ಆಟೋ ಎಕ್ಸ್‌ಪೋ 2020: ಮಾರುತಿ ಸ್ವಿಫ್ಟ್‌‌ಗೆ ಟಕ್ಕರ್ ನೀಡಲು ಎಂಜಿ3 ಹ್ಯಾಚ್‌ಬ್ಯಾಕ್ ರೆಡಿ..

ಎಂಜಿ ಮೋಟಾರ್ ಸಂಸ್ಥೆಯು ವಿವಿಧ ಮಾದರಿಯ 14 ಕಾರು ಆವೃತ್ತಿಗಳನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದು, ಮೂರನೇ ದಿನದ ಆಟೋ ಮೇಳದಲ್ಲಿ ಅಚ್ಚರಿ ಎನ್ನುವಂತೆ ಹ್ಯಾಚ್‌ಬ್ಯಾಕ್ ಮಾದರಿಯೊಂದನ್ನು ಅನಾವರಣಗೊಳಿಸಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಸ್ವಿಫ್ಟ್‌‌ಗೆ ಟಕ್ಕರ್ ನೀಡಲು ಎಂಜಿ3 ಹ್ಯಾಚ್‌ಬ್ಯಾಕ್ ರೆಡಿ..

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಮಹತ್ವದ ಬದಲಾವಣೆ ತರುವ ಉದ್ದೇಶದಿಂದ ಎಲ್ಲಾ ಕಾರು ಆವೃತ್ತಿಗಳ ವಿಭಾಗದಲ್ಲೂ ಒಂದೊಂದು ವಿಶೇಷ ಕಾರು ಮಾದರಿಯನ್ನು ಅನಾವರಣಗೊಳಿಸಿರುವ ಎಂಜಿ ಸಂಸ್ಥೆಯು ಸೆಡಾನ್, ಎಂಪಿವಿ, ಎಸ್‌ಯುವಿ, ಹ್ಯಾಚ್‌ಬ್ಯಾಕ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಸಿದ್ದಪಡಿಸಿದ್ದು, ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಸ್ವಿಫ್ಟ್ ಮತ್ತು ಗ್ರಾಂಡ್ ಐ10 ಕಾರುಗಳಿಗೆ ಪೈಪೋಟಿಯಾಗಿ ಎಂಜಿ3 ಎನ್ನುವ ಕಾರನ್ನು ಬಿಡುಗಡೆ ಮಾಡುತ್ತಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಸ್ವಿಫ್ಟ್‌‌ಗೆ ಟಕ್ಕರ್ ನೀಡಲು ಎಂಜಿ3 ಹ್ಯಾಚ್‌ಬ್ಯಾಕ್ ರೆಡಿ..

ಹ್ಯಾಚ್‌ಬ್ಯಾಕ್ ಕಾರು ವಿಶೇಷ ಎಂಜಿನ್ ಆಯ್ಕೆ ಮತ್ತು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿರುವ ಎಂಜಿ3 ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್ ಮೂಲಕ 112-ಬಿಎಚ್‌ಪಿ ಮತ್ತು 150-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಸ್ವಿಫ್ಟ್‌‌ಗೆ ಟಕ್ಕರ್ ನೀಡಲು ಎಂಜಿ3 ಹ್ಯಾಚ್‌ಬ್ಯಾಕ್ ರೆಡಿ..

ಜೊತೆಗೆ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಸೌಲಭ್ಯಗಳಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಕಾರುಗಳಿಂತಲೂ ಕಡಿಮೆ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಸ್ವಿಫ್ಟ್‌‌ಗೆ ಟಕ್ಕರ್ ನೀಡಲು ಎಂಜಿ3 ಹ್ಯಾಚ್‌ಬ್ಯಾಕ್ ರೆಡಿ..

ಹೊಸ ಕಾರು ಹೊರಭಾಗದಿಂದ ನೋಡಲು ಸಾಮಾನ್ಯ ಲುಕ್ ಹೊಂದಿದ್ದರೂ ಎಂಟ್ರಿ ಲೆವಲ್‌ ಕಾರುಗಳಲ್ಲೇ ಬೆಸ್ಟ್ ಎನ್ನುವ ಹಲವು ಫೀಚರ್ಸ್ ಈ ಕಾರಿನಲ್ಲಿದ್ದು, ಹೊಲೊಜೆನ್ ಹೆಡ್‌ಲ್ಯಾಂಪ್ಸ್, ಸ್ಲಿಕ್ ಏರ್‌ಡ್ಯಾಮ್, ವರ್ಟಿಕಲ್ ಮಾದರಿಯ ಟೈಲ್‌ ಲ್ಯಾಂಪ್ಸ್, ತ್ರಿ ಸ್ಲಿಟ್ ಅಲಾಯ್ ವೀಲ್ಹ್ ಪಡೆದುಕೊಳ್ಳಲಿದೆ. ಹಾಗೆಯೇ ಹೊಸ ಕಾರಿನ ಒಳಭಾಗದಲ್ಲೂ ಹಲವು ಆಕರ್ಷಕ ಸೌಲಭ್ಯಗಳಿದ್ದು, ಸಿಂಗಲ್ ಡಿನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಸ್ಟಿರಿಂಗ್ ಮೌಟೆಡ್ ಆಡಿಯೋ ಕಂಟ್ರೋಲ್ ಪಡೆದುಕೊಂಡಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಸ್ವಿಫ್ಟ್‌‌ಗೆ ಟಕ್ಕರ್ ನೀಡಲು ಎಂಜಿ3 ಹ್ಯಾಚ್‌ಬ್ಯಾಕ್ ರೆಡಿ..

