ನಿಸ್ಸಾನ್ ಕಾರು ಮಾದರಿಗಳಿಗೆ ಪೇಂಟಿಂಗ್ ಮತ್ತು ಕೋಟಿಂಗ್ ಸೇವೆಗಳನ್ನು ಒದಗಿಸಲಿದೆ ನಿಪ್ಪೊನ್ ಪೇಂಟ್ಸ್

ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಕಾರ್ಯಾಗಾರದಲ್ಲಿನ ಕಾರು ಮಾದರಿಗಳ ಬಾಡಿಶಾಪ್ ಸೇವೆಗಳಿಗಾಗಿ ನಿಪ್ಪೊನ್ ಪೇಂಟ್ಸ್ ಜೊತೆಗೂಡಿದ್ದು, ನಿಸ್ಸಾನ್ ಕಾರುಗಳ ಬಾಡಿಶಾಪ್ ಕಾರ್ಯಗಾರಗಳಿಗೆ ಇನ್ಮುಂದೆ ನಿಪ್ಪೊನ್ ಪೇಂಟ್ಸ್ ಕಂಪನಿಯೇ ನೇರವಾಗಿ ಬಣ್ಣಗಳ ಸೇವೆಗಳನ್ನು ಪೂರೈಸಲಿದೆ.

ನಿಸ್ಸಾನ್ ಕಾರು ಮಾದರಿಗಳಿಗೆ ಪೇಂಟಿಂಗ್ ಮತ್ತು ಕೋಟಿಂಗ್ ಸೇವೆಗಳನ್ನು ಒದಗಿಸಲಿದೆ ನಿಪ್ಪೊನ್ ಪೇಂಟ್ಸ್

ಪೇಂಟಿಂಗ್ ಮತ್ತು ಕೋಟಿಂಗ್ ಸೇವೆಗಳಿಗಾಗಿ ನಿಸ್ಸಾನ್ ಇಂಡಿಯಾ ಮತ್ತು ನಿಪ್ಪೊನ್ ಪೇಂಟ್ಸ್ ಇಂಡಿಯಾ ಕಂಪನಿಗಳು ಮೂರು ವರ್ಷಗಳಿಗೆ ಪಾಲುದಾರಿಕೆ ಪ್ರಕಟಿಸಿದ್ದು, ಹೊಸ ಪಾಲುದಾರಿಕೆ ಅಡಿಯಲ್ಲಿ ನಿಪ್ಪೊನ್ ಪೇಂಟ್ಸ್ ಕಂಪನಿಯು ನಿಸ್ಸಾನ್ ಕಂಪನಿಯ ವರ್ಕಶಾಪ್‌ಗಳಿಗೆ ಆನ್‌ಲೈನ್ ಮೂಲಕವೇ ಪೇಟಿಂಗ್ ಸೇವೆಗಳನ್ನು ಒದಗಿಸುವ ಮೂಲಕ ಕಾರು ಮಾರಾಟ ನಂತರದ ಗ್ರಾಹಕರ ಸೇವೆಗಳನ್ನು ಮತ್ತಷ್ಟು ಸರಳಗೊಳಿಸಿದೆ.

ನಿಸ್ಸಾನ್ ಕಾರು ಮಾದರಿಗಳಿಗೆ ಪೇಂಟಿಂಗ್ ಮತ್ತು ಕೋಟಿಂಗ್ ಸೇವೆಗಳನ್ನು ಒದಗಿಸಲಿದೆ ನಿಪ್ಪೊನ್ ಪೇಂಟ್ಸ್

ಪಾಲುದಾರಿಕೆಗೂ ಮುನ್ನ ವರ್ಕ್‌ಶಾಪ್‌ನಲ್ಲಿರುವ ಕಾರು ಮಾದರಿಗಳಿಗೆ ಕಂಪನಿಯೇ ನೇರವಾಗಿ ಪೇಂಟಿಂಗ್ ಮತ್ತು ಕೋಟಿಂಗ್ ಸೇವೆಗಳನ್ನು ಒದಗಿಸುತ್ತಿದ್ದರಿಂದ ಹಲವಾರು ಬಾರಿ ಗ್ರಾಹಕರ ಸೇವೆಗಳನ್ನು ನಿಗದಿತ ಅವಧಿಯಲ್ಲಿ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ.

