ಲೆಕ್ಸಸ್ ಎಲ್‌ಸಿ500ಹೆಚ್ ಹೈಬ್ರಿಡ್ ಕೂಪೆ ಬಿಡುಗಡೆ- ಬೆಲೆ ರೂ.1.96 ಕೋಟಿ..!

ಟೊಯೊಟಾ ಒಡೆತನದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಲೆಕ್ಸಸ್ ತನ್ನ ಬಹುನೀರಿಕ್ಷಿತ ಎಲ್‌ಸಿ500ಹೆಚ್ ಹೈಬ್ರಿಡ್ ಕೂಪೆ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.96 ಕೋಟಿ ಬೆಲೆ ಹೊಂದಿದೆ.

ಲೆಕ್ಸಸ್ ಎಲ್‌ಸಿ500ಹೆಚ್ ಹೈಬ್ರಿಡ್ ಕೂಪೆ ಬಿಡುಗಡೆ- ಬೆಲೆ ರೂ.1.96 ಕೋಟಿ..!

ಲೆಕ್ಸಸ್ ಇಂಡಿಯಾ ಸಂಸ್ಥೆಯು ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಆರ್‌ಎಕ್ಸ್ ಸೆಡಾನ್, ಎಲ್ಎಸ್ ಸೆಡಾನ್, ಎಲ್ಎಕ್ಸ್ ಎಸ್‌ಯುವಿ, ಎನ್ಎಕ್ಸ್ ಎಸ್‌ಯುವಿ, ಇಎಸ್ ಸೆಡಾನ್ ಕಾರು ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಕೂಪೆ ಕಾರು ಮಾದರಿಯಾದ ಎಲ್‌ಸಿ500ಹೆಚ್ ಹೈಬ್ರಿಡ್ ಆವೃತ್ತಿಯನ್ನು ಸೇರ್ಪಡೆಗೊಳಿಸಿದೆ. ಹೊಸ ಕಾರು ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಿವಿಧ ಮಾದರಿಗಳೊಂದಿಗೆ ಮಾರಾಟವಾಗುತ್ತಿದ್ದು, ಮೊದಲ ಬಾರಿಗೆ ಭಾರತದಲ್ಲೂ ಬಿಡುಗಡೆಗೊಂಡಿದೆ.

ಲೆಕ್ಸಸ್ ಎಲ್‌ಸಿ500ಹೆಚ್ ಹೈಬ್ರಿಡ್ ಕೂಪೆ ಬಿಡುಗಡೆ- ಬೆಲೆ ರೂ.1.96 ಕೋಟಿ..!

ಕೇಂದ್ರ ಸರ್ಕಾರವು ಆಮದು ನೀತಿಯಲ್ಲಿ ಜಾರಿಗೆ ತಂದಿರುವ ಕೆಲವು ಹೊಸ ವಿನಾಯ್ತಿಗಳು ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಪೂರಕವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಯಾವುದೇ ಷರತ್ತುಗಳಿಲ್ಲದೇ ವಾರ್ಷಿಕವಾಗಿ 2,500 ವಾಹನಗಳನ್ನು ಆಮದುಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಬಹುದಾಗಿದೆ.

ಲೆಕ್ಸಸ್ ಎಲ್‌ಸಿ500ಹೆಚ್ ಹೈಬ್ರಿಡ್ ಕೂಪೆ ಬಿಡುಗಡೆ- ಬೆಲೆ ರೂ.1.96 ಕೋಟಿ..!

ಇದರಿಂದ ಭಾರತದಲ್ಲಿ ಕಾರು ಮಾರಾಟ ಮಾಡುತ್ತಿರುವ ಬಹುತೇಕ ವಿದೇಶಿ ವಾಹನ ಉತ್ಪಾದನಾ ಸಂಸ್ಥೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ತಮ್ಮ ಜನಪ್ರಿಯವಾಗಿರುವ ವಾಹನ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲೂ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಇದೀಗ ಲೆಕ್ಸಸ್ ಕೂಡಾ ಹೊಸ ಆಮದು ನೀತಿಯಡಿಯಲ್ಲೇ ಎಲ್‌ಸಿ500ಹೆಚ್ ಹೈಬ್ರಿಡ್ ಕೂಪೆ ಬಿಡುಗಡೆ ಮಾಡಿದೆ.

ಲೆಕ್ಸಸ್ ಎಲ್‌ಸಿ500ಹೆಚ್ ಹೈಬ್ರಿಡ್ ಕೂಪೆ ಬಿಡುಗಡೆ- ಬೆಲೆ ರೂ.1.96 ಕೋಟಿ..!

ಟೂ ಡೋರ್ ಕೂಪೆ ಮಾದರಿಯಾಗಿರುವ ಎಲ್‌ಸಿ500ಹೆಚ್ ಹೈಬ್ರಿಡ್ ಕಾರು ಮಾದರಿಯು ಬಲಿಷ್ಠ ಸೂಪರ್ ಕಾರುಗಳಲ್ಲಿ ಒಂದಾಗಿದ್ದು, ಲೆಕ್ಸಸ್ ನಿರ್ಮಾಣದ ಮತ್ತೊಂದು ಜನಪ್ರಿಯ ಸೂಪರ್ ಕಾರು ಆವೃತ್ತಿಯಾದ ಎಲ್ಎಫ್ಎ ಡಿಸೈನ್ ಪ್ರೇರಣೆ ಹೊಂದಿದೆ. ಹೊಸ ಕಾರಿನಲ್ಲಿ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಲ್ಲ ಟಚ್ ಪ್ಯಾಡ್ ಪ್ರೇರಿತ 10.3-ಇಂಚಿನ ಇನ್ಪೋಟೈನ್‌ಮೆಂಟ್, ಪೂರ್ಣಪ್ರಮಾಣದ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್, ಹತ್ತು ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಆಸನ ಸೌಲಭ್ಯವಿದೆ.

