ವ್ಯಾಟ್ ಕಡಿತ: ಒಂದೇ ಬಾರಿಗೆ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ.8 ಇಳಿಕೆ

ಕರೋನಾ ವೈರಸ್‌ನಿಂದಾಗಿ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆಗೊಳಿಸಲು ಇಂಧನಗಳ ಮೇಲೆ ಹೆಚ್ಚವರಿ ವ್ಯಾಟ್ ವಿಧಿಸಿದ್ದ ದೆಹಲಿ ಸರ್ಕಾರವು ಕೊನೆಗೂ ದುಬಾರಿ ವ್ಯಾಟ್‌ನಿಂದ ಹಿಂದೆ ಸರಿದಿರುವುದಕ್ಕೆ ವಾಹನ ಸವಾರರು ಮತ್ತು ವರ್ತಕರು ನಿಟ್ಟುಸಿರು ಬಿಟ್ಟಿದ್ದಾರೆ.

ವ್ಯಾಟ್ ಕಡಿತ: ಒಂದೇ ಬಾರಿಗೆ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ.8 ಇಳಿಕೆ

ಪೆಟ್ರೋಲ್ ಹೊರತುಪಡಿಸಿ ಡೀಸೆಲ್ ಮೇಲೆ ಶೇ.30 ರಷ್ಟು ವ್ಯಾಟ್ ವಿಧಿಸಿದ್ದ ದೆಹಲಿ ಸರ್ಕಾರವು ಹದಗೆಟ್ಟಿದ್ದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ತರಲು ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು. ಹೆಚ್ಚುವರಿ ವ್ಯಾಟ್ ಪರಿಣಾಮ ಡೀಸೆಲ್ ಬೆಲೆಯಲ್ಲಿ ಗರಿಷ್ಠ ಏರಿಕೆ ಕಾಣುವ ಮೂಲಕ ಪ್ರತಿ ಲೀಟರ್‌ಗೆ ರೂ.82 ರ ಗಡಿ ತಲುಪಿತ್ತು. ಆದರೆ ದೆಹಲಿ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕೆಲವು ಮಾರ್ಪಾಡುಗಳನ್ನು ತಂದಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಾರ್ವಜನಿಕರು ಮತ್ತು ವರ್ತಕರಿಗೆ ಹೊರೆಯಾಗದಂತೆ ವ್ಯಾಟ್ ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ವ್ಯಾಟ್ ಕಡಿತ: ಒಂದೇ ಬಾರಿಗೆ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ.8 ಇಳಿಕೆ

ಕರೋನಾ ವೈರಸ್‌ಗೂ ಮುನ್ನ ಡೀಸೆಲ್ ಮೇಲಿನ ವ್ಯಾಟ್ ಪ್ರಮಾಣವನ್ನು ಶೇ. 14 ರಿಂದ ಶೇ.30ಕ್ಕೆ ಏರಿಕೆ ಮಾಡಿದ್ದ ದೆಹಲಿ ಸರ್ಕಾರವು ಆರ್ಥಿಕ ಸಂಕಷ್ಟ ನಿವಾರಣೆಗಾಗಿ ಕೆಲವು ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದಿತ್ತು.

ವ್ಯಾಟ್ ಕಡಿತ: ಒಂದೇ ಬಾರಿಗೆ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ.8 ಇಳಿಕೆ

ವ್ಯಾಟ್ ಪ್ರಮಾಣ ಹೆಚ್ಚಳದಿಂದಾಗಿ ಪ್ರತಿ ಲೀಟರ್ ಡೀಸೆಲ್ ಬೆಲೆಯು ರೂ. 82 ದಾಟಿತ್ತು. ಪೆಟ್ರೋಲ್ ಬೆಲೆಗಿಂತಲೂ ದುಬಾರಿಯಾಗಿದ್ದ ಡೀಸೆಲ್ ಬೆಲೆಯು ಇದೀಗ ವ್ಯಾಟ್ ಇಳಿಕೆ ನಂತರ ರೂ.8 ಇಳಿಕೆಯೊಂದಿಗೆ ಪ್ರತಿ ಲೀಟರ್‌ಗೆ ರೂ. 73.64 ಪೈಸೆಗೆ ಇಳಿಕೆಯಾಗಿದೆ.

