ಬೆಲೆ ಏರಿಕೆ ವಿರೋಧಿಸಿ ಹೊಸ ರೀತಿಯ ಪ್ರತಿಭಟನೆಗೆ ಮುಂದಾದ ಖಾಸಗಿ ಬಸ್ ಚಾಲಕರು

ಪೆಟ್ರೋಲ್ - ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚಾಗುತ್ತಿರುವುದನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಖಾಸಗಿ ಬಸ್ ಚಾಲಕರು ಜುಲೈ 27ರಿಂದ ಪ್ರತಿ ಸೋಮವಾರ ಡೀಸೆಲ್ ಖರೀದಿಸದಿರಲು ನಿರ್ಧರಿಸಿದ್ದಾರೆ. ಡೀಸೆಲ್ ಬೆಲೆ ಹೆಚ್ಚಾದ ಬೆನ್ನಲ್ಲೇ ರಾಜ್ಯ ಸರ್ಕಾರವು ಬಸ್ ಪ್ರಯಾಣ ದರವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಲಾಗುತ್ತಿದೆ ಎಂದು ಬಸ್ ಚಾಲಕ ಚಾಲಕರ ಸಂಘವು ತಿಳಿಸಿದೆ.

ಬೆಲೆ ಏರಿಕೆ ವಿರೋಧಿಸಿ ಹೊಸ ರೀತಿಯ ಪ್ರತಿಭಟನೆಗೆ ಮುಂದಾದ ಖಾಸಗಿ ಬಸ್ ಚಾಲಕರು

ಡೀಸೆಲ್ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿರುವ ಕಾರಣಕ್ಕೆ ಬಸ್ಸುಗಳನ್ನು ಓಡಿಸುವ ವೆಚ್ಚವೂ ಹೆಚ್ಚಾಗಿದೆ. ಸದ್ಯದ ಪ್ರಯಾಣ ದರದಲ್ಲಿ ಬಸ್ಸುಗಳನ್ನು ಓಡಿಸುತ್ತಿರುವುದರಿಂದ ನಷ್ಟ ಉಂಟಾಗುತ್ತಿದೆ ಎಂದು ಚಾಲಕರ ಸಂಘವು ಹೇಳಿದೆ. ಕರೋನಾ ವೈರಸ್‌ನಿಂದಾಗಿ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಸಹ ಇಳಿಕೆಯಾಗಿದ್ದು ಮತ್ತಷ್ಟು ನಷ್ಟ ಅನುಭವಿಸುತ್ತಿದೆ ಎಂದು ಹೇಳಿದೆ.

ಬೆಲೆ ಏರಿಕೆ ವಿರೋಧಿಸಿ ಹೊಸ ರೀತಿಯ ಪ್ರತಿಭಟನೆಗೆ ಮುಂದಾದ ಖಾಸಗಿ ಬಸ್ ಚಾಲಕರು

ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಪ್ರಯಾಣ ದರವನ್ನು ಹೆಚ್ಚಿಸಬೇಕೆಂಬ ನಮ್ಮ ಬೇಡಿಕೆಯ ಬಗ್ಗೆ ರಾಜ್ಯ ಸರ್ಕಾರವು ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಈ ಪರಿಸ್ಥಿತಿ ಕೆಲವು ದಿನಗಳವರೆಗೆ ಮುಂದುವರಿದರೆ, ಪಶ್ಚಿಮ ಬಂಗಾಳದ ಖಾಸಗಿ ಬಸ್ ಗಳ ವ್ಯವಹಾರವು ದಿವಾಳಿಯಾಗುತ್ತದೆ ಎಂದು ಸಂಘವು ತಿಳಿಸಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಬೆಲೆ ಏರಿಕೆ ವಿರೋಧಿಸಿ ಹೊಸ ರೀತಿಯ ಪ್ರತಿಭಟನೆಗೆ ಮುಂದಾದ ಖಾಸಗಿ ಬಸ್ ಚಾಲಕರು

ಟಿಕೆಟ್ ಶುಲ್ಕದಿಂದ ಡೀಸೆಲ್ ಮೇಲೆ ಮಾಡಲಾದ ಖರ್ಚು ಮಾತ್ರ ಹೊರಬರುತ್ತಿದೆ. ವಿಮೆ, ಇಎಂಐ ಹಾಗೂ ಮೆಂಟೆನೆನ್ಸ್ ಶುಲ್ಕವು ಹೆಚ್ಚಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನವನ್ನು ಪಾವತಿಸಲು ಯೂನಿಯನ್‌ಗೆ ಸಾಧ್ಯವಾಗುತ್ತಿಲ್ಲ.

ಬೆಲೆ ಏರಿಕೆ ವಿರೋಧಿಸಿ ಹೊಸ ರೀತಿಯ ಪ್ರತಿಭಟನೆಗೆ ಮುಂದಾದ ಖಾಸಗಿ ಬಸ್ ಚಾಲಕರು

ಲಾಕ್ ಡೌನ್ ಮುಗಿದ ನಂತರ ಪೆಟ್ರೋಲ್ - ಡೀಸೆಲ್ ದರವು ಒಂದೇ ಸಮನೆ ಏರಿಕೆಯಾಗುತ್ತಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆಯು ಪೆಟ್ರೋಲ್ ಬೆಲೆಗಿಂತ ಹೆಚ್ಚಾಗಿದೆ. ಕಳೆದ ತಿಂಗಳಿನಿಂದ ಪೆಟ್ರೋಲ್, ಡೀಸೆಲ್ ಬೆಲೆ ವಿಪರೀತವಾಗಿ ಏರಿಕೆಯಾಗುತ್ತಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬೆಲೆ ಏರಿಕೆ ವಿರೋಧಿಸಿ ಹೊಸ ರೀತಿಯ ಪ್ರತಿಭಟನೆಗೆ ಮುಂದಾದ ಖಾಸಗಿ ಬಸ್ ಚಾಲಕರು

ಅದರಲ್ಲೂ ಜುಲೈ ತಿಂಗಳಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ ರೂ.81.35ಗಳಾದರೆ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ರೂ.81.52ಗಳಾಗಿದೆ.

ಬೆಲೆ ಏರಿಕೆ ವಿರೋಧಿಸಿ ಹೊಸ ರೀತಿಯ ಪ್ರತಿಭಟನೆಗೆ ಮುಂದಾದ ಖಾಸಗಿ ಬಸ್ ಚಾಲಕರು

ದೆಹಲಿ ಹೊರತುಪಡಿಸಿ ಭಾರತದ ಇತರ ನಗರಗಳಲ್ಲಿಯೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿದೆ. ಆದರೆ ದೆಹಲಿಗಿಂತ ಉಳಿದ ನಗರಗಳಲ್ಲಿ ಪ್ರತಿ ಲೀಟರಿಗೆ ರೂ.5-6 ಕಡಿಮೆಯಾಗಿದೆ. ಜೂನ್ 7ರಿಂದ ಪೆಟ್ರೋಲ್ ಕಂಪನಿಗಳು ಪ್ರತಿದಿನ ಡೀಸೆಲ್, ಪೆಟ್ರೋಲ್ ಬೆಲೆಯನ್ನು ಹೆಚ್ಚಿಸುತ್ತಿವೆ. ಸುಮಾರು 90 ದಿನಗಳ ಲಾಕ್ ಡೌನ್ ನಂತರ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಹೆಚ್ಚಿಸಲಾಗಿದೆ.

Most Read Articles

Kannada
English summary
Bus operators agitation against fuel price hike. Read in Kannada.
Story first published: Friday, July 24, 2020, 16:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X