ಕರೋನಾ ಭೀತಿ: ಜಿನಿವಾ ನಂತರ ರದ್ದಾಯ್ತು ಮತ್ತೊಂದು ಆಟೋ ಶೋ

ಮಾರಣಾಂತಿಕ ಕರೋನಾ ವೈರಸ್ ಪ್ರಪಂಚದಾದ್ಯಂತ ಭಾರೀ ಪ್ರಮಾಣದ ನಷ್ಟವನ್ನುಂಟು ಮಾಡುತ್ತಿದೆ. ಮನುಷ್ಯರು ಮಾತ್ರವಲ್ಲದೇ ಆಟೋಮೊಬೈಲ್ ಉದ್ಯಮಕ್ಕೂ ಇದರ ಬಿಸಿ ತಟ್ಟಿದೆ. ಕರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಆಟೋ ಶೋಗಳನ್ನು ರದ್ದು ಪಡಿಸಲಾಗುತ್ತಿದೆ.

ಕರೋನಾ ಭೀತಿ: ಜಿನಿವಾ ನಂತರ ರದ್ದಾಯ್ತು ಮತ್ತೊಂದು ಆಟೋ ಶೋ

ಜಿನಿವಾ ಮೋಟಾರ್ ಶೋ ಪ್ರಪಂಚದ ಅತಿ ದೊಡ್ಡ ಮೋಟಾರ್ ಶೋಗಳಲ್ಲಿ ಒಂದಾಗಿದೆ. ಈ ಆಟೋ ಶೋ ಈ ತಿಂಗಳ 5ರಿಂದ 15ರವರೆಗೆ ನಡೆಯಬೇಕಿತ್ತು. ಆದರೆ ಭಾರೀ ಪ್ರಮಾಣದ ಜನರು ಸೇರುವ ಹಿನ್ನೆಲೆಯಲ್ಲಿ ಕೊವಿಡ್ 19 ವೈರಸ್‍‍ನ ಭೀತಿಯಿಂದಾಗಿ ಈ ಆಟೋ ಶೋವನ್ನು ರದ್ದುಪಡಿಸಲಾಗಿದೆ. ಇದು ಆಟೋಮೊಬೈಲ್ ಉದ್ಯಮಕ್ಕೆ ಭಾರೀ ಹೊಡೆತವನ್ನು ನೀಡಿದೆ.

ಕರೋನಾ ಭೀತಿ: ಜಿನಿವಾ ನಂತರ ರದ್ದಾಯ್ತು ಮತ್ತೊಂದು ಆಟೋ ಶೋ

ಜಿನೀವಾ ಆಟೋ ಶೋ ಅಂತರರಾಷ್ಟ್ರೀಯ ಮಟ್ಟದ ಆಟೋ ಶೋ ಆಗಿರುವುದರಿಂದ, ಪ್ರಪಂಚದ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ಇದರಲ್ಲಿ ಭಾಗವಹಿಸುತ್ತಿದ್ದವು. ಆದರೆ, ಕೊವಿಡ್ 19 ವೈರಸ್‍‍‍ನಿಂದಾಗಿ ಈ ಆಟೋ ಶೋವನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ವಾಹನ ತಯಾರಕ ಕಂಪನಿಗಳಿಗೆ ತಮ್ಮ ಹೊಸ ವಾಹನಗಳನ್ನು ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ.

ಕರೋನಾ ಭೀತಿ: ಜಿನಿವಾ ನಂತರ ರದ್ದಾಯ್ತು ಮತ್ತೊಂದು ಆಟೋ ಶೋ

ಇದರಿಂದಾಗಿ, ಹಲವಾರು ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ. ಜಿನೀವಾ ಆಟೋ ಶೋ ನಂತರ ನ್ಯೂಯಾರ್ಕ್ ಆಟೋ ಶೋವನ್ನು ರದ್ದುಪಡಿಸಲಾಗಿದೆ. ಈ ಆಟೋ ಶೋ ಏಪ್ರಿಲ್ 10ರಿಂದ 19ರವರೆಗೆ ನಡೆಯ ಬೇಕಿತ್ತು. ಈ ಆಟೋ ಶೋ ಸಹ ಪ್ರಪಂಚದ ಪ್ರಮುಖ ಆಟೋ ಶೋಗಳಲ್ಲಿ ಒಂದಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಸೇರಲಿದ್ದರು.

ಕರೋನಾ ಭೀತಿ: ಜಿನಿವಾ ನಂತರ ರದ್ದಾಯ್ತು ಮತ್ತೊಂದು ಆಟೋ ಶೋ

ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದೇ ಸ್ಥಳದಲ್ಲಿ ಸೇರಿದಾಗ, ಕರೋನಾ ವೈರಸ್ ಹರಡಬಹುದೆಂಬ ಭಯದಿಂದ ನ್ಯೂಯಾರ್ಕ್ ಇಂಟರ್ ನ್ಯಾಷನಲ್ ಆಟೋ ಶೋವನ್ನು ರದ್ದುಪಡಿಸಲಾಗಿದೆ. ಆಗಸ್ಟ್‌ನಲ್ಲಿ ಈ ಆಟೋ ಶೋ ನಡೆಯಲಿದೆ. ಆ ವೇಳೆಗೆ ಕರೋನಾ ವೈರಸ್ ಹತೋಟಿಗೆ ಬರಲಿದೆ ಎಂಬ ವಿಶ್ವಾಸವನ್ನು ನ್ಯೂಯಾರ್ಕ್ ಆಟೋ ಶೋದ ಅಧಿಕಾರಿಗಳು ಹೊಂದಿದ್ದಾರೆ.

