ಆಟೋ ಎಕ್ಸ್‌ಪೋ 2020: ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ ಹೈಮಾ 7ಎಕ್ಸ್ ಎಂಪಿವಿ ಅನಾವರಣ

ಚೀನಿ ಆಟೋ ಉತ್ಪಾದನಾ ಸಂಸ್ಥೆಯಾಗಿರುವ FAW ಮೊದಲ ಬಾರಿಗೆ ಭಾರತೀಯ ಆಟೋ ಉದ್ಯಮವನ್ನು ಪ್ರವೇಶಿಸುತ್ತಿದ್ದು, ಮೊದಲ ಹಂತದಲ್ಲೇ ಎಂಪಿವಿ ಕಾರು ಮಾದರಿಯೊಂದನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಆಟೋ ಎಕ್ಸ್‌ಪೋ 2020: ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ ಹೈಮಾ 7ಎಕ್ಸ್ ಎಂಪಿವಿ ಅನಾವರಣ

FAW ಸಂಸ್ಥೆಯು ಚೀನಿ ಮಾರುಕಟ್ಟೆಯಲ್ಲಿ ಕಾರ್ ಬ್ರಾಂಡ್‌ಗಳ ಮಾಲೀಕತ್ವವನ್ನು ಹೊಂದಿದ್ದು, ಹೈಮಾ ಕೂಡಾ ಇದೇ ಸಂಸ್ಥೆ ಅಡಿ ಕಾರ್ಯನಿರ್ವಹಣೆ ಮಾಡುತ್ತಿದೆ. ಇದೀಗ ಭಾರತದಲ್ಲಿ ಬರ್ಡ್ ಮೋಟಾರ್ಸ್ ಜೊತೆಗೂಡಿ ಹೈಮಾ ನಿರ್ಮಾಣದ 7ಎಕ್ಸ್ ಎಂಪಿವಿ ಆವೃತ್ತಿಯನ್ನು ಅನಾವರಣಗೊಳಿಸಿರುವ FAW ಸಂಸ್ಥೆಯು ಹೊಸ ಕಾರನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ. 7 ಸೀಟರ್‌ನೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರುವ ಹೊಸ ಕಾರು ಇನೋವಾ ಕ್ರಿಸ್ಟಾ ಕಾರಿಗಿಂತಲೂ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ ಹೈಮಾ 7ಎಕ್ಸ್ ಎಂಪಿವಿ ಅನಾವರಣ

ಐಷಾರಾಮಿ ಕಾರುಗಳ ಮಾದರಿಯಲ್ಲೇ ಮುಂಭಾಗ ಗ್ರಿಲ್ ಹೊಂದಿರುವ 7ಎಕ್ಸ್ ಕಾರು ಶಾರ್ಪ್ ಹೆಡ್‌ಲ್ಯಾಂಪ್ ಕ್ಲಸ್ಟರ್, ಬ್ಲ್ಯಾಕ್ ಔಟ್ ಪಿಲ್ಲರ್, ಶಾರ್ಪ್ ಎರ್ಡ್ಜ್ ಡಿಸೈನ್, ಆಕರ್ಷಕ ಟೈಲ್‌ಗೆಟ್, ಸ್ಪೋರ್ಟಿ ಸ್ಪಾಯ್ಲರ್ ಗಮನಸೆಳೆಯುತ್ತದೆ.

ಆಟೋ ಎಕ್ಸ್‌ಪೋ 2020: ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ ಹೈಮಾ 7ಎಕ್ಸ್ ಎಂಪಿವಿ ಅನಾವರಣ

ಹಾಗೆಯೇ ಹೊಸ ಕಾರಿನಲ್ಲಿ ಮರ್ಸಿಡಿಸ್ ಬೆಂಝ್ ಕಾರುಗಳಲ್ಲಿ ನೀಡಲಾಗುವ ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೈ ಸೌಲಭ್ಯವು ಸಹ ಈ ಕಾರಿನಲ್ಲಿದ್ದು, ಇನ್ಪೋಟೈನ್‌ಮೆಂಟ್ ಸಿಸ್ಟಂ, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸೆಂಟ್ರಲ್ ಕನ್ಸೊಲ್‌ನಲ್ಲಿ ನೀಡಲಾಗಿರುವ ತಾಂತ್ರಿಕ ಸೌಲಭ್ಯಗಳು ಗಮನಸೆಳೆಯುತ್ತವೆ.

