Just In
Don't Miss!
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Movies
Breaking: ನಟಿ ರಾಗಿಣಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಮ್ಮ ಬೆಂಗಳೂರಿನಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಎಂಜಿ ಜೆಡ್ಎಸ್
ಎಂಜಿ ಮೋಟಾರ್ ಕಂಪನಿಯು ಕಾರು ಮಾರಾಟದಲ್ಲಿ ಹಂತ ಹಂತವಾಗಿ ಮುಂಚೂಣಿ ಸಾಧಿಸುತ್ತಿದ್ದು, ಎಲ್ಲಾ ಬಗೆಯ ಕಾರು ಮಾದರಿಗಳ ಮಾರಾಟದಲ್ಲೂ ಬೇಡಿಕೆ ಪಡೆದುಕೊಳ್ಳುತ್ತಿದೆ. ಸದ್ಯ ಹೆಕ್ಟರ್, ಹೆಕ್ಟರ್ ಪ್ಲಸ್, ಜೆಡ್ಎಸ್ ಎಲೆಕ್ಟ್ರಿಕ್, ಗ್ಲೊಸ್ಟರ್ ಕಾರು ಮಾರಾಟ ಮಾಡುತ್ತಿರುವ ಎಂಜಿ ಕಂಪನಿಯು ಮುಂಬರುವ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳ ಬಿಡುಗಡೆ ಸಿದ್ದವಾಗುತ್ತಿದೆ.

ಗ್ರಾಹಕರ ಆಯ್ಕೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಭಾರೀ ಪ್ರಮಾಣದಲ್ಲಿ ಬೇಡಿಕೆ ಪಡೆದುಕೊಳ್ಳುತ್ತಿರುವ ಹೊಸ ಕಾರು ಮಾರಾಟ ಕಂಪನಿಗಳಿಗೆ ಭಾರತೀಯ ಆಟೋ ಮಾರುಕಟ್ಟೆಯು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಂಜಿ ಮೋಟಾರ್ ಕಂಪನಿಯು ಕೂಡಾ ಇದೀಗ ಹೆಕ್ಟರ್, ಹೆಕ್ಟರ್ ಪ್ಲಸ್, ಜೆಡ್ಎಸ್ ಇವಿ ಮತ್ತು ಗ್ಲೊಸ್ಟರ್ ನಂತರ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿದೆ.

ಎಂಜಿ ಮೋಟಾರ್ ಭಾರತದಲ್ಲಿ ಬಿಡುಗಡೆ ಮಾಡಲಿರುವ ಹೊಸ ಕಾರುಗಳ ಪಟ್ಟಿಯಲ್ಲಿ ಜೆಡ್ಎಸ್ ಪೆಟ್ರೋಲ್ ವರ್ಷನ್ ಮತ್ತು ಜಿ10 ಎಂಪಿವಿ ಮಾದರಿಯು ಪ್ರಮುಖವಾಗಿದ್ದು, ಜೆಡ್ಎಸ್ ಕಾರು ಮಾದರಿಯ ಬಿಡುಗಡೆಗಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಪೆಟ್ರೋಲ್ ಮಾದರಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗಲಿರುವ ಹೊಸ ಕಾರು ಹೆಕ್ಟರ್ ಕಾರಿಗಿಂತಲೂ ಕೆಳದರ್ಜೆಯಲ್ಲಿ ಮಾರಾಟಗೊಳ್ಳಲಿದ್ದು, ಬೆಲೆ ವಿಚಾರದಲ್ಲೂ ಪ್ರತಿ ಸ್ಪರ್ಧಿ ಕಾರುಗಳಿಗೆ ಇದು ಭರ್ಜರಿ ಪೈಪೋಟಿ ನೀಡಲಿದೆ.

ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಮಾದರಿಯಲ್ಲೇ ತುಸು ವಿಭಿನ್ನ ವಿನ್ಯಾಸವನ್ನು ಹೊಂದಿರುವ ಜೆಡ್ಎಸ್ ಪೆಟ್ರೋಲ್ ಕಾರು ಎರಡು ಎಂಜಿನ್ ಆಯ್ಕೆ ಹೊಂದಿರಲಿದೆ ಎನ್ನಲಾಗಿದ್ದು, ಗ್ರಾಹಕರ ಬೇಡಿಕೆಯೆಂತೆ 1.5-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಳ್ಳಲಿರುವ ಹೊಸ ಕಾರು ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಲಿದೆ.

