Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾರು ಬಿಡಿಭಾಗಗಳ ಮೇಲೆ ವಿಶೇಷ ರಿಯಾಯ್ತಿ ಘೋಷಣೆ ಮಾಡಿದ ಹ್ಯುಂಡೈ
ದೇಶದ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಹ್ಯುಂಡೈ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಹೊಸ ವಾಹನ ಮಾರಾಟ ಸುಧಾರಿಸಲು ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಇದೀಗ ವಿವಿಧ ಕಾರು ಮಾದರಿಗಳ ಬಿಡಿಭಾಗಗಳ ಮೇಲೆ ವಿಶೇಷ ಆಫರ್ ನೀಡುತ್ತಿದೆ.

ವಿವಿಧ ಆಟೋ ಕಂಪನಿಗಳಿಗೆ ಪ್ರಮುಖ ಬಿಡಿಭಾಗಗಳನ್ನು ಪೂರೈಕೆ ಮಾಡುವ ಹ್ಯುಂಡೈ ಮೊಬಿಸ್ ಜೊತೆಗೆ ಹೊಸ ಆಫರ್ ನೀಡುತ್ತಿರುವ ಹ್ಯುಂಡೈ ಮೋಟಾರ್ಸ್ ಕಂಪನಿಯು ರಿಯಾಯ್ತಿ ದರ ಉತ್ತಮ ಗುಣಮಟ್ಟದ ಬಿಡಿಭಾಗಗಳನ್ನು ಆಯ್ಕೆಗೆ ಅವಕಾಶ ನೀಡಿದೆ. ಕರೋನಾ ವೈರಸ್ ಪರಿಣಾಮ ವಾಹನಗಳಲ್ಲಿ ಸುರಕ್ಷಿತ ಪ್ರಯಾಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವು ಸೇಫ್ಟಿ ಆಕ್ಸೆಸರಿಸ್‌ಗಳನ್ನು ಅಭಿವೃದ್ದಿಗೊಳಿಸಲಾಗಿದೆ.

ಹ್ಯುಂಡೈ ಕಾರುಗಳ ಬಿಡಿಭಾಗಗಳನ್ನು ರಿಯಾಯ್ತಿ ದರದಲ್ಲಿ ಪಡೆದುಕೊಳ್ಳಲು 'ಹ್ಯುಂಡೈ ಮೊಲಿಬಿಟಿ' ಮೊಬೈಲ್ ಅಪ್ಲಿಕೇಷನ್ ಮೂಲಕ ಉಚಿತ ಸದಸ್ಯತ್ವ ಪಡೆದುಕೊಳ್ಳಬೇಕಿದ್ದು, ತದನಂತರ ಹ್ಯುಂಡೈ ಮೊಬಿಲಿಟಿ ಮೂಲಕ ಕಾರು ಬಿಡಿಭಾಗಗಳನ್ನು ಆಕರ್ಷಕ ದರದಲ್ಲಿ ಖರೀದಿ ಮಾಡಬಹುದಾಗಿದೆ.

ಹ್ಯುಂಡೈ ಮೊಲಿಬಿಟಿ ಮೂಲಕ ಖರೀದಿಸಿದ ಕಾರು ಬಿಡಿಭಾಗಗಳಿಗೂ ಮತ್ತು ನೇರವಾಗಿ ಖರೀದಿ ಮಾಡುವ ಬಿಡಿಭಾಗಗಳ ಬೆಲೆಗೂ ಸಾಕಷ್ಟು ಬೆಲೆ ವ್ಯತ್ಯಾಸವಿದ್ದು, ಹ್ಯುಂಡೈ ಮೊಲಿಬಿಟಿ ಪ್ಲ್ಯಾಟ್‌ಫಾರ್ಮ್‌ನಲ್ಲಿ ಗ್ರಾಹಕರಿಗೆ ಒಂದೇ ಸೂರಿನಡಿ ಹಲವಾರು ಸೇವೆಗಳನ್ನು ಅತಿ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ.

