ವೈರಸ್ ಭೀತಿ ಹೆಚ್ಚಳ: ಸಂಪರ್ಕ ರಹಿತ ಗ್ರಾಹಕ ಸೇವೆಗಳಿಗೆ ಚಾಲನೆ ನೀಡಿದ ಸಿಯೆಟ್ ಟೈರ್

ದೇಶದಲ್ಲಿ ಲಾಕ್‌ಡೌನ್ ಹೊರತಾಗಿಯೂ ಕರೋನಾ ವೈರಸ್ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿದ್ದು, ಸಂಕಷ್ಟದ ನಡುವೆಯೂ ಆಟೋ ಉತ್ಪಾದನಾ ಕಂಪನಿಯುಗಳು ಸುರಕ್ಷಿತ ವ್ಯವಹಾರ ಕೈಗೊಳ್ಳುವುದು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ.

ವೈರಸ್ ಭೀತಿ ಹೆಚ್ಚಳ: ಸಂಪರ್ಕ್ ರಹಿತ ಗ್ರಾಹಕ ಸೇವೆಗಳಿಗೆ ಚಾಲನೆ ನೀಡಿದ ಸಿಯೆಟ್

ಕರೋನಾ ವೈರಸ್ ಭೀತಿ ನಡುವೆಯೂ ಉದ್ಯಮ ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸಬೇಕಾದ ಅನಿವಾರ್ಯತೆಗಳಿದ್ದು, ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಗ್ರಾಹಕರ ಜೊತೆಗಿನ ನೇರ ಸಂಪರ್ಕ ತಪ್ಪಿಸುವುದಕ್ಕಾಗಿ ಆನ್‌ಲೈನ್ ವಹಿವಾಟಿನ ಮೇಲೆ ಗಮನಹರಿಸಿವೆ. ಇದರಲ್ಲಿ ಟೈರ್ ಉತ್ಪಾದನಾ ಕಂಪನಿಯಾಗಿರುವ ಸಿಯೆಟ್ ಕಂಪನಿಯು ಕೂಡಾ ಸಂಪರ್ಕ ರಹಿತ ಗ್ರಾಹಕರ ಸೇವೆಗಳನ್ನು ಆರಂಭಿಸಿದ್ದು, ಸೋಂಕು ಹರಡುವಿಕೆಯನ್ನು ತಪ್ಪಿಸಲು ಮನೆಬಾಗಿಲಿಗೆ ಸೇವೆಗಳನ್ನು ನೀಡುತ್ತಿದೆ.

ವೈರಸ್ ಭೀತಿ ಹೆಚ್ಚಳ: ಸಂಪರ್ಕ್ ರಹಿತ ಗ್ರಾಹಕ ಸೇವೆಗಳಿಗೆ ಚಾಲನೆ ನೀಡಿದ ಸಿಯೆಟ್

ಮನೆ ಬಾಗಿಲಿಗೆ ಗ್ರಾಹಕರ ಸೇವೆಗಳನ್ನು ನೀಡುವಾಗಲೂ ಸಂಪೂರ್ಣ ಮುಂಜಾಗ್ರತ ವಹಿಸಲಿರುವ ಸಿಯೆಟ್ ಕಂಪನಿಯು ಸಂಪೂರ್ಣ ಸ್ಯಾನಿಟೈಜ್ ನಂತರವೇ ಸೇವೆಗಳನ್ನು ನೀಡಲಿದ್ದು, ಸೇವಾ ಪ್ರಕ್ರಿಯೆ ನಂತರವೂ ಸ್ಯಾನಿಟೈಜ್ ಮಾಡಿಕೊಡಲಿದೆ.

ವೈರಸ್ ಭೀತಿ ಹೆಚ್ಚಳ: ಸಂಪರ್ಕ್ ರಹಿತ ಗ್ರಾಹಕ ಸೇವೆಗಳಿಗೆ ಚಾಲನೆ ನೀಡಿದ ಸಿಯೆಟ್

ಜೊತೆಗೆ ಸೇವಾ ಶುಲ್ಕಗಳನ್ನು ನೇರವಾಗಿ ಹಣ ಸ್ವಿಕರಿಸದೆ ಆನ್‌ಲೈನ್ ಪಾವತಿಗೆ ಒತ್ತು ನೀಡುತ್ತಿದ್ದು, ಈ ಮೂಲಕ ಸೋಂಕು ಹರಡುವಿಕೆಯನ್ನು ತಡೆಯಲು ಗರಿಷ್ಠ ಮುಂಜಾಗ್ರತ ಕ್ರಮಗಳನ್ನು ವಹಿಸುತ್ತಿದೆ. ಸಿಯೆಟ್ ಮಾತ್ರವಲ್ಲ ಬಹುತೇಕ ಆಟೋ ಕಂಪನಿಗಳು ಗ್ರಾಹಕರ ಸಂಪರ್ಕ ತಪ್ಪಿಸಲು ಈ ಕ್ರಮವನ್ನು ಅನುಸರಿಸುತ್ತಿವೆ.

