Just In
Don't Miss!
- News
ಕೊರೊನಾ ಬಂದಿದ್ದು ಚೀನಾದಿಂದ ಅಲ್ಲ... ಶಿವನಿಂದ, ನಾನೇ ಶಿವ!
- Sports
ಯುಎಇ ಆಟಗಾರರಿಂದ ಮ್ಯಾಚ್ ಫಿಕ್ಸಿಂಗ್; ಅಮಾನತು ಮಾಡಿದ ಐಸಿಸಿ
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರೀ ಸಂಖ್ಯೆಯಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್'ಗಳು
ದೆಹಲಿಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಜನರು ಇನ್ನು ಮುಂದೆ ಚಾರ್ಜಿಂಗ್ ಸ್ಟೇಷನ್'ಗಳ ಸಮಸ್ಯೆಯಿಂದ ಒದ್ದಾಡುವುದು ತಪ್ಪಲಿದೆ. ದೆಹಲಿ ಸರ್ಕಾರವು ಮುಂದಿನ ಒಂದು ವರ್ಷದ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಚಾರ್ಜಿಂಗ್ ಸ್ಟೇಷನ್'ಗಳನ್ನು ನಿರ್ಮಿಸಲಿದೆ.

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ನಗರದ ಸ್ಕ್ವೇರ್ ಇಂಟರ್ ಸೆಕ್ಷನ್ ಹಾಗೂ ಜನ ವಸತಿ ಪ್ರದೇಶಗಳಲ್ಲಿ ಚಾರ್ಜಿಂಗ್ ಸ್ಟೇಷನ್ ನಿರ್ಮಾಣಕ್ಕಾಗಿ ನೀಲನಕ್ಷೆಯನ್ನು ಸಿದ್ಧಪಡಿಸಿದೆ. ದೆಹಲಿಯಲ್ಲಿ 3 ಚದರ ಕಿಲೋಮೀಟರ್ ಪ್ರದೇಶದಲ್ಲಿ ಚಾರ್ಜಿಂಗ್ ಸ್ಟೇಷನ್ ನಿರ್ಮಾಣವಾಗಲಿದೆ ಎಂದು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಹೇಳಿದೆ.

ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಯೋಜನೆಯ ಪ್ರಕಾರ ದಕ್ಷಿಣ ದೆಹಲಿಯಲ್ಲಿ 75, ಉತ್ತರ ದೆಹಲಿಯಲ್ಲಿ 127 ಹಾಗೂ ಪೂರ್ವ ದೆಹಲಿಯ 93 ಪ್ರದೇಶಗಳನ್ನು ಚಾರ್ಜಿಂಗ್ ಸ್ಟೇಷನ್'ಗಳಿಗಾಗಿ ಗುರುತಿಸಲಾಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ನವದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಈಗಾಗಲೇ 55 ಚಾರ್ಜಿಂಗ್ ಸ್ಟೇಷನ್'ಗಳನ್ನು ಸ್ಥಾಪಿಸಿದೆ. ಈಗ ಮತ್ತೊಂದು ಯೋಜನೆಯಲ್ಲಿ 45 ಚಾರ್ಜಿಂಗ್ ಸ್ಟೇಷನ್'ಗಳ ನಿರ್ಮಾಣವನ್ನು ಆರಂಭಿಸಲಿದೆ.

ದೆಹಲಿಯಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳ ಸಾಂದ್ರತೆ ಹೆಚ್ಚಾಗಿದೆ. ಈ ಕಾರಣಕ್ಕೆ ದೆಹಲಿಯಲ್ಲಿ ವಾಹನಗಳಿಂದ ಹೆಚ್ಚಿನ ಪ್ರಮಾಣದ ಮಾಲಿನ್ಯ ಉಂಟಾಗುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಿದರೆ ದೆಹಲಿಯಲ್ಲಿನ ವಾಯುಮಾಲಿನ್ಯವನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಬಹುದು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮುಂಬರುವ ದಿನಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲಿದ್ದು, ಚಾರ್ಜಿಂಗ್ ಸ್ಟೇಷನ್'ಗಳ ಸಮಸ್ಯೆಯನ್ನು ಎದುರಿಸಲಿದ್ದಾರೆ. ಈ ಕಾರಣಕ್ಕೆ ಸಿಎನ್‌ಜಿ ಹಾಗೂ ಪೆಟ್ರೋಲ್ ಬಂಕ್'ಗಳ ರೀತಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್'ಗಳನ್ನು ಸ್ಥಾಪಿಸಲಾಗುವುದು ಎಂದು ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ತಿಳಿಸಿದೆ.

