ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಯೋಜನೆ ರೂಪಿಸಿದ ಮರ್ಸಿಡಿಸ್ ಬೆಂಝ್
ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಇಕ್ಯೂ ಎಲೆಕ್ಟ್ರಿಕ್ ಕಾರಿನ 6 ಹೊಸ ಮಾದರಿಗಳನ್ನು 2022ರ ಅಂತ್ಯದ ವೇಳೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಈ ವರ್ಷದ ಆರಂಭದಲ್ಲಿ ಕಂಪನಿಯು ಇಕ್ಯೂಎ, ಇಕ್ಯೂಬಿ, ಇಕ್ಯೂ ಹಾಗೂ ಇಕ್ಯೂಎಸ್ ಫ್ಲ್ಯಾಗ್‌ಶಿಪ್ ಸೆಡಾನ್ ಕಾರುಗಳನ್ನು ಇಕ್ಯೂ ಬ್ರಾಂಡ್ ಅಡಿಯಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿತ್ತು.

ಇದರ ಜೊತೆಗೆ ಕಂಪನಿಯು 2025ರ ವೇಳೆಗೆ 25 ಹೊಸ ಪ್ಲಗ್-ಇನ್ ಹೈಬ್ರಿಡ್ ಮಾದರಿಗಳನ್ನು ಬಿಡುಗಡೆಗೊಳಿಸಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೂಲಸೌಕರ್ಯಗಳ ಲಭ್ಯತೆಗೆ ಅನುಗುಣವಾಗಿ ಕಂಪನಿಯು ಈ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಸೆಡಾನ್ ಕಂಪನಿಯ ಎಸ್-ಕ್ಲಾಸ್ ಸೆಡಾನ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯಾಗಿದ್ದು, ಇಕ್ಯೂ ಸರಣಿಯಲ್ಲಿ ಮೊದಲು ಬಿಡುಗಡೆಯಾಗಲಿದೆ.

ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಕಾರನ್ನು ಜರ್ಮನಿಯ ಸ್ಪ್ರಿಂಗ್ಫೀಲ್ಡ್ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುವುದು. ಈ ಕಾರನ್ನು 2021ರ ಆರಂಭದಲ್ಲಿ ಬಿಡುಗಡೆಗೊಳಿಸಲಾಗುವುದು. ಜಿಎಲ್‌ಎ ಆಧಾರಿತ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಜರ್ಮನಿಯ ರಾಸ್ತತ್ ಘಟಕದಲ್ಲಿ ಹಾಗೂ ಚೀನಾದ ಬೀಜಿಂಗ್ ಘಟಕದಲ್ಲಿ ಉತ್ಪಾದಿಸಲಾಗುವುದು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬೀಜಿಂಗ್ ಹಾಗೂ ಹಂಗೇರಿಗಳಲ್ಲಿರುವ ಘಟಕಗಳಲ್ಲಿಯೂ ಇಕ್ಯೂಬಿಯನ್ನು ಉತ್ಪಾದಿಸಲಾಗುವುದು. ಈ ಕಾರು 2021ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ಇಕ್ಯೂಇ ಇ-ಕ್ಲಾಸ್ ಸೆಡಾನ್ ಕಾರನ್ನು ಆಧರಿಸಿದೆ. ಈ ಕಾರನ್ನು ಜರ್ಮನಿಯ ಬ್ರೆಮೆನ್ ಘಟಕದಲ್ಲಿ ರಚಿಸಿ, ಬೀಜಿಂಗ್‌ನಲ್ಲಿ ಉತ್ಪಾದಿಸಲಾಗುತ್ತದೆ.

2022ರ ವೇಳೆಗೆ ಕಂಪನಿಯು ಎಂಟು ಮಾದರಿಗಳನ್ನು ಬಿಡುಗಡೆಗೊಳಿಸಲಿದೆ. ಈ ಮಾದರಿಗಳನ್ನು ಅಸ್ತಿತ್ವದಲ್ಲಿರುವ ಕಂಬಸ್ಜನ್ ಎಂಜಿನ್ ಮಾದರಿಗಳ ಜೊತೆಗೆ ತಯಾರಿಸಲಾಗುವುದು. ಮರ್ಸಿಡಿಸ್ ಬೆಂಝ್ ಈ ಕಾರುಗಳನ್ನು ವಿಭಿನ್ನವಾಗಿ ಉತ್ಪಾದಿಸಲಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಇಕ್ಯೂಸಿ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅಕ್ಟೋಬರ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.99.30 ಲಕ್ಷಗಳಾಗಿದೆ. ಈ ಮರ್ಸಿಡಿಸ್ ಕಂಪನಿಯ ಹಾಗೂ ಭಾರತದಲ್ಲಿ ಬಿಡುಗಡೆಯಾದ ಮೊದಲ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ.