ವೈರಸ್ ಭೀತಿ ಹೆಚ್ಚಳ: ಸಂಪರ್ಕ್ ರಹಿತ ಗ್ರಾಹಕ ಸೇವೆಗಳಿಗೆ ಚಾಲನೆ ನೀಡಿದ ಸಿಯೆಟ್

ಇನ್ನು ಕರೋನಾ ಮಾಹಾಮಾರಿ ಅಟ್ಟಹಾಸವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಆಟೋ ಉದ್ಯಮದಲ್ಲಿ ಸುರಕ್ಷಿತ ವ್ಯಾಪಾರ-ವಹಿವಾಟು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಇದರಿಂದ ಬಹುತೇಕ ಆಟೋ ಕಂಪನಿಗಳು ಆನ್‌ಲೈನ್ ವಹಿವಾಟಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ವೈರಸ್ ಭೀತಿ ಹೆಚ್ಚಳ: ಸಂಪರ್ಕ್ ರಹಿತ ಗ್ರಾಹಕ ಸೇವೆಗಳಿಗೆ ಚಾಲನೆ ನೀಡಿದ ಸಿಯೆಟ್

ಗ್ರಾಹಕರು ಕೂಡಾ ವೈರಸ್ ಭಯದಿಂದ ಆನ್‌ಲೈನ್ ಪ್ಲ್ಯಾಟ್‌‌‌ಫಾರ್ಮ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಹೊಸ ಸುರಕ್ಷಾ ಕ್ರಮಗಳಿಂದಾಗಿ ಸಂಕಷ್ಟದ ಪರಿಸ್ಥಿತಿಯಲ್ಲೂ ಆಟೋ ಉದ್ಯಮ ಚಟುವಟಿಕೆಗಳಲ್ಲಿ ಚೇತರಿಕೆ ಕಂಡುಬರುತ್ತಿದೆ.

ವೈರಸ್ ಭೀತಿ ಹೆಚ್ಚಳ: ಸಂಪರ್ಕ್ ರಹಿತ ಗ್ರಾಹಕ ಸೇವೆಗಳಿಗೆ ಚಾಲನೆ ನೀಡಿದ ಸಿಯೆಟ್

ಇನ್ನು ದೇಶದಲ್ಲಿ ಕರೋನಾ ವೈರಸ್ ಪರಿಣಾಮ ಮುಂಬರುವ ದಿನಗಳಲ್ಲಿ ಹೊಸ ವಾಹನ ಮಾರಾಟ ಪ್ರಮಾಣವು ಹೆಚ್ಚಳವಾಗುವ ನೀರಿಕ್ಷೆಗಳಿದ್ದು, ಟೈರ್ ಉತ್ಪಾದನೆ ಮೇಲೆ ಸಿಯೆಟ್ ಸೇರಿದಂತೆ ಹಲವು ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿವೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ವೈರಸ್ ಭೀತಿ ಹೆಚ್ಚಳ: ಸಂಪರ್ಕ್ ರಹಿತ ಗ್ರಾಹಕ ಸೇವೆಗಳಿಗೆ ಚಾಲನೆ ನೀಡಿದ ಸಿಯೆಟ್

ವೈರಸ್‌ನಿಂದಾಗಿ ಜನತೆ ಸ್ವಂತ ವಾಹನಗಳಲ್ಲಿ ಪ್ರಯಾಣಕ್ಕೆ ಮುಂದಾಗಬಹುದು ಎನ್ನುವ ಸಮೀಕ್ಷಾ ವರದಿಗಳು ಆಟೋ ಉತ್ಪಾದನಾ ಕಂಪನಿಗಳ ಬಲತುಂಬಿದ್ದು, ಹೊಸ ವಾಹನಗಳ ಉತ್ಪಾದನೆಗೆ ಪೂರಕವಾಗಿ ಟೈರ್ ಉತ್ಪಾದನೆಯು ಸಹ ತೀವ್ರ ಪೈಪೋಟಿ ಪಡೆದುಕೊಳ್ಳುತ್ತಿದೆ.

Most Read Articles

Kannada
English summary
CEAT Tyres Introduces A Contactless Service Offering For Its Customers In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X