ಬುಕ್ಕಿಂಗ್ ಆರಂಭವಾದ ಕೇವಲ 2 ವಾರದಲ್ಲಿ ಹ್ಯುಂಡೈ ಐ20 ಕಾರಿಗೆ ಭರ್ಜರಿ ಬೇಡಿಕೆ

ಹ್ಯುಂಡೈ ಕಂಪನಿಯು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಐ20 ನ್ಯೂ ಜನರೇಷನ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಬಿಡುಗಡೆಗೂ 15 ದಿನಗಳ ಮುನ್ನ ಹ್ಯುಂಡೈ ಕಂಪನಿಯು ರೂ. 21 ಸಾವಿರ ಮುಂಗಡ ಪಾವತಿಯೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿತ್ತು.

ಬುಕ್ಕಿಂಗ್ ಆರಂಭವಾದ ಕೇವಲ 2 ವಾರದಲ್ಲಿ ಹ್ಯುಂಡೈ ಐ20 ಕಾರಿಗೆ ಭರ್ಜರಿ ಬೇಡಿಕೆ

ಹೊಸ ಐ20 ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಕೇವಲ 15 ದಿನಗಳಲ್ಲಿ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಬುಕ್ಕಿಂಗ್ ದಾಖಲಾಗಿದ್ದು, ಹ್ಯುಂಡೈ ಕಂಪನಿಯು ಇಂದು ಹೊಸ ಕಾರನ್ನು ಬಿಡುಗಡೆಗೊಳಿಸುವ ಮೂಲಕ ಕಾರು ವಿತರಣೆಗೂ ಅಧಿಕೃತವಾಗಿ ಚಾಲನೆ ನೀಡಿದೆ. ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಐ20 ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಕಾಲಕಾಲಕ್ಕೆ ಹಲವಾರು ಬದಲಾವಣೆಗಳೊಂದಿಗೆ ಉನ್ನತೀಕರಣಗೊಂಡಿದ್ದು, ಹಲವು ಪ್ರತಿಸ್ಪರ್ಧಿ ಕಾರುಗಳ ಮಾರಾಟದ ನಡುವೆಯೂ ಉತ್ತಮ ಬೇಡಿಕೆಯನ್ನು ತನ್ನದಾಗಿಸಿಕೊಂಡಿದೆ.

ಬುಕ್ಕಿಂಗ್ ಆರಂಭವಾದ ಕೇವಲ 2 ವಾರದಲ್ಲಿ ಹ್ಯುಂಡೈ ಐ20 ಕಾರಿಗೆ ಭರ್ಜರಿ ಬೇಡಿಕೆ

ಬಿಎಸ್-6 ಜಾರಿ ನಂತರ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸಿರುವ ಹ್ಯುಂಡೈ ಕಂಪನಿಯು ತನ್ನ ಪ್ರಮುಖ ಕಾರುಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಯ ಜೊತೆಗೆ ವಿನ್ಯಾಸದಲ್ಲೂ ಮಹತ್ವದ ಬದಲಾವಣೆಗೆ ಕಾರಣವಾಗಿದೆ.

ಬುಕ್ಕಿಂಗ್ ಆರಂಭವಾದ ಕೇವಲ 2 ವಾರದಲ್ಲಿ ಹ್ಯುಂಡೈ ಐ20 ಕಾರಿಗೆ ಭರ್ಜರಿ ಬೇಡಿಕೆ

ಇದೀಗ ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ರಸ್ತೆಗಿಳಿದಿರುವ ಹೊಸ ಐ20 ಕೂಡಾ ಹಳೆಯ ಮಾದರಿಗಿಂತಲೂ ಸಾಕಷ್ಟು ವಿಭಿನ್ನತೆಯನ್ನು ಹೊಂದಿದ್ದು, ಹೊಸ ಕಾರು ಸ್ಪೋರ್ಟಿ ವಿನ್ಯಾಸದೊಂದಿಗೆ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಬುಕ್ಕಿಂಗ್ ಆರಂಭವಾದ ಕೇವಲ 2 ವಾರದಲ್ಲಿ ಹ್ಯುಂಡೈ ಐ20 ಕಾರಿಗೆ ಭರ್ಜರಿ ಬೇಡಿಕೆ

ಹೊಸ ಐ20 ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.79 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ. 11.17 ಲಕ್ಷ ಬೆಲೆ ಹೊಂದಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೆಚ್ಚಿನ ಪ್ರೀಮಿಯಂ ಫೀಚರ್ಸ್‌, ಆಕರ್ಷಕ ಸ್ಪೋರ್ಟಿ ಲುಕ್ ಮತ್ತು ವಿವಿಧ ಎಂಜಿನ್ ಆಯ್ಕೆಗಳು ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಲಿವೆ.