ಮೊಬಿಲಿಟಿ ಸದಸ್ಯತ್ವದಡಿ ಗ್ರಾಹಕರಿಗೆ ಕ್ರೆಡಿಟ್ ಅಂಕಗಳನ್ನು ನೀಡುವ ಹ್ಯುಂಡೈ ಕಂಪನಿಯು ಅಂಕಗಳ ಆಧಾರದ ಮೇಲೆ ವಿವಿಧ ಆಟೋಮೊಬೈಲ್ ಸೇವೆಗಳ ಮೇಲೆ ರಿಯಾಯ್ತಿ ಪಡೆದುಕೊಳ್ಳುವ ಅವಕಾಶ ನೀಡಲಿದ್ದು, ಹೊಸ ಸದಸ್ಯತ್ವಕ್ಕೆ ಯಾವುದೇ ಹೆಚ್ಚುವರಿ ಶುಲ್ಕಪಾವತಿ ಮಾಡಬೇಕಿಲ್ಲ.

ಹೀಗಾಗಿ ವಾಹನದ ಪರಿಕರಗಳು, ಇಂಧನ, ಲೂಬ್ರಿಕಂಟ್ ಮತ್ತು ಟೈರ್‌ಗಳಿಗೆ ಸಂಬಂಧಿಸಿದ ಸೇವೆಗಳನ್ನು ರಿಯಾಯ್ತಿ ದರದಲ್ಲಿ ಪಡೆದುಕೊಳ್ಳಬಹುದಾಗಿದ್ದು, ಇದು ವಾಹನ ಚಂದಾದಾರಿಕೆಯ ಪ್ರಕ್ರಿಯೆಯನ್ನು ಸಹ ಸರಳಗೊಳಿಸುತ್ತದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಒಂದು ನೀವು ಬಾಡಿಗೆ ವಾಹನಗಳನ್ನು ನೇರವಾಗಿ ಆಯಾ ಕಂಪನಿಗಳ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದಕ್ಕಿಂತ ಹ್ಯುಂಡೈ ಮೊಲಿಬಿಟಿ ಆ್ಯಪ್ ಮೂಲಕ ನೋಂದಣಿ ಮಾಡಿದ್ದಲ್ಲಿ ಹಲವಾರು ಆಫರ್‌ಗಳ ಲಭ್ಯವಾಗಲಿದ್ದು, ಕ್ಯಾಶ್‌ಬ್ಯಾಕ್ ಆಫರ್ ಜೊತೆಗೆ ಕ್ರೆಡಿಟ್ ಅಂಕಗಳು ಕೂಡಾ ಹೆಚ್ಚಳವಾಗುವುದರೊಂದಿಗೆ ವಿವಿಧ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು ಕರೋನಾ ವೈರಸ್ ಪರಿಣಾಮ ಸಂಪೂರ್ಣವಾಗಿ ನೆಲಕಚ್ಚಿದ್ದ ಹೊಸ ವಾಹನಗಳ ಮಾರಾಟವು ಇದೀಗ ಚೇತರಿಕೆ ಕಾಣುತ್ತಿದ್ದು, ಹ್ಯುಂಡೈ ಮೋಟಾರ್ಸ್ ಸೇರಿದಂತೆ ಹಲವು ಆಟೋ ಕಂಪನಿಗಳು ಬೆಳವಣಿಗೆಯ ಹಾದಿಯಲ್ಲಿವೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಕಳೆದ ಎಪ್ರಿಲ್, ಮೇ ಮತ್ತು ಜೂನ್ ಅವಧಿಯಲ್ಲಿನ ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಆಟೋ ಕಂಪನಿಗಳು ಇದೀಗ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕರೋನಾ ವೈರಸ್ ಪರಿಣಾಮ ಸ್ವಂತ ವಾಹನಗಳ ಬಳಕೆಯು ಹೆಚ್ಚುತ್ತಿದೆ.