ರೋಬೋಟ್ ಮೂಲಕ ಹೊಸ ಕಾರಿನ ವಿತರಣೆ ಪಡೆದು ಗಮನಸೆಳೆದ ಗ್ರಾಹಕ

ಆಧುನಿಕ ತಂತ್ರಜ್ಞಾನ ಯುಗದಲ್ಲಿ ರೋಬೋಟ್‌ಗಳು ಬಳಕೆಯಾಗದ ಕ್ಷೇತ್ರಗಳೇ ಇಲ್ಲ ಎನ್ನಬಹುದು. ವೈಜ್ಞಾನಿಕ ಕ್ಷೇತ್ರದಲ್ಲಿ ಮಾತ್ರವಲ್ಲದೇ ಸಾರ್ವಜನಿಕ ಸೇವೆಗಳಲ್ಲೂ ರೋಬೋಟೊಗಳನ್ನು ಬಳಕೆ ಮಾಡಲಾಗುತ್ತಿದ್ದು, ಇತ್ತೀಚೆಗೆ ಗ್ರಾಹಕರೊಬ್ಬರು ಕಾರು ವಿತರಣೆ ಪಡೆದುಕೊಳ್ಳಲು ರೊಬೊಟ್ ಬಳಕೆ ಮಾಡಿ ಗಮನಸೆಳೆದಿದ್ದಾರೆ.

ರೋಬೋಟ್ ಮೂಲಕ ಹೊಸ ಕಾರಿನ ವಿತರಣೆ ಪಡೆದು ಗಮನಸೆಳೆದ ಗ್ರಾಹಕ

ಕಿಯಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿದ್ದು, ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಕಂಪ್ಯಾಕ್ಟ್ ಎಸ್‌ಯವಿ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದೆ. ದೇಶದ ಪ್ರಮುಖ ರಾಜ್ಯಗಳಲ್ಲಿ ಸೊನೆಟ್ ಕಾರು ಖರೀದಿಗಾಗಿ ಇದುವರೆಗೆ ಸುಮಾರು 70 ಸಾವಿರಕ್ಕೂ ಅಧಿಕ ಬುಕ್ಕಿಂಗ್ ದಾಖಲಾಗಿದ್ದು, ಪ್ರಮುಖ ಕಿಯಾ ಶೋರೂಂಗಳಲ್ಲಿ ಸೊನೆಟ್ ವಿತರಣೆಯು ಸಿಕ್ಕಾಪಟ್ಟೆ ಜೋರಾಗಿದೆ.

ರೋಬೋಟ್ ಮೂಲಕ ಹೊಸ ಕಾರಿನ ವಿತರಣೆ ಪಡೆದು ಗಮನಸೆಳೆದ ಗ್ರಾಹಕ

ಸೊನೆಟ್ ವಿತರಣೆ ವೇಳೆ ಹಲವು ಕಡೆಗಳಲ್ಲಿ ವಿಭಿನ್ನ ಪರಿಕಲ್ಪನೆಗಳಲ್ಲಿ ಹೊಸ ಕಾರನ್ನು ಗ್ರಾಹಕರಿಗೆ ಹಸ್ತಾಂತರ ಮಾಡಲಾಗುತ್ತಿದ್ದು, ಕೇರಳದಲ್ಲಿ ಗ್ರಾಹಕರೊಬ್ಬರು ರೋಬೋಟ್ ಮೂಲಕ ಕಾರಿನ ವಿತರಣೆ ಪಡೆದುಕೊಂಡು ಗಮನಸೆಳೆದಿದ್ದಾರೆ.

ರೋಬೋಟ್ ಮೂಲಕ ಹೊಸ ಕಾರಿನ ವಿತರಣೆ ಪಡೆದು ಗಮನಸೆಳೆದ ಗ್ರಾಹಕ

ಕರೋನಾ ವೈರಸ್ ಹರಡುವಿಕೆಯನ್ನು ತಪ್ಪಿಸಲು ಸಾಮಾಜಿಕ ಅಂತರವು ಪ್ರಮುಖ ಮುಂಜಾಗ್ರತ ಕ್ರಮವಾಗಿದ್ದು, ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ಗರಿಷ್ಠ ಸುರಕ್ಷತೆ ಖಾತ್ರಿಪಡಿಸಲು ಯಂತ್ರ ಮಾನವರ ಬಳಕೆಯು ಹೊಸ ಪರಿಹಾರವಾಗುವುದರಲ್ಲಿ ಎರಡು ಮಾತಿಲ್ಲ.

