ಕರ್ನಾಟಕದಲ್ಲಿಯೂ ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ ಪ್ರಮಾಣ

ಕರೋನಾ ವೈರಸ್ ಹರಡುವುದನ್ನು ತಡೆಯಲು ಜಾರಿಗೊಳಿಸಲಾದ ಲಾಕ್ ಡೌನ್ ಕಾರಣಕ್ಕೆ ಭಾರತದಲ್ಲಿನ ಜನ ಜೀವನ ಅಸ್ತ ವ್ಯಸ್ತಗೊಂಡಿತ್ತು. ಲಾಕ್ ಡೌನ್ ಅವಧಿಯಲ್ಲಿ ಎಲ್ಲಾ ರೀತಿಯ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು.

ಕರ್ನಾಟಕದಲ್ಲಿಯೂ ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ ಪ್ರಮಾಣ

ಖಾಸಗಿ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿತ್ತು. ಈಗ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದ್ದು, ಹಲವು ರಾಜ್ಯಗಳಲ್ಲಿ ಬಸ್ ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಬಸ್ಸುಗಳು ಸೀಮಿತ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆಟೊ ಹಾಗೂ ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಲಾಗಿದ್ದರೂ, ಜನರು ಕರೋನಾ ವೈರಸ್ ಹರಡಬಹುದೆಂಬ ಭಯದಿಂದ ಅವುಗಳಲ್ಲಿ ಪ್ರಯಾಣಿಸಲು ಹಿಂಜರಿಯುತ್ತಿದ್ದಾರೆ.

ಕರ್ನಾಟಕದಲ್ಲಿಯೂ ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ ಪ್ರಮಾಣ

ಈ ಕಾರಣಕ್ಕೆ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಬೇರೆ ವ್ಯವಹಾರಗಳನ್ನು ಆರಂಭಿಸುತ್ತಿದ್ದಾರೆ. ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದ್ದರೂ ದೇಶವು ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಕರ್ನಾಟಕದಲ್ಲಿಯೂ ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ ಪ್ರಮಾಣ

ದೇಶದ ಹಲವೆಡೆ ಪ್ರಯಾಣದ ಮೇಲಿನ ನಿರ್ಬಂಧಗಳು ಇನ್ನೂ ಮುಂದುವರೆದಿವೆ. ಕರೋನಾ ವೈರಸ್ ಹರಡಬಹುದೆಂಬ ಭಯದಿಂದ ಜನರು ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ.

ಕರ್ನಾಟಕದಲ್ಲಿಯೂ ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ ಪ್ರಮಾಣ

ಲಾಕ್ ಡೌನ್ ವಾಹನಗಳ ಸಂಚಾರದ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಇದರಿಂದಾಗಿ ಇಂಧನದ ಬೇಡಿಕೆಯು ಕ್ಷೀಣಿಸುತ್ತಿದೆ. ಕರ್ನಾಟಕದಲ್ಲಿಯೂ ಜುಲೈ ತಿಂಗಳಿನಲ್ಲಿ ಇಂಧನ ಬಳಕೆ ಪ್ರಮಾಣವು ತೀವ್ರವಾಗಿ ಕುಸಿದಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕರ್ನಾಟಕದಲ್ಲಿಯೂ ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ ಪ್ರಮಾಣ

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂನ ಮಾಹಿತಿಗಳ ಪ್ರಕಾರ, ಕರ್ನಾಟಕದಲ್ಲಿ ಇಂಧನ ಮಾರಾಟ ಪ್ರಮಾಣವು ಕಡಿಮೆಯಾಗಿದೆ. ಲಾಕ್ ಡೌನ್ ನಿಂದ ಉಂಟಾದ ಕುಸಿತದಿಂದ ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಇಂಧನ ಮಾರಾಟ ಪ್ರಮಾಣವು ಮತ್ತೆ ಕುಸಿದಿದೆ.