ನಿಸ್ಸಾನ್ ಕಾರು ಮಾದರಿಗಳಿಗೆ ಪೇಂಟಿಂಗ್ ಮತ್ತು ಕೋಟಿಂಗ್ ಸೇವೆಗಳನ್ನು ಒದಗಿಸಲಿದೆ ನಿಪ್ಪೊನ್ ಪೇಂಟ್ಸ್

ಈ ಹಿನ್ನಲೆಯಲ್ಲಿ ದೇಶಾದ್ಯಂತ ಹರಡಿಕೊಂಡಿರುವ ನಿಸ್ಸಾನ್ ವರ್ಕ್‌ಶಾಪ್‌ಗಳಿಗೆ ನೇರವಾಗಿ ಪೇಂಟಿಂಗ್ ಮತ್ತು ಕೋಟಿಂಗ್ ಸೇವೆಗಳನ್ನು ಕಂಪನಿಯ ಮಾರ್ಗಸೂಚಿ ಅಡಿಯಲ್ಲೇ ಸೇವೆಗಳನ್ನು ನೀಡಲಿರುವ ನಿಪ್ಪೊನ್ ಪೇಂಟ್ಸ್ ಕಂಪನಿಯು ಗ್ರಾಹಕರ ಸೇವೆಗಳನ್ನು ನಿಗದಿತ ಅವಧಿಯೊಳಗೆ ಪೂರೈಸಲು ಅನುಕೂಲಕರವಾಗಲಿದೆ.

ನಿಸ್ಸಾನ್ ಕಾರು ಮಾದರಿಗಳಿಗೆ ಪೇಂಟಿಂಗ್ ಮತ್ತು ಕೋಟಿಂಗ್ ಸೇವೆಗಳನ್ನು ಒದಗಿಸಲಿದೆ ನಿಪ್ಪೊನ್ ಪೇಂಟ್ಸ್

ನಿಸ್ಸಾನ್ ಬಾಡಿ ಶಾಪ್ ಕಾರ್ಯಾಚರಣೆಗಾಗಿ ನಿಪ್ಪೊನ್ ಪೇಂಟ್ಸ್ ಕಂಪನಿಯು ಉನ್ನತ ಮಟ್ಟದ ನ್ಯಾಕ್ಸ್-ಪ್ರೀಮಿಲಾ ಶ್ರೇಣಿಯ ಬಣ್ಣದ ಉತ್ಪನ್ನಗಳನ್ನು ಪ್ರತ್ಯೇಕವಾಗಿ ಒದಗಿಸಲಿದ್ದು, ನ್ಯಾಕ್ಸ್-ಪ್ರೀಮಿಲಾ ಪೇಂಟ್ ಉತ್ಪನ್ನವು ಪ್ರೀಮಿಯಂ ಮಾದರಿಯಾಗಿರುವುದಲ್ಲದೆ ವೆಚ್ಚ ನಿರ್ವಹಣೆಯಲ್ಲೂ ಸಹಕಾರಿಯಾಗಿದೆ. ನ್ಯಾಕ್ಸ್-ಪ್ರೀಮಿಲಾ ಉತ್ಪನ್ನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಇಎಂ ಬ್ರಾಂಡ್‌ಗಳು ಅನುಮೋದಿಸಿದ್ದು, ಜಪಾನೀಸ್ ತಂತ್ರಜ್ಞಾನದೊಂದಿಗೆ ಇದು ಅತ್ಯುತ್ತಮವಾಗಿ ಸಿದ್ದಗೊಂಡಿದೆ.

ನಿಸ್ಸಾನ್ ಕಾರು ಮಾದರಿಗಳಿಗೆ ಪೇಂಟಿಂಗ್ ಮತ್ತು ಕೋಟಿಂಗ್ ಸೇವೆಗಳನ್ನು ಒದಗಿಸಲಿದೆ ನಿಪ್ಪೊನ್ ಪೇಂಟ್ಸ್

ಇನ್ನು ದೇಶಿಯ ಮಾರುಕಟ್ಟೆಯಲ್ಲಿ ನಿಸ್ಸಾನ್ ಕಂಪನಿಯು ಕಿಕ್ಸ್ ನಂತರ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದು, ಈ ಮೊದಲು ನಿಸ್ಸಾನ್ ನಿರ್ಮಾಣದ ಯಾವುದೇ ಕಾರು ಮಾದರಿಯು ಈ ಮಟ್ಟದಲ್ಲಿ ಬೇಡಿಕೆ ಪಡೆದುಕೊಂಡಿರಲಿಲ್ಲ.

