Just In
- 17 min ago
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- 1 hr ago
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- 2 hrs ago
2020ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾದ ಟಾಟಾ ಹ್ಯಾರಿಯರ್
- 3 hrs ago
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Movies
ಸುದೀಪ್ 'ಫ್ಯಾಂಟಮ್' ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್?
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಕಿಯಾ ಮೋಟಾರ್ಸ್ ಹೊಸ ಎಂಪಿವಿ
ಭಾರತದಲ್ಲಿ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಮುನ್ನಡೆ ಸಾಧಿಸುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಪ್ರಮುಖ ಕಾರು ಉತ್ಪಾದನಾ ಕಂಪನಿಗಳನ್ನು ಹಿಂದಿಕ್ಕಿ ನಾಲ್ಕನೇ ಅತಿ ದೊಡ್ಡ ಕಾರು ಕಂಪನಿಯಾಗಿ ಹೊರಹೊಮ್ಮಿದ್ದು, ಸೆಲ್ಟೊಸ್, ಕಾರ್ನಿವಾಲ್ ಮತ್ತು ಸೊನೆಟ್ ನಂತರ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಕರೋನಾ ಅಬ್ಬರದ ನಡುವೆಯೂ ದೇಶದ ಆಟೋ ಉದ್ಯಮವು ತೀವ್ರವಾಗಿ ಬೆಳವಣಿಗೆ ಸಾಧಿಸುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಕಾರು ಮಾದರಿಗಳು ಇದೀಗ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಹ್ಯಾಚ್‌ಬ್ಯಾಕ್ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ವಿಭಾಗವು ಉಳಿದ ಕಾರು ಮಾದರಿಗಳಿಂತ ಹೆಚ್ಚು ಬೇಡಿಕೆಯಲ್ಲಿದ್ದು, ತದನಂತರ ಎಸ್‌ಯುವಿ ಮತ್ತು ಎಂಪಿವಿ ಕಾರುಗಳು ಹೆಚ್ಚಿನ ಮಟ್ಟದ ಬೇಡಿಕೆಯಲ್ಲಿರುವ ಕಾರು ಮಾದರಿಗಳಾಗಿವೆ.

ಉಳಿದ ಕಾರು ಮಾದರಿಗಳಿಂತಲೂ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಮಾದರಿಗಳಲ್ಲಿನ ಪ್ರತಿಸ್ಪರ್ಧಿ ಕಡಿಮೆ ಇರುವುದರಿಂದ ಮಾರುಕಟ್ಟೆಯಲ್ಲಿರುವ ಕೆಲವೇ ಕೆಲವು ಎಂಪಿವಿ ಕಾರು ಮಾದರಿಗಳು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿವೆ.

ಎಂಪಿವಿ ಕಾರು ಮಾದರಿಯ ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಎರ್ಟಿಗಾ ಕಾರು ಅಧಿಕ ಬೇಡಿಕೆಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ದುಬಾರಿ ಬೆಲೆ ನಡುವೆಯೂ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಎರ್ಟಿಗಾ ಮಾದರಿಯಷ್ಟೇ ಬೇಡಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ.

ಆದರೆ ಎರ್ಟಿಗಾ ಕಾರಿಗಿಂತಲೂ ದುಪ್ಪಟ್ಟು ಬೆಲೆ ಹೊಂದಿರುವ ಇನೋವಾ ಕ್ರಿಸ್ಟಾ ಕಾರು ಐಷಾರಾಮಿ ಕಾರು ಮಾದರಿಯಾಗಿ ಗುರುತಿಸಿಕೊಂಡಿದ್ದು, ಎರ್ಟಿಗಾ ಮತ್ತು ಇನೋವಾ ಕ್ರಿಸ್ಟಾ ನಡುವೆ ಬೆಲೆ ಅಂತರ ಸಾಕಷ್ಟಿದೆ. ಈ ಎರಡು ಕಾರುಗಳ ನಡುವಿನ ಸ್ಥಾನದಲ್ಲಿರುವ ಮಹೀಂದ್ರಾ ಮರಾಜೋ ಕಾರು ಗ್ರಾಹಕರ ಆಯ್ಕೆ ಮುಂಚೂಣಿ ಸಾಧಿಸುವಲ್ಲಿ ವಿಫಲವಾಗುತ್ತಿದ್ದು, ಇನೋವಾ ಮತ್ತು ಎರ್ಟಿಗಾ ನಡುವಿನ ಸ್ಥಾನವನ್ನು ತುಂಬಲು ಕಿಯಾ ಮೋಟಾರ್ಸ್ ಹೊಸ ಎಂಪಿವಿ ಕಾರು ಉತ್ಪನ್ನವನ್ನು ಸಿದ್ದಪಡಿಸುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಕಿಯಾ ಕಾರ್ನಿವಾಲ್ ಎಂಪಿವಿ ಕಾರು ಮಾದರಿಯು ಇನೋವಾ ಕ್ರಿಸ್ಟಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಐಷಾರಾಮಿ ಕಾರು ಮಾದರಿಯಾಗಿ ಗುರುತಿಸಿಕೊಂಡಿದೆ.