ಕರ್ನಾಟಕದಲ್ಲಿಯೂ ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ ಪ್ರಮಾಣ

ಹಲವು ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಆಯ್ಕೆಯನ್ನು ನೀಡಿವೆ. ಪ್ರಯಾಣವು ಇಲ್ಲದ ಕಾರಣಕ್ಕೆ ಇಂಧನ ಬಳಕೆ ಕಡಿಮೆಯಾಗುತ್ತದೆ. ಕರ್ನಾಟಕದಲ್ಲಿ ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ 2.2 ಲಕ್ಷ ಕಿ.ಲೀ ಪೆಟ್ರೋಲ್ ಮಾರಾಟ ಮಾಡಲಾಗಿತ್ತು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕರ್ನಾಟಕದಲ್ಲಿಯೂ ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ ಪ್ರಮಾಣ

ಲಾಕ್ ಡೌನ್ ಕಾರಣದಿಂದಾಗಿ ಈ ಪ್ರಮಾಣವು ಏಪ್ರಿಲ್ ತಿಂಗಳಿನಲ್ಲಿ 1 ಲಕ್ಷ ಕಿ.ಲೀಗಳಿಗೆ ಕುಸಿಯಿತು. ಮೇ ತಿಂಗಳಿನಲ್ಲಿ ಈ ಪ್ರಮಾಣವು 1.8 ಲಕ್ಷ ಕಿ.ಲೀಗಳಿಗೆ ಏರಿಕೆಯಾಯಿತು. ಜೂನ್ ತಿಂಗಳಿನಲ್ಲಿ 2.1 ಲಕ್ಷ ಕಿ.ಲೀ ಮಾರಾಟವಾಗಿತ್ತು. ಜುಲೈ ತಿಂಗಳಿನಲ್ಲಿ ಈ ಪ್ರಮಾಣವು 1.9 ಲಕ್ಷ ಕಿ.ಲೀಗಳಿಗೆ ಕುಸಿಯಿತು.

ಕರ್ನಾಟಕದಲ್ಲಿಯೂ ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ ಪ್ರಮಾಣ

ಡೀಸೆಲ್ ಮಾರಾಟವೂ ಸಹ ಇದೇ ಪರಿಸ್ಥಿತಿಯಲ್ಲಿದೆ. ಮಾರ್ಚ್‌ ತಿಂಗಳಿನಲ್ಲಿ 4.4 ಲಕ್ಷ ಕಿ.ಲೀ ಡೀಸೆಲ್ ಮಾರಾಟ ಮಾಡಲಾಗಿತ್ತು. ಏಪ್ರಿಲ್ ತಿಂಗಳಿನಲ್ಲಿ ಈ ಪ್ರಮಾಣವು 2.2 ಲಕ್ಷ ಕಿ.ಲೀಗಳಿಗೆ ಇಳಿಯಿತು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕರ್ನಾಟಕದಲ್ಲಿಯೂ ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ ಪ್ರಮಾಣ

ಡೀಸೆಲ್ ಮಾರಾಟವು ಮೇ ತಿಂಗಳಲ್ಲಿ 4.1 ಲಕ್ಷ ಕಿ.ಲೀ ಹಾಗೂ ಜೂನ್ ತಿಂಗಳಿನಲ್ಲಿ 4.4 ಲಕ್ಷ ಕಿ.ಲೀಗಳಿಗೆ ಏರಿಕೆಯಾಗಿ, ಜುಲೈ ತಿಂಗಳಿನಲ್ಲಿ 3.8 ಲಕ್ಷ ಕಿ.ಲೀಗಳಿಗೆ ಕುಸಿದಿದೆ. ಇಂಧನ ಬಳಕೆ ಸಾಮಾನ್ಯ ಸ್ಥಿತಿಗೆ ಬರಲು ಇನ್ನೂ ಹಲವು ತಿಂಗಳುಗಳು ಬೇಕಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಕರ್ನಾಟಕದಲ್ಲಿಯೂ ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ ಪ್ರಮಾಣ

ಬಸ್ಸುಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಆರಂಭಿಸಿದರೆ ಹಾಗೂ ಪ್ರಯಾಣದ ಮೇಲಿರುವ ಎಲ್ಲಾ ನಿರ್ಬಂಧಗಳನ್ನು ಸಡಿಲಿಸಿದರೆ ಮಾತ್ರ ಇಂಧನ ಬಳಕೆಯು ಸಾಮಾನ್ಯ ಸ್ಥಿತಿಗೆ ಬರುತ್ತದೆ ಎಂದು ಹೇಳಲಾಗಿದೆ.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Fuel consumption declines in Karnataka during July 2020. Read in Kannada.
Story first published: Wednesday, August 26, 2020, 9:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X