ಬುಕ್ಕಿಂಗ್ ಆರಂಭವಾದ ಕೇವಲ 2 ವಾರದಲ್ಲಿ ಹ್ಯುಂಡೈ ಐ20 ಕಾರಿಗೆ ಭರ್ಜರಿ ಬೇಡಿಕೆ

ಹೊಸ ಕಾರಿನಲ್ಲಿ ಏರೋ ಡೈನಾಮಿಕ್ ಮಾದರಿಯ ಮುಂಭಾಗವು ಹೊಸ ಸ್ಪೋರ್ಟಿ ಲುಕ್ ನೀಡುತ್ತಿದ್ದು, ಹೈ ಮತ್ತು ಲೋ ಬೀಮ್ ಗಳಿಗಾಗಿ ಎಲ್ಇಡಿ ಪ್ರೊಜೆಕ್ಟರ್ ಸೆಟಪ್, ಸ್ಲೀಕ್ ಹೆಡ್‌ಲೈಟ್ ಕ್ಲಸ್ಟರ್, ಹ್ಯಾಲೊಜೆನ್ ಬಲ್ಬ್ ಹೊಂದಿರುವ ಪ್ರೊಜೆಕ್ಟರ್ ಫಾಗ್ ಲ್ಯಾಂಪ್ ಹೊಂದಿದೆ.

ಬುಕ್ಕಿಂಗ್ ಆರಂಭವಾದ ಕೇವಲ 2 ವಾರದಲ್ಲಿ ಹ್ಯುಂಡೈ ಐ20 ಕಾರಿಗೆ ಭರ್ಜರಿ ಬೇಡಿಕೆ

ಹಾಗೆಯೇ ಹೊಸ ಕಾರಿನ ಸ್ಪೋರ್ಟ್‌ನೆಸ್ ಹೆಚ್ಚಿಸಲು ಫ್ರಂಟ್ ಲಿಪ್ ಸ್ಪ್ಲಿಟರ್, ಆಕರ್ಷಕ ಸೈಡ್ ಪ್ರೊಫೈಲ್, ಡ್ಯುಯಲ್-ಟೋನ್ ಹೊಂದಿರುವ ಐದು-ಸ್ಪೋಕ್ ನ 16-ಇಂಚಿನ ಅಲಾಯ್ ವ್ಹೀಲ್, ಇಂಟಿಗ್ರೇಟೆಡ್ ಎಲ್ಇಡಿ ಇಂಡಿಕೇಟರ್, ಕಪ್ಪು ಬಣ್ಣದ ರೂಫ್ ಹಾಗೂ ಪ್ರೀಮಿಯಂ ಟಚ್ ಹೊಂದಿರುವ ಸನ್‌ರೂಫ್ ನೀಡಲಾಗಿದೆ.

ಬುಕ್ಕಿಂಗ್ ಆರಂಭವಾದ ಕೇವಲ 2 ವಾರದಲ್ಲಿ ಹ್ಯುಂಡೈ ಐ20 ಕಾರಿಗೆ ಭರ್ಜರಿ ಬೇಡಿಕೆ

ಹಿಂಭಾಗದಲ್ಲಿ ಜೆಡ್ ಶೇಫ್‌ನಲ್ಲಿರುವ ಎಲ್ಇಡಿ ಅಂಶವನ್ನು ಹೊಂದಿರುವ ಸ್ಲೀಕ್ ಟೆಲ್‌ಲೈಟ್ ಯುನಿಟ್, ವಾಷರ್ ಹೊಂದಿರುವ ಹಿಂಭಾಗದ ವೈಪರ್, ಶಾರ್ಕ್ ಫಿನ್ ಆಂಟೆನಾ, ಫೇಕ್ ರೇರ್ ಡಿಫ್ಯೂಸರ್ ನೀಡಲಾಗಿದ್ದು, ಹ್ಯುಂಡೈ ಕಂಪನಿಯು ಹೊರಭಾಗದಲ್ಲಿನ ವಿನ್ಯಾಸದಂತೆ ಕಾರಿನ ಇಂಟಿರಿಯರನ್ನು ಕೂಡಾ ಪ್ರೀಮಿಯಂ ಅಂಶಗಳೊಂದಿಗೆ ಅಭಿವೃದ್ದಿಗೊಳಿಸಿದೆ.

