2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ನಿರ್ಮಾಣದ ನಾಲ್ಕನೇ ಕಾರು ಮಾದರಿ..!

ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಕಾರು ಮಾರಾಟ ಆರಂಭಿಸಿದ ಕೆಲವೇ ದಿನಗಳಲ್ಲಿ ಟಾಪ್ 5 ಸ್ಥಾನಕ್ಕೇರುವ ಮೂಲಕ ಬಹುಬೇಡಿಕೆಯ ಕಾರ್ ಬ್ರಾಂಡ್ ಆಗಿ ಹೊರಹೊಮ್ಮಿದ್ದು, ಸೆಲ್ಟೊಸ್ ಮತ್ತು ಕಾರ್ನಿವಾಲ್ ನಂತರ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ನಿರ್ಮಾಣದ ನಾಲ್ಕನೇ ಕಾರು ಮಾದರಿ..!

ಕಿಯಾ ಕಂಪನಿಯು ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಸೊನೆಟ್ ಕಾನ್ಸೆಪ್ಟ್ ಕಾರು ಬಿಡುಗಡೆಯ ಯೋಜನೆಯಲ್ಲಿದ್ದು, ಮುಂಬರುವ ಅಗಸ್ಟ್‌ನಲ್ಲಿ ಸೊನೆಟ್ ಬಿಡುಗಡೆಯ ನಂತರ ಸೊಲ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ. ಭಾರತದಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಕಿಯಾ ಹೊಸ ಸೊಲ್ ಕಾರು ಭರ್ಜರಿ ಪೈಪೋಟಿ ನೀಡಲಿದೆ.

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ನಿರ್ಮಾಣದ ನಾಲ್ಕನೇ ಕಾರು ಮಾದರಿ..!

ಹೊಸ ಸೊಲ್ ಕಾರು ಬಿಡುಗಡೆಯ ಕುರಿತಂತೆ ಈಗಾಗಲೇ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿರುವ ಕಿಯಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರನ್ನು ಪೆಟ್ರೋಲ್ ಮಾದರಿಯ ಜೊತೆಗೆ ಎಲೆಕ್ಟ್ರಿಕ್ ಆವೃತ್ತಿಯಲ್ಲೂ ಬಿಡುಗಡೆ ಮಾಡಲಿದೆ.

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ನಿರ್ಮಾಣದ ನಾಲ್ಕನೇ ಕಾರು ಮಾದರಿ..!

ಸೊಲ್ ಎಲೆಕ್ಟ್ರಿಕ್ ಮಾದರಿಯನ್ನು ಈಗಾಗಲೇ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿರುವ ಕಿಯಾ ಕಂಪನಿಯು ಪೆಟ್ರೋಲ್ ಎಂಜಿನ್ ಪ್ರೇರಿತ ಸೊಲ್ ಆವೃತ್ತಿಯ ಬಗೆಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಹಂಚಿಕೊಂಡಿಲ್ಲ.

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ನಿರ್ಮಾಣದ ನಾಲ್ಕನೇ ಕಾರು ಮಾದರಿ..!

ಸದ್ಯ ಯುಎಸ್ಎ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿರುವ ಸೊಲ್ ಪೆಟ್ರೋಲ್ ಆವೃತ್ತಿಯು ಹೈ ಪರ್ಫಾಮೆನ್ಸ್ ಹ್ಯಾಚ್‌ಬ್ಯಾಕ್ ಆವೃತ್ತಿಯಾಗಿ ಮಾರಾಟಗೊಳ್ಳುತ್ತಿದ್ದು, ಸಾಮಾನ್ಯ ಮಾದರಿಯಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದರೆ ಜಿಟಿ ಲೈನ್ ಮಾದರಿಯು 1.6-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ.

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ನಿರ್ಮಾಣದ ನಾಲ್ಕನೇ ಕಾರು ಮಾದರಿ..!

2.0-ಲೀಟರ್ ಪೆಟ್ರೋಲ್ ಮಾದರಿಯು 148-ಬಿಎಚ್‌ಪಿ ಉತ್ಪಾದನೆ ಮಾಡಿದಲ್ಲಿ ಪರ್ಫಾಮೆನ್ಸ್ ವರ್ಷನ್ ಮಾದರಿಯಾದ 1.6-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 201-ಬಿಎಚ್‌ಪಿ ಉತ್ಪಾದನೆಯೊಂದಿಗೆ ದುಬಾರಿ ಬೆಲೆ ಹೊಂದಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ನಿರ್ಮಾಣದ ನಾಲ್ಕನೇ ಕಾರು ಮಾದರಿ..!

ಯುಎಸ್ಎ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಲೆಕ್ಕಾಚಾರದ ಪ್ರಕಾರ ಸೊಲ್ ಕಾರು ರೂ. 13 ಲಕ್ಷದಿಂದ ರೂ. 18 ಲಕ್ಷ ಬೆಲೆ ಅಂತರ ಮಾರಾಟವಾಗುತ್ತಿದ್ದು, ಹಲವಾರು ಐಷಾರಾಮಿ ಫೀಚರ್ಸ್‌ನೊಂದಿಗೆ ವಿವಿಧ ಮಾದರಿಯ ಡ್ರೈವಿಂಗ್ ಮೋಡ್ ಹೊಂದಿದೆ.

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ನಿರ್ಮಾಣದ ನಾಲ್ಕನೇ ಕಾರು ಮಾದರಿ..!

ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಸೊಲ್ ಕಾರು ಸಾಮಾನ್ಯ ಮಾದರಿಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಬೆಲೆ ಇಳಿಕೆಗಾಗಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಕೈಬಿಡಲಿದೆ.

MOST READ: ಎರಡು ಚಕ್ರಗಳಲ್ಲಿ ಚಲಿಸಿದ ಟ್ರಾಕ್ಟರ್, ಆನಂದ್ ಮಹೀಂದ್ರಾ ಹೇಳಿದ್ದೇನು?

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ನಿರ್ಮಾಣದ ನಾಲ್ಕನೇ ಕಾರು ಮಾದರಿ..!

ಭಾರತದಲ್ಲಿ ಬಹುತೇಕ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳು ರೂ.7 ಲಕ್ಷದಿಂದ ರೂ.12 ಲಕ್ಷ ಬೆಲೆ ಅಂತರದಲ್ಲಿ ಖರೀದಿ ಲಭ್ಯವಿದ್ದು, ಸೊಲ್ ಹ್ಯಾಚ್‌ಬ್ಯಾಕ್ ಕೂಡಾ ರೂ. 8 ಲಕ್ಷದಿಂದ ರೂ.12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಲ್ಲಿದೆ.

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ನಿರ್ಮಾಣದ ನಾಲ್ಕನೇ ಕಾರು ಮಾದರಿ..!

ಇನ್ನು ಸೊಲ್ ಎಲೆಕ್ಟ್ರಿಕ್ ಮಾದರಿಯು ಕೂಡಾ ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದ್ದು, ಪ್ರತಿ ಚಾರ್ಚ್‌ಗೆ 450ಕಿ.ಮೀ ಮೈಲೇಜ್ ನೀಡಲಿರುವ ಹೊಸ ಕಾರು ರೂ.12 ಲಕ್ಷದಿಂದ ರೂ.15 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

2021ಕ್ಕೆ ಬಿಡುಗಡೆಯಾಗಲಿದೆ ಕಿಯಾ ನಿರ್ಮಾಣದ ನಾಲ್ಕನೇ ಕಾರು ಮಾದರಿ..!

ಸದ್ಯ ಸೊನೆಟ್ ಬಿಡುಗಡೆ ಮಾಡುವ ತನಕ ಯಾವುದೇ ಹೊಸ ಕಾರು ಉತ್ಪನ್ನಗಳ ಬಿಡುಗಡೆಯ ಯೋಜನೆ ರೂಪಿಸದ ಕಿಯಾ ಮೋಟಾರ್ಸ್ ಕಂಪನಿಯು 4ನೇ ಕಾರು ಮಾದರಿಯನ್ನು 2021ರ ಆರಂಭದಲ್ಲಿ ಬಿಡುಗಡೆ ಮಾಡುವುದು ಬಹುತೇಕ ಖಚಿತ ಎನ್ನಬಹುದು.

Most Read Articles

Kannada
English summary
Kia Motors To Launch Its Fourth Model In India Next Year. Read in kannada.
Story first published: Friday, May 29, 2020, 20:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X