Just In
- 21 min ago
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- 1 hr ago
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- 2 hrs ago
2020ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾದ ಟಾಟಾ ಹ್ಯಾರಿಯರ್
- 3 hrs ago
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Movies
ಫೆಬ್ರವರಿ ಟು ಮೇ: ಸ್ಟಾರ್ಸ್ ಚಿತ್ರಗಳ ರಿಲೀಸ್ ದಿನಾಂಕ ಫಿಕ್ಸ್, ಡೇಟ್ ಈಗಲೇ ಲಾಕ್ ಮಾಡ್ಕೊಳ್ಳಿ!
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಶಿಷ್ಟ ರೀತಿಯಲ್ಲಿ ಹೊಸ ಸೂಪರ್ ಕಾರನ್ನು ವಿತರಿಸಿದ ಲ್ಯಾಂಬೊರ್ಗಿನಿ
ಸಿಯಾನ್, ಲ್ಯಾಂಬೊರ್ಗಿನಿ ಕಂಪನಿಯ ಹೊಸ ಸೂಪರ್ ಕಾರು. ಈ ಕಾರಿನ ವಿತರಣಾ ಕಾರ್ಯಕ್ರಮವನ್ನು ಇತ್ತೀಚೆಗೆ ಉತ್ತರ ಅಮೆರಿಕಾದಲ್ಲಿ ಆಯೋಜಿಸಲಾಗಿತ್ತು. ಉತ್ತರ ಅಮೆರಿಕಾದಲ್ಲಿ ವಿತರಣೆಯಾದ ಮೊದಲ ಸಿಯಾನ್ ಕಾರ್ ಆದ ಕಾರಣ ಈ ಕಾರ್ಯಕ್ರಮವು ವಿಶಿಷ್ಟವಾಗಿ ಆಯೋಜಿಸಲಾಗಿತ್ತು.

ಯಾವುದೇ ಕಂಪನಿಯು ಈ ಮೊದಲು ಈ ರೀತಿಯಲ್ಲಿ ಕಾರನ್ನು ವಿತರಿಸಿರಲಿಲ್ಲ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಈ ಕಾರ್ಯಕ್ರಮವು ಜಗತ್ತಿನ ಕಾರು ಪ್ರಿಯರ ಗಮನ ಸೆಳೆದಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಈ ಅವಧಿಯನ್ನು ಉತ್ತರ ಅಮೆರಿಕಾದಲ್ಲಿ ಹಬ್ಬದ ಋತುಮಾನವೆಂದು ಪರಿಗಣಿಸಲಾಗುತ್ತದೆ.

ಮರದಿಂದ ತಯಾರಿಸಲಾಗಿದ್ದ ದೊಡ್ಡ ಗಿಫ್ಟ್ ಬಾಕ್ಸ್ ಮೂಲಕ ಈ ಸಿಯಾನ್ ಸೂಪರ್ ಕಾರನ್ನು ಮಾಲೀಕರಿಗೆ ವಿತರಿಸಲಾಯಿತು. ಈ ಗಿಫ್ಟ್ ಬಾಕ್ಸ್ ಅನ್ನು ಹೇಗೆ ಅಲಂಕರಿಸಬೇಕೆಂಬುದನ್ನು ಪ್ರಸ್ತುತಪಡಿಸಲಾಯಿತು.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಲ್ಯಾಂಬೊರ್ಗಿನಿ ಕಂಪನಿಯು ಈ ಕಾರನ್ನು ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟ ಮಾಡಲು ನಿರ್ಧರಿಸಿದೆ. ಈ ಕಾರಿನ ಕೇವಲ 63 ಯೂನಿಟ್'ಗಳನ್ನು ಮಾತ್ರ ಉತ್ಪಾದಿಸಿ ಮಾರಾಟ ಮಾಡಲಾಗುವುದು. ಈ ಪೈಕಿ ಮೊದಲ ಕಾರನ್ನು ಉತ್ತರ ಅಮೆರಿಕಾದಲ್ಲಿ ವಿತರಿಸಲಾಗಿದೆ.

ಲ್ಯಾಂಬೊರ್ಗಿನಿ ಕಂಪನಿಯು ಸಿಯಾನ್ ಕಾರಿನಲ್ಲಿ 6.5 ಲೀಟರಿನ ವಿ 12 ಎಂಜಿನ್ ಅನ್ನು ಅಳವಡಿಸಿದೆ. ಮೈಲ್ಡ್ ಹೈಬ್ರಿಡ್ ಸಿಸ್ಟಂ ಅನ್ನು ಈ ಎಂಜಿನ್ ಗರಿಷ್ಠ 808 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೈಬ್ರಿಡ್ ಸಿಸ್ಟಂ 48 ವೋಲ್ಟ್‌ಗಳವರೆಗೆ ಪವರ್ ಉತ್ಪಾದಿಸುತ್ತದೆ. 34 ಹೆಚ್‌ಪಿ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟರ್ ಹೊಂದಿರುವ ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 350 ಕಿ.ಮೀಗಳಾಗಿದೆ.

