Just In
Don't Miss!
- Movies
ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜನವರಿ 1ರಿಂದ ಮತ್ತಷ್ಟು ದುಬಾರಿಯಾಗಲಿದೆ ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಾರು
ನಿಸ್ಸಾನ್ ಕಂಪನಿಯು ಹೊಸ ಮ್ಯಾಗ್ನೈಟ್ ಕಾರು ಮಾದರಿಯ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕಾರನ್ನು ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ 15 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದೆ.

ಹೊಸ ಮ್ಯಾಗ್ನೈಟ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.35 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಬಿಡುಗಡೆಯಾಗಿ 1 ತಿಂಗಳಿಗೆ ಹೊಸ ಕಾರಿನ ಬೆಲೆ ಹೆಚ್ಚಳ ಮಾಡುವುದಾಗಿ ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಕಾರಿನ ಬಿಡುಗಡೆಯ ಸಂದರ್ಭದಲ್ಲೇ ಮಾಹಿತಿ ನೀಡಿತ್ತು. ಇದೀಗ ಹೊಸ ಕಾರು ನಿಗದಿಯಂತೆ ಜನವರಿ 1ರಿಂದ ಕಾರಿನ ಬೆಲೆಯಲ್ಲಿ ರೂ. 15 ಸಾವಿರದಿಂದ ರೂ.55 ಸಾವಿರ ತನಕ ಹೆಚ್ಚಳ ಮಾಡುವ ಸಾಧ್ಯತೆಗಳಿವೆ.

ಹೊಸ ದರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಶೇ.1.50 ರಿಂದ ಶೇ.3ರಷ್ಟು ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಜನವರಿ 1ರಂದೇ ಹೊಸ ಕಾರಿನ ದರ ಹೆಚ್ಚಳ ಮಾಹಿತಿಯು ಲಭ್ಯವಾಗಲಿದೆ.

ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಕಾರು ಮಾದರಿಯ ಬೆಲೆ ಮಾತ್ರವಲ್ಲದೆ ಕಿಕ್ಸ್ ಎಸ್‌ಯುವಿ ಬೆಲೆಯಲ್ಲೂ ಕೂಡಾ ಹೆಚ್ಚಳ ಮಾಡುತ್ತಿದ್ದು, ಡಿಸೆಂಬರ್ 31ರ ತನಕ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ದರವೇ ಅನ್ವಯವಾಗಲಿದೆ.

ಇನ್ನು ಉತ್ತಮ ಬೆಲೆ ಪೈಪೋಟಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಮ್ಯಾಗ್ನೈಟ್ ಕಾರು ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಜೊತೆಗೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಕೂಡಾ ಸೆಳೆಯುತ್ತಿದ್ದು, ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಹೊಂದಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ನಿಸ್ಸಾನ್ ಮಾಗ್ನೈಟ್ ಹೊರತುಪಡಿಸಿ ಬಹುತೇಕ ಪ್ರತಿಸ್ಪರ್ಧಿ ಕಾರು ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.70 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಗಳು ರೂ. 12.80 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿವೆ.

ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾದರಿಯೊಂದಿಗೆ ಅತಿ ಕಡಿಮೆ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಆವೃತ್ತಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಮಾರಾಟಗೊಳ್ಳುತ್ತಿರುವ ಹೊಸ ಮ್ಯಾಗ್ನೈಟ್ ಕಾರು ನಿರ್ವಹಣಾ ವೆಚ್ಚಗಳನ್ನು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ.

ಹೊಸ ಕಾರಿನಲ್ಲಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗಿರುವ ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಸುರಕ್ಷತೆಗೂ ಕೂಡಾ ಹೆಚ್ಚಿನ ಒತ್ತು ನೀಡಲಾಗಿದ್ದು, ಹೊಸ ಕಾರು ಮುಂಬರುವ ದಿನಗಳಲ್ಲಿ ಭಾರೀ ಪ್ರಮಾಣದ ಬೇಡಿಕೆಯ ನೀರಿಕ್ಷೆಯಲ್ಲಿದೆ.