ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿ

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.94 ಕೋಟಿಗಳಾಗಿದೆ.

ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿ

ಹೊಸ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಪರ್ಫಾಮೆನ್ಸ್-ಆಧಾರಿತ ಎಸ್‍ಯುವಿಯಾಗಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಹೊಸ ಎಸ್‍ಯುವಿಗಾಗಿ ಯಾವುದೇ ಬಿಎಂಡಬ್ಲ್ಯು ಅಧಿಕೃತ ಡೀಲರ್ ಬಳಿ ಅಥವಾ ಆನ್‌ಲೈನ್ ಮೂಲಕ ಬುಕ್ಕಿಂಗ್ ಅನ್ನು ಮಾಡಬಹುದು. ಇನ್ನು ಈ ವರ್ಷಾಂತ್ಯದ ಮೊದಲು ಹೊಸ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿಯನ್ನು ಬುಕ್ಕಿಂಗ್ ಮಾಡುವ ಗ್ರಾಹಕರು ಇಸ್ಪ್ರವಾ ಐಷಾರಾಮಿ ವಿಲ್ಲಾಗಳ ಸಹಯೋಗದೊಂದಿಗೆ ಬಿಎಂಡಬ್ಲ್ಯು ಎಕ್ಸಲೆನ್ಸ್ ಕ್ಲಬ್ ವಿನ್ಯಾಸಗೊಳಿಸಿದ ವಿಶೇಷ ಆತಿಥ್ಯ ಅನುಭವವನ್ನು ಪಡೆಯುತ್ತಾರೆ.

ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿ

ಹೊಸ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಸಿಬಿಯು(ಕಂಪ್ಲೀಟ್ ಬಿಲ್ಟ್ ಯುನಿಟ್) ಆಗಿ ಭಾರತೀಯ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲಾಗುವುದು. ಶೀಘ್ರದಲ್ಲೇ ಬಿಎಂಡಬ್ಲ್ಯು ತನ್ನ ಈ ಹೊಸ ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿಯ ವಿತರಣೆಯನ್ನು ಪ್ರಾರಂಭಿಸಬಹುದು.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿ

ಹೊಸ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಆಗ್ರೇಸಿವ್ ಸ್ಟೈಲಿಂಗ್ ಅನ್ನು ಹೊಂದಿದೆ. ಈ ಹೊಸ ಬಿಎಂಡಬ್ಲ್ಯು ಎಸ್‍ಯುವಿಯು ಎಲ್‌ಇಡಿ ಲೇಸರ್‌ಲೈಟ್‌ಗಳನ್ನು ಹೊಂದಿವೆ. ಇನ್ನು 500 ಮೀಟರ್ ವ್ಯಾಪ್ತಿ ಹೊಂರುವ ಹೈ-ಬೀಮ್ ಫಂಕ್ಷನ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿ

ಇದರ ಜೊತೆಗೆ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಮುಂಭಾಗ ದೊಡ್ಡ ಏರ್ ಟೆಕ್ ಗಳನ್ನು ಹೊಂದಿವೆ. ಇನ್ನು ಈ ಹೊಸ ಎಸ್‍ಯುವಿಯ ಮುಂಭಾಗದ ಗ್ರಿಲ್ ಸಹ ದೊಡ್ಡದಾಗಿದೆ ಮತ್ತು ಗ್ಲೋಸ್-ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಇದು ಎಸ್‍ಯುವಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿ

ಈ ಹೊಸ ಎಸ್‍ಯುವಿಯ ಮುಂಭಾಗ 21 ಇಂಚಿನ 'ಎಂ' ಅಲಾಯ್ ವ್ಹೀಲ್ ಮತ್ತು ಹಿಂಭಾಗದಲ್ಲಿ 22 ಇಂಚುಗಳ ಅಲಾಯ್ ವ್ಹೀಲ್ ಹೊಂದಿದೆ. ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಲೋ ಟೈಲ್‌ಗೇಟ್ ಸ್ಪಾಯ್ಲರ್ ಅನ್ನು ಹೊಂದಿದೆ. ಈ ಎಸ್‍ಯುವಿ ಹಿಂಭಾಗದ ಬಂಪರ್‌ನಲ್ಲಿ ಗ್ಲೋಸ್-ಬ್ಲ್ಯಾಕ್ ಫಿನಿಶ್ ಹೊಂದಿದ್ದು, ಡಿಫ್ಯೂಸರ್ ಮತ್ತು ಕ್ವಾಡ್ ಎಕ್ಸಾಸ್ಟ್ ಪೈಪ್‌ಗಳನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿ

ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿಯ ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಕ್ಯಾಬಿನ್ ಸುತ್ತಲೂ ಬೆಸ್‌ಪೋಕ್ 'ಎಂ ಟ್ರೇಟ್ ಮೆಂಠೊಂದಿದೆ. ಇನ್ನು ಎಲೆಕ್ಟ್ರಿಕ್ ಆಗಿ ಅಡ್ಜೆಸ್ಟ್ ಮಾಡುವ ಸೀಟುಗಳು, ಬ್ರ್ಯಾಂಡ್‌ನ ಐಡ್ರೈವ್ ಟಚ್ ಕಂಟ್ರೋಲ್ ನೊಂದಿಗೆ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿದ್ದು, ಇದು ವಾಯ್ಸ್ ಮತ್ತು ಗೆಸ್ಚರ್ ಕಂಟ್ರೋಲ್ ಅನ್ನು ಒಳಗೊಂಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿ

ಇನ್ನು ಈ ಹೊಸ ಬಿಎಂಡಬ್ಲ್ಯು ಪರ್ಫಾಮೆನ್ಸ್ ಕಾರಿನಲ್ಲಿ ಮೌಂಟಡ್ ಕಂಟ್ರೋಲ್ ನೊಂದಿಗೆ ಎಂ ಲೆದರ್ ಸುತ್ತುವರೆದಿದ ಸ್ಟೀಯರಿಂಗ್ ವ್ಹೀಲ್, ದೊಡ್ಡ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕಂಟ್ರೋಲ್ ಹೊಂದಿರುವ ವರ್ಚುವಲ್ ಕಾಕ್‌ಪಿಟ್ ಮತ್ತು ಇನ್ನೂ ಅನೇಕ 'ಎಂ-ಸ್ಪೆಸಿಫಿಕ್' ಅಂಶಗಳಿವೆ.

ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿ

ಹೊಸ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿಯಲ್ಲಿ 4.4-ಲೀಟರ್ ಎಂ-ಟ್ವಿನ್-ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಹೈ-ರಿವೈವಿಂಗ್ ಎಂಜಿನ್ 625 ಬಿಹೆಚ್‍ಪಿ ಪವರ್ ಮತ್ತು 750 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿ

ಎಂಜಿನ್ ನೊಂದಿಗೆ 8-ಸ್ಪೀಡ್ ಸ್ಟೆಪ್ಟ್ರಾನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಭಾರತೀಯ ಮಾರುಕಟ್ಟೆಯಲ್ಲಿ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್, ಪೋರ್ಷೆ ಕೇಯೆನ್ ಟರ್ಬೊ ಮತ್ತು ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
BMW X5 M Competition Launched In India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X