Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿವಿಧ ಕಾರು ಮಾದರಿಗಳ ಮೇಲೆ ಕ್ರಿಸ್‌ಮಸ್ ಆಫರ್ ಘೋಷಣೆ ಮಾಡಿದ ಎಂಜಿ ಮೋಟಾರ್
ದಸರಾ ಮತ್ತು ದೀಪಾವಳಿ ಸಂಭ್ರಮಾಚರಣೆಯ ವೇಳೆ ನೀರಿಕ್ಷೆಗೂ ಮೀರಿ ಹೊಸ ವಾಹನಗಳನ್ನು ಮಾರಾಟ ಮಾಡಿರುವ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಇದೀಗ ಕ್ರಿಸ್‌ಮಸ್ ಸಂಭ್ರಮಕ್ಕಾಗಿ ಇಯರ್ ಎಂಡ್ ಆಫರ್ ಘೋಷಣೆ ಮಾಡಿವೆ.

ಎಂಜಿ ಮೋಟಾರ್ ಕಂಪನಿಯು ಸಹ ವರ್ಷಾಂತ್ಯದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಅತ್ಯುತ್ತಮ ಆಫರ್‌ಗಳನ್ನು ನೀಡುತ್ತಿದ್ದು, ಕ್ರಿಸ್‌ಮಸ್ ಸಂಭ್ರಮಕ್ಕಾಗಿ 'ಎಂಜಿ ಕ್ರಿಸ್‌ಮಸ್ ಸರ್ಫೈಸ್' ಅಭಿಯಾನ ಶುರು ಮಾಡಿದೆ. ಹೊಸ ಅಭಿಯಾನದಡಿ ಕಾರು ಖರೀದಿ ಮಾಡುವ ಗ್ರಾಹಕರಿಗೆ ಆಕರ್ಷಕ ಆಫರ್‌ಗಳು ಲಭ್ಯವಿದ್ದು, ಹೊಸ ಆಫರ್‌ಗಳು ಆಯ್ದ ಮಾದರಿಗಳ ಮೇಲೆ ಈ ತಿಂಗಳಾಂತ್ಯದ ತನಕ ಲಭ್ಯವಿರಲಿದೆ.

ಎಂಜಿ ಮೋಟಾರ್ ನಿರ್ಮಾಣದ ಯಾವುದೇ ಕಾರು ಖರೀದಿಸುವ ಗ್ರಾಹಕರಿಗೆ ಹಳೆಯ ಕಾರು ಮಾದರಿಗಳೊಂದಿಗೆ ಎಕ್ಸ್‌ಚೆಂಜ್ ಮಾಡಿದ್ದಲ್ಲಿ ರೂ.40 ಸಾವಿರ ಡಿಸ್ಕೌಂಟ್‌ನೊಂದಿಗೆ ಅತ್ಯುತ್ತಮ ಮರು ಮಾರಾಟ ಮೌಲ್ಯವನ್ನು ನಿರ್ಧರಿಸಲಿದೆ.

ಎಕ್ಸ್‌ಚೆಂಜ್ ಹೊರತುಪಡಿಸಿ ನೇರ ಕಾರು ಖರೀದಿ ಮಾಡುವ ಗ್ರಾಹಕರಿಗೆ ಬೈಬ್ಯಾಕ್ ಯೋಜನೆ ಅಡಿ ಮೂರು ವರ್ಷಗಳ ತನಕ ಗರಿಷ್ಠ ಮರು ಮಾರಾಟ ಮೌಲ್ಯವನ್ನು ಖಾತ್ರಿ ಪಡಿಸಲಿದ್ದು, ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಮಾದರಿಗಳ ಮೇಲೆ 3-60 ಪ್ಲ್ಯಾನ್ ನೀಡುತ್ತಿದೆ.

ಹಾಗೆಯೇ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯ ಮೇಲೆ 3-50 ಪ್ಲ್ಯಾನ್ ನೀಡಿರುವ ಎಂಜಿ ಮೋಟಾರ್ ಕಂಪನಿಯು ರೂ. 25 ಸಾವಿರ ಮೌಲ್ಯದ ಆಕ್ಸೆಸರಿಸ್‌ಗಳನ್ನು ಸಹ ಪಾಯಿಂಟ್ ಆಧಾರದ ಮೇಲೆ ನೀಡಲಿದ್ದು, ಹೆಕ್ಟರ್, ಹೆಕ್ಟರ್ ಪ್ಲಸ್ ಮತ್ತು ಜೆಡ್ ಇವಿ ಕಾರು ಖರೀದಿಸುವ ಪ್ರತಿ ಗ್ರಾಹಕರಿಗೂ ಈ ಆಫರ್ ಲಭ್ಯವಿರಲಿವೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಇದರೊಂದಿಗೆ ಎಂಜಿ ಮೋಟಾರ್ ಕಂಪನಿಯು ಎಂಜಿ ಕ್ರಿಸ್‌ಮಸ್ ಸರ್ಫೈಸ್' ಅಭಿಯಾನದಡಿ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಎಂಜಿ ರೇಫರ್ ಪ್ಯಾಕೇಜ್ ಸಹ ಘೋಷಣೆ ಮಾಡಿದ್ದು, ರೇಫರ್ ಆಫರ್ ಮೂಲಕ ಗ್ರಾಹಕರು 10 ಸಾವಿರ ಪಾಯಿಂಟ್ ಪಡೆದುಕೊಳ್ಳಬಹುದು. ಈ ಪಾಯಿಂಟ್‌ಗಳನ್ನು ಗ್ರಾಹಕರು ಬಿಡಿಭಾಗಗಳನ್ನು ಅಥವಾ ರೀಪೇರಿ ಮೇಲೆ ಪಾವತಿಗಾಗಿ ಬಳಕೆ ಮಾಡಿಕೊಳ್ಳಬಹುದಾಗಿದ್ದು, ಆರು ತಿಂಗಳ ವಾರಂಟಿ ಹೊಂದಿರುತ್ತದೆ.

ಈ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಎಂಜಿ ಮೋಟಾರ್ ಕಂಪನಿಯು ವರ್ಷಾಂತ್ಯದಲ್ಲಿ ಅತ್ಯುತ್ತಮ ಆಫರ್ ಘೋಷಣೆ ಮಾಡಿದ್ದು, ಬೈಬ್ಯಾಕ್ ಆಫರ್ ನೀಡಿರುವುದು ಕಾರುಗಳ ಮರು ಮಾರಾಟ ಮೌಲ್ಯವನ್ನು ಮತ್ತಷ್ಟು ಹೆಚ್ಚಳ ಮಾಡಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಆದರೆ ಎಂಜಿ ಮೋಟಾರ್ ಕಂಪನಿಯು ಹೊಸದಾಗಿ ಬಿಡುಗಡೆ ಮಾಡಲಾಗಿರುವ ಗ್ಲೊಸ್ಟರ್ ಎಸ್‌ಯುವಿ ಮೇಲೆ ಯಾವುದೇ ಆಫರ್ ನೀಡಿಲ್ಲ. ಬದಲಾಗಿ ಹೆಕ್ಟರ್, ಹೆಕ್ಟರ್ ಪ್ಲಸ್ ಮತ್ತು ಜೆಡ್ಎಸ್ ಇವಿ ಕಾರಿನ ಮೇಲೆ ಮಾತ್ರ ಆಫರ್ ನೀಡಿದೆ.