ಲ್ಯಾಂಬೋರ್ಗಿನಿ ಉರಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಆಡಿ ಆರ್‌ಎಸ್ ಕ್ಯೂ8
ಆಡಿ ಕಂಪನಿಯು ಭಾರತದಲ್ಲಿ ಈಗಾಗಲೇ ಕ್ಯೂ8 ಫ್ಯಾಗ್‌ಶಿಫ್ ಎಸ್‌ಯುವಿ ಆವೃತ್ತಿಯನ್ನು ಬಿಡುಗಡೆಗೊಳಿಸಿ ಮಾರಾಟಕ್ಕೆ ಚಾಲನೆ ನೀಡಿದ್ದು, ಫರ್ಪಾಮೆನ್ಸ್ ಪ್ರಿಯರಿಗಾಗಿ ಹೆಚ್ಚಿನ ಮತ್ತು ಎಂಜಿನ್ ಸಾಮಾರ್ಥ್ಯ ಹೊಂದಿರುವ ಆರ್‌ಎಸ್ ಕ್ಯೂ8 ಮಾದರಿಯನ್ನು ಸಹ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಆಡಿ ಹೊಸ ಆರ್‌ಎಸ್ ಕ್ಯೂ8 ಮಾದರಿಯು ಈಗಾಗಲೇ ಯುರೋಪ್ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಕೆಳದ ಕೆಲ ದಿನಗಳ ಹಿಂದಷ್ಟೆ ಸ್ಟ್ಯಾಂಡರ್ಡ್ ಮಾದರಿಯಾದ ಕ್ಯೂ8 ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಹೈ ಪರ್ಫಾಮೆನ್ಸ್ ಜೊತೆಗೆ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಆರ್‌ಎಸ್ ಕ್ಯೂ8 ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಯು ಬಹುತೇಕ ಖಚಿತವಾಗಿದೆ.

ಕಾರ್ ಆ್ಯಂಡ್ ಬೈಕ್ ಸುದ್ದಿಸಂಸ್ಥೆಯ ಸಂದರ್ಶನದಲ್ಲಿ ಮಾತನಾಡಿರುವ ಆಡಿ ಇಂಡಿಯಾ ಮುಖ್ಯಸ್ಥ ಬಲ್ಬಿರ್ ಸಿಂಗ್ ದಿಲ್ಲಾನ್ ಅವರು ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿರುವ ದೇಶಿಯ ಮಾರುಕಟ್ಟೆಯಲ್ಲಿ ಆರ್‌ಎಸ್ ಕ್ಯೂ8 ಬಿಡುಗಡೆಗೆ ಆಡಿ ಉತ್ಸುಕವಾಗಿದೆ ಎಂದಿದ್ದಾರೆ.
MOST READ: ವಿದೇಶದಲ್ಲಿ ಹೆತ್ತವರಿಗೆ ಸರ್ಪೈಸ್ ಗಿಫ್ಟ್ ಕೊಟ್ಟ ಅನಿವಾಸಿ ಭಾರತೀಯ

ಇದಲ್ಲದೆ 2019ರಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಆಮದು ನೀತಿ ಅಡಿ ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳಿಗೆ ವರವಾಗಿ ಪರಿಣಮಿಸಿದ್ದು, ಹೊಸ ಆಮದು ನೀತಿ ಅಡಿ ವಿದೇಶಿ ವಾಹನ ಕಂಪನಿಗಳು ಭಾರತಕ್ಕೆ ವಾರ್ಷಿಕವಾಗಿ 2,500 ವಾಹನಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ಆಮದು ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಈ ಹಿನ್ನಲೆಯಲ್ಲಿ ಆಡಿ ಸೇರಿದಂತೆ ಹಲವಾರು ಆಟೋ ಉತ್ಪಾದನಾ ಕಂಪನಿಗಳು ವಿದೇಶಿ ಮಾರುಕಟ್ಟೆಯಲ್ಲಿರುವ ತಮ್ಮ ಜನಪ್ರಿಯ ವಾಹನಗಳನ್ನು ಭಾರತದಲ್ಲೂ ನಿರ್ದಿಷ್ಟ ಪ್ರಮಾಣದಲ್ಲಿ ಮಾರಾಟ ಮಾಡಲು ಸಿದ್ದವಾಗುತ್ತಿದ್ದು, ವಿಶೇಷ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಆರ್‌ಎಸ್ ಕ್ಯೂ8 ಕಾರು ಆರಂಭಿಕ ಸೂಪರ್ ಎಸ್‌ಯುವಿ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
MOST READ: ಎಲೆಕ್ಟ್ರಿಕ್ ರೂಪದಲ್ಲಿ ಲಗ್ಗೆಯಿಡಲಿದೆ ಜನಪ್ರಿಯ ಕಿಯಾ ಸೆಲ್ಟೊಸ್ ಎಸ್ಯುವಿ