ಈ ಮೂಲಕ ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯಲಿರುವ ಎಂಜಿ3 ಕಾರು ಟಾಟಾ ಟಿಗೋರ್, ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಕಾರುಗಳಿಗೆ ಇದು ಉತ್ತಮ ಪೈಪೋಟಿ ನೀಡಲಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಸ್ವಿಫ್ಟ್‌‌ಗೆ ಟಕ್ಕರ್ ನೀಡಲು ಎಂಜಿ3 ಹ್ಯಾಚ್‌ಬ್ಯಾಕ್ ರೆಡಿ..

ಅಂದಾಜು ಬೆಲೆ ಮತ್ತು ಬಿಡುಗಡೆ

ಸದ್ಯ ಯುಕೆ‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಎಂಜಿ3 ಕಾರು ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎಕ್ಸ್‌ಪ್ಲೊರ್, ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಮಾದರಿಗಳನ್ನು ಖರೀದಿಸಬಹುದಾಗಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಸ್ವಿಫ್ಟ್‌‌ಗೆ ಟಕ್ಕರ್ ನೀಡಲು ಎಂಜಿ3 ಹ್ಯಾಚ್‌ಬ್ಯಾಕ್ ರೆಡಿ..

ವಿದೇಶಿ ಮಾರುಕಟ್ಟೆಯಲ್ಲಿರುವ ಎಂಜಿ3 ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಾರಿಗಿಂತಲೂ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಬೆಲೆ ಕಡಿತಗೊಳಿಸಲು ಕೆಲವು ಸೌಲಭ್ಯಗಳನ್ನು ಕಡಿತಗೊಳಿಸುವ ಸಾಧ್ಯತೆಗಳಿವೆ.

ಆಟೋ ಎಕ್ಸ್‌ಪೋ 2020: ಮಾರುತಿ ಸ್ವಿಫ್ಟ್‌‌ಗೆ ಟಕ್ಕರ್ ನೀಡಲು ಎಂಜಿ3 ಹ್ಯಾಚ್‌ಬ್ಯಾಕ್ ರೆಡಿ..

ಭಾರತೀಯ ರೂಪಾಯಿ ಲೆಕ್ಕದಲ್ಲಿ ಎಂಜಿ3 ಕಾರು ಯುಕೆನಲ್ಲಿ ರೂ.8.50 ಲಕ್ಷದಿಂದ ರೂ.12 ಲಕ್ಷ ಬೆಲೆ ಹೊಂದಿದ್ದು, ಭಾರತದಲ್ಲಿ ಬಿಡುಗಡೆಯಾಗುವ ಮಾದರಿಯು ರೂ.6 ಲಕ್ಷದಿಂದ ರೂ.8 ಲಕ್ಷ ಬೆಲೆ ಅಂತರದಲ್ಲಿ 2021ಕ್ಕೆ ಗ್ರಾಹಕರ ಕೈಸೆರಲಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಸ್ವಿಫ್ಟ್‌‌ಗೆ ಟಕ್ಕರ್ ನೀಡಲು ಎಂಜಿ3 ಹ್ಯಾಚ್‌ಬ್ಯಾಕ್ ರೆಡಿ..

ಇನ್ನು ಎಂಜಿ ಮೋಟಾರ್ ಸಂಸ್ಥೆಯು ಮಾತೃಸಂಸ್ಥೆಯಾದ ಸೈಕ್ ಜೊತೆಗೂಡಿ ಹಲವು ಕಾರು ಉತ್ಪನ್ನಗಳನ್ನು ರೀಬ್ಯಾಡ್ಜ್ ಆವೃತ್ತಿಯೊಂದಿಗೆ ಭಾರತದಲ್ಲಿ ಬಿಡುಗಡೆ ಸಿದ್ದವಾಗುತ್ತಿದ್ದು, ಹೊಸ ಯೋಜನೆಯ ಭಾಗವಾಗಿ ಕಾರು ಉತ್ಪಾದನಾ ಸಾಮಾರ್ಥ್ಯವನ್ನು ಹೆಚ್ಚಿಸಲು ಭಾರೀ ಪ್ರಮಾಣದ ಹೂಡಿಕೆ ಮಾಡಲಾಗುತ್ತಿದೆ.

Most Read Articles

Kannada
English summary
MG3 Unveiled At Auto Expo. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X