ಕರೋನಾ ವೈರಸ್ ಎಫೆಕ್ಟ್: ರೂ.700 ಕೋಟಿ ರಸ್ತೆ ತೆರಿಗೆ ಮನ್ನಾ

ಕರೋನಾ ಸಾಂಕ್ರಾಮಿಕದಿಂದಾಗಿ ತತ್ತರಿಸಿರುವ ಕಮರ್ಷಿಯಲ್ ವಾಹನಗಳ ಚಾಲಕರಿಗೆ ಮಹಾರಾಷ್ಟ್ರ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದೆ. ಮಹಾರಾಷ್ಟ್ರದಲ್ಲಿರುವ 11.4 ಲಕ್ಷ ಕಮರ್ಷಿಯಲ್ ವಾಹನಗಳು ಪಾವತಿಸಬೇಕಿದ್ದ ರೂ.700 ಕೋಟಿಗಳನ್ನು ಮಹಾರಾಷ್ಟ್ರ ಸರ್ಕಾರವು ಮನ್ನಾ ಮಾಡಿದೆ.

ಕರೋನಾ ವೈರಸ್ ಎಫೆಕ್ಟ್: ರೂ.700 ಕೋಟಿ ರಸ್ತೆ ತೆರಿಗೆ ಮನ್ನಾ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ಪಾವತಿಸಬೇಕಿದ್ದ ರಸ್ತೆ ತೆರಿಗೆಯನ್ನು ಮನ್ನಾ ಮಾಡಿದ್ದಾರೆ. ಕಮರ್ಷಿಯಲ್ ವಾಹನ ಮಾಲೀಕರಿಂದ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗಿನ ಅವಧಿಗೆ ರಸ್ತೆ ತೆರಿಗೆ ವಸೂಲಿ ಮಾಡದಂತೆ ಎಲ್ಲಾ ಆರ್‌ಟಿಒ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ಕರೋನಾ ವೈರಸ್ ಎಫೆಕ್ಟ್: ರೂ.700 ಕೋಟಿ ರಸ್ತೆ ತೆರಿಗೆ ಮನ್ನಾ

ಟ್ರಕ್, ಆಟೋ, ಟ್ಯಾಕ್ಸಿ, ಶಾಲಾ ಬಸ್, ಖಾಸಗಿ ಬಸ್ ಹಾಗೂ ಇತರ ಹಲವು ವಾಹನಗಳು ಸೇರಿದಂತೆ ಮಹಾರಾಷ್ಟ್ರದಲ್ಲಿ 11.4 ಲಕ್ಷ ನೋಂದಾಯಿತ ಕಮರ್ಷಿಯಲ್ ವಾಹನಗಳಿವೆ. ಲಾಕ್‌ಡೌನ್ ಜಾರಿಯಾದ ನಂತರ ಖಾಸಗಿ ಬಸ್, ಟ್ರಕ್ ಹಾಗೂ ಇನ್ನಿತರ ಕಮರ್ಷಿಯಲ್ ವಾಹನ ಚಾಲಕರು ಭಾರಿ ನಷ್ಟವನ್ನು ಅನುಭವಿಸಿದ್ದು, ಈ ಅವಧಿಯಲ್ಲಿ ಅವರ ಗಳಿಕೆಯ ಮೇಲೆ ಪರಿಣಾಮ ಬೀರಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕರೋನಾ ವೈರಸ್ ಎಫೆಕ್ಟ್: ರೂ.700 ಕೋಟಿ ರಸ್ತೆ ತೆರಿಗೆ ಮನ್ನಾ

ಈ ಕಾರಣಕ್ಕೆ ಕಮರ್ಷಿಯಲ್ ವಾಹನಗಳ ಆಪರೇಟರ್ ಗಳು ಹಾಗೂ ಸಂಸ್ಥೆಗಳು ತೆರಿಗೆ ವಿನಾಯಿತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದವು. ಗುಜರಾತ್, ರಾಜಸ್ಥಾನ, ಉತ್ತರಾಖಂಡ್ ಹಾಗೂ ಹರಿಯಾಣ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಎಲ್ಲಾ ರೀತಿಯ ಕಮರ್ಷಿಯಲ್ ವಾಹನಗಳಿಗೆ ರಸ್ತೆ ತೆರಿಗೆಯನ್ನು ಮನ್ನಾ ಮಾಡಿವೆ.

ಕರೋನಾ ವೈರಸ್ ಎಫೆಕ್ಟ್: ರೂ.700 ಕೋಟಿ ರಸ್ತೆ ತೆರಿಗೆ ಮನ್ನಾ

ಮಹಾರಾಷ್ಟ್ರದಲ್ಲಿ ಕಮರ್ಷಿಯಲ್ ವಾಹನಗಳು ವರ್ಷಕ್ಕೊಮ್ಮೆ ದೊಡ್ಡ ಮೊತ್ತದ ತೆರಿಗೆ ಪಾವತಿಸಬೇಕು. ಇತರ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು ಪ್ರತಿ ತಿಂಗಳು ತೆರಿಗೆ ಪಾವತಿಸುತ್ತವೆ ಎಂದು ಆರ್‌ಟಿಒ ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಈಗ ಆರು ತಿಂಗಳವರೆಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕರೋನಾ ವೈರಸ್ ಎಫೆಕ್ಟ್: ರೂ.700 ಕೋಟಿ ರಸ್ತೆ ತೆರಿಗೆ ಮನ್ನಾ

ಸಾರಿಗೆ ಇಲಾಖೆಯು ವಾಹನಗಳಿಂದ ಯಾವುದೇ ತೆರಿಗೆಯನ್ನು ಪಡೆಯುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಮಾರಾಟ ಪ್ರಮಾಣವು ಕಡಿಮೆಯಾಗಿರುವುದರಿಂದ ಸರ್ಕಾರದ ಆದಾಯವೂ ಕಡಿಮೆಯಾಗಿದೆ. ವಿಮಾ ಉದ್ಯಮವೂ ತೊಂದರೆಯಲ್ಲಿದೆ. ಅನೇಕ ವಾಹನ ಮಾಲೀಕರು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ವಾಹನಗಳನ್ನು ಖರೀದಿಸಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ರೂ.700 ಕೋಟಿ ರಸ್ತೆ ತೆರಿಗೆ ಮನ್ನಾ

ರಸ್ತೆ ತೆರಿಗೆ ಪಾವತಿಗೆ ವಿನಾಯಿತಿ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರದ ಮೇಲಿನ ಸಾಲದ ಹೊರೆ ರೂ.5.4 ಲಕ್ಷ ಕೋಟಿಗಳನ್ನು ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ ಮಹಾರಾಷ್ಟ್ರ ಸರ್ಕಾರವು ವಿದ್ಯುತ್ ಗ್ರಾಹಕರ ರೂ.1600 ಕೋಟಿ ಮನ್ನಾ ಮಾಡುವ ಚಿಂತನೆಯಲ್ಲಿದೆ.

Most Read Articles

Kannada
English summary
Maharashtra government waives off Rs 700 crore road tax of commercial vehicles. Read in Kannada.
Story first published: Wednesday, August 26, 2020, 13:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X