ಈ ಕಾರು 2.8 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನ ಬೆಲೆ 3.6 ದಶಲಕ್ಷ ಅಮೆರಿಕನ್ ಡಾಲರ್ ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.26.34 ಕೋಟಿಗಳಾಗುತ್ತದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಲ್ಯಾಂಬೊರ್ಗಿನಿ ಕಂಪನಿಯ ಇತರ ಸುದ್ದಿಗಳ ಬಗ್ಗೆ ಹೇಳುವುದಾದರೆ ಕಂಪನಿಯು ತನ್ನ ಜನಪ್ರಿಯ ಸೂಪರ್ ಕಾರು ಮಾದರಿಯಾದ ಹುರಾಕನ್ ಆವೃತ್ತಿಯ ರೇಸಿಂಗ್ ತಂತ್ರಜ್ಞಾನವನ್ನು ಹೊಂದಿರುವ ಹುರಾಕನ್ ಎಸ್‌ಟಿಒ ಮಾದರಿಯನ್ನು ಜಾಗತಿಕ ಮಾರುಕಟ್ಟೆಗಾಗಿ ನವೆಂಬರ್ ತಿಂಗಳಿನಲ್ಲಿ ಅನಾವರಣಗೊಳಿಸಿತ್ತು.

ಸತತ ಮೂರು ವರ್ಷಗಳ 24 ಅವರ್ಸ್ ಡೇಟೋನಾ ರೇಸಿಂಗ್ ಸರಣಿ ಗೆದ್ದಿರುವ ಜಿಟಿ3 ಕಾರು ಮಾದರಿಯು ಸೂಪರ್ ಕಾರುಗಳ ವಿಭಾಗದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿದ್ದು, ರೇಸ್ ಟ್ರ್ಯಾಕ್‌ನಿಂದ ಇದೀಗ ಸಾಮಾನ್ಯ ರಸ್ತೆಗೂ ಪ್ರವೇಶಿಸುತ್ತಿರುವುದು ಸೂಪರ್ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ರೇಸಿಂಗ್ ತಂತ್ರಜ್ಞಾನದ ಭಾಗವಾಗಿ ಹೊಸ ಹುರಾಕನ್ ಎಸ್‌ಟಿಒ ಸೂಪರ್ ಕಾರು ಮಾದರಿಯನ್ನು ಶೇ.75 ರಷ್ಟು ಕಾರ್ಬನ್ ಫೈಬರ್‌ನೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಇದು ಕಾರಿನ ತೂಕ ಇಳಿಕೆಯ ಮಾಡುವ ಮೂಲಕ ಪರ್ಫಾಮೆನ್ಸ್ ಹೆಚ್ಚಿಸುವ ಪ್ರಮುಖ ಅಂಶವಾಗಿದೆ.

ಈ ಮೂಲಕ ಹುರಾಕನ್ ಪರ್ಫಾರ್ಮೆಂಟ್ ಕಾರಿಗಿಂತಲೂ 43 ಕಿ.ಮಿ ಕಡಿಮೆ ತೂಕ ಹೊಂದಿರುವ ಹುರಾಕನ್ ಎಸ್ಟಿಒ ಕಾರು ಮಾದರಿಯು ಒಟ್ಟು 1,339 ಕೆಜಿ ತೂಕ ಹೊಂದಿದ್ದು, ಹೊರ ಭಾಗದ ವಿನ್ಯಾಸಗಳಿಗಾಗಿ ಹಳೆಯ ಸೂಪರ್ ಕಾರು ಮಾದರಿಗಳಾದ ಮಿಯುರಾ ಮತ್ತು ಸೆಸ್ಟೊ ಎಲಿಮೆಂಟೊಗಳಿಂದಲೂ ಹೊಸ ಕಾರು ಸ್ಫೂರ್ತಿ ಪಡೆದಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸಾಂಪ್ರದಾಯಿಕ ಸೂಪರ್ ಕಾರು ಮಾದರಿಗಳಂತೆಯೇ ಹುರಾಕನ್ ಎಸ್ಟಿಒ ಕಾರು ಸಿಂಗಲ್-ಪೀಸ್ ಬಾಡಿ ಪ್ಯಾನೆಲ್‌ನೊಂದಿಗೆ ಅಭಿವೃದ್ದಿಗೊಂಡಿದ್ದು, ಇದರಲ್ಲಿ ಮುಂಭಾಗದ ಬಾನೆಟ್, ಫೆಂಡರ್ ಮತ್ತು ಫ್ರಂಟ್ ಬಂಪರ್ ಗಳಿವೆ. ಇದನ್ನು ಲ್ಯಾಂಬೊರ್ಗಿನಿ ಕಂಪನಿಯು 'ಕೋಫಂಗೊ' ಎಂದು ಹೆಸರಿಸಿದ್ದು, ಹೊಸ ಕಾರಿಗೆ ಮತ್ತಷ್ಟು ಬಲಿಷ್ಠತೆ ನೀಡುತ್ತದೆ.