ಹೊಸ ಸರಣಿಯ ಸರ್‌ಪಂಚ್ ಪ್ಲಸ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಮಹೀಂದ್ರಾ

ಭಾರತದ ಅತಿದೊಡ್ಡ ಕೃಷಿ ಉಪಕರಣಗಳ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಹೊಸ ಸರ್‌ಪಂಚ್ ಪ್ಲಸ್ 575 ಟ್ರಾಕ್ಟರ್ ಅನ್ನು ಮಹಾರಾಷ್ಟ್ರದಲ್ಲಿ ಬಿಡುಗಡೆಗೊಳಿಸಿದೆ. ಈ ಟ್ರಾಕ್ಟರ್, ಸರ್‌ಪಂಚ್ 575 ಟ್ರಾಕ್ಟರಿನ ಅಪ್‌ಡೇಟೆಡ್ ಮಾದರಿಯಾಗಿದೆ. ಹೊಸ ಸರ್‌ಪಂಚ್ ಸರಣಿಯ ಟ್ರಾಕ್ಟರುಗಳನ್ನು 30 ಹೆಚ್‌ಪಿಯಿಂದ 50 ಹೆಚ್‌ಪಿ ವ್ಯಾಪ್ತಿಯಲ್ಲಿ ಬಿಡುಗಡೆಗೊಳಿಸಲಾಗಿದೆ.

ಹೊಸ ಸರಣಿಯ ಸರ್‌ಪಂಚ್ ಪ್ಲಸ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಮಹೀಂದ್ರಾ

ಹೊಸ ಸರ್‌ಪಂಚ್ ಸರಣಿಯ ಟ್ರಾಕ್ಟರುಗಳು ಹಳೆ ಮಾದರಿಯ ಟ್ರಾಕ್ಟರ್‌ಗಳಿಗಿಂತ 2 ಹೆಚ್‌ಪಿ ಹೆಚ್ಚು ಪವರ್ ಉತ್ಪಾದಿಸುತ್ತವೆ. ಹೊಸ ಟ್ರಾಕ್ಟರುಗಳು ಹೆಚ್ಚಿನ ಪವರ್ ಹಾಗೂ ಟಾರ್ಕ್ ಉತ್ಪಾದಿಸಲಿದ್ದು, ಕೃಷಿ ಕೆಲಸವನ್ನು ಸುಲಭಗೊಳಿಸುತ್ತವೆ ಎಂದು ಮಹೀಂದ್ರಾ ಕಂಪನಿಯು ಹೇಳಿದೆ. ಮಹೀಂದ್ರಾ ಈ ಟ್ರಾಕ್ಟರುಗಳ ಎಂಜಿನ್‌ಗಳಲ್ಲಿ ಇಎಲ್‌ಎಸ್ ತಂತ್ರಜ್ಞಾನವನ್ನು ಬಳಸಿದ್ದು, ಇದರಿಂದ ಮೈಲೇಜ್ ಹಾಗೂ ಪವರ್ ಹೆಚ್ಚಾಗಲಿದೆ.

ಹೊಸ ಸರಣಿಯ ಸರ್‌ಪಂಚ್ ಪ್ಲಸ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಮಹೀಂದ್ರಾ

ಈ ಟ್ರಾಕ್ಟರುಗಳನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಿರುವುದಾಗಿ ಮಹೀಂದ್ರಾ ಹೇಳಿದೆ. ಈ ಟ್ರಾಕ್ಟರುಗಳನ್ನು ಮಹೀಂದ್ರಾ ಕಂಪನಿಯ ಅತ್ಯಾಧುನಿಕ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗಿದೆ.ಮೇ ತಿಂಗಳಿನಲ್ಲಿ ಕಾರುಗಳ ಮಾರಾಟವು ಕುಸಿದಿದ್ದರೂ, ಮಹೀಂದ್ರಾ ಕಂಪನಿಯ ಟ್ರಾಕ್ಟರುಗಳ ಮಾರಾಟವು 2%ನಷ್ಟು ಹೆಚ್ಚಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಹೊಸ ಸರಣಿಯ ಸರ್‌ಪಂಚ್ ಪ್ಲಸ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಈ ವರ್ಷದ ಮೇ ತಿಂಗಳಿನಲ್ಲಿ 24,017 ಯುನಿಟ್ ಟ್ರಾಕ್ಟರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಮೇ ತಿಂಗಳಿನಲ್ಲಿ 23,539 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಕೃಷಿ ಕ್ಷೇತ್ರದ ಬೆಳವಣಿಗೆಯಿಂದಾಗಿ, ಲಾಕ್‌ಡೌನ್ ಜಾರಿಯಲ್ಲಿದ್ದರೂ ಟ್ರಾಕ್ಟರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ.