ದೆಹಲಿಯ ಸೌತ್ ಕಾರ್ಪೊರೇಷನ್ ಈಗಾಗಲೇ ತನ್ನ ಅಧಿಕಾರಿಗಳಿಗಾಗಿ ಎಲೆಕ್ಟ್ರಿಕ್ ಕಾರುಗಳನ್ನು ಬಳಸುತ್ತಿದೆ. ಇದರಿಂದಾಗಿ ಪೆಟ್ರೋಲ್ ವೆಚ್ಚವು ಕಡಿಮೆಯಾಗುವುದರ ಜೊತೆಗೆ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣವು ಕಡಿಮೆಯಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಚಾರ್ಜಿಂಗ್ ಪಾಯಿಂಟ್'ಗಳನ್ನು ತೆರೆಯುವ ಕಂಪನಿಯು ಒಂದು ಗಂಟೆಯ ಆಧಾರದ ಮೇಲೆ ಅಥವಾ ಪ್ರತಿ ಯೂನಿಟ್ ಆಧಾರದ ಮೇಲೆ ಚಾರ್ಜಿಂಗ್ ದರಗಳನ್ನು ನಿಗದಿಪಡಿಸಲಿದೆ. ಚಾರ್ಜಿಂಗ್ ಕೇಂದ್ರಗಳಲ್ಲಿ ಡಿಸ್ಚಾರ್ಜ್ ಬ್ಯಾಟರಿಯನ್ನು ಹೊಸ ಬ್ಯಾಟರಿಯೊಂದಿಗೆ ಬದಲಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ.

ಇದು ಚಾರ್ಜ್ ಮಾಡುವ ಸಮಯವನ್ನು ಉಳಿಸಿ, ಚಾರ್ಜಿಂಗ್ ಅನ್ನು ಸುಲಭಗೊಳಿಸುತ್ತದೆ. ಹೊಸ ಕಟ್ಟಡದ ಬೈ-ಲಾ ಪ್ರಕಾರ, ಎಲೆಕ್ಟ್ರಿಕ್ ವಾಹನಗಳಿಗಾಗಿ 20%ನಷ್ಟು ಪಾರ್ಕಿಂಗ್ ಸ್ಥಳವನ್ನು ಕಾಯ್ದಿರಿಸುವುದು ಕಡ್ಡಾಯವಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮಾಲ್, ಆಸ್ಪತ್ರೆ, ಸಾರ್ವಜನಿಕ ಕಟ್ಟಡ, ವಸತಿ ಸಂಘಗಳು ಸೇರಿದಂತೆ ಎಲ್ಲಾ ಹೊಸ ಯೋಜನೆಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಕಡ್ಡಾಯಗೊಳಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಈ ರೀತಿಯ ಯೋಜನೆಗಳು ನೆರವಾಗುತ್ತವೆ.

ಭಾರತದ 38 ದಶಲಕ್ಷ ಟನ್‌ಗಳಷ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯ ಮೂಲಕ ದೆಹಲಿ ಅಗ್ರಸ್ಥಾನದಲ್ಲಿದೆ. 22.7 ಮಿಲಿಯನ್ ಟನ್ ಹೊರಸೂಸುವಿಕೆ ಮೂಲಕ ಮುಂಬೈ ಎರಡನೇ ಸ್ಥಾನದಲ್ಲಿದ್ದರೆ, 22.1 ಮಿಲಿಯನ್ ಟನ್ ಹೊರಸೂಸುವಿಕೆ ಮೂಲಕ ಚೆನ್ನೈ ಮೂರನೇ ಸ್ಥಾನದಲ್ಲಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದೆಹಲಿಯಲ್ಲಿ 1,000 ಜನಸಂಖ್ಯೆಗೆ 85 ಖಾಸಗಿ ಕಾರುಗಳಿವೆ. ದೆಹಲಿಯಲ್ಲಿ ಮೋಟಾರು ವಾಹನಗಳು 12.4 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಹೊರಸೂಸುತ್ತವೆ.