ರಸ್ತೆ ತೆರಿಗೆ ಮೇಲೆ ವಿಧಿಸಲಾಗಿದ್ದ ದಂಡವನ್ನು ಮನ್ನಾ ಮಾಡಿದ ಸರ್ಕಾರ

ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ 2020ರ ಏಪ್ರಿಲ್ 1ರಿಂದ ಡಿಸೆಂಬರ್ 31ರವರೆಗೆ ರಸ್ತೆ ತೆರಿಗೆ ಪಾವತಿಸದಿದ್ದಕ್ಕಾಗಿ ವಿಧಿಸಲಾಗಿದ್ದ ದಂಡವನ್ನು ಸರ್ಕಾರವು ಮನ್ನಾ ಮಾಡಿದೆ ಎಂದು ದೆಹಲಿ ಸರ್ಕಾರವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.

ರಸ್ತೆ ತೆರಿಗೆ ಮೇಲೆ ವಿಧಿಸಲಾಗಿದ್ದ ದಂಡವನ್ನು ಮನ್ನಾ ಮಾಡಿದ ಸರ್ಕಾರ

ದೆಹಲಿ ಸಾರಿಗೆ ಇಲಾಖೆಯ ಮನವಿ ಅರ್ಜಿಯನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನುಮೋದಿಸಿದ ನಂತರ ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ. ದೆಹಲಿಯ ಎಲ್ಲಾ ಆರ್'ಟಿಒ ಕಚೇರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಮಾರ್ಗಸೂಚಿಗಳನ್ನು ಅನುಸರಿಸುವಂತೆ ಆದೇಶಿಸಲಾಗಿದೆ. ಮತ್ತೊಂದು ಸುದ್ದಿಯಲ್ಲಿ ದೆಹಲಿ ಹೈಕೋರ್ಟ್ ವಾಹನಗಳಲ್ಲಿ ಹೆಚ್‌ಎಸ್‌ಆರ್‌ಪಿಗಳನ್ನು ಅಳವಡಿಸಿಕೊಳ್ಳಲು ವಾಹನ ಸವಾರರಿಗೆ ಹೆಚ್ಚಿನ ಸಮಯಾವಕಾಶ ನೀಡುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸಿದೆ.

ರಸ್ತೆ ತೆರಿಗೆ ಮೇಲೆ ವಿಧಿಸಲಾಗಿದ್ದ ದಂಡವನ್ನು ಮನ್ನಾ ಮಾಡಿದ ಸರ್ಕಾರ

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವು ಹೊಸ ನಂಬರ್ ಪ್ಲೇಟ್‌ಗಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಈ ನಂಬರ್ ಪ್ಲೇಟ್'ಗಳನ್ನು ವಿತರಿಸುತ್ತಿರುವವರು ಜನರಿಗೆ ಹೆಚ್ಚಿನ ಹಣವನ್ನು ವಿಧಿಸುತ್ತಿದ್ದಾರೆ. ಈ ಕಾರಣಕ್ಕೆ ಜನರಿಗೆ ಹೊಸ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳಲು ಸಾಕಷ್ಟು ಸಮಯ ನೀಡಬೇಕು ಎಂದು ಹೇಳಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ರಸ್ತೆ ತೆರಿಗೆ ಮೇಲೆ ವಿಧಿಸಲಾಗಿದ್ದ ದಂಡವನ್ನು ಮನ್ನಾ ಮಾಡಿದ ಸರ್ಕಾರ

ಹೊಸ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳುವ ಹಠಾತ್ ಘೋಷಣೆಯು ದೆಹಲಿಯ ನಾಗರಿಕರಲ್ಲಿ ಆತಂಕವನ್ನುಂಟು ಮಾಡಿದೆ. ಇದರಿಂದ ಕೆಲವು ಜನರು ಪರಿಸ್ಥಿತಿಯ ಲಾಭವನ್ನು ಪಡೆಯುತ್ತಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಹಾಗೂ ತಲ್ವಂತ್ ಸಿನ್ಹಾ ಅವರಿದ್ದ ನ್ಯಾಯಪೀಠವು ಹೇಳಿದೆ.

ರಸ್ತೆ ತೆರಿಗೆ ಮೇಲೆ ವಿಧಿಸಲಾಗಿದ್ದ ದಂಡವನ್ನು ಮನ್ನಾ ಮಾಡಿದ ಸರ್ಕಾರ

ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ದೆಹಲಿ ಸರ್ಕಾರವು ವಾಹನಗಳ ಸ್ಟಿಕ್ಕರ್‌ ಹಾಗೂ ಹೆಚ್‌ಎಸ್‌ಆರ್‌ಪಿ ಬಗ್ಗೆ ತರಾತುರಿಯಲ್ಲಿ ಜಾಹೀರಾತುಗಳನ್ನು ನೀಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅನಿಲ್ ಕುಮಾರ್ ದೆಹಲಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ರಸ್ತೆ ತೆರಿಗೆ ಮೇಲೆ ವಿಧಿಸಲಾಗಿದ್ದ ದಂಡವನ್ನು ಮನ್ನಾ ಮಾಡಿದ ಸರ್ಕಾರ

ದೆಹಲಿಯಲ್ಲಿರುವ ಮಾರಾಟಗಾರರು ಹೊಸ ನಂಬರ್‌ ಪ್ಲೇಟ್‌ಗಳಿಗೆ ದುಬಾರಿ ಶುಲ್ಕವನ್ನು ವಿಧಿಸುತ್ತಿದ್ದಾರೆ ಎಂದು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೇಳಲಾಗಿದೆ. ದೆಹಲಿ ಸರ್ಕಾರದ ಪರವಾಗಿ ಹಾಜರಾಗಿದ್ದ ವಕೀಲರು, ಸರ್ಕಾರವು ಹೆಚ್‌ಎಸ್‌ಆರ್‌ಪಿ ದರಗಳನ್ನು ನಿಗದಿಪಡಿಸಿಲ್ಲ.

