Just In
Don't Miss!
- News
ಖಾತೆ ಹಂಚಿಕೆ ಕುರಿತಂತೆ ಡಾ. ಸುಧಾಕರ್ ವಿಚಾರದಲ್ಲಿ ಎಲ್ಲರೂ ತಟಸ್ಥ ನಿಲುವು ತಾಳಿದ್ಯಾಕೆ?
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು ಹೊಸ ಆಡಿ ಎಸ್‌ಕ್ಯೂ5 ಸ್ಪೋರ್ಟ್‌ಬ್ಯಾಕ್
ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಕ್ಯೂ5 ಸ್ಪೋರ್ಟ್‌ಬ್ಯಾಕ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಇದರೊಂದಿಗೆ ಆಡಿ ತನ್ನ ಎಸ್‌ಕ್ಯೂ5 ಸ್ಪೋರ್ಟ್‌ಬ್ಯಾಕ್ ಅನ್ನು ಕೂಡ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಇದೀಗ ಆಡಿ ತನ್ನ ಎಸ್‌ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿಯ ಚಿತ್ರಗಳ ಮೂಲಕ ಬಹಿರಂಗಪಡಿಸಿದೆ. ಆಡಿ ಎಸ್‌ಕ್ಯೂ5 ಸ್ಪೋರ್ಟ್‌ಬ್ಯಾಕ್ ಪರ್ಫಾಮೆನ್ಸ್ ಮಾದರಿಯಾಗಿದೆ. ಹೊಸ ಹೊಸ ಆಡಿ ಎಸ್‌ಕ್ಯೂ5 ಸ್ಪೋರ್ಟ್‌ಬ್ಯಾಕ್ ನಲ್ಲಿ 3.0-ಲೀಟರ್ ವಿ6 ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 332 ಬಿಹೆಚ್‌ಪಿ ಪವರ್ ಮತ್ತು 700 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಈ ಎಂಜಿನ್ ಅನ್ನು 8-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಆಡಿ ಎಸ್‌ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿ ಕೇವಲ 5.1 ಸೆಕೆಂಡುಗಳಲ್ಲಿ 0-100 ಕಿಮೀ ಸ್ಪೀಡ್ ಅನ್ನು ಕ್ರಮಿಸುತ್ತದೆ. ಇದು 'ಎಸ್' ಬ್ಯಾಡ್ಜ್ ಆಡಿ ಎಸ್‍ಯುವಿಗಿಂತಲೂ ತ್ವರಿತವಾಗಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇನ್ನು ಈ ಆಡಿ ಎಸ್‌ಕ್ಯೂ5 ಸ್ಪೋರ್ಟ್‌ಬ್ಯಾಕ್ 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ವಿನ್ಯಾಸ ಬಗ್ಗೆ ಹೇಳುವುದಾದರೆ, ಆಡಿ ಎಸ್‌ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.

ಈ ಹೊಸ ಆಡಿ ಎಸ್‌ಕ್ಯೂ5 ಸ್ಪೋರ್ಟ್‌ಬ್ಯಾಕ್ ವಿನ್ಯಾಸವು ಕ್ಯೂ5 ಎಸ್‍ಯುವಿಗೆ ಹೋಲುತ್ತದೆ. ಆದರೆ ಈ ಹೊಸ ಆಡಿ ಎಸ್‌ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿಯಲ್ಲಿ ಕೆಲವು ಬ್ಲ್ಯಾಕ್ ಬಿಟ್ ಗಳನ್ನು ಒಳಗೊಂಡಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಕಂಪನಿಯು ತನ್ನ ಹೊಸ ಎಸ್5 ಸ್ಪೋರ್ಟ್‌ಬ್ಯಾಕ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ನಾಲ್ಕು ಡೋರಿನ ಕೂಪ್ ಆಗಿದೆ.

ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಮಾದರಿಯು ಕೇವಲ 4.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಬಹುನಿರೀಕ್ಷಿತ ಹೊಸ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಕಾರು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.
MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಇನ್ನು ಹೊಸ ಆಡಿ ಎಸ್‌ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿಯು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಆದರೆ ಆಡಿ ಎಸ್‌ಕ್ಯೂ5 ಸ್ಪೋರ್ಟ್‌ಬ್ಯಾಕ್ ಎಸ್‍ಯುವಿ ಭಾರತದಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ,

ಒಂದು ವೇಳೆ ಆಡಿ ಎಸ್‌ಕ್ಯೂ5 ಸ್ಪೋರ್ಟ್‌ಬ್ಯಾಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಜಿಎಲ್‌ಸಿ ಕೂಪೆ, ಬಿಎಂಡಬ್ಲ್ಯು ಎಕ್ಸ್ 4 ಮತ್ತು ಲ್ಯಾಂಡ್ ರೋವರ್ ಇವೊಕ್ ಕನ್ವರ್ಟಿಬಲ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.