ವಿಶ್ವ ದರ್ಜೆಯ ರಸ್ತೆಗಳಾಗಿ ಬದಲಾಗಲಿವೆ ದೆಹಲಿ ರಸ್ತೆಗಳು

ಯುರೋಪ್ ನಗರಗಳಲ್ಲಿರುವ ರಸ್ತೆಗಳ ರೀತಿಯಲ್ಲಿ ರಾಜ್ಯದಲ್ಲಿರುವ 500 ಕಿ.ಮೀ ರಸ್ತೆಗಳನ್ನು 100 ಅಡಿಗಳಷ್ಟು ವಿಸ್ತರಿಸಲು ದೆಹಲಿ ಸರ್ಕಾರ ಯೋಜಿಸುತ್ತಿದೆ. ದೆಹಲಿಯಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರು ಯುರೋಪ್ ನಗರಗಳ ರೀತಿಯಲ್ಲಿ ರಾಜ್ಯದ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದ್ದಾರೆ.

ವಿಶ್ವ ದರ್ಜೆಯ ರಸ್ತೆಗಳಾಗಿ ಬದಲಾಗಲಿವೆ ದೆಹಲಿ ರಸ್ತೆಗಳು

ದೆಹಲಿಯ ಎಲ್ಲಾ 500 ಕಿ.ಮೀ ರಸ್ತೆಗಳನ್ನು ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ಮರುವಿನ್ಯಾಸಗೊಳಿಸಲಾಗುವುದೆಂದು ಕ್ರೇಜ್ರಿವಾಲ್ ಹೇಳಿದರು. ಈ ಯೋಜನೆಯಲ್ಲಿ ಚಾಂದನಿ ಚೌಕ್‌ಗೆ ಹೋಗುವ ಮುಖ್ಯ ರಸ್ತೆಯನ್ನು ಮೂಲವಾಗಿಸಲಾಗುವುದು. ಕೇಜ್ರಿವಾಲ್ ರವರು ಮೂರು ವಾರಗಳಲ್ಲಿ ವಿವರವಾದ ಯೋಜನೆಯನ್ನು ಮಂಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದಾರೆ.

ವಿಶ್ವ ದರ್ಜೆಯ ರಸ್ತೆಗಳಾಗಿ ಬದಲಾಗಲಿವೆ ದೆಹಲಿ ರಸ್ತೆಗಳು

ದೆಹಲಿಯು, ಬೇರೆ ದೇಶಗಳ ರಾಜಧಾನಿಯಂತೆ ಅಭಿವೃದ್ಧಿಯಾಗಬೇಕು. ಇದರಿಂದ ಪ್ರಪಂಚದ ಮುಂದೆ ದೆಹಲಿ ಚಿತ್ರಣವೇ ಬದಲಾಗಲಿದೆ. ದೆಹಲಿಯ ರಸ್ತೆಗಳನ್ನು ಸುಧಾರಿಸಲು ಸರ್ಕಾರವು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ವಿಶ್ವ ದರ್ಜೆಯ ರಸ್ತೆಗಳಾಗಿ ಬದಲಾಗಲಿವೆ ದೆಹಲಿ ರಸ್ತೆಗಳು

ದೆಹಲಿಗೆ ಪ್ರತಿವರ್ಷ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದೆಹಲಿಯ ರಸ್ತೆಗಳ ಹೊರೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಕಾರಣಕ್ಕೆ ರಸ್ತೆಗಳನ್ನು ವಿಸ್ತರಿಸುವ ಅಗತ್ಯವಿದೆ. ರಸ್ತೆಗಳ ಸ್ಥಿತಿ ಸುಧಾರಿಸಲು ಹೊಸ ಟೆಕ್ನಾಲಜಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ವಿಶ್ವ ದರ್ಜೆಯ ರಸ್ತೆಗಳಾಗಿ ಬದಲಾಗಲಿವೆ ದೆಹಲಿ ರಸ್ತೆಗಳು

ರಸ್ತೆಗಳನ್ನು ವಿಸ್ತರಿಸುವುದರ ಜೊತೆಗೆ ಪರಿಸರದ ಬಗ್ಗೆಯೂ ಕಾಳಜಿ ವಹಿಸಲಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದರು. ವಿಸ್ತರಿಸಿದ ರಸ್ತೆಗಳ ಬದಿಯಲ್ಲಿ ಸಾಕಷ್ಟು ಸಂಖ್ಯೆಯ ಸಸಿಗಳನ್ನು ನೆಡುವುದರಿಂದ ಪರಿಸರ ಮಾಲಿನ್ಯವನ್ನು ತಪ್ಪಿಸಬಹುದು ಎಂದು ಅವರು ಹೇಳಿದರು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ವಿಶ್ವ ದರ್ಜೆಯ ರಸ್ತೆಗಳಾಗಿ ಬದಲಾಗಲಿವೆ ದೆಹಲಿ ರಸ್ತೆಗಳು

ಹೊಸ ರಸ್ತೆಗಳ ಅಭಿವೃದ್ಧಿಯು ಬಿಲ್ಟ್, ಅಪರೇಟ್ ಹಾಗೂ ಟ್ರಾನ್ಸ್ ಫಾರ್ (ಬಿಒಟಿ) ಮಾದರಿಯಲ್ಲಿ ನಡೆಯಲಿದೆ. ಇದರದಿಯಲ್ಲಿ ರಸ್ತೆಯನ್ನು ನಿರ್ಮಿಸುವ ಕಂಪನಿಯು ಅದರ ನಿರ್ವಹಣೆಯನ್ನು15 ವರ್ಷಗಳವರೆಗೆ ವಹಿಸಿಕೊಳ್ಳಲಿದೆ ಎಂದು ಅವರು ಹೇಳಿದರು.

ವಿಶ್ವ ದರ್ಜೆಯ ರಸ್ತೆಗಳಾಗಿ ಬದಲಾಗಲಿವೆ ದೆಹಲಿ ರಸ್ತೆಗಳು

ಈ ಹಿಂದೆ ಅಂದಾಜು ಮಾಡಲಾಗಿದ್ದ ಪ್ರಕಾರ ಈ ರಸ್ತೆಗಳ ವಿಸ್ತರಣೆಯು 2019ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಈಗ ಹೊಸ ಗಡುವಿನ ಪ್ರಕಾರ ಆಗಸ್ಟ್ 2021ರ ವೇಳೆಗೆ ಪೂರ್ಣಗೊಳ್ಳಲಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ವಿಶ್ವ ದರ್ಜೆಯ ರಸ್ತೆಗಳಾಗಿ ಬದಲಾಗಲಿವೆ ದೆಹಲಿ ರಸ್ತೆಗಳು

ಅನೇಕ ಕಡೆ ರಸ್ತೆಗಳು ಚಿಕ್ಕದಾಗಿರುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ. ರಸ್ತೆಗಳನ್ನು ವಿಸ್ತರಿಸುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಲಾಗುವುದೆಂದು ಕೇಜ್ರಿವಾಲ್ ಹೇಳಿದರು.

Most Read Articles

Kannada
English summary
Delhi to have world class roads like European cities. Read in Kannada.
Story first published: Wednesday, July 29, 2020, 20:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X