ಕರೋನಾ ಭೀತಿ: ಜಿನಿವಾ ನಂತರ ರದ್ದಾಯ್ತು ಮತ್ತೊಂದು ಆಟೋ ಶೋ

ನ್ಯೂಯಾರ್ಕ್ ಆಟೋ ಶೋ ಆಗಸ್ಟ್ 28ರಿಂದ ಸೆಪ್ಟೆಂಬರ್ 6ರವರೆಗೆ ನಡೆಯಲಿದೆ. ಆಗಸ್ಟ್ 26 ಹಾಗೂ ಆಗಸ್ಟ್ 27ರಂದು ಮೀಡಿಯಾ ವೀಕ್ಷಣೆ ನಡೆಯಲಿದೆ. ಇದಾದ ನಂತರ ವಾಹನ ಪ್ರದರ್ಶನವನ್ನು ಸಾರ್ವಜನಿಕರಿಗೆ ತೆರೆಯಲಾಗುತ್ತದೆ.

ಕರೋನಾ ಭೀತಿ: ಜಿನಿವಾ ನಂತರ ರದ್ದಾಯ್ತು ಮತ್ತೊಂದು ಆಟೋ ಶೋ

ಆರಂಭದಲ್ಲಿ ಚೀನಾದಲ್ಲಿ ಮಾತ್ರ ಕೊವಿಡ್ -19 ವೈರಸ್ ಸೋಂಕು ತಗುಲಿತ್ತು. ಈಗ 80ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಇವುಗಳಲ್ಲಿ ಅಮೆರಿಕಾದ ನ್ಯೂಯಾರ್ಕ್ ನಗರವೂ ಸಹ ​​ಒಂದು. ಇಲ್ಲಿ ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಾಗಿದೆ ಎಂಬ ವರದಿಗಳಾಗಿವೆ.

ಕರೋನಾ ಭೀತಿ: ಜಿನಿವಾ ನಂತರ ರದ್ದಾಯ್ತು ಮತ್ತೊಂದು ಆಟೋ ಶೋ

ಇಂತಹ ಸಮಯದಲ್ಲಿ, ಆಟೋ ಶೋವನ್ನು ನಡೆಸುವುದು ಸೂಕ್ತವಲ್ಲವೆಂಬ ಕಾರಣಕ್ಕೆ ಮುಂದೂಡಲಾಗುತ್ತಿದೆ. ಕಳೆದ ವರ್ಷದ ಶೋದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಇದರಲ್ಲಿ ಮಾಧ್ಯಮದವರೇ 5 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕರೋನಾ ಭೀತಿ: ಜಿನಿವಾ ನಂತರ ರದ್ದಾಯ್ತು ಮತ್ತೊಂದು ಆಟೋ ಶೋ

ನ್ಯೂಯಾರ್ಕ್ ಆಟೋ ಶೋ ವಿಶ್ವದ ಪ್ರಮುಖ ಆಟೋ ಶೋಗಳಲ್ಲಿ ಒಂದಾಗಿದೆ. ಈ ಶೋದಿಂದ ವೈರಸ್ ಹರಡಬಾರದೆಂಬ ಕಾರಣ ಈ ರೀತಿಯ ಅನೇಕ ಶೋಗಳನ್ನು ರದ್ದುಗೊಳಿಸಲಾಗುತ್ತಿದೆ. ಈಗಾಗಲೇ ಕೊವಿಡ್ -19 ವೈರಸ್‍‍ನ ಭೀತಿಯಿಂದಾಗಿ ಬೀಜಿಂಗ್, ಜಿನೀವಾ ಹಾಗೂ ಸಾವೊ ಪಾಲೊದ ಆಟೋ ಶೋಗಳನ್ನು ರದ್ದುಪಡಿಸಲಾಗಿದೆ.

ಕರೋನಾ ಭೀತಿ: ಜಿನಿವಾ ನಂತರ ರದ್ದಾಯ್ತು ಮತ್ತೊಂದು ಆಟೋ ಶೋ

ಇದರ ಜೊತೆಗೆ, ಹಲವು ವಾಹನ ತಯಾರಕ ಕಂಪನಿಗಳು ತಮ್ಮ ಕಂಪನಿಯ ನೌಕರರ ಸುರಕ್ಷತೆಯ ದೃಷ್ಟಿಯಿಂದ ಈ ಆಟೋ ಶೋದಲ್ಲಿ ಭಾಗವಹಿಸುವುದನ್ನು ತಪ್ಪಿಸಿವೆ. ಒಟ್ಟಿನಲ್ಲಿ ಕರೋನಾ ವೈರಸ್‍‍ನಿಂದಾಗಿ ಜಗತ್ತಿನ ಚಟುವಟಿಕೆಗಳೆಲ್ಲಾ ಅಸ್ತವ್ಯಸ್ತಗೊಂಡಿವೆ.

Most Read Articles

Kannada
English summary
New York Auto Show cancelled due to Covid 19 virus. Read in Kannada.
Story first published: Wednesday, March 11, 2020, 14:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X