ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಬಿಡುಗಡೆಯಾಗಲಿದೆ ಇಕೋಸ್ಪೋರ್ಟ್ ಆಕ್ಟಿವ್ ವರ್ಷನ್

ಅಮೆರಿಕ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಫೋರ್ಡ್ ತನ್ನ ಬಹುಬೇಡಿಕೆಯ ಇಕೋಸ್ಪೋರ್ಟ್ ಮಾದರಿಯನ್ನು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರ ಮಾರಾಟ ಮಾಡುತ್ತಿದ್ದು, ಕಂಪನಿಯು ಹೊಸ ಕಾರಿನಲ್ಲಿ ಆಕ್ಟಿವ್ ವರ್ಷನ್ ಬಿಡುಗಡೆ ಮಾಡುತ್ತಿದೆ.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಬಿಡುಗಡೆಯಾಗಲಿದೆ ಇಕೋಸ್ಪೋರ್ಟ್ ಆಕ್ಟಿವ್ ವರ್ಷನ್

ಹೊಸ ಫೀಚರ್ಸ್‌ಗಳೊಂದಿಗೆ ಹೊಸ ವಿನ್ಯಾಸಗಳನ್ನು ಪಡೆದುಕೊಂಡಿರುವ ಇಕೋಸ್ಪೋರ್ಟ್ ಆಕ್ಟಿವ್ ವರ್ಷನ್ ಮಾದರಿಯು ಮುಂದಿನ ತಿಂಗಳು ನವೆಂಬರ್ 6ಕ್ಕೆ ಅಮೆರಿಕ ಮತ್ತು ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯಾಗುತ್ತಿರುವ ಮಾಹಿತಿ ಲಭ್ಯವಾಗಿದ್ದು, ಹೊಸ ಕಾರು ಭಾರತದಲ್ಲೂ ಬಿಡುಗಡೆಯಾಗಲಿದೆಯಾ ಎನ್ನುವ ಯಾವುದೇ ಮಾಹಿತಿಯು ಇದುವರೆಗೂ ಲಭ್ಯವಿಲ್ಲ. ಆದರೆ ಹೊಸ ಕಾರು ಅಮೆರಿಕದಲ್ಲಿ ಭಾರೀ ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರಲಿದೆ.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಬಿಡುಗಡೆಯಾಗಲಿದೆ ಇಕೋಸ್ಪೋರ್ಟ್ ಆಕ್ಟಿವ್ ವರ್ಷನ್

ಹೊಸ ಇಕೋಸ್ಪೋರ್ಟ್ ಆಕ್ಟಿವ್ ಕಾರು ಮಾದರಿಯು ಫೋರ್ಡ್ ನಿರ್ಮಾಣದ ಜನಪ್ರಿಯ 1.0-ಲೀಟರ್ ಇಕೋಬೂಸ್ಟ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದ್ದು, ಸ್ಪೆಷಲ್ ಎಡಿಷನ್ ಮಾದರಿಯಾಗಿ ಬಿಡುಗಡೆಯಾಗುತ್ತಿದೆ.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಬಿಡುಗಡೆಯಾಗಲಿದೆ ಇಕೋಸ್ಪೋರ್ಟ್ ಆಕ್ಟಿವ್ ವರ್ಷನ್

ಫೋರ್ಡ್ ಕಂಪನಿಯು ತನ್ನ ಪ್ರಮುಖ ಎಸ್‌ಯುವಿ ಮತ್ತು ಕ್ರಾಸ್ ಓವರ್ ಎಸ್‌ಯುವಿ ಮಾದರಿಗಳನ್ನು ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಉನ್ನತೀಕರಿಸುತ್ತಿದ್ದು, ಫೋರ್ಡ್ ಮತ್ತೊಂದು ಜನಪ್ರಿಯ ಕಾರು ಮಾದರಿಯಾದ ಪುಮಾ ಆವೃತ್ತಿಯಿಂದಲೂ ಕೆಲವು ಫೀಚರ್ಸ್‌ಗಳನ್ನು ಹೊಸ ಇಕೋಸ್ಪೋರ್ಟ್ ಆಕ್ಟಿವ್ ಮಾದರಿಯಾಗಿ ಎರವಲು ಪಡೆದುಕೊಳ್ಳಲಾಗಿದೆ.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಬಿಡುಗಡೆಯಾಗಲಿದೆ ಇಕೋಸ್ಪೋರ್ಟ್ ಆಕ್ಟಿವ್ ವರ್ಷನ್