ವ್ಯಾಟ್ ಕಡಿತ: ಒಂದೇ ಬಾರಿಗೆ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ.8 ಇಳಿಕೆ

ಸಚಿವ ಸಂಪುಟ ಸಭೆ ನಂತರ ಮಾತಾನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಸರ್ಕಾರವು ಡೀಸೆಲ್ ಮೇಲಿನ ಹೆಚ್ಚುವರಿ ವ್ಯಾಟ್ ವಿಧಿಸಿದ್ದರ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ಮೂಲಕ ಸದ್ಯ ಪರಿಸ್ಥಿತಿಗೆ ಈ ಹಿಂದಿನ ವ್ಯಾಟ್ ಪ್ರಮಾಣವನ್ನೇ ಮುಂದುವರಿಸುವುದಾಗಿ ತಿಳಿಸಿದರು.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ವ್ಯಾಟ್ ಕಡಿತ: ಒಂದೇ ಬಾರಿಗೆ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ.8 ಇಳಿಕೆ

ಜೊತೆಗೆ ಸರ್ಕಾರದ ಕ್ರಮವು ಸಾರ್ವಜನಿಕರು ಮತ್ತು ವರ್ತಕರಿಗೆ ಸಾಕಷ್ಟು ಅನುಕೂಲಕವಾಗಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ ಸಿಎಂ ಅರವಿಂದ್ ಕೇಜ್ರಿವಾಲ್, ಸರ್ಕಾರವು ಎಲ್ಲಾ ವರ್ಗದವನ್ನು ಗಮನದಲ್ಲಿಟ್ಟುಕೊಂಡು ನೀತಿ ನಿಯಮಗಳನ್ನು ರೂಪಿಸುವ ಭರವಸೆ ವ್ಯಕ್ತಪಡಿಸಿದರು.

ವ್ಯಾಟ್ ಕಡಿತ: ಒಂದೇ ಬಾರಿಗೆ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ.8 ಇಳಿಕೆ

ಇನ್ನು ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಇಳಿಕೆ ಮಾಡುವ ನಿರ್ಧಾರವು ಆಟೋ ಕಂಪನಿಗಳಿಗಳಿಗೆ ತುಸು ಸಮಾಧಾನ ತಂದಿದ್ದು, ಡೀಸೆಲ್ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿದ್ದರಿಂದ ಡೀಸೆಲ್ ವಾಹನ ಮಾರಾಟದಲ್ಲಿ ಕುಸಿತ ಕಾಣುವ ಆತಂಕ ವ್ಯಕ್ತಪಡಿಸಿದ್ದವು.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ವ್ಯಾಟ್ ಕಡಿತ: ಒಂದೇ ಬಾರಿಗೆ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ.8 ಇಳಿಕೆ

ಕರೋನಾ ವೈರಸ್‌ನಿಂದ ಮೊದಲೇ ಕುಸಿತ ಕಂಡಿರುವ ವಾಹನ ಮಾರಾಟವು ದುಬಾರಿ ಇಂಧನ ಬೆಲೆಗಳಿಂದಾಗಿ ಮತ್ತಷ್ಟು ಕುಸಿತವಾಗುವ ಆತಂಕ ವ್ಯಕ್ತವಾಗಿತ್ತು. ಆದರೆ ವ್ಯಾಟ್ ಪ್ರಮಾಣದಲ್ಲಿ ಇಳಿಕೆ ನಂತರ ಆಟೋ ಮಾರುಕಟ್ಟೆಯೂ ಚೇತರಿಕೆ ಕಾಣುವ ವಿಶ್ವಾಸ ವ್ಯಕ್ತವಾಗಿದೆ.

Most Read Articles

Kannada
English summary
Delhi Govt Reduced Diesel Price By Eight Rupees Per Litre. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X