ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಬಸ್ಸುಗಳ ಮಾರಾಟ

ಭಾರತದಲ್ಲಿ ಲಾಕ್‌ಡೌನ್ ಜಾರಿಗೆ ಬಂದ ನಂತರ ಶಾಲಾ, ಕಾಲೇಜುಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಪಾಠ ಮಾಡಲಾಗುತ್ತಿದೆ. ಇದೇ ವೇಳೆ ಬಹುತೇಕ ಎಲ್ಲಾ ಐಟಿ ಕಂಪನಿಗಳ ನೌಕರರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಬಸ್ಸುಗಳ ಮಾರಾಟ

ಈ ಕಾರಣಗಳಿಂದಾಗಿ ಬಸ್‌ಗಳ ಮಾರಾಟ ಪ್ರಮಾಣವು ತೀವ್ರವಾಗಿ ಕುಸಿದಿದೆ. ಈ ಹಣಕಾಸು ವರ್ಷದ (ಏಪ್ರಿಲ್-ಸೆಪ್ಟೆಂಬರ್) ಮೊದಲ 6 ತಿಂಗಳಲ್ಲಿ ಭಾರತದಲ್ಲಿ ಬಸ್ ಮಾರಾಟವು 90%ಗಿಂತಲೂ ಕಡಿಮೆಯಾಗಿದೆ. 2019ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 32,235 ಬಸ್ಸುಗಳು ಮಾರಾಟವಾಗಿದ್ದವು. 2020ರ ಇದೇ ಅವಧಿಯಲ್ಲಿ ಕೇವಲ 2,569 ಬಸ್ಸುಗಳು ಮಾರಾಟವಾಗಿವೆ.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಬಸ್ಸುಗಳ ಮಾರಾಟ

ಭಾರತದಲ್ಲಿ ಬಸ್ ಮಾರಾಟ ಪ್ರಮಾಣವು ಕುಸಿತಗೊಳ್ಳಲು ಹಲವು ಕಾರಣಗಳಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಶಾಲಾ, ಕಾಲೇಜು ಆಡಳಿತ ಮಂಡಳಿಗಳು ಹೊಸ ಬಸ್ಸುಗಳನ್ನು ಖರೀದಿಸುವ ನಿರ್ಧಾರವನ್ನು ಮುಂದೂಡಿರುವುದು. ಹೆಚ್ಚಿನ ಜನರು ಮನೆಯಿಂದ ಕೆಲಸ ಮಾಡುತ್ತಿರುವುದರಿಂದ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಬಸ್ಸುಗಳ ಮಾರಾಟ

ಕರೋನಾ ವೈರಸ್ ಹರಡ ಬಹುದೆಂಬ ಭೀತಿಯಿಂದ ಬಹುತೇಕ ಜನರು ಬಸ್‌ಗಳಲ್ಲಿ ಪ್ರಯಾಣಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ವಿವಿಧ ರಾಜ್ಯ ಸರ್ಕಾರಗಳ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಬಸ್ಸುಗಳ ಮಾರಾಟ

ಇದರಿಂದಾಗಿ ನಿಗಮಗಳು ಬಸ್ ತಯಾರಕ ಕಂಪನಿಗಳಿಂದ ಹೊಸ ಬಸ್ಸುಗಳನ್ನು ಖರೀದಿಸುತ್ತಿಲ್ಲ. 2019ರ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ 3,323 ಬಸ್ಸುಗಳು ಮಾರಾಟವಾಗಿದ್ದವು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಬಸ್ಸುಗಳ ಮಾರಾಟ

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಆ ಸಂಖ್ಯೆಯು 670ಕ್ಕೆ ಇಳಿದಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಸ್ ಮಾರಾಟ ಪ್ರಮಾಣವು ಕುಸಿಯುತ್ತಿರುವ ಕಾರಣಕ್ಕೆ ಬಸ್ ತಯಾರಕ ಕಂಪನಿಗಳು ಬಸ್ಸುಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲು ಮುಂದಾಗಿವೆ.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಬಸ್ಸುಗಳ ಮಾರಾಟ

ಕೆಲ ವರದಿಗಳ ಪ್ರಕಾರ ಕರೋನಾ ವೈರಸ್ ಹರಡಬಹುದೆಂಬ ಭೀತಿಯಿಂದ ಜನರು ಬಸ್‌ಗಳಲ್ಲಿ ಪ್ರಯಾಣಿಸುವುದಕ್ಕೆ ಹಿಂದೇಟು ಹಾಕುತ್ತಿರುವುದರಿಂದ ಬಸ್ ಮಾಲೀಕರು ಭಾರಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಅವರೂ ಸಹ ಹೊಸ ಬಸ್‌ಗಳ ಖರೀದಿಯನ್ನು ಮುಂದೂಡಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಬಸ್ಸುಗಳ ಮಾರಾಟ

ಸಾಕಷ್ಟು ಜನರು ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸುವುದು ಸುರಕ್ಷಿತವೆಂದು ಭಾವಿಸಿದ್ದಾರೆ. ಇದರಿಂದಾಗಿ ದ್ವಿಚಕ್ರ ವಾಹನ ಹಾಗೂ ಕಾರುಗಳ ಮಾರಾಟವು ಹೆಚ್ಚುತ್ತಿದೆ. ಕೆಲವು ತಿಂಗಳ ಹಿಂದಿನವರೆಗೂ ದ್ವಿಚಕ್ರ ವಾಹನ ಹಾಗೂ ಕಾರುಗಳ ಮಾರಾಟವು ಕುಸಿತವನ್ನು ಅನುಭವಿಸಿತ್ತು.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಬಸ್ಸುಗಳ ಮಾರಾಟ

ಆದರೆ ಬದಲಾದ ಪರಿಸ್ಥಿತಿಯಲ್ಲಿ ಜನರು ಸ್ವಂತ ವಾಹನಗಳಿಗೆ ಆದ್ಯತೆ ನೀಡುತ್ತಿರುವ ಕಾರಣ ದಸರಾ, ದೀಪಾವಳಿ ಹಬ್ಬದ ಋತುವಿನಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳ ಮಾರಾಟವು ಹೆಚ್ಚುತ್ತಿದೆ. ಆದರೆ ಬಸ್ಸುಗಳ ಮಾರಾಟ ಪ್ರಮಾಣವು ಯಾವಾಗ ಸರಿಯಾಗುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಬೇಕು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Corona virus effect bus sales declines drastically. Read in Kannada.
Story first published: Friday, October 30, 2020, 11:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X