ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಪರ್ಫಾಮೆನ್ಸ್ ಎಸ್‌ಯುವಿ

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಎಕ್ಸ್3 ಎಂ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‌ಯುವಿಯ ಬೆಲೆಯು ಭಾರತೀಯ ಎಕ್ಸ್ ಶೋರೂಂ ಪ್ರಕಾರ ರೂ.99.90 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಪರ್ಫಾಮೆನ್ಸ್ ಎಸ್‌ಯುವಿ

ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಬ್ರ್ಯಾಂಡ್‌ನ ಮೊಟ್ಟಮೊದಲ ಹೈ-ಪರ್ಫಾಮೆನ್ಸ್ ಮಿಡ್ ಎಸ್‍ಯುವಿಯಾಗಿದೆ. ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿಯ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿಯ ಬುಕ್ಕಿಂಗ್ ಆನ್‌ಲೈನ್ ಮೂಲಕ ಅಥವಾ ದೇಶದಾದ್ಯಂತದ ಬ್ರ್ಯಾಂಡ್‌ನ ಎಲ್ಲಾ ಡೀಲರುಗಳ ಮೂಲಕ ಬುಕ್ ಮಾಡಬಹುದು. 2020ರ ಡಿಸೆಂಬರ್ 31ರ ಮೊದಲು ಆನ್‌ಲೈನ್‌ನಲ್ಲಿ ಕಾಯ್ದಿರಿಸುವ ಗ್ರಾಹಕರಿಗೆ ವಿಶೇಷ ಆಫರ್ ಅನ್ನು ಘೋಷಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿಯಗಳನ್ನು ಸಿಬಿಯು(ಕಂಪ್ಲೀಟ್ ಬಿಲ್ಟ್ ಯುನಿಟ್) ಆಗಿ ಭಾರತಕ್ಕೆ ತರಲಾಗುತ್ತದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಪರ್ಫಾಮೆನ್ಸ್ ಎಸ್‌ಯುವಿ

ಎಂ ಕಾರಾಗಿರುವುದರಿಂದ, ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ವಿನ್ಯಾಸ, ಹೊರಭಾಗ ಮತ್ತು ಇಂಟಿರಿಯರ್ ಫೀಚರ್ ಗಳು ಮತ್ತು ಇತರ ತಂತ್ರಜ್ಙಾನ ವಿಷಯದಲ್ಲಿ ಹಲವಾರು ವಿಶಿಷ್ಟ ಅಂಶಗಳೊಂದಿಗೆ ಬರಲಿದೆ. ಹೊರಭಾಗದಿಂದ ಪ್ರಾರಂಭಿಸಿದರೆ, ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಕಿಡ್ನಿ ಗ್ರಿಲ್ ಅನ್ನು ಗ್ಲೋಸ್ ಬ್ಲ್ಯಾಕ್‌ ಫಿನಿಶಿಂಗ್ ಹೊಂದಿದೆ. ಅದರ ಮೇಲೆ ಎಂ ಬ್ಯಾಡ್ಜಿಂಗ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಪರ್ಫಾಮೆನ್ಸ್ ಎಸ್‌ಯುವಿ

ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿಯ ಮುಂಭಾಗವು ಅಡಾಪ್ಟಿವ್ ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಡಿಆರ್ಎಲ್, ನವೀಕರಿಸಿದ ಫ್ರಂಟ್ ಬಂಪರ್ ಮತ್ತು ಏರ್ ಟೆಕ್ ಅನ್ನು ಹೊಂದಿದೆ. ಈ ಹೊಸ ಹೈ-ಪರ್ಫಾಮೆನ್ಸ್ ಮಿಡ್ ಎಸ್‍ಯುವಿಯು ಆಕರ್ಷಕ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಪರ್ಫಾಮೆನ್ಸ್ ಎಸ್‌ಯುವಿ

ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿ ‘ಎಂ-ಡಿಸೈನ್' ಒಆರ್‌ವಿಎಂಗಳು, 20 ಇಂಚಿನ ಅಲಾಯ್ ವ್ಹೀಲ್ಸ್, ಕ್ವಾಡ್ ಎಕ್ಸಾಸ್ಟ್ ಪೈಪ್‌ಗಳೊಂದಿಗೆ ನವೀಕರಿಸಿದ ಹಿಂಭಾಗದ ಬಂಪರ್ ಮತ್ತು ಎಲ್‌ಇಡಿ ಟೈಲ್ ಲೈಟ್‌ಗಳನ್ನು ಸಹ ಒಳಗೊಂಡಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಪರ್ಫಾಮೆನ್ಸ್ ಎಸ್‌ಯುವಿ

ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿಯಲ್ಲಿ ಎಲೆಕ್ಟ್ರಿಕ್ ಹೊಂದಾಣಿಕೆ ಮತ್ತು ಮೆಮೊರಿ ಫಂಕ್ಷನ್ ಹೊಂದಿರುವ ಸ್ಪೋರ್ಟ್ ಸೀಟುಗಳು ಮತ್ತು ವರ್ನಾಸ್ಕಾ ಲೆದರ್ ಅಪ್ಹೋಲ್ಸ್ಟರಿ, ಬಿಎಂಡಬ್ಲ್ಯು ಐಡ್ರೈವ್ ಕಂಟ್ರೋಲ್ ಗಳೊಂದಿಗೆ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ವಾಯ್ಸ್ ಮತ್ತು ಗೆಸ್ಚರ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್ ಪ್ಲೇ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಪರ್ಫಾಮೆನ್ಸ್ ಎಸ್‌ಯುವಿ

ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿಯಲ್ಲಿ 3.0 ಲೀಟರ್, 6 ಸಿಲಿಂಡರ್ ಟ್ವಿನ್ ಟರ್ಬೊ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 473 ಬಿಹೆಚ್‍ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಪರ್ಫಾಮೆನ್ಸ್ ಎಸ್‌ಯುವಿ

ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿಯಲ್ಲಿ ಸುರಕ್ಷೆತೆಗಾಗಿ 8 ಏರ್‌ಬ್ಯಾಗ್‌ಗಳು, ಎಂ ಡೈನಾಮಿಕ್ ಮೋಡ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ), ಎಂ ಡೈನಾಮಿಕ್ ಮೋಡ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ), ಡೈನಾಮಿಕ್ ಬ್ರೇಕ್ ಕಂಟ್ರೋಲ್, ಡ್ರೈ ಬ್ರೇಕಿಂಗ್ ಫಂಕ್ಷನ್, ಕ್ರೂಸ್ ಕಂಟ್ರೋಲ್ ಜೊತೆಗೆ ಬ್ರೇಕಿಂಗ್ ಫಂಕ್ಷನ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಪರ್ಫಾಮೆನ್ಸ್ ಎಸ್‌ಯುವಿ

ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿಯು ‘ಎಂ' ಟ್ರೇಟ್ ಮೆಂಟ್ ಪಡೆದ ಬ್ರ್ಯಾಂಡ್‌ನ ಮೊಟ್ಟ ಮೊದಲ ಮಿಡ್ ಎಸ್‍ಯುವಿಯಾಗಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕೂಪೆ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
BMW X3 M Launched In India At Rs 99.90 Lakh. Read In Kannada.
Story first published: Monday, November 2, 2020, 17:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X