ನಿಸ್ಸಾನ್ ಕಾರು ಮಾದರಿಗಳಿಗೆ ಪೇಂಟಿಂಗ್ ಮತ್ತು ಕೋಟಿಂಗ್ ಸೇವೆಗಳನ್ನು ಒದಗಿಸಲಿದೆ ನಿಪ್ಪೊನ್ ಪೇಂಟ್ಸ್

ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದರೂ ಕೂಡಾ ಗ್ರಾಹಕರ ಬೇಡಿಕೆಯಲ್ಲಿ ಸತತ ಹಿನ್ನಡೆ ಅನುಭವಿಸಿದ್ದ ನಿಸ್ಸಾನ್ ಕಂಪನಿಗೆ ಮ್ಯಾಗ್ನೈಟ್ ಕಾರು ಮಾದರಿಯು ಉತ್ತಮ ಬೇಡಿಕೆ ತಂದುಕೊಟ್ಟಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ನಿಸ್ಸಾನ್ ಕಾರು ಮಾದರಿಗಳಿಗೆ ಪೇಂಟಿಂಗ್ ಮತ್ತು ಕೋಟಿಂಗ್ ಸೇವೆಗಳನ್ನು ಒದಗಿಸಲಿದೆ ನಿಪ್ಪೊನ್ ಪೇಂಟ್ಸ್

ಕಾರು ಮಾರಾಟ ಮಳಿಗೆಗಳ ಸಂಖ್ಯೆಯು ನಿಯಮಿತವಾಗಿದ್ದರೂ ಮ್ಯಾಗ್ನೈಟ್ ಕಾರು ಮಾದರಿಗೆ ಇದುವರೆಗೆ ಸುಮಾರು 18 ಸಾವಿರ ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದು, 80 ಸಾವಿರಕ್ಕೂ ಹೆಚ್ಚು ಗ್ರಾಹಕರು ಹೊಸ ಕಾರಿನ ಬೆಲೆ ಮತ್ತು ಫೀಚರ್ಸ್‌ಗಳ ಕುರಿತಾದ ಮಾಹಿತಿಗಾಗಿ ಡೀಲರ್ಸ್‌ಗಳನ್ನು ಸಂಪರ್ಕಿಸಿದ್ದಾರೆ.

ನಿಸ್ಸಾನ್ ಕಾರು ಮಾದರಿಗಳಿಗೆ ಪೇಂಟಿಂಗ್ ಮತ್ತು ಕೋಟಿಂಗ್ ಸೇವೆಗಳನ್ನು ಒದಗಿಸಲಿದೆ ನಿಪ್ಪೊನ್ ಪೇಂಟ್ಸ್

ಜೊತೆಗೆ ಮ್ಯಾಗ್ನೈಟ್ ಕಾರಿನ ಟಾಪ್ ಎಂಡ್ ಟರ್ಬೋ ಪೆಟ್ರೋಲ್ ಮಾದರಿಗಾಗಿ ಹೆಚ್ಚಿನ ಮಟ್ಟದ ಬುಕ್ಕಿಂಗ್ ಸಲ್ಲಿಕೆಯಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲೇ ಅತಿ ಕಡಿಮೆ ಬೆಲೆಯೊಂದಿಗೆ ಹೊಸ ಮಾರುಕಟ್ಟೆ ಪ್ರವೇಶಿಸಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ನಿಸ್ಸಾನ್ ಕಾರು ಮಾದರಿಗಳಿಗೆ ಪೇಂಟಿಂಗ್ ಮತ್ತು ಕೋಟಿಂಗ್ ಸೇವೆಗಳನ್ನು ಒದಗಿಸಲಿದೆ ನಿಪ್ಪೊನ್ ಪೇಂಟ್ಸ್

ಪ್ರಸ್ತುತ ಮಾರುಕಟ್ಟೆಯಲ್ಲಿ ನಿಸ್ಸಾನ್ ಮಾಗ್ನೈಟ್ ಹೊರತುಪಡಿಸಿ ಬಹುತೇಕ ಪ್ರತಿಸ್ಪರ್ಧಿ ಕಾರು ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.70 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಗಳು ರೂ. 12.80 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿದ್ದು, ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾದರಿಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.35 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Nissan India & Nippon Paint Partners To Supply Workshop Inventory. Read in Kannada.
Story first published: Friday, January 1, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X