ಹೊಸ ಸರಣಿಯ ಸರ್‌ಪಂಚ್ ಪ್ಲಸ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಮಹೀಂದ್ರಾ

ಲಾಕ್‌ಡೌನ್‌ ಅವಧಿಯಲ್ಲಿ ಬೇಡಿಕೆಯಿಲ್ಲದ ಕಾರಣಕ್ಕೆ ಮಹೀಂದ್ರಾ ಕಂಪನಿಯ ಮೇ ತಿಂಗಳ ಪ್ರಯಾಣಿಕ ವಾಹನ ಮಾರಾಟದಲ್ಲಿ 88%ನಷ್ಟು ಕುಸಿತ ಉಂಟಾಗಿದೆ. ಮುಂದಿನ ವರ್ಷ ಮಹೀಂದ್ರಾ ಕಂಪನಿಯು ಹೊಸ ಮಾದರಿಯ ಸ್ಕಾರ್ಪಿಯೋ ಹಾಗೂ ಎಕ್ಸ್‌ಯುವಿ 500 ವಾಹನಗಳನ್ನು ಬಿಡುಗಡೆಗೊಳಿಸಲಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಹೊಸ ಸರಣಿಯ ಸರ್‌ಪಂಚ್ ಪ್ಲಸ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಈ ಎರಡೂ ಕಾರುಗಳನ್ನು ಈ ವರ್ಷದ ಆರಂಭದಿಂದಲೂ ಪರೀಕ್ಷಿಸುತ್ತಿದೆ. ಕರೋನಾ ವಾರಿಯರ್ಸ್‌ಗಳಿಗಾಗಿ ಮಹೀಂದ್ರಾ ಕಂಪನಿಯು ಆಕರ್ಷಕ ಹಣಕಾಸು ಯೋಜನೆ ಹಾಗೂ ರಿಯಾಯಿತಿಗಳನ್ನು ಘೋಷಿಸಿದೆ. ಈ ಯೋಜನೆಯಡಿ ಮಹೀಂದ್ರಾ ಕಂಪನಿಯು ವೈದ್ಯರು, ಪೊಲೀಸರು, ಸರ್ಕಾರಿ ಅಧಿಕಾರಿಗಳು ಹಾಗೂ ಅಗತ್ಯ ಸೇವೆಗಳನ್ನು ನೀಡುವವರಿಗೆ ಆಕರ್ಷಕ ಕೊಡುಗೆಗಳನ್ನು ನೀಡಲಿದೆ.

ಹೊಸ ಸರಣಿಯ ಸರ್‌ಪಂಚ್ ಪ್ಲಸ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಮಹೀಂದ್ರಾ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಈ ವರ್ಷದ ಮೇ ತಿಂಗಳಿನಲ್ಲಿ ಒಟ್ಟು 324 ಟ್ರಾಕ್ಟರುಗಳನ್ನು ರಫ್ತು ಮಾಡಿದೆ. ಕಳೆದ ವರ್ಷದ ಮೇ ತಿಂಗಳಿನಲ್ಲಿ ಕಂಪನಿಯು 1,165 ಟ್ರಾಕ್ಟರುಗಳನ್ನು ರಫ್ತು ಮಾಡಿತ್ತು. ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷದ ಮೇ ತಿಂಗಳಿನಲ್ಲಿ ಕಂಪನಿಯ ರಫ್ತು ಪ್ರಮಾಣವು 72%ನಷ್ಟು ಕಡಿಮೆಯಾಗಿದೆ.

Most Read Articles

Kannada
English summary
Mahindra launches new range Sarpanch Plus 575 tractors in Maharashtra. Read in Kannada.
Story first published: Tuesday, June 23, 2020, 14:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X