ಬುಕ್ಕಿಂಗ್ ಆರಂಭವಾದ ಕೇವಲ 2 ವಾರದಲ್ಲಿ ಹ್ಯುಂಡೈ ಐ20 ಕಾರಿಗೆ ಭರ್ಜರಿ ಬೇಡಿಕೆ

ಹೊಸ ಐ20 ಕಾರಿನಲ್ಲಿ ಇಂಟಿರಿಯರ್ ರೆಡ್ ಹೈ ಲೈಟ್ ಗಳೊಂದಿಗೆ ಕಪ್ಪು ಬಣ್ಣವನ್ನು ಹೊಂದಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಪ್ರೇರಿತ 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಬೂಟ್‌ ಸ್ಪೆಸ್‌ನಲ್ಲಿ ಸಬ್ ವೂಫರ್ ಹಾಗೂ ಏಳು-ಸ್ಪೀಕರ್ ಬೋಸ್ ಸಿಸ್ಟಂಗಳನ್ನು ನೀಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಬುಕ್ಕಿಂಗ್ ಆರಂಭವಾದ ಕೇವಲ 2 ವಾರದಲ್ಲಿ ಹ್ಯುಂಡೈ ಐ20 ಕಾರಿಗೆ ಭರ್ಜರಿ ಬೇಡಿಕೆ

ಜೊತೆಗೆ ಆರಾಮದಾಯಕ ಚಾಲನೆಗೆ ಪೂರಕವಾದ ಲೆದರ್ ವ್ರಾಪ್ ಸ್ಟೀಯರಿಂಗ್ ವ್ಹೀಲ್, ಸ್ಟೀಯರಿಂಗ್ ವ್ಹೀಲ್ ಎಡಭಾಗದಲ್ಲಿ ಇನ್ಫೋಟೇನ್‌ಮೆಂಟ್ ಸಿಸ್ಟಂ ಕಂಟ್ರೋಲ್ ಮಾಡಲು ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್, ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್, ರಿಯರ್ ಎಸಿ ವೆಂಟ್ ಸೌಲಭ್ಯವಿದೆ.

ಬುಕ್ಕಿಂಗ್ ಆರಂಭವಾದ ಕೇವಲ 2 ವಾರದಲ್ಲಿ ಹ್ಯುಂಡೈ ಐ20 ಕಾರಿಗೆ ಭರ್ಜರಿ ಬೇಡಿಕೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಐ20 ಕಾರಿನಲ್ಲಿ ಹ್ಯುಂಡೈ ಕಂಪನಿಯು ಒಂದು ಡೀಸೆಲ್ ಮತ್ತು ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆ ನೀಡಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 1.0-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಎನ್‌ಎ ಕಪ್ಪಾ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರಿನ ಡೀಸೆಲ್ ಎಂಜಿನ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಬುಕ್ಕಿಂಗ್ ಆರಂಭವಾದ ಕೇವಲ 2 ವಾರದಲ್ಲಿ ಹ್ಯುಂಡೈ ಐ20 ಕಾರಿಗೆ ಭರ್ಜರಿ ಬೇಡಿಕೆ

ಸ್ಪೋರ್ಟಿ ವಿನ್ಯಾಸಕ್ಕೆ ತಕ್ಕಂತೆ ಹೊಸ ಕಾರಿನಲ್ಲಿ 6 ಸಿಂಗಲ್ ಟೋನ್ ಮತ್ತು 2 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ನೀಡಲಾಗಿದ್ದು, ಈ ಮೂಲಕ ಹಳೆಯ ಮಾದರಿಗಿಂತಲೂ ಹೆಚ್ಚು ಸ್ಪೋರ್ಟಿ ಮತ್ತು ಶಾರ್ಪ್ ಎಡ್ಜ್ ಡಿಸೈನ್ ಹೊಂದಿರುವ ಹೊಸ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಮಾರುತಿ ಸುಜುಕಿ ಬಲೆನೊ ಮತ್ತು ಟಾಟಾ ಆಲ್‌ಟ್ರೊಜ್ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

Most Read Articles

Kannada
English summary
2020 Hyundai i20 Receives More Than 10,000 Bookings. Read in Kannada.
Story first published: Thursday, November 5, 2020, 19:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X