ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಮುಂದಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಭಾರತದಲ್ಲಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪನಿಯು ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಇದಕ್ಕಾಗಿ ಹೊಸ ಟೆಕ್ನಾಲಜಿಯನ್ನು ಬಳಸಲಿದೆ.

ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಮುಂದಾದ ಮಹೀಂದ್ರಾ

ಮಹೀಂದ್ರಾ ಎಲೆಕ್ಟ್ರಿಕ್‌ನ ಸಿಟಿಒ ಮಾರ್ಟಿನ್ ಮುರ್ರೆರವರು ಭಾರತದಲ್ಲಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸುವ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ ಥರ್ಮಲ್ ಮ್ಯಾನೇಜ್‌ಮೆಂಟ್‌ನೊಂದಿಗೆ ಲಿಕ್ವಿಡ್ ಕೂಲಿಂಗ್ ಅನ್ನು ಬಳಸಲಿದೆ.

ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಮುಂದಾದ ಮಹೀಂದ್ರಾ

ಈ ಬಗ್ಗೆ ಮಾತನಾಡಿದ ಅವರು ಥರ್ಮಲ್ ಮ್ಯಾನೇಜ್‌ಮೆಂಟ್‌‌ನಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ಪ್ರೊಪಲ್ಷನ್ ಸಿಸ್ಟಂ ಇರಲಿದೆ. ನಾವು ಥರ್ಮಲ್ ಬಿಹೇವಿಯರ್ ಹಾಗೂ ಹೊಸ ಟೆಕ್ನಾಲಜಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದು, ಥರ್ಮಲ್ ಸೈಡ್ ವೆಚ್ಚವನ್ನು ಕಡಿಮೆಗೊಳಿಸಿ ಗ್ರಾಹಕರಿಗೆ ಉತ್ತಮ ಮೌಲ್ಯವನ್ನು ಒದಗಿಸಬಹುದು ಎಂದು ಅವರು ಹೇಳಿದರು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಮುಂದಾದ ಮಹೀಂದ್ರಾ

ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳಲ್ಲಿ ಉಂಟಾಗುವ ವಾಯ್ಸ್ ಹಾಗೂ ವೈಬ್ರೆಷನ್ ಸಮಸ್ಯೆಯ ಬಗ್ಗೆಯೂ ಅವರು ಹೇಳಿದರು. ಎಲೆಕ್ಟ್ರಿಕ್ ಮಾದರಿ ವಿನ್ಯಾಸವು ಇ ವೇರಿಯಬಲ್ ಭಾಗಗಳನ್ನು ಹೊಂದಿರುವುದರಿಂದ ಶಬ್ದ ಬರುತ್ತದೆ. ಈ ಶಬ್ದಗಳು ಜನರಿಗೆ ತೊಂದರೆಯಾಗದಂತೆ ಅದನ್ನು ವಿನ್ಯಾಸಗೊಳಿಸಿ ಸರಿಪಡಿಸಬೇಕು ಎಂದು ಹೇಳಿದರು.

ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಮುಂದಾದ ಮಹೀಂದ್ರಾ

ಮಹೀಂದ್ರಾ ಎಲೆಕ್ಟ್ರಿಕ್ ತನ್ನ ಮೂರು ಚಕ್ರ ವಾಹನಗಳು ಹಾಗೂ ಇ-ರಿಕ್ಷಾಗಳ ಪ್ರಮುಖ ಭಾಗಗಳನ್ನು ಸ್ಥಳೀಯವಾಗಿ ಉತ್ಪಾದಿಸುತ್ತಿದೆ. ವಿನ್ಯಾಸ ಹಾಗೂ ಥರ್ಮಲ್ ವಿಶ್ಲೇಷಣೆಗಾಗಿ ಸಿಮ್ಯುಲೇಶನ್ ತಂತ್ರಜ್ಞಾನವನ್ನು ಬಳಸಿಕೊಂಡು ಕಂಪನಿಯು ಇವುಗಳನ್ನು ಉತ್ಪಾದಿಸುತ್ತಿದೆ. ಇದರಿಂದಾಗಿ ಬೆಲೆ ಕೂಡ ಕಡಿಮೆಯಾಗಲಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಮುಂದಾದ ಮಹೀಂದ್ರಾ

ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ದೇಶಿಯ ಮಾರುಕಟ್ಟೆಯಲ್ಲಿ ಇ-ಕೆಯುವಿ 100 ಕಾರ್ ಅನ್ನು ಬಿಡುಗಡೆಗೊಳಿಸಿದೆ. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ಕಾರಿನ ವಿತರಣೆಯನ್ನು ಅಲ್ಪಾವಧಿಗೆ ಮುಂದೂಡಲಾಗಿದೆ. ಮುಂಬರುವ ದಿನಗಳಲ್ಲಿ ಈ ಕಾರಿನ ವಿತರಣೆಯನ್ನು ಆರಂಭಿಸಲಾಗುವುದು.

ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಮುಂದಾದ ಮಹೀಂದ್ರಾ

ಮಹೀಂದ್ರಾ ಇ-ಕೆಯುವಿ 100 ಕಾರ್ ಅನ್ನು ಈ ವರ್ಷ ಮಾರಾಟಗಾರರಿಗೆ ತಲುಪಿಸಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಇದನ್ನು ಮುಂದೂಡಿದೆ. ಇದೇ ವೇಳೆ ಕಂಪನಿಯು ಮುಂದಿನ ಹಣಕಾಸು ವರ್ಷದಲ್ಲಿ ಮತ್ತೊಂದು ಎಲೆಕ್ಟ್ರಿಕ್ ಎಸ್‌ಯುವಿಯಾದ ಎಕ್ಸ್‌ಯುವಿ 300 ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಮುಂದಾದ ಮಹೀಂದ್ರಾ

ಮಹೀಂದ್ರಾ ಎಕ್ಸ್‌ಯುವಿ 300 ಕಾರ್ ಅನ್ನು ಮುಂದಿನ ವರ್ಷ ಬಿಡುಗಡೆಗೊಳಿಸಲಾಗುವುದು. ಕಂಪನಿಯು ಸದ್ಯಕ್ಕೆ ಇ-ಕೆಯುವಿ 100 ಎಲೆಕ್ಟ್ರಿಕ್ ಕಾರಿನತ್ತ ಗಮನ ಹರಿಸಿದ್ದು, ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Mahindra to introduce cheapest electric car says Martin Murray. Read in Kannada.
Story first published: Friday, May 29, 2020, 17:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X