ಹೊಸ ಆಡಿ ಆರ್‍ಎಸ್ 7 ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಜರ್ಮನ್ ಮೂಲದ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಹೊಸ ಆರ್‍ಎಸ್ 7 ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಆಡಿ ಕಂಪನಿಯು ಆರ್‍ಎಸ್ 7 ಸ್ಪೋರ್ಟ್‌ಬ್ಯಾಕ್‌ಗಾಗಿ ಅಧಿಕೃತವಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ.

ಹೊಸ ಆಡಿ ಆರ್‍ಎಸ್ 7 ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಬಿಡುಗಡೆಯಾಗಲಿರುವ ಆಡಿ ಆರ್‍ಎಸ್ 7 ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಆನ್ ಲೈನ್ ಅಥವಾ ಡೀಲರ್ ಬಳಿ ಟೋಕನ್ ಮೊತ್ತ ರೂ.10 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಈ ಹೊಸ ಆಡಿ ಆರ್‍ಎಸ್ 7 ಕಾರನ್ನು ಮುಂದಿನ ಜುಲೈ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಆಡಿ ಕಂಪನಿಯು ಹೊಸ ಆರ್ಎಸ್ 7 ಕಾರಿನ ಟೀಸರ್ ಅನ್ನು ಇತ್ತೀಚೆಗೆ ವೆಬ್‌ಸೈಟ್‌ನಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಆರ್‍ಎಸ್ 7 ಕಾರಿನಲ್ಲಿ 4.0-ಲೀಟರ್ ಟ್ವಿನ್ ಟರ್ಬೊ ವಿ 8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ.

ಹೊಸ ಆಡಿ ಆರ್‍ಎಸ್ 7 ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಇದನ್ನು ಮೈಲ್ಡ್ ಹೈಬ್ರಿಡ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 600 ಬಿಹೆಚ್‍ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಹಿಂದಿನ ಮಾದರಿ 560 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುಲಾಗುತ್ತಿತ್ತು. ಹೊಸ ಆರ್‍ಎಸ್ 7 ಕಾರಿನ ಎಂಜಿನ್ ನೊಂದಿಗೆ 8-ಸ್ಪೀಡ್ ಟಾರ್ಕ್ ಕರ್ನವಾಟರ್ ಅನ್ನು ಜೋಡಿಸಲಾಗಿದೆ.

MOST READ: ಹೊಸ ಐಷಾರಾಮಿ ಆಡಿ ಕಾರುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಆಡಿ ಆರ್‍ಎಸ್ 7 ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಬ್ರ್ಯಾಂಡ್‌ನ ಆಡಿ ಕ್ವಾಟ್ರೋ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಮೂಲಕ ಎಲ್ಲಾ ಟಯರುಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ. ಈ ಆಡಿ ಆರ್‍ಎಸ್ 7 ಮಾದರಿಯು ಕೇವಲ 3.6 ಸೆಕೆಂಡುಗಳಲ್ಲಿ 100 ಕಿ.ಮೀ ಕ್ರಮಿಸುತ್ತದೆ. ಈ ಹೊಸ ಕಾರಿನಲ್ಲಿ ಲೋ ಸಿಲೂಯೆಟ್, ಬಾನೆಟ್, ಮುಂಭಾಗದ ಡೋರುಗಳು ಮತ್ತು ಅದರ ಬೂಟ್ ಲೀಡ್ ಗಳು ಸ್ಟ್ಯಾಂಡರ್ಡ್ ಎ7 ಮಾದರಿಗಳಂತಿದೆ.

ಹೊಸ ಆಡಿ ಆರ್‍ಎಸ್ 7 ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಆರ್‍ಎಸ್ 7 ಕಾರು ದೊಡ್ಡ ಏರ್ ಟೆಕ್ ಮತ್ತು ಬ್ಲ್ಯಾಕ್ ಹನಿಕಾಂಬ್ ನೊಂದಿಗೆ ಆಗ್ರೇಸಿವ್ ಲುಕ್ ಅನ್ನು ಹೊಂದಿದೆ. ಹೊಸ ಆರ್‍ಎಸ್ 7 ಕಾರಿನ ಹಿಂಭಾಗದ ಬಂಪರ್ ನೊಂದಿಗೆ ದೊಡ್ಡ ಡಿಫ್ಯೂಸರ್ ಮತ್ತು 21 ಇಂಚಿನ ರಿಮ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಈ ಬ್ರ್ಯಾಂಡ್ 22 ಇಂಚಿನ ರಿಮ್‌ಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಒಂದು ಆಯ್ಕೆಯಾಗಿ ನೀಡುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಆಡಿ ಆರ್‍ಎಸ್ 7 ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಹೊಸ ಆಡಿ ಆರ್‍ಎಸ್ 7 ಕಾರಿನ ಒಳಾಂಗಣದ ಡ್ಯಾಶ್‌ಬೋರ್ಡ್‌ನಲ್ಲಿ ಡ್ಯುಯಲ್ ಟಚ್‌ಸ್ಕ್ರೀನ್ ವಿನ್ಯಾಸ, ಅಲ್ಕಾಂಟರಾ ಅಪ್ಹೋಲ್ಸ್ಟರಿ ಮತ್ತು ದೊಡ್ಡ ಪ್ಯಾಡಲ್ ಶಿಫ್ಟರ್‌ಗಳನ್ನು ಹೊಂದಿರುವ ಆರ್ಎಸ್ ನಿರ್ದಿಷ್ಟ ಸ್ಟೀಯರಿಂಗ್ ವ್ಹೀಲ್ ಅನ್ನು ಒಳಗೊಂಡಿದೆ.

ಹೊಸ ಆಡಿ ಆರ್‍ಎಸ್ 7 ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಾಲ್ಕು ಸೀಟಿನ ಆಡಿ ಆರ್‍ಎಸ್ 7 ಕಾರನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಭಾರತದಲ್ಲಿ 5 ಸೀಟುಗಳ ಕಾರನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹೊಸ ಆಡಿ ಆರ್‍ಎಸ್ 7 ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಹೊಸ ಆಡಿ ಆರ್‍ಎಸ್ 7 ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.75 ಕೋಟಿಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಆಡಿ ಆರ್‍ಎಸ್7 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಬೆಂಝ್ ಎಎಂಜಿ ಇ63 ಮತ್ತು ಬಿಎಂಡಬ್ಲ್ಯು ಎಂ5 ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಹೊಸ ಆಡಿ ಆರ್‍ಎಸ್ 7 ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಆಡಿ ಆರ್‍ಎಸ್ 7 ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಪೋರ್ಟ್ಸ್ ಸೆಡಾನ್ ಗಳಲ್ಲಿ ಒಂದಾಗಿದೆ. ಹೊಸ ಆಡಿ ಆರ್‍ಎಸ್ 7 ಕಾರು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಸ್ಪೋರ್ಟ್ಸ್ ಸೆಡಾನ್ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೆವೆ.

Most Read Articles

Kannada
English summary
Second-Generation Audi RS7 Sportback Bookings Open In India: Here Are All The Details. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X