ಲೆಕ್ಸಸ್ ಎಲ್‌ಸಿ500ಹೆಚ್ ಹೈಬ್ರಿಡ್ ಕೂಪೆ ಬಿಡುಗಡೆ- ಬೆಲೆ ರೂ.1.96 ಕೋಟಿ..!

ಹಾಗೆಯೇ ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಲೆಕ್ಸಸ್ ಸಂಸ್ಥೆಯೇ ಅಧಿಕೃತವಾಗಿ ಮಾಡಿಫೈ ಕೂಡಾ ಮಾಡಿಕೊಡಲಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳ ಜೊತೆಗೆ ಬಲಿಷ್ಠ ಎಂಜಿನ್ ಕೂಡಾ ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಲೆಕ್ಸಸ್ ಎಲ್‌ಸಿ500ಹೆಚ್ ಹೈಬ್ರಿಡ್ ಕೂಪೆ ಬಿಡುಗಡೆ- ಬೆಲೆ ರೂ.1.96 ಕೋಟಿ..!

ಎಂಜಿನ್ ಸಾಮರ್ಥ್ಯ

3.6-ಲೀಟರ್(3,600 ಸಿಸಿ) ವಿ6 ಪೆಟ್ರೋಲ್ ಎಂಜಿನ್‌ ಹೊಂದಿರುವ ಎಲ್‌ಸಿ500ಹೆಚ್ ಕಾರು 4-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್‌ನೊಂದಿಗೆ ಹಿಂಭಾಗ ಚಕ್ರಗಳಿಗೆ ಶಕ್ತಿ ಪೂರೈಸುವ ಮೂಲಕ 300-ಬಿಎಚ್‌ಪಿ ಮತ್ತು 348-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಲೆಕ್ಸಸ್ ಎಲ್‌ಸಿ500ಹೆಚ್ ಹೈಬ್ರಿಡ್ ಕೂಪೆ ಬಿಡುಗಡೆ- ಬೆಲೆ ರೂ.1.96 ಕೋಟಿ..!

ಹಾಗೆಯೇ ಹೊಸ ಕಾರು ಎಲೆಕ್ಟ್ರಿಕ್ ಮೋಟಾರ್ ಪ್ರೇರಣೆಯೊಂದಿಗೆ(ಹೈಬ್ರಿಡ್ ಎಂಜಿನ್‌) 354-ಬಿಎಚ್‌ಪಿ ಉತ್ಪಾದನೆ ಮಾಡಲಿದ್ದು, 4.7-ಸೇಕೆಂಡ್‌ಗಳಲ್ಲಿ ಸೊನ್ನೆಯಿಂದ 100ಕಿ.ಮೀ ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಲೆಕ್ಸಸ್ ಎಲ್‌ಸಿ500ಹೆಚ್ ಹೈಬ್ರಿಡ್ ಕೂಪೆ ಬಿಡುಗಡೆ- ಬೆಲೆ ರೂ.1.96 ಕೋಟಿ..!

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್‌ಸಿ500ಹೆಚ್ ಹೈಬ್ರಿಡ್ ಕೂಪೆ ಮಾದರಿಯು 477-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲ 5-0-ಲೀಟರ್(5,000 ಸಿಸಿ) ವಿ8 ಪೆಟ್ರೋಲ್ ಹೊಂದಿದ್ದು, ಭಾರತದಲ್ಲಿ ಮಾತ್ರ 3.6-ಲೀಟರ್ ವಿ6 ಎಂಜಿನ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದೆ.

ಲೆಕ್ಸಸ್ ಎಲ್‌ಸಿ500ಹೆಚ್ ಹೈಬ್ರಿಡ್ ಕೂಪೆ ಬಿಡುಗಡೆ- ಬೆಲೆ ರೂ.1.96 ಕೋಟಿ..!

ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಜಾಗ್ವಾರ್ ಎಫ್-ಟೈಪ್ ವಿ8, ಬೆಂಟ್ಲಿ ಕಾಂಟಿನೆಂಟಲ್, ಮರ್ಸಿಡಿಸ್-ಎಎಂಜಿ ಜಿಟಿ ಕಾರುಗಳಿಗೆ ಪ್ರಬಲ ಪೈಪೋಟಿ ನೀಡಲಿದ್ದು, ಎಲ್‌ಸಿ500ಹೆಚ್ ಮೂಲಕ ಸೂಪರ್ ಕಾರು ಮಾರಾಟದಲ್ಲಿ ಲೆಕ್ಸಸ್ ಹೊಸ ಸಂಚಲನಕ್ಕೆ ಕಾರಣವಾಗಿದೆ.

Most Read Articles

Kannada
English summary
Lexus LC500h Launched In India At Rs 1.96 Crore. Read in Kannada.
Story first published: Friday, January 31, 2020, 14:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X