ಸದ್ಯ ಮಾರುಕಟ್ಟೆಯಲ್ಲಿರುವ ಲ್ಯಾಂಬೋರ್ಗಿನಿ ಉರಸ್ ಎಸ್‌ಯುವಿ ಕಾರು ಮಾದರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿರುವ ಹೊಸ ಕಾರು 4.0-ಲೀಟರ್ ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

ಈ ಮೂಲಕ 600-ಬಿಎಚ್‌ಪಿ ಮತ್ತು 800-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರುವ ಆರ್‌ಎಸ್ ಕ್ಯೂ8 ಕಾರು ಕೇವಲ 3.8-ಸೆಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗ ಪಡೆದುಕೊಳ್ಳುತ್ತದೆ.
MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಇದರೊಂದಿಗೆ 13.7 ಸೆಕೆಂಡುಗಳಲ್ಲಿ 200 ಕಿ.ಮೀ ವೇಗವನ್ನು ಪಡೆದುಕೊಳ್ಳುವ ಹೊಸ ಕಾರು ಪ್ರತಿ ಗಂಟೆಗೆ 250ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದ್ದು, ಡೈನಾಮಿಕ್ ಪ್ಯಾಕೇಜ್ ಅಳವಡಿಕೆಯ ಮೂಲಕ ಕಾರಿನ ಟಾಪ್ ಸ್ಪೀಡ್ ಅನ್ನು ಪ್ರತಿಗಂಟೆಗೆ 250ಕಿ.ಮೀ ನಿಂದ 305ಕಿ.ಮೀ ವೇಗ ಹೆಚ್ಚಿಸಿಕೊಳ್ಳಬಹುದಾದ ಆಯ್ಕೆ ಹೊಂದಿದೆ.

ಬಿಡುಗಡೆಯ ಅವಧಿ ಮತ್ತು ಬೆಲೆ(ಅಂದಾಜು)
ಸದ್ಯ ಮಾರುಕಟ್ಟೆಯಲ್ಲಿರುವ ಸ್ಟ್ಯಾಂಡರ್ಡ್ ಕ್ಯೂ8 ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.1.33 ಕೋಟಿ ಬೆಲೆ ಹೊಂದಿದ್ದು, ಪರ್ಫಾಮೆನ್ಸ್ ಜೊತೆಗೆ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಐಷಾರಾಮಿ ಫೀಚರ್ಸ್‌ಗಳನ್ನು ಹೊಂದಿರುವ ಆರ್‌ಎಸ್ ಕ್ಯೂ8 ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 1.75 ಕೋಟಿ ಬೆಲೆಯೊಂದಿಗೆ ಇದೇ ವರ್ಷಾಂತ್ಯದೊಳಗೆ ಬಿಡುಗಡೆಯಾಗಲಿದೆ.
MOST READ: ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ಇದು ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಉರಸ್(ಎಕ್ಸ್‌ಶೋರೂಂ ಬೆಲೆ ರೂ.3 ಕೋಟಿ) ಮತ್ತು ಲ್ಯಾಂಡ್ ರೋವರ್ ರೇಂಜ್ ರೋವರ್(ಆರಂಭಿಕ ಎಕ್ಸ್‌ಶೋರೂಂ ಬೆಲೆ ರೂ.2.28 ಕೋಟಿ) ಕಾರುಗಳಿಂತಲೂ ಉತ್ತಮ ಬೆಲೆಯೊಂದಿಗೆ ಖರೀದಿಗೆ ಲಭ್ಯವಿದ್ದು, ಪ್ರತಿಸ್ಪರ್ಧಿ ಕಾರುಗಳ ಮಾದರಿಯಲ್ಲೇ ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.


Click it and Unblock the Notifications