ಇಕೋಸ್ಪೋರ್ಟ್ ಆಕ್ಟಿವ್ ಮಾದರಿಯು ಸ್ಟ್ಯಾಂಡರ್ಡ್ ಇಕೋಸ್ಪೋರ್ಟ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಬದಲಾವಣೆಗಳನ್ನು ಹೊಂದಿದ್ದು, ಹೊರಭಾಗದಲ್ಲಿ ಮಾತ್ರವಲ್ಲ ಒಳಭಾಗದ ವಿನ್ಯಾಸದಲ್ಲೂ ಬದಲಾವಣೆ ಪಡೆದುಕೊಂಡಿದೆ. ಹೊಸ ಕಾರಿನಲ್ಲಿ ಫ್ಲಕ್ಸ್ ಸ್ಕೀಡ್ ಪ್ಲೇಟ್, ನವೀಕೃತ ರಿಯರ್ ಬಂಪರ್, ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲ್ಯಾಡಿಂಗ್, ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ಫ್ರಂಟ್ ಸೀಟ್‌ನಲ್ಲಿ ಆಕ್ಟಿವ್ ಬ್ಯಾಡ್ಜ್ ನೀಡಲಾಗಿದೆ.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಬಿಡುಗಡೆಯಾಗಲಿದೆ ಇಕೋಸ್ಪೋರ್ಟ್ ಆಕ್ಟಿವ್ ವರ್ಷನ್

ಇದಲ್ಲದೆ ಇಕೋಸ್ಪೋಟ್ ಆಕ್ಟಿವಾದಲ್ಲಿ ಮಡಿಕೆ ಮಾಡಬಹುದಾದ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ಸ್ಮಾಟ್‌ಫೋನ್ ಇಂಟ್ರಾಕ್ಷನ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಮಲ್ಟಿ ಫಂಕ್ಷನ್ ಹೊಂದಿರುವ ಸ್ಟೀರಿಂಗ್ ವೀಲ್ಹ್ ಮೌಂಟೆಡ್ ಸೌಲಭ್ಯವಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಬಿಡುಗಡೆಯಾಗಲಿದೆ ಇಕೋಸ್ಪೋರ್ಟ್ ಆಕ್ಟಿವ್ ವರ್ಷನ್

ಆದರೆ ಹೊಸ ಇಕೋಸ್ಪ್ರೋಟ್ ಆಕ್ಟಿವ್ ಸ್ಪೆಷಲ್ ಎಡಿಷನ್ ಮಾದರಿಯು ಸದ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಯಾವುದೇ ಮಾಹಿತಿಯಿಲ್ಲ. ಭಾರತದಲ್ಲಿ ಸದ್ಯ ಮಾರಾಟವಾಗುತ್ತಿರುವ ಬಿಎಸ್-6 ಇಕೋಸ್ಪೋರ್ಟ್ ಮಾದರಿಯು 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟವಾಗುತ್ತಿದ್ದು, ಆಕರ್ಷಕ ಬೆಲೆ ಹೊಂದಿದೆ.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಬಿಡುಗಡೆಯಾಗಲಿದೆ ಇಕೋಸ್ಪೋರ್ಟ್ ಆಕ್ಟಿವ್ ವರ್ಷನ್

ಹೊಸ ಇಕೋಸ್ಪೋರ್ಟ್ ಕಾರಿನ ಬೆಲೆಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8.19 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.11.73 ಲಕ್ಷ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಬಿಎಸ್-6 ಎಂಜಿನ್ ಜೋಡಣೆ ನಂತರ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಬಿಡುಗಡೆಯಾಗಲಿದೆ ಇಕೋಸ್ಪೋರ್ಟ್ ಆಕ್ಟಿವ್ ವರ್ಷನ್

ಪ್ರತಿ ಮಾದರಿಯಲ್ಲೂ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಆಕರ್ಷಕ ಪ್ರೀಮಿಯಂ ಫೀಚರ್ಸ್ ಮತ್ತು ಸುರಕ್ಷಾ ಸೌಲಭ್ಯಗಳನ್ನು ಒಳಗೊಂಡಿದೆ. ಹೊಸ ಕಾರಿನಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಕೆಲವು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಶೀಘ್ರದಲ್ಲೇ ಹೊಸ ಕಾರು ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಮಾರಾಟಗೊಳ್ಳಲು ಸಜ್ಜಾಗಿದೆ.

Source: Autonocion

Most Read Articles

Kannada
Read more on ಫೋರ್ಡ್ ford
English summary
New Ford EcoSport Active Details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X