Just In
Don't Miss!
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಕೊರೊನಾ ಬಂದಿದ್ದು ಚೀನಾದಿಂದ ಅಲ್ಲ... ಶಿವನಿಂದ, ನಾನೇ ಶಿವ!
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಎಂಜಿ ಹೆಕ್ಟರ್ ಪ್ಲಸ್ 7-ಸೀಟರ್ ಎಸ್‍ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
ಎಂಜಿ ಮೋಟಾರ್ ಕಂಪನಿಯು ತನ್ನ ಹೊಸ ಹೆಕ್ಟರ್ ಪ್ಲಸ್ 7-ಸೀಟರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಹೆಕ್ಟರ್ ಪ್ಲಸ್ 7-ಸೀಟರ್ ಎಸ್‍ಯುವಿಯು ಸೂಪರ್ ಮತ್ತು ಶಾರ್ಪ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಹೊಸ ಎಂಜಿ ಹೆಕ್ಟರ್ ಪ್ಲಸ್ 7-ಸೀಟರ್ ಎಸ್‍ಯುವಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಬಹುದು. ಈ ಹೊಸ ಮಾದರಿಯಲ್ಲಿ ಸೂಪರ್ ಟ್ರಿಮ್ ಎಲ್‌ಇಡಿ ರಿಯರ್ ಫಾಗ್ ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ರೂಫ್ ರೈಲ್ ಗಳು, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹೊಂದಿರುವ 10.4 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, 4-ಸ್ಪೀಕರ್‌ಗಳನ್ನು ಹೊಂದಿರುವ ಆಡಿಯೊ ಸಿಸ್ಟಂ ಮತ್ತು ಎರಡು ಟ್ವೀಟರ್‌ಗಳು, ರಿಯರ್ ಎಸಿ ವೆಂಟ್ಸ್ ಮತ್ತು ಕ್ರೋಮ್ ಇಂಟಿರಿಯರ್ ಡೋರ್ ಹ್ಯಾಂಡಲ್ಸ್ ಗಳನ್ನು ಒಳಗೊಂಡಿರುತ್ತದೆ.

ಇದರೊಂದಿಗೆ ಕ್ರೂಸ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಎಬಿಎಸ್ ವಿಥ್ ಇಬಿಡಿ, ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಕ್ಯಾಮೆರಾವನ್ನು ಹೊಂದಿರುತ್ತದೆ.

ಇನ್ನು ಹೊಸ ಹೆಕ್ಟರ್ ಪ್ಲಸ್ 7-ಸೀಟರ್ ಎಸ್‍ಯುವಿಯಲ್ಲಿ 360 ಡಿಗ್ರಿ ಕ್ಯಾಮೆರಾ, ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ಗಾಗಿ 7.0-ಇಂಚಿನ ಡಿಸ್ ಪ್ಲೇ ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಹೊಂದಿದೆ. ಇದರೊಂದಿಗೆ ಪನೋರಮಿಕ್ ಸನ್‌ರೂಫ್, ಆಟೋ ಕ್ಲೈಮೇಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರ್, ಕರ್ಟನ್ ಏರ್‌ಬ್ಯಾಗ್, ಹೀಟೆಡ್ ವೀಂಗ್ ಮೀರರ್, ಆಟೋ ಹೆಡ್‌ಲ್ಯಾಂಪ್‌ಗಳು, ವೈಪರ್‌ಗಳು ಮತ್ತು ಹ್ಯಾಂಡ್ಸ್-ಫ್ರೀ ಓಪನಿಂಗ್ ಟೈಲ್‌ಗೇಟ್ ಅನ್ನು ಹೊಂದಿದೆ

ಹೊಸ ಎಂಜಿ ಹೆಕ್ಟರ್ ಪ್ಲಸ್ 7-ಸೀಟರ್ ಎಸ್‍ಯುವಿಯ ಎರಡನೇ ಸಾಲಿನಲ್ಲಿ 60:40 ಸ್ಪ್ಲಿಟ್ ಬೆಂಚ್ ಮಾದರಿಯ ಸೀಟುಗಳನ್ನು ಹೊಂದಿರುತ್ತದೆ. ಎರಡನೇ ಸಾಲಿನ ಸೀಟುಗಳ ಸ್ಲೈಡಿಂಗ್ ಕಾರ್ಯವು ಮೂರನೇ ಸಾಲಿನ ಸೀಟುಗಳ ಪ್ರಯಾಣಿಕರಿಗೆ ಲೆಗ್ ರೂಂ ಹೊಂದಾಣಿಕೆಗೆ ಅನುಕೂಲವಾಗಲಿದೆ.

ವರದಿಗಳ ಪ್ರಕಾರ, ಬ್ರಿಟಿಷ್ ಬ್ರ್ಯಾಂಡ್ ಎಂಜಿ ಹೆಕ್ಲಟರ್ ಪ್ಲಸ್ 6 ಸೀಟರ್ ಸ್ಯಾವಿ ಮಾದರಿಯನ್ನು ಕೂಡ ಪರಿಚಯಿಸಲಿದೆ. ಇದು ಟಾಪ್ ಎಂಡ್ ವ್ರಿಯೆಂಟ್ ಗಿಂತ ಮೇಲಿರುತ್ತದೆ. ಹೊಸ ಎಂಜಿ ಹೆಕ್ಟರ್ ಪ್ಲಸ್ ಸ್ಯಾವಿ ಮಾದರಿ ಗ್ಲೋಸ್ಟರ್ ಎಸ್‍ಯುವಿಯಂತೆಯೇ ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಪಡೆಯಲಿದೆ.

ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಅಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್, ಲೇನ್ ಡಿಪರ್ಚರ್ ಅಲರ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಹ್ಯಾಂಡ್ಸ್ ಫ್ರೀ ಆಟೋ ಪಾರ್ಕಿಂಗ್ ಅನ್ನು ಒಳಗೊಂಡಿದೆ. ಇನ್ನು ಈ ಹೊಸ ಎಸ್‍ಯುವಿಯಲ್ಲಿ 4ಡಬ್ಲ್ಯುಡಿ(ಫ್ಹೋರ್ ವ್ಹೀಲ್ ಡ್ರೈವ್) ಸಿಸ್ಟಂ ಅನ್ನು ಹೊಂದಿರಲಿದೆ. .

ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿಯಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 170 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಿಸಲಾಗುತ್ತದೆ.

ಇದರೊಂಡಿಗೆ 1.5 ಲೀಟರ್ ಟರ್ಬೊ-ಪೆಟ್ರೋಲ್ ಯುನಿಟ್ ಅನ್ನು ನೀಡಬಹುದು. ಇದರೊಂದಿಗೆ ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಸಿಸ್ಟಂ ಅನ್ನು ಜೋಡಿಸಬಹುದು. ಇನ್ನು 48ವಿ ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಜೋಡಿಸಲಾಗಿದೆ.

2021ರ ಜನವರಿಯಲ್ಲಿ ಎಂಜಿ ಹೆಕ್ಟರ್ ಪ್ಲಸ್ 7-ಸೀಟರ್ ಎಸ್‍ಯುವಿ ಬಿಡುಗಡೆ ಮಾಡುವುದಾಗಿ ಕಾರು ತಯಾರಕರು ಖಚಿತಪಡಿಸಿದ್ದಾರೆ. ಹೊಸ ಎಂಜಿ ಹೆಕ್ಟರ್ ಪ್ಲಸ್ 7-ಸಿಟರ್ ಮಾದರಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ.