಲೋವರ್ ಆಂಕರ್‍‍ಗಳನ್ನು ಹೊಂದಿರಲಿದೆ.

ಬಿಡುಗಡೆಯಾಗಲಿದೆ ಹೊಸ ಐಷಾರಾಮಿ ಆಡಿ ಕಾರುಗಳು

ಆಡಿ ಆರ್‍ಎಸ್ ಕ್ಯೂ8 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ಪೋರ್ಷೆ ಕೇಯೆನ್ ಟರ್ಬೊ, ಲಂಬೋಗಿನಿ ಲಂಬೋರ್ಗಿನಿ ಉರಸ್ ಮತ್ತು ಬಿಡುಗಡೆಯಾಗಲಿರುವ ಬಿಎಂಡಬ್ಲ್ಯು ಎಕ್ಸ್6 ಎಂ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಬಿಡುಗಡೆಯಾಗಲಿದೆ ಹೊಸ ಐಷಾರಾಮಿ ಆಡಿ ಕಾರುಗಳು

ಆಡಿ ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಪಾರುಪತ್ಯ ಸಾಧಿಸಲು ಪ್ರಯತ್ನಿಸುತ್ತಿದೆ. ಇದರೊಂದಿಗೆ ಆಡಿ ಕಂಪನಿಯು ಆರ್‍ಎಸ್7 ಮತ್ತು ಆರ್‍ಎಸ್ ಕ್ಯೂ8 ಮಾದರಿಗಳಂತಹ ಹೆಚ್ಚಿನ ಪರ್ಫಾಮೆನ್ಸ್ ಕಾರುಗಳನ್ನು ಕೂಡ ಬಿಡುಗಡೆಗೊಳಿಸುತ್ತಿವೆ.

Most Read Articles

Kannada
Read more on ಆಡಿ audi
English summary
Audi Q2 Scheduled For September Launch: Brand To Launch More RS Models As Well. Read In Kannada.
Story first published: Friday, July 17, 2020, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X