ಹಳೆ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲು ಮುಂದಾದ ಸಾರಿಗೆ ಇಲಾಖೆ

ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಹಾಗೂ ಟೋಲ್ ಶುಲ್ಕ ಪಾವತಿಯನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರವು ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ. ಈಗ ಕೇಂದ್ರ ಸರ್ಕಾರವು ಮತ್ತೊಂದು ಹೊಸ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ.

ಹಳೆ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲು ಮುಂದಾದ ಸಾರಿಗೆ ಇಲಾಖೆ

ಇದರ ಅಡಿಯಲ್ಲಿ ಕೇಂದ್ರ ಸರ್ಕಾರವು ಡಿಜಿಟಲ್ ಪಾವತಿಗಳ ಬಳಕೆಯನ್ನು ಮತ್ತಷ್ಟು ಉತ್ತೇಜಿಸಲು ಮುಂದಾಗಿದೆ. ಈ ಉದ್ದೇಶಿತ ನಿಯಮದ ಪ್ರಕಾರ 2017ರ ಡಿಸೆಂಬರ್ 1ಕ್ಕೆ ಮೊದಲು ಮಾರಾಟವಾದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಲಿದೆ. ಈ ಮಾಹಿತಿಯನ್ನು ಕೇಂದ್ರ ಸಾರಿಗೆ ಇಲಾಖೆಯು ನೀಡಿದೆ. ಈ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಇಲಾಖೆಯು ಹೇಳಿದೆ.

ಹಳೆ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲು ಮುಂದಾದ ಸಾರಿಗೆ ಇಲಾಖೆ

ನಿಯಮಗಳಲ್ಲಿನ ತಿದ್ದುಪಡಿಯಾದ ಬಳಿಕ 2021ರ ಜನವರಿ 1ರಿಂದ ಎಲ್ಲಾ ಹಳೆಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಲಿದೆ. ಇದರ ಬಗ್ಗೆ ಪ್ರತಿಕ್ರಿಯೆ ಹಾಗೂ ಸಲಹೆಗಳನ್ನು ಪಡೆಯಲು ಕೇಂದ್ರ ಸರ್ಕಾರವು ಕರಡು ಅಧಿಸೂಚನೆಯನ್ನು ಹೊರಡಿಸಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹಳೆ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲು ಮುಂದಾದ ಸಾರಿಗೆ ಇಲಾಖೆ

2017ರ ಡಿಸೆಂಬರ್ 1ಕ್ಕೆ ಮುನ್ನ ಮಾರಾಟವಾಗುವ ಹಳೆಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸುವುದು ಸರಿಯೇ ಎಂಬ ಬಗ್ಗೆ ಪ್ರಸ್ತಾಪಗಳನ್ನು ಈ ಕರಡು ಅಧಿಸೂಚನೆಯಲ್ಲಿ ಕೋರಲಾಗಿದೆ. ಕೇಂದ್ರ ಮೋಟಾರು ವಾಹನ ನಿಯಮಗಳು 1989ಕ್ಕೆ ಪರಿಷ್ಕೃತ ನಿಬಂಧನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹಳೆ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲು ಮುಂದಾದ ಸಾರಿಗೆ ಇಲಾಖೆ

ವಿಮಾ ಪ್ರಮಾಣಪತ್ರಕ್ಕೆ ಮಾಡುವ ತಿದ್ದುಪಡಿಯಲ್ಲಿ ಹೊಸ ಥರ್ಡ್ ಪಾರ್ಟಿ ವಿಮೆ ಪಡೆಯಲು ಮಾನ್ಯವಾದ ಫಾಸ್ಟ್ ಟ್ಯಾಗ್ ಹೊಂದಿರುವುದು ಕಡ್ಡಾಯವಾಗಲಿದೆ ಎಂದು ಸಾರಿಗೆ ಇಲಾಖೆ ಹೇಳಿದೆ. ಈ ವಿಮೆಯಲ್ಲಿ ಫಾಸ್ಟ್ ಟ್ಯಾಗ್ ಐಡಿಯ ವಿವರಗಳನ್ನು ನಮೂದಿಸಲಾಗುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಹಳೆ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲು ಮುಂದಾದ ಸಾರಿಗೆ ಇಲಾಖೆ

2021ರ ಏಪ್ರಿಲ್ 1ರಿಂದ ಈ ನಿಯಮವನ್ನು ಜಾರಿಗೆ ತರಲು ಇಲಾಖೆಯು ನಿರ್ಧರಿಸಿದೆ. ಸಿಎಂವಿಆರ್ 1989ರ ಪ್ರಕಾರ 2017ರಿಂದ ಹೊಸ ನಾಲ್ಕು ಚಕ್ರಗಳ ವಾಹನಗಳ ನೋಂದಣಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿತ್ತು. ಫಾಸ್ಟ್ ಟ್ಯಾಗ್ ಗಳನ್ನು ವಾಹನ ತಯಾರಕ ಕಂಪನಿಗಳು ಅಥವಾ ಕಂಪನಿಯ ಡೀಲರ್ ಗಳು ಪೂರೈಸಬೇಕಾಗಿದೆ.

ಹಳೆ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲು ಮುಂದಾದ ಸಾರಿಗೆ ಇಲಾಖೆ

ಫಾಸ್ಟ್ ಟ್ಯಾಗ್ ಅಳವಡಿಸಿದ ನಂತರವೇ ವಾಹನಗಳ ಫಿಟ್‌ನೆಸ್ ಸರ್ಟಿಫಿಕೇಟ್ ನವೀಕರಿಸಲಾಗುವುದೆಂದು ಇಲಾಖೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದರ ಜೊತೆಗೆ 2019ರ ಅಕ್ಟೋಬರ್ 1ರಿಂದ ರಾಷ್ಟ್ರೀಯ ಪರವಾನಗಿ ಹೊಂದಿರುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಫಿಟ್ ಮೆಂಟ್ ಕಡ್ಡಾಯವಾಗಿದೆ.

Most Read Articles

Kannada
English summary
Central transport ministry plans to mandate Fastag for old vehicles. Read in Kannada.
Story first published: Friday, September 4, 2020, 16:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X