ಹೊಸ ಕಾರಿನ ಕಾಯುವ ಅವಧಿಯ ಲಾಭ ಪಡೆಯಲು ಮುಂದಾದ ಡೀಲರ್'ಗಳು

ಮಹೀಂದ್ರಾ ಥಾರ್ ಎಸ್‌ಯುವಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಎಸ್‌ಯುವಿಯನ್ನು ಹಲವು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹಲವಾರು ಫೀಚರ್ ಗಳನ್ನು ಹೊಂದಿರುವ ಈ ಎಸ್‌ಯುವಿಯು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ.

ಹೊಸ ಕಾರಿನ ಕಾಯುವ ಅವಧಿಯ ಲಾಭ ಪಡೆಯಲು ಮುಂದಾದ ಡೀಲರ್'ಗಳು

ಇದರಿಂದಾಗಿ ಈ ಎಸ್‌ಯುವಿಯ ಕಾಯುವ ಅವಧಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲವು ವಿತರಕರು ಈ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದಾರೆ. ಈ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡುವಾಗ ಬಿಡಿಭಾಗಗಳನ್ನು ಖರೀದಿಸುವಂತೆ ಗ್ರಾಹಕರನ್ನು ಒತ್ತಾಯಿಸುತ್ತಿರುವ ಬಗ್ಗೆ ವರದಿಗಳಾಗಿವೆ. ಹೊಸ ಥಾರ್ ಎಸ್‌ಯುವಿ ಬುಕ್ಕಿಂಗ್ ಮಾಡಲು ಮುಂದಾಗುತ್ತಿರುವ ಗ್ರಾಹಕರಿಗೆ ವಿತರಕರ ಈ ನಡೆಯು ಆಘಾತವನ್ನುಂಟು ಮಾಡಿದೆ.

ಹೊಸ ಕಾರಿನ ಕಾಯುವ ಅವಧಿಯ ಲಾಭ ಪಡೆಯಲು ಮುಂದಾದ ಡೀಲರ್'ಗಳು

ಕೆಲ ಗ್ರಾಹಕರು ಈ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ವೆಬ್‌ಸೈಟ್ ಮೂಲಕ ದೂರು ನೀಡುತ್ತಿದ್ದಾರೆ. ಮಹೀಂದ್ರಾ ಥಾರ್ ಎಸ್‌ಯುವಿಯ ಬಿಡಿಭಾಗಗಳನ್ನು ಮಾದರಿಗಳಿಗೆ ಅನುಗುಣವಾಗಿ ಮಾರಾಟ ಮಾಡಲಾಗುತ್ತದೆ. ಇವುಗಳನ್ನು ರೂ.50 ಸಾವಿರದಿಂದ ರೂ.80,000ಗಳವರೆಗೆ ಮಾರಾಟ ಮಾಡಲಾಗುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೊಸ ಕಾರಿನ ಕಾಯುವ ಅವಧಿಯ ಲಾಭ ಪಡೆಯಲು ಮುಂದಾದ ಡೀಲರ್'ಗಳು

ಕೆಲವು ವಿತರಕರು ಗ್ರಾಹಕರನ್ನು ದುಬಾರಿ ಬೆಲೆಯ ಬಿಡಿಭಾಗಗಳನ್ನು ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಪರಿಸ್ಥಿತಿ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡುತ್ತಿರುವ ಗ್ರಾಹಕರಿಗೆ ಮಾತ್ರ ಎದುರಾಗಿಲ್ಲ.

ಹೊಸ ಕಾರಿನ ಕಾಯುವ ಅವಧಿಯ ಲಾಭ ಪಡೆಯಲು ಮುಂದಾದ ಡೀಲರ್'ಗಳು

ವರದಿಗಳ ಪ್ರಕಾರ, ಹ್ಯುಂಡೈನ ಮೂರನೇ ತಲೆಮಾರಿನ ಐ 20 ಕಾರನ್ನು ಬುಕ್ಕಿಂಗ್ ಮಾಡುವವರಿಗೂ ಇದೇ ಪರಿಸ್ಥಿತಿ ಎದುರಾಗಿದೆ. ಈ ಕಾರಿನ ಹೆಚ್ಚುವರಿ ಬಿಡಿಭಾಗಗಳನ್ನು ರೂ.20,000ದಿಂದ ರೂ.50,000ಗಳವರೆಗೆ ಮಾರಾಟ ಮಾಡಲಾಗುತ್ತಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೊಸ ಕಾರಿನ ಕಾಯುವ ಅವಧಿಯ ಲಾಭ ಪಡೆಯಲು ಮುಂದಾದ ಡೀಲರ್'ಗಳು