ಹೊಸ ಕಾರಿನ ಕಾರ್ಯಕ್ಷಮತೆ ಕುರಿತಂತೆ ಈಗಾಗಲೇ ವಿವಿಧ ಮಾದರಿಯ ರೋಡ್ ಟೆಸ್ಟಿಂಗ್ ನಡೆಸಲಾಗಿದ್ದು, ಇದೀಗ ಉತ್ಪಾದನಾ ಆವೃತ್ತಿಯೊಂದಿಗೆ ಹೊಸ ಕಾರಿನ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ.

ಹೊಸ ಕಾರು ಬಿಎಸ್-6 ವೈಶಿಷ್ಟ್ಯತೆಗೆ ಅನುಗುಣವಾಗಿ ಅಭಿವೃದ್ದಿ ಹೊಂದಿದ್ದು, ಹೊಸ ಕಾರು 4,314-ಎಂಎಂ ಉದ್ದ, 1,890-ಎಂಎಂ ಅಗಲ, 1,611-ಎಂಎಂ ಎತ್ತರ ಮತ್ತು 2,589-ಎಂಎಂ ವೀಲ್ಹ್‌ಬೆಸ್ ಪಡೆದುಕೊಂಡಿದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಸಿಗ್ನೆಚರ್ ಹನಿಕೊಂಬ್ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್ ಜೊತೆ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಅಲ್ಯುನಿಯಂ ಸ್ಕಿಡ್ ಪ್ಲೇಟ್, 17-ಇಂಚಿನ ಡೈಮೆಂಡ್ ಕಟ್ ಅಲಾಯ್ ವೀಲ್ಹ್, ಪ್ರೀಮಿಯಂ ಕ್ಯಾಬಿನ್, ಎಂಟು ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಜೊತೆ ಅಂಡ್ರಾಯಿಡ್ ಆಟೋ, ರೈನ್ ಸೆನ್ಸಾರ್ ವೈಪರ್, ವೆಂಟಿಲೆಟೆಡ್ ಲೆದರ್ ಸೀಟುಗಳು, ಕ್ಲೈಮೆಟ್ ಕಂಟ್ರೊಲ್ ಮತ್ತು ಸ್ಟಾರ್ಟ್/ಸ್ಟಾಪ್ ಬಟನ್ ಫೀಚರ್ಸ್ ಹೊಂದಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹಾಗೆಯೇ ಹೊಸ ಕಾರಿನಲ್ಲಿ ಇಕೊ, ನಾರ್ಮಲ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್‌ಗಳನ್ನು ಸಹ ನೀಡಲಾಗಿದ್ದು, ಪನೆರೊಮಿಕ್ ಸನ್‌ರೂಫ್ ಸೌಲಭ್ಯವು ಕಾರಿಗೆ ಮತ್ತಷ್ಟು ಪ್ರೀಮಿಯಂ ಲುಕ್ ನೀಡಲಿದೆ. ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಎರ್ಮಜೆನ್ಸಿ ಬ್ರೇಕಿಂಗ್, ಲೈನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಎಬಿಎಸ್ ಜೊತೆ ಇಬಿಡಿ, 4 ಏರ್‌ಬ್ಯಾಗ್, ಹಿಲ್ ಲಾಂಚ್ ಅಸಿಸ್ಟ್ ಸೌಲಭ್ಯ ಹೊಂದಿದೆ.

ಈ ಮೂಲಕ ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಎಸ್-ಕ್ರಾಸ್, ರೆನಾಲ್ಟ್ ಡಸ್ಟರ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಕಾರುಗಳಿಗೂ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 9 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.13 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಮಾಹಿತಿಗಳ ಪ್ರಕಾರ ಹೊಸ ಜೆಡ್ಎಸ್ ಪೆಟ್ರೋಲ್ ಕಾರು ಗ್ಲೊಸ್ಟರ್ ಎಸ್‌ಯುವಿ ಕಾರು ಬಿಡುಗಡೆಯ ನಂತರವಷ್ಟೇ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರು 2021ರ ಆರಂಭದಲ್ಲಿ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.