ಬಿಡುಗಡೆಯಾಗಲಿದೆ ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ಬಿಎಸ್-6 ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳ ಹೆಸರನ್ನು ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸೇರಿಸಲಾಗಿದೆ. ಹೊಸ ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿದೆ ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ಹೊಸ ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳು ಡಿ, ಎ, ಟಿ, ಟಿ ಸಿವಿಟಿ, ಟಿ (ಒ) ಸಿವಿಟಿ ಮತ್ತು ಟಿ (ಒ) ಎಂಬ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಕರೋನಾ ಭೀತಿಯಿಂದ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಇದರಿಂದಾಗಿ ಲಾಕ್ ಡೌನ್ ಅವಧಿಯು ಮುಗಿದ ಬಳಿಕ ಹೊಸ ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.

ಬಿಡುಗಡೆಯಾಗಲಿದೆ ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ಈ ಎರಡು ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಏರ್‍‍ಬ್ಯಾಗ್, ಇ‍‍ಬಿ‍‍ಡಿ ಹೊಂದಿರುವ ಎ‍‍ಬಿ‍ಎಸ್, ರೇರ್ ಪಾರ್ಕಿಂಗ್ ಅಸಿಸ್ಟ್ ಸೆನ್ಸಾರ್, ಹೈ ಸ್ಪೀಡ್ ವಾರ್ನಿಂಗ್, ಚಾಲಕ ಹಾಗೂ ಸಹ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮ್ಯಾಂಡರ್‍‍ಗಳನ್ನು ಹೊಂದಿರಲಿದೆ.

MOST READ: ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಹ್ಯುಂಡೈ ಐ20 ಕಾರು

ಬಿಡುಗಡೆಯಾಗಲಿದೆ ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ಹೊಸ ದಟ್ಸನ್ ರೆಡಿ ಗೋ ಕಾರಿನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಪಿಯಾನೋ ಬ್ಲ್ಯಾಕ್ ಫಿನಿಶ್ ಮತ್ತು ಸಿಲ್ವರ್ ಬೆಜೆಲ್‌ಗಳು, ಎರಡು-ಟೋನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಮ್ಯಾನುವಲ್ ಆಗಿ ಹೊಂದಾಣಿಕೆ ಮಾಡಬಹುದಾದ ಮಿರರ್ ಅನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯಂತೆ ಹೊಸ ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರಿನಲ್ಲಿ 1.2-ಲೀಟರ್, ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿರುತ್ತದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದರೂ ಪವರ್ ಮತ್ತು ಟಾರ್ಕ್ ಅಂಕಿ ಅಂಶದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

MOST READ: ಮಾರಾಟದಲ್ಲಿ ಶೂನ್ಯ ಸಾಧನೆ ಮಾಡಿದ ಎಂಜಿ ಮೋಟಾರ್

ಬಿಡುಗಡೆಯಾಗಲಿದೆ ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿರುವ ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳ ಸಿವಿಟಿ ರೂಪಾಂತರಗಳು 6000 ಆರ್‌ಪಿಎಂನಲ್ಲಿ 77.5 ಬಿಹೆಚ್‌ಪಿ ಪವರ್ ಮತ್ತು 4400 ಆರ್‌ಪಿಎಂನಲ್ಲಿ 104 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಮ್ಯಾನುವಲ್ ರೂಪಾಂತರಗಳು 68 ಬಿಹೆಚ್‌ಪಿ ಪವರ್ ಮತ್ತು 104 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ.

ಬಿಡುಗಡೆಯಾಗಲಿದೆ ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ಇದರೊಂದಿಗೆ ದಟ್ಸನ್ ಕಂಪನಿಯು ಮುಂದಿನ ತಲೆಮಾರಿನ ರೆಡಿ ಗೋ ಫೇಸ್‍‍ಲಿಫ್ಟ್ ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ಹೊಸ ರೆಡಿ ಗೋ ಫೇಸ್‍‍ಲಿಫ್ಟ್ ಕಾರಿನ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ್ದರು.

MOST READ: ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್

ಬಿಡುಗಡೆಯಾಗಲಿದೆ ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ರೆಡಿ ಗೋ ಫೇಸ್‍‍ಲಿಫ್ಟ್ ಕಾರು ಸ್ಲೀಮರ್ ಹೆಡ್ ಲ್ಯಾಂಪ್ ಸೇರಿದಂತೆ ಕಾರಿನ ಮುಂಭಾಗವನ್ನು ಟೀಸರ್ ಚಿತ್ರದಲ್ಲಿ ಪ್ರದರ್ಶಿಸಿದ್ದಾರೆ. ಹೊಸ ರೆಡಿ ಗೋ ಫೇಸ್‍‍ಲಿಫ್ಟ್ ಕಾರಿನ ಮುಂಭಾಗದಲ್ಲಿ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಈ ಕಾರಿನ ಮುಂಭಾಗದಲ್ಲಿ ಕ್ರೋಮ್ ಸರೌಂಡ್ ನೊಂದಿಗೆ ದಟ್ಸನ್ ಲೋಗೊವನ್ನು ಅಳವಡಿಸಿದ್ದಾರೆ.

ಬಿಡುಗಡೆಯಾಗಲಿದೆ ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ದಟ್ಸನ್ ಗೋ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ವ್ಯಾಗನ್ಆರ್, ಹ್ಯುಂಡೈ ಸ್ಯಾಂಟ್ರೊ ಮತ್ತು ಟಾಟಾ ಟಿಯಾಗೊ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಇನ್ನು ದಟ್ಸನ್ ಗೋ ಪ್ಲಸ್ ಕಾರು ರೆನಾಲ್ಟ್ ಟ್ರೈಬರ್ ಕಾರಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
Read more on ದಟ್ಸನ್ datsun
English summary
Datsun GO & GO+ BS6 Listed On Website: Features Improved Safety. Read in Kannada.
Story first published: Tuesday, May 5, 2020, 18:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X