ಈ ಎಸ್‌ಯುವಿಯು 400 ಕಿ.ಮೀ.ಗಿಂತ ಹೆಚ್ಚಿನ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇತ್ತೀಚೆಗೆ ಕಂಪನಿಯು ತನ್ನ ಆನ್-ಬೋರ್ಡ್ ಚಾರ್ಜರ್ ಅನ್ನು 11 ಕಿ.ವ್ಯಾ ಫಾಸ್ಟ್ ಚಾರ್ಜರ್‌ಗೆ ನವೀಕರಿಸಿದೆ. ಹಳೆಯ ಚಾರ್ಜರ್‌ನಿಂದ ಚಾರ್ಜ್ ಮಾಡಲು 11 ಗಂಟೆಗಳು ಬೇಕಾಗುತ್ತಿದ್ದವು. ಆದರೆ ಹೊಸ ಚಾರ್ಜರ್ ಮೂಲಕ ಕೇವಲ 7.30 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಚಾರ್ಜರ್ ಅಪ್‌ಗ್ರೇಡ್ ನೊಂದಿಗೆ ಈಗ ಮರ್ಸಿಡಿಸ್ ಬೆಂಝ್ ಇಕ್ಯೂಸಿಯನ್ನು ಮನೆಯಲ್ಲಿ ವೇಗವಾಗಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಮರ್ಸಿಡಿಸ್ ಬೆಂಝ್ ಇಕ್ಯೂಸಿಯಲ್ಲಿ 80 ಕಿ.ವ್ಯಾನ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯು 7 ಕಿ.ವ್ಯಾ ಚಾರ್ಜರ್‌ನೊಂದಿಗೆ ಪೂರ್ತಿಯಾಗಿ ಚಾರ್ಜ್ ಆಗಲು 11 ಗಂಟೆಗಳು ಬೇಕಾಗುತ್ತವೆ.

11 ಕಿ.ವ್ಯಾ ಚಾರ್ಜರ್ ಮೂಲಕ ಈ ಕಾರು ಕೇವಲ 7.30 ನಿಮಿಷಗಳಲ್ಲಿ 10%ನಿಂದ 100%ನಷ್ಟು ಚಾರ್ಜ್ ಆಗುತ್ತದೆ. ಕಂಪನಿಯು ಈ ವರ್ಷದ ಜುಲೈ ಹಾಗೂ ಸೆಪ್ಟೆಂಬರ್ ನಡುವೆ ವಿಶ್ವದಾದ್ಯಂತ 45,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರುಗಳನ್ನು ಮಾರಾಟ ಮಾಡಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸೆಪ್ಟೆಂಬರ್ ತಿಂಗಳಿನಲ್ಲಿ ಕಂಪನಿಯು 2,500 ಇಕ್ಯೂಸಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದೆ. ಕಂಪನಿಯು ಸದ್ಯಕ್ಕೆ 5 ಪೂರ್ಣ ಎಲೆಕ್ಟ್ರಿಕ್ ಹಾಗೂ 20 ಪ್ಲಗಿನ್ ಹೈಬ್ರಿಡ್ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಮರ್ಸಿಡಿಸ್ ಬೆಂಝ್ ಇಕ್ಯೂಸಿಯನ್ನು ಮಾಡಿಫೈಗೊಳಿಸಿದ ಜಿಎಲ್'ಸಿ ಪ್ಲಾಟ್‌ಫಾರಂನಲ್ಲಿ ಉತ್ಪಾದಿಸಲಾಗಿದೆ. ಈ ಕಾರು 80 ಕಿ.ವ್ಯಾನ ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಎರಡು ಎಲೆಕ್ಟ್ರಿಕ್ ಮೋಟರ್‌ಗಳಿಗೆ ಪವರ್ ನೀಡುತ್ತದೆ. ಈ ಕಾರು 408 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.


Click it and Unblock the Notifications