ಕೆಲವರು ತಮ್ಮ ಕಾರುಗಳಿಗೆ ಹೆಚ್ಚು ಐಷಾರಾಮಿ ಲುಕ್ ನೀಡಲು ಈ ಬಿಡಿಭಾಗಗಳನ್ನು ಬಳಸುತ್ತಾರೆ. ಇನ್ನೂ ಕೆಲವರು ಇವುಗಳನ್ನು ಅನಗತ್ಯ ಖರ್ಚು ಎಂದು ಭಾವಿಸುತ್ತಾರೆ. ಕೆಲವು ವಿತರಕರು ದುಬಾರಿ ಬೆಲೆಯ ಬಿಡಿಭಾಗಗಳನ್ನು ಹೆಚ್ಚುವರಿಯಾಗಿ ಖರೀದಿಸಲು ಒತ್ತಾಯಿಸುತ್ತಿದ್ದಾರೆ.

ಹೊಸ ಕಾರಿನ ಕಾಯುವ ಅವಧಿಯ ಲಾಭ ಪಡೆಯಲು ಮುಂದಾದ ಡೀಲರ್'ಗಳು

ಭಾರತದಲ್ಲಿ ಗ್ರಾಹಕರನ್ನು ಈ ರೀತಿ ಒತ್ತಾಯಿಸುವುದು ಇದೇ ಮೊದಲಲ್ಲ. ಈ ಹಿಂದೆ ಎಂಜಿ ಮೋಟಾರ್ಸ್ ಕಂಪನಿಯ ಹೆಕ್ಟರ್ ಕಾರಿಗೆ ಬೇಡಿಕೆ ಹೆಚ್ಚಿತ್ತು. ಆಗಲೂ ಸಹ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಈಗ ಮಹೀಂದ್ರಾ ಥಾರ್ ಹಾಗೂ ಹ್ಯುಂಡೈ ಐ 20 ಕಾರುಗಳಿಗೆ ಈ ಪರಿಸ್ಥಿತಿ ಎದುರಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೊಸ ಕಾರಿನ ಕಾಯುವ ಅವಧಿಯ ಲಾಭ ಪಡೆಯಲು ಮುಂದಾದ ಡೀಲರ್'ಗಳು

ಹಬ್ಬದ ಹಿನ್ನೆಲೆಯಲ್ಲಿ ಭಾರತದಲ್ಲಿ ಹೊಸ ವಾಹನಗಳ ಮಾರಾಟವು ಜೋರಾಗಿದೆ. ಈ ಹಿಂದೆ, ಕರೋನಾ ವೈರಸ್ ಕಾರಣದಿಂದಾಗಿ ಹೊಸ ವಾಹನಗಳ ಮಾರಾಟವು ಕುಸಿದಿತ್ತು. ಈಗ ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ಮಾರಾಟವು ಹೆಚ್ಚಾಗಿದೆ.

ಹೊಸ ಕಾರಿನ ಕಾಯುವ ಅವಧಿಯ ಲಾಭ ಪಡೆಯಲು ಮುಂದಾದ ಡೀಲರ್'ಗಳು

ಕರೋನಾ ವೈರಸ್ ಹರಡ ಬಹುದೆಂಬ ಭೀತಿಯಿಂದ ಜನರು ಸಾರ್ವಜನಿಕ ಸಾರಿಗೆಗೆ ಬದಲು ಸ್ವಂತ ವಾಹನಗಳ ಬಳಕೆಯನ್ನು ಆರಂಭಿಸಿದ್ದಾರೆ. ಇದರಿಂದಾಗಿ ಹೊಸ ವಾಹನಗಳ ಮಾರಾಟವೂ ಹೆಚ್ಚುತ್ತಿದೆ. ಈ ಎಲ್ಲಾ ಸಂದರ್ಭಗಳ ಲಾಭ ಪಡೆದುಕೊಳ್ಳಲು ಕೆಲವು ವಿತರಕರು ಮುಂದಾಗಿದ್ದಾರೆ.

Most Read Articles

Kannada
English summary
Car dealers demanding customers to purchase additional accessories. Read in Kannada.
Story first published: Friday, November 13, 2020, 16:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X