ಕಾರ್ನಿವಾಲ್ ಕಾರು ಮಾದರಿಯು ಸದ್ಯ 2.2-ಲೀಟರ್ ವಿಜಿಟಿ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 24.95 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 33.95 ಲಕ್ಷ ಬೆಲೆ ಹೊಂದಿದ್ದು, ಹೊಸದಾಗಿ ಬಿಡುಗಡೆಯಾಗಲಿರುವ ಮಧ್ಯಮ ಕ್ರಮಾಂಕದ ಎಂಪಿವಿ ಕಾರು ಮಾದರಿಯು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 12 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

ಇನೋವಾ ಕ್ರಿಸ್ಟಾ ಎಂಪಿವಿ ಕಾರು ಮಾದರಿಯು 2.4-ಲೀಟರ್ ಡೀಸೆಲ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 16.27 ಲಕ್ಷದಿಂದ ಟಾಪ್ ಎಂಡ್ ಮಾದರಿಯು 24.34 ಲಕ್ಷ ಬೆಲೆ ಹೊಂದಿದೆ.

ಬೆಲೆ ನಡುವಿನ ಅಂತರವನ್ನು ಸರಿದೂಗಿಸುವ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಕಿಯಾ ಮೋಟಾರ್ಸ್ ಕಂಪನಿಯು ಮಾರುತಿ ಸುಜುಕಿ ಎರ್ಟಿಗಾ ಮತ್ತು ಟೊಯೊಟಾ ಇನೋವಾ ಕ್ರಿಸ್ಟಾ ನಡುವಿನ ಸ್ಥಾನದಲ್ಲಿ ಉತ್ತಮ ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ವರ್ಷದಲ್ಲಿ ಎರಡು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಕಿಯಾ ಮೋಟಾರ್ಸ್ ಕಂಪನಿಯು ಕಾರು ಮಾರಾಟ ಆರಂಭಿದ ಒಂದೂವರೆ ವರ್ಷದಲ್ಲಿ ಮೂರು ಕಾರುಗಳನ್ನು ಬಿಡುಗಡೆ ಮಾಡಿದ್ದು, ಇದೀಗ ನಾಲ್ಕನೇ ಕಾರು ಮಾದರಿಯಾಗಿ ಹೊಸ ಎಂಪಿವಿ ಕಾರನ್ನು ಮುಂದಿನ ವರ್ಷದ ಮಧ್ಯಂತರದಲ್ಲಿ ರಸ್ತೆಗಿಳಿಸುವ ಸಿದ್ದತೆಯಲ್ಲಿದೆ.

ನಾಲ್ಕನೇ ಕಾರು ಮಾದರಿಯಾಗಿ ಬಿಡುಗಡೆಯಾಗಲಿರುವ ಮಧ್ಯಮ ಕ್ರಮಾಂಕದ ಎಂಪಿವಿ ಮಾದರಿಯು ಎರ್ಟಿಗಾ ಕಾರಿಗಿಂತಲೂ ಹೆಚ್ಚಿನ ವೀಲ್ಹ್ ಬೆಸ್ ಹೊಂದಿದ್ದು, ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಅರಾಮದಾಯಕ ಸ್ಥಳಾವಕಾಶ ಹೊಂದಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಇದೇ ಕಾರಣಕ್ಕೆ ಎಂಪಿವಿ ಕಾರು ಮಾರಾಟದಲ್ಲಿ ಕಿಯಾ ಹೊಸ ಎಂಪಿವಿ ಕಾರು ಭರ್ಜರಿ ಬೇಡಿಕೆ ಗಿಟ್ಟಿಸಿಕೊಳ್ಳವ ನೀರಿಕ್ಷೆಯಲ್ಲಿದ್ದು, ಬೆಲೆಯಲ್ಲಿ ಎರ್ಟಿಗಾ ಕಾರಿಗಿಂತ ತುಸು ದುಬಾರಿ ಮತ್ತು ಮತ್ತು ಇನೋವಾ ಕ್ರಿಸ್ಟಾ ಕಾರಿಗಿಂತಲೂ ಅತಿ ಕಡಿಮೆ ಬೆಲೆಯೊಂದಿಗೆ ರಸ್ತೆಗಿಳಿಯಲಿದೆ.