ರಸ್ತೆ ತೆರಿಗೆ ಮೇಲೆ ವಿಧಿಸಲಾಗಿದ್ದ ದಂಡವನ್ನು ಮನ್ನಾ ಮಾಡಿದ ಸರ್ಕಾರ

ಬದಲಿಗೆ ನ್ಯಾಯಾಲಯದ ಆದೇಶದಂತೆ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು. ದೆಹಲಿ ಪೊಲೀಸರು ಡಿಸೆಂಬರ್ 15ರಿಂದ ಹೆಚ್‌ಎಸ್‌ಆರ್‌ಪಿ ಇಲ್ಲದೆ ಸಂಚರಿಸುವ ವಾಹನಗಳಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸುತ್ತಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ರಸ್ತೆ ತೆರಿಗೆ ಮೇಲೆ ವಿಧಿಸಲಾಗಿದ್ದ ದಂಡವನ್ನು ಮನ್ನಾ ಮಾಡಿದ ಸರ್ಕಾರ

ಹಳೆಯ ನಂಬರ್ ಪ್ಲೇಟ್ ಹೊಂದಿರುವ ವಾಹನಗಳಿಗೆ ದೆಹಲಿ ಪೊಲೀಸರು ರೂ.5,500ಗಳ ದಂಡ ವಿಧಿಸುತ್ತಿದ್ದಾರೆ. ಹೊಸ ನಂಬರ್ ಪ್ಲೇಟ್‌ಗಳನ್ನು ಕಾಯ್ದಿರಿಸಿದ ಜನರು ಪೊಲೀಸರ ತಪಾಸಣೆ ವೇಳೆಯಲ್ಲಿ ಹೊಸ ನಂಬರ್ ಪ್ಲೇಟ್‌ನ ರಶೀದಿಯನ್ನು ತೋರಿಸಬೇಕಾಗುತ್ತದೆ.

ರಸ್ತೆ ತೆರಿಗೆ ಮೇಲೆ ವಿಧಿಸಲಾಗಿದ್ದ ದಂಡವನ್ನು ಮನ್ನಾ ಮಾಡಿದ ಸರ್ಕಾರ

ಹೊಸ ನಂಬರ್ ಪ್ಲೇಟ್‌ನ ರಶೀದಿಯನ್ನು ತೋರಿಸುವವರಿಗೆ ದಂಡ ವಿಧಿಸುವುದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಸಾರಿಗೆ ಇಲಾಖೆಯ ಪ್ರಕಾರ, ಪ್ರತಿದಿನ ಹೊಸ ನಂಬರ್‌ ಪ್ಲೇಟ್‌ಗಳಿಗಾಗಿ ಸುಮಾರು 30,000 ಅರ್ಜಿಗಳು ಸಲ್ಲಿಕೆಯಾಗುತ್ತಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ರಸ್ತೆ ತೆರಿಗೆ ಮೇಲೆ ವಿಧಿಸಲಾಗಿದ್ದ ದಂಡವನ್ನು ಮನ್ನಾ ಮಾಡಿದ ಸರ್ಕಾರ

ಈ ಪೈಕಿ ಪ್ರತಿದಿನ 10,000 ಹೊಸ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಲಾಗುತ್ತಿದೆ. ಬೇಡಿಕೆ ಹೆಚ್ಚಾಗಿರುವ ಕಾರಣಕ್ಕೆ ಅರ್ಜಿ ಸಲ್ಲಿಸಿದ ಗ್ರಾಹಕರು ಹೊಸ ನಂಬರ್ ಪ್ಲೇಟ್ ಪಡೆಯಲು ಸುಮಾರು 4 ತಿಂಗಳು ಕಾಯಬೇಕಾಗುತ್ತದೆ.

ರಸ್ತೆ ತೆರಿಗೆ ಮೇಲೆ ವಿಧಿಸಲಾಗಿದ್ದ ದಂಡವನ್ನು ಮನ್ನಾ ಮಾಡಿದ ಸರ್ಕಾರ

ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ, 2019ರ ಏಪ್ರಿಲ್ 1ಕ್ಕೂ ಮೊದಲು ಖರೀದಿಸಿದ ವಾಹನಗಳು ಕಡ್ಡಾಯವಾಗಿ ಹೆಚ್‌ಎಸ್‌ಆರ್‌ಪಿಗಳನ್ನು ಅಳವಡಿಸಿಕೊಳ್ಳಬೇಕು. ಅದಾದ ನಂತರ ಮಾರಾಟವಾದ ವಾಹನಗಳು ಹೊಸ ನಂಬರ್ ಪ್ಲೇಟ್‌ನೊಂದಿಗೆ ಬರುತ್ತಿವೆ.

Most Read Articles

Kannada
English summary
Delhi government waives off penalty imposed on road tax. Read in Kannada.
Story first published: Saturday, December 26, 2020, 14:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X