ಆಟೋ ಎಕ್ಸ್‌ಪೋ 2020: ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ ಹೈಮಾ 7ಎಕ್ಸ್ ಎಂಪಿವಿ ಅನಾವರಣ

ಹಾಗೆಯೇ ಹೊಸ ಕಾರಿನ ಒಳಾಂಗಣ ಡಿಸೈನ್ ನೋಟವನ್ನು ಹೆಚ್ಚಿಸುವುದಕ್ಕಾಗಿ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಬಳಕೆ ಮಾಡಲಾಗಿದ್ದು, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ವೆಂಟಿಲೆಟೆಡ್ ಲೆದರ್ ಸೀಟುಗಳು, ಪ್ರತ್ಯೇಕ ಆಸನ ಸೌಲಭ್ಯ ಜೊತೆಗೆ ಕಾರ್ ಕನೆಕ್ಟ್ ಸೌಲಭ್ಯಗಳಿವೆ. ಮೂರನೇ ಸಾಲಿನಲ್ಲೂ ಪ್ರಯಾಣಿಕರಿಗೆ ಹಲವು ಅನುಕೂಲಕರ ಸೌಲಭ್ಯಗಳನ್ನು ನೀಡಲಾಗಿದ್ದು, ಬಲಿಷ್ಠ ಎಂಜಿನ್ ಸೌಲಭ್ಯವನ್ನು ಸಹ ಪಡೆದುಕೊಂಡಿದೆ.

ಆಟೋ ಎಕ್ಸ್‌ಪೋ 2020: ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ ಹೈಮಾ 7ಎಕ್ಸ್ ಎಂಪಿವಿ ಅನಾವರಣ

ಎಂಜಿನ್ ಸಾಮರ್ಥ್ಯ

ವಿದೇಶಿ ಮಾರುಕಟ್ಟೆಯಲ್ಲಿ ಹೈಮಾ 7ಎಕ್ಸ್ ಕಾರು 1.6-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 190-ಬಿಎಚ್‌ಪಿ ಮತ್ತು 293-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಆಟೋ ಎಕ್ಸ್‌ಪೋ 2020: ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ ಹೈಮಾ 7ಎಕ್ಸ್ ಎಂಪಿವಿ ಅನಾವರಣ

ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಹೈಮಾ ಹೊಸ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಹೊಸ ಎಂಜಿನ್ ಆಯ್ಕೆಗಳನ್ನು ಪಡೆಯಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಹೊಸ ಕಾರು ಬಿಡುಗಡೆಯಾಗಲಿದೆ.

ಆಟೋ ಎಕ್ಸ್‌ಪೋ 2020: ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ ಹೈಮಾ 7ಎಕ್ಸ್ ಎಂಪಿವಿ ಅನಾವರಣ

ಕಾರಿನ ಉದ್ದಳತೆ

ಸದ್ಯ ಎಂಪಿವಿ ವಿಭಾಗದಲ್ಲಿ ಪಾರುಪತ್ಯ ಹೊಂದಿರುವ ಇನೋವಾ ಕ್ರಿಸ್ಟಾ ಕಾರಿಗಿಂತಲೂ ಉದ್ದಳತೆ ಹೊಂದಿರುವ ಹೈಮಾ 7ಎಕ್ಸ್ ಕಾರು 4,874-ಎಂಎಂ ಉದ್ದ, 1,874-ಎಂಎಂ ಅಗಲ ಮತ್ತು 1,720-ಎಂಎಂ ಎತ್ತರ ಮತ್ತು 2,860-ಎಂಎಂ ವೀಲ್ಹ್ ಬೆಸ್ ಪಡೆದಿದೆ.

ಆಟೋ ಎಕ್ಸ್‌ಪೋ 2020: ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ ಹೈಮಾ 7ಎಕ್ಸ್ ಎಂಪಿವಿ ಅನಾವರಣ

ಈ ಮೂಲಕ ಇನೋವಾ ಕ್ರಿಸ್ಟಾ ಕಾರಿಗಿಂತಲೂ 139-ಎಂಎಂ ಹೆಚ್ಚು ಉದ್ದಳತೆ ಹೊಂದಿರುವ 7ಎಕ್ಸ್ ಕಾರು ಪ್ರೀಮಿಯಂ ಫೀಚರ್ಸ್ ಮೂಲಕ ಎಂಪಿವಿ ಕಾರು ಖರೀದಿದಾರರನ್ನು ಸೆಳೆಯಲಿದ್ದು, ಬೆಲೆ ಕೂಡಾ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗಲಿದೆ ಎನ್ನಲಾಗಿದೆ.

Most Read Articles

Kannada
English summary
Chinese carmaker Haima has revealed the 7X MPV, which is equivalent to the Toyota Innova Crysta, at Auto Expo 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X