ರೋಬೋಟ್ ಮೂಲಕ ಹೊಸ ಕಾರಿನ ವಿತರಣೆ ಪಡೆದು ಗಮನಸೆಳೆದ ಗ್ರಾಹಕ

ಗಣಕ ಕ್ರಮವಿಧಿ ಅಥವಾ ವಿದ್ಯುನ್ಮಂಡಲದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವ ರೋಬೋಟ್‌ಗಳು ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯಲು ಪ್ರಮುಖ ಸಾಧನವಾಗಲಿದೆ ಎಂಬುವುದನ್ನು ಪ್ರದರ್ಶಿಸಲು ಕಾರು ವಿತರಣೆಗಾಗಿ ಬಳಕೆ ಮಾಡಲಾಗಿದೆ. ಸಯಾಬೊಟ್ ಹೆಸರಿನಿಂದ ಕರೆಯಲ್ಪಡುವ ಈ ರೋಬೋಟ್ ಗ್ರಾಹಕ ಜಯಕೃಷ್ಣನ್ ಪರವಾಗಿ ಕಾರಿನ ವಿತರಣೆಯನ್ನು ಪಡೆದುಕೊಂಡಿದೆ.

ರೋಬೋಟ್ ಮೂಲಕ ಹೊಸ ಕಾರಿನ ವಿತರಣೆ ಪಡೆದು ಗಮನಸೆಳೆದ ಗ್ರಾಹಕ

ಕಿಯಾ ಸೊನೆಟ್ ಕಾರು ಖರೀದಿಸಿದ ಗ್ರಾಹಕ ಜಯಕೃಷ್ಣನ್ ಅವರು ಕೇರಳದ ಕೊಚ್ಚಿ ಮೂಲದ ಅಸಿಮೊವ್ ರೊಬೊಟಿಕ್ಸ್ ಕಂಪನಿಯಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಾವೇ ಅಭಿವೃದ್ದಿಪಡಿಸಿದ ಸಯಾಬೊಟ್ ಮೂಲಕ ಅತಿಕಡಿಮೆ ಮಾನವ ಸಂಪರ್ಕದೊಂದಿಗೆ ಹೊಸ ಕಾರಿನ ಕೀ ಪಡೆದುಕೊಂಡಿದ್ದಾರೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ರೋಬೋಟ್ ಮೂಲಕ ಹೊಸ ಕಾರಿನ ವಿತರಣೆ ಪಡೆದು ಗಮನಸೆಳೆದ ಗ್ರಾಹಕ

ರೋಬೋಟ್ ಮೂಲಕ ಕಾರಿನ ವಿತರಣೆ ಪಡೆದುಕೊಂಡಿರುವ ಸುದ್ದಿ ಇದೀಗ ದೇಶ ವಿದೇಶಿಗಳಲ್ಲೂ ಸಾಕಷ್ಟು ಸುದ್ದಿಯಾಗುತ್ತಿದ್ದು, ಭವಿಷ್ಯದಲ್ಲಿ ರೋಬೋಟ್‌ಗಳನ್ನು ಇನ್ನು ಹೇಗೆಲ್ಲಾ ಬಳಕೆ ಮಾಡಿಕೊಳ್ಳಲಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ.

ಇನ್ನು ಕಿಯಾ ಮೋಟಾರ್ಸ್ ನಿರ್ಮಾಣದ ಮೂರನೇ ಕಾರು ಮಾದರಿಯಾಗಿ ಬಿಡುಗಡೆಯಾಗಿರುವ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ಕಾರು 1.2-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌‌ನೊಂದಿಗೆ ಆಕರ್ಷಕ ಬೆಲೆ ಪಡೆದುಕೊಂಡಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ರೋಬೋಟ್ ಮೂಲಕ ಹೊಸ ಕಾರಿನ ವಿತರಣೆ ಪಡೆದು ಗಮನಸೆಳೆದ ಗ್ರಾಹಕ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸೊನೆಟ್ ಕಾರು ಆರಂಭಿಕವಾಗಿ ರೂ. 6.71 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.89 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರನ್ನು ಜಿಟಿ-ಲೈನ್ ಮತ್ತು ಟೆಕ್-ಲೈನ್ ವೆರಿಯೆಂಟ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.

Most Read Articles

Kannada
English summary
Kia Sonet Delivery Taken By A Human-Robot In Kerala. Read in Kannada.
Story first published: Monday